Asianet Suvarna News Asianet Suvarna News

ಬಾಲಕಿಯ ಸ್ಕೂಲ್ ಬ್ಯಾಗ್‌ನಲ್ಲಿತ್ತು ಬುಸ್ ಬುಸ್ : ಬ್ಯಾಗ್‌ನಿಂದ ಹಾವು ಹೊರ ಹಾಕಿದ ಶಿಕ್ಷಕ

ಬಾಲಕಿಯೊಬ್ಬಳ ಶಾಲಾ ಬ್ಯಾಗ್‌ನೊಳಗೆ ಹಾವೊಂದು ಸೇರಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

poisonous snakes found in school girl bag in school at Madhya pradesh akb
Author
First Published Sep 27, 2022, 12:35 PM IST

ಭೋಪಾಲ್: ಹಾವುಗಳು ಸದಾ ಕತ್ತಲೆಯಿಂದ ಕೂಡಿದ ನಿಗೂಢವಾದ ಜಾಗಗಳಲ್ಲಿ ಆಶ್ರಯ ಪಡೆಯುತ್ತವೆ. ಮಳೆಗಾಲದಲ್ಲಿ ಅವುಗಳು ಸುರಕ್ಷಿತ ಜಾಗ ಅರಸಿ ಮನೆಯೊಳಗೆ ನುಗ್ಗಲು ನೋಡುವುದು ಸಾಮಾನ್ಯ ಮಳೆ ಹೆಚ್ಚಾದ ಸಂದರ್ಭದಲ್ಲಿ ಹಾವು ಚೇಳು ಮುಂತಾದ ವಿಷಕಾರಿ ಜಂತುಗಳು ಮನೆಯತ್ತ ದಾಂಗುಡಿ ಇಡುತ್ತವೆ. ಹೀಗೆ ಮನೆಯೊಳಗೆ ಬರುವ ಹಾವುಗಳು ಶೂಗಳಲ್ಲಿ ಗೋಣಿ ಚೀಲಗಳಲ್ಲಿ ಹೆಚ್ಚಾಗಿ ಅವಿತ್ತು ಕುಳಿತುಕೊಳ್ಳುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಹಾವೊಂದು ಶಾಲಾ ಬಾಲಕಿಯ ಬ್ಯಾಗ್ ಸೇರಿಕೊಂಡಿದೆ.

ಮಧ್ಯಪ್ರದೇಶದ (MP) ಶಾಜಾಪುರದಲ್ಲಿ (Shajapur) ಈ ಘಟನೆ ನಡೆದಿದೆ. ಬ್ಯಾಗ್ ಏರಿಸಿಕೊಂಡು ಶಾಲೆಗೆ ಹೊರಟ 10ನೇ ತರಗತಿ ವಿದ್ಯಾರ್ಥಿನಿಗೆ (Student) ತನ್ ಬ್ಯಾಗ್ ಒಳಗೇನೋ ಜೀವಿಯೊಂದು ಹೊರಳಾಡುತ್ತಿರುವಂತೆ ಭಾಸವಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ತಲುಪಿದ ಬಳಿಕ ಆಕೆ ಶಿಕ್ಷಕರ (Teacher) ಬಳಿ ತನ್ನ ಬ್ಯಾಗ್ ಒಳಗೆ ಏನೋ ಇರುವ ಬಗ್ಗೆ ಹೇಳಿದ್ದಾಳೆ. ಈ ವೇಳೆ ತಪಾಸಣೆ ನಡೆಸಿದ ಶಿಕ್ಷಕರು ಬ್ಯಾಗ್‌ನಿಂದ ಪುಸ್ತಕವನ್ನೆಲ್ಲಾ ಹೊರತೆಗೆದು, ಬ್ಯಾಗ್‌ನ ಎಲ್ಲಾ ಜಿಪ್‌ಗಳನ್ನು ತೆರೆದು ಅಡಿಕೋಲಿನಿಂದ ತಪಾಸಣೆ ನಡೆಸಿದ್ದಾರೆ. ಆದರು ಹಾವು ಮಾತ್ರ ಹೊರ ಬಂದಿಲ್ಲ. ನಂತರ ಬ್ಯಾಗ್‌ನ್ನು ತಲೆಕೆಳಗೆ ಮಾಡಿ ಅಲುಗಾಡಿಸಿದಾಗ ಕಪ್ಪು ಬಣ್ಣದ ಹಾವೊಂದು ಬ್ಯಾಗ್‌ನಿಂದ ಕೆಳಗೆ ಬಿದ್ದು ಹೊರಟು ಹೋಗಿದೆ. ಬ್ಯಾಗ್‌ನಿಂದ ಹಾವು ಹೊರಟು ಹೋಗಿದ್ದು ನೋಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಂಗಾಗಿದ್ದಾರೆ. ಪುಣ್ಯಕ್ಕೆ ಹಾವಿನಿಂದಾಗಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. 

