ಐ ಪ್ಯಾಕ್‌ ಸಂಸ್ಥೆಯ ಮುಖ್ಯಸ್ಥ ಪ್ರತೀಕ್‌ ಜೈನ್ ಮನೆಯಿಂದ ದಾಖಲೆ ಸಂಗ್ರಹ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಕೋಲ್ಕತಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಭ್ರಷ್ಟಾಚಾರ ಆರೋಪದ ಪ್ರಕರಣದಡಿ ಜೈನ್‌ ಮನೆ, ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು.

ಕೋಲ್ಕತಾ: ಐ ಪ್ಯಾಕ್‌ ಸಂಸ್ಥೆಯ ಮುಖ್ಯಸ್ಥ ಪ್ರತೀಕ್‌ ಜೈನ್ ಮನೆಯಿಂದ ದಾಖಲೆ ಸಂಗ್ರಹ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಕೋಲ್ಕತಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಭ್ರಷ್ಟಾಚಾರ ಆರೋಪದ ಪ್ರಕರಣದಡಿ ದಾಳಿ

ಭ್ರಷ್ಟಾಚಾರ ಆರೋಪದ ಪ್ರಕರಣದಡಿ ಜೈನ್‌ ಮನೆ, ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿಂದ ಕೆಲ ದಾಖಲೆ ಸಂಗ್ರಹಿಸಿದ್ದರು. ಆದರೆ ಇದು ರಾಜಕೀಯ ಪ್ರೇರಿತ ದಾಳಿ. ಪಕ್ಷದ ಮಹತ್ವದ ದಾಖಲೆಗಳನ್ನು ಅವರು ಕದ್ದೊಯ್ದಿದ್ದಾರೆ ಎಂದು ಸಿಎಂ ಮಮತಾ ಆರೋಪಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ದಾಖಲೆ ಸಂಗ್ರಹಿಸಿದ ಇ.ಡಿ. ಅಧಿಕಾರಿಗಳು ಯಾರು ಎಂಬ ಶೋಧಕ್ಕೆ ಇಳಿದಿದ್ದಾರೆ.

ಸುಪ್ರೀಂಗೆ ಅರ್ಜಿ:

ಈ ನಡುವೆ ಐ ಪ್ಯಾಕ್‌ ಮೇಲಿಅನ ದಾಳಿ ಪ್ರಕರಣದಲ್ಲಿ ತನ್ನ ಅಭಿಪ್ರಾಯ ಆಲಿಸದೇ ಯಾವುದೇ ಆದೇಶ ಹೊರಡಿಸದಂತೆ ಕೋರಿ ಟಿಎಂಸಿ ಸುಪ್ರೀಂಕೋರ್ಟ್‌ನಲ್ಲಿ ಕೇವಿಯಟ್‌ ಸಲ್ಲಿಸಿದೆ. ಇದೇ ವೇಳೆ ತನಿಖೆಗೆ ಸಿಎಂ ಮಮತಾ ಅಡ್ಡಿ ಮಾಡಿದ ಆರೋಪದ ಪ್ರಕರಣದಲ್ಲಿ ಇ.ಡಿ ಅರ್ಜಿಯ ತುರ್ತು ವಿಚಾರಣೆಗೆ ಕಲ್ಕತಾ ಹೈಕೋರ್ಟ್‌ ಶನಿವಾರ ನಿರಾಕರಿಸಿದೆ.