Asianet Suvarna News Asianet Suvarna News

ಪುಟ್ಬಾಲ್ ತಾರೆಗೆ ಒಲಿಯದ ರಾಜಕೀಯ : 10 ವರ್ಷಗಳಲ್ಲಿ ಆರು ಬಾರಿ ಸೋತ ಬೈಚುಂಗ್ ಭುಟಿಯಾ

 ಭಾರತದ ಪುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಬೈಚುಂಗ್ ಭುಟಿಯಾ ಅವರ ರಾಜಕಾರಣಿಯಾಗುವ ಕನಸಿಗೆ ಮತದಾರ ಮಾತ್ರ ಓಕೆ ಅಂದಂತೆ ಕಾಣುತ್ತಿಲ್ಲ, ಈ ಬಾರಿಯ ಸಿಕ್ಕಿಂ ವಿಧಾನಸಭಾ ಚುನಾವಣಾ ಫಲಿತಾಂಶ ಇದಕ್ಕೆ ಸಾಕ್ಷಿ. 

Politics Not cup of coffee of Bhaichung Bhutia former captain of the Indian football team lost six times in 10 years akb
Author
First Published Jun 2, 2024, 2:10 PM IST

ನವದೆಹಲಿ: ಭಾರತದ ಪುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಬೈಚುಂಗ್ ಭುಟಿಯಾ ಅವರ ರಾಜಕಾರಣಿಯಾಗುವ ಕನಸಿಗೆ ಮತದಾರ ಮಾತ್ರ ಓಕೆ ಅಂದಂತೆ ಕಾಣುತ್ತಿಲ್ಲ, ಈ ಬಾರಿಯ ಸಿಕ್ಕಿಂ ವಿಧಾನಸಭಾ ಚುನಾವಣಾ ಫಲಿತಾಂಶ ಇದಕ್ಕೆ ಸಾಕ್ಷಿ. ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕರಾಗಿರುವ ಬೈಚುಂಗ್ ಭುಟಿಯಾ ಈ ಬಾರಿಯೂ ಅಂದಾಜು 4 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಈ ಮೂಲಕ 10 ವರ್ಷಗಳಲ್ಲಿ ಬರೋಬ್ಬರಿ ಆರು ಬಾರಿ ಸೋಲುವ ಮೂಲಕ ಸೋಲುವ ಮೂಲಕ ಸೋಲಿನಲ್ಲಿ ದಾಖಲೆ ಬರೆದಿದ್ದಾರೆ ಈ ಕ್ರೀಡಾಪಟು ಕಾಮ್ ರಾಜಕಾರಣಿ.

ಬರ್ಫುಂಗ್ ಕ್ಷೇತ್ರದಿಂದ ಕಣಕ್ಕಿಳಿದ ಬೈಚುಂಗ್ ಭುಟಿಯಾ ಪ್ರಸ್ತುತ ಸಿಕ್ಕಿಂನಲ್ಲಿ ಆಡಳಿತದಲ್ಲಿರುವ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಅಭ್ಯರ್ಥಿ ರಿಕ್ಶಾಲ್ ಡೊರ್ಜೀ ಭುಟಿಯಾ ವಿರುದ್ಧ 4 ಸಾವಿರಕ್ಕೂ ಅಧಿಕ ಮತಗಳಿಂದ ಸೋಲು ಕಂಡಿದ್ದು, ಅವರಿಗೆ ಸದ್ಯಕ್ಕಂತೂ ರಾಜಕೀಯ ಒಲಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಅಲ್ಲದೇ ರಾಜ್ಯದೆಲ್ಲೆಡೆಯ ಫಲಿತಾಂಶವೂ ಕೂಡ ಬೈಚುಂಗ್ ಭುಟಿಯಾ ಅವರ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ಪಕ್ಷಕ್ಕೆ ಖುಷಿ ನೀಡುವಂತೆ ಕಾಣಿಸುತ್ತಿಲ್ಲ, ಪ್ರಸ್ತುತ ಚುನಾವಣಾ ಟ್ರೆಂಡ್‌ಗಳ ಪ್ರಕಾರ 32ರಲ್ಲಿ 16 ಸೀಟುಗಳನ್ನು ಎಸ್‌ಕೆಎಂ ಪಕ್ಷ ಗೆದ್ದಿದ್ದರೆ, ಉಳಿದ 16 ಕ್ಷೇತ್ರಗಳಲ್ಲೂ ಗೆಲುವಿನತ್ತ ದಾಪುಗಾಲಿಡುತ್ತಿದೆ. ಹೀಗಾಗಿ ಬೈಚುಂಗ್ ಅವರ ಎಸ್‌ಡಿಎಫ್ ಇಲ್ಲಿ ವಾಶ್‌ಔಟ್ ಆಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. 

ಭಾರತೀಯ ಫುಟ್ಬಾಲ್‌ ಅಧ್ಯಕ್ಷ ಸ್ಥಾನಕ್ಕೆ ಬೈಚುಂಗ್‌ ಭುಟಿಯಾ ಸ್ಪರ್ಧೆ

ಬೈಚುಂಗ್ ಭುಟಿಯಾ ಅವರು 2018 ರಲ್ಲಿ ತಮ್ಮದೇ ಆದ ಹಮ್ರೋ ಸಿಕ್ಕಿಂ ಪಕ್ಷವನ್ನು ಸ್ಥಾಪಿಸಿದ್ದರು. ಆದರೆ ಕಳೆದ ವರ್ಷ ಅದನ್ನು ಎಸ್‌ಡಿಎಫ್‌ನೊಂದಿಗೆ ವಿಲೀನಗೊಳಿಸಿದ್ದರು. ಪ್ರಸ್ತುತ ಅವರು ಎಸ್‌ಡಿಎಫ್‌ನ ಉಪಾಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು ಮಾಜಿ ಫುಟ್ಬಾಲ್ ಆಟಗಾರ ಬೈಚುಂಗ್ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.  2014 ರ ಲೋಕಸಭಾ ಚುನಾವಣೆಯಲ್ಲಿ  ಡಾರ್ಜಿಲಿಂಗ್‌ನಿಂದ ಹಾಗೂ  2016 ರ ವಿಧಾನಸಭಾ ಚುನಾವಣೆಯಲ್ಲಿ ಸಿಲಿಗುರಿಯಿಂದ ಸ್ಪರ್ಧಿಸಿದ್ದರು. ಆದರೆ ಎರಡೂ ಕಡೆಯೂ ಅವರು ಸೋಲು ಅನುಭವಿಸಿದ್ದರು. 

ನಂತರ ಹಿಮಾಲಯ ಪ್ರದೇಶದಲ್ಲಿ ಬರುವ ಸರೋವರಗಳಿಗೆ ಹೆಸರುವಾಸಿಯಾಗಿರುವ ಸುಂದರವಾದ ರಾಜ್ಯ ಸಿಕ್ಕಿಂನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ಬಯಸಿದ ಅವರು ಅಲ್ಲಿ ತಮ್ಮದೇ ಪಕ್ಷವನ್ನು ಸ್ಥಾಪಿಸಿದರು.  2019 ರ ವಿಧಾನಸಭಾ ಚುನಾವಣೆಯಲ್ಲಿ ಗ್ಯಾಂಗ್ಟಾಕ್ ಮತ್ತು ತುಮೆನ್ ಲಿಂಗಿಯಿಂದ ಸ್ಪರ್ಧಿಸಿದರು ಆದರೆ ಎರಡೂ ಕ್ಷೇತ್ರಗಳಲ್ಲೂ ಅವರು ಮತ್ತೆ ಸೋಲು ಕಂಡರು.  2019 ರಲ್ಲಿ ಮತ್ತೆ ಗ್ಯಾಂಗ್‌ಟಾಕ್‌ನ ಉಪ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋತರು. ಹೀಗಾಗಿ ಫುಟ್ಬಾಲ್ ಆಟಗಾರನಿಗೆ ರಾಜಕೀಯ ಒಲಿದಂತೆ ಕಾಣುತ್ತಿಲ್ಲ.

'ವಲಸಿಗ ಜನರೇ ಬನ್ನಿ ನಮ್ಮನೆಯಲ್ಲೇ ಉಳಿಯಿರಿ' ನಿರಾಶ್ರಿತರಿಗೆ ಮುಕ್ತ ಆಹ್ವಾನ ಕೊಟ್ಟ ಫುಟ್ಬಾಲ್ ಲೆಜೆಂಡ್ ಭುಟಿಯಾ

ಈಶಾನ್ಯ ಭಾರತದ ರಾಜ್ಯಗಳಾದ ಅರುಣಾಚಲ ಪ್ರದೇಶದ 60 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಚುನಾವಣೆ ನಡೆದಿತ್ತು.  ಸಿಕ್ಕಿಂ ರಾಜ್ಯದಲ್ಲಿ 32 ವಿಧಾನಸಭಾ ಕ್ಷೇತ್ರಗಳಿದ್ದು, ಸರ್ಕಾರ ರಚನೆಗೆ 17 ಸೀಟುಗಳ ಅಗತ್ಯವಿದೆ. ಹಾಲಿ ಮುಖ್ಯಮಂತ್ರಿ ಪಿಎಸ್ ತಮಂಗ್ ಅವರು, 'ಜನ ತಮಗೆ 2ನೇ ಅವಧಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡುತ್ತಾರೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  2019ರಲ್ಲಿ ಎಸ್‌ಕೆಎಂ ಪಕ್ಷವೂ ಪವನ್ ಚಮ್ಲಿಂಗ್ ನೇತೃತ್ವದ ಎಸ್‌ಡಿಎಫ್ ಪಕ್ಷದ ವಿರುದ್ಧ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಎಸ್‌ಡಿಎಫ್ ಪಕ್ಷದ  25 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತ್ತು. 

ಇತ್ತ ಅರುಣಾಚಲ ಪ್ರದೇಶದಲ್ಲಿ ಕೇವಲ 50 ಕ್ಷೇತ್ರಗಳ ಫಲಿತಾಂಶ ಮಾತ್ರ ಹೊರ ಬೀಳಲಿದೆ. ಏಕೆಂದರೆ ಇಲ್ಲಿನ 10 ಕ್ಷೇತ್ರಗಳಲ್ಲಿ ಬಿಜೆಪಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದೆ. ಹೀಗಾಗಿ ಇಲ್ಲಿ ಆಡಳಿತದಲ್ಲಿರುವ ಬಿಜೆಪಿ ಸಿಎಂ ಪೇಮಾ ಖಂಡು ಮೂರನೇ ಬಾರಿ ಗದ್ದುಗೆ ಏರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬಿಜೆಪಿ ಇಲ್ಲಿ ಎಲ್ಲಾ 60 ಕ್ಷೇತ್ರಗಳಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಕಾಂಗ್ರೆಸ್ ಮಾತ್ರ ಕೇವಲ 34 ಕ್ಷೇತ್ರಗಳಲ್ಲಿ ಸ್ಪರ್ಧೆ ನೀಡಿತ್ತು.

Latest Videos
Follow Us:
Download App:
  • android
  • ios