ಮಿಚೆಲ್‌ ಜಾನ್ಸನ್‌ ಕೋಣೆಯಲ್ಲಿ ಹಾವು ಪತ್ತೆ..! ನಿಮಗೆ ಈ ಹಾವು ಗೊತ್ತೇ ಎಂದು ಪ್ರಶ್ನಿಸಿದ ಆಸೀಸ್ ಕ್ರಿಕೆಟಿಗ

ಶಾಜಾಪುರದ ಬದ್ನೊಯಿಯ ಶಾಲೆಯಲ್ಲಿ ಈ ಘಟನೆ ನಡೆದಿದೆ. 10ನೇ ತರಗತಿಯ ಉಮಾ ರಜಾಕ್ ಎಂಬ ವಿದ್ಯಾರ್ಥಿನಿಯ ಬ್ಯಾಗ್‌ನಲ್ಲಿ ಈ ಹಾವು ಕಂಡು ಬಂದಿದೆ. ಹಾವಿನ ವಿಷ ತುಂಬಾ ಅಪಾಯಕಾರಿಯಾಗಿದ್ದು, ಒಂದು ಕಡಿತದಿಂದ 20 ಜನರು ಸಾಯುವಷ್ಟು ವಿಷವನ್ನು ಹಾವುಗಳು ಹೊಂದಿರುತ್ತವೆ.

 

ಕೆಲದಿನಗಳ ಹಿಂದೆ ಹಾವೊಂದು ಶೂ ಒಳಗೆ ಸೇರಿಕೊಂಡ ವಿಡಿಯೋ ಸಖತ್ ವೈರಲ್ ಆಗಿತ್ತು. ಮಳೆಗಾಲದಲ್ಲಿ ಹೊರಗಡೆ ಧೋ ಎಂದು ಮಳೆ ಸುರಿಯುತ್ತಿದ್ದರೆ, ಮನುಷ್ಯರೇನೋ ಬೆಚ್ಚಗೆ ಮನೆಯೊಳಗೆ ಕುಳಿತು ಬಿಸಿ ಬಿಸಿ ಬಜ್ಜಿ ಬೊಂಡ ಹಲಸಿನ ಕಾಯಿ ಹಪ್ಪಳ ತಿನ್ನುತ್ತಾ ಕೂರುತ್ತಾರೆ. ಆದರೆ ಇದೇ ಸಮಯದಲ್ಲಿ ಹಾವು ಹಲ್ಲಿ ಹುಳ ಹುಪ್ಪಟೆಗಳು ಆಶ್ರಯಕ್ಕಾಗಿ ಮನೆ ಒಳಗೆ ಸೇರುವ ಪ್ರಯತ್ನ ಮಾಡುತ್ತವೆ. ಅದರಲ್ಲೂ ವಿಶೇಷವಾಗಿ ಹಾವುಗಳು ಎಲ್ಲೆಡೆ ತುಂಬಿ ಹರಿಯುತ್ತಿರುವ ನೀರಿನಿಂದಾಗಿ ಜೀವ ಉಳಿಸಿಕೊಳ್ಳಲು ನಿರ್ಜನ ಕತ್ತಲಿನ ಬೆಚ್ಚಗಿನ ಜಾಗಗಳನ್ನು ಹಾವುಗಳು ಹುಡುಕುತ್ತಿರುತ್ತವೆ. ಕೆಲವೊಮ್ಮೆ ಹೊರಗೆ ನಿಲ್ಲಿಸಿದ ವಾಹನಗಳು ಕಾರು ಬೈಕ್‌ಗಳ ಒಳಗೆಯೂ ಹಾವುಗಳು ಸೇರಿಕೊಳ್ಳುವುದಿದೆ.  ಅದೇ ರೀತಿ ಇಲ್ಲೂ ಹಾವೊಂದು ಶೂ ಒಳಗೆ ಸೇರಿಕೊಂಡಿದ್ದು, ಶೂ ಧರಿಸಲೆಂದು ಹೊರಗೆ ತೆಗೆದಾಗ ಶೂ ಮಾಲೀಕ ಶಾಕ್ ಆಗಿದ್ದ. 

ಕೇರಳದ ಈ ಪೊಲೀಸ್ ಠಾಣೆಗೆ ಹಾವುಗಳೇ ಕಾವಲುಗಾರರು

ಶೂಗಳು ಹಾವುಗಳ ಮೊದಲ ಆಯ್ಕೆ . ಹಾಗಾಗಿ ಶೂ ಧರಿಸುವವರು ಬಹಳ ಜಾಗರೂಕ ಆಗಿರಬೇಕು. ಅದರಲ್ಲೂ ಮಳೆಗಾಲದಲ್ಲಿ ಶೂ ಧರಿಸುವ ಮುನ್ನ ಅದನ್ನೊಮ್ಮೆ ಪರಿಶೀಲಿಸದೇ ಧರಿಸಿದರೆ ಪರಲೋಕ ಸೇರೋದು ಗ್ಯಾರಂಟಿ. ಹಾವುಗಳು ಶೂಗಳೊಳಗೆ ಬೆಚ್ಚಗೆ ಅಡಗಿ ಕುಳಿತ ಹಲವು ಘಟನೆಗಳು ಈ ಹಿಂದೆ ನಡೆದಿವೆ. ಅದೇ ರೀತಿ ಈಗ ಹಾವೊಂದು ಶೂವೊಳಗೆ ಸೇರಿಕೊಂಡಿದ್ದು, ಮಹಿಳೆಯೊಬ್ಬರು ಹಾವನ್ನು ಹೊರ ತೆಗೆದು ರಕ್ಷಣೆ ಮಾಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಹಾವು ಹಿಡಿಯುತ್ತಿರುವ ಮಹಿಳೆ ಹಿಂದಿ ಭಾಷೆ ಮಾತನಾಡುತ್ತಿದ್ದು, ಇದು ಬಹುಶಃ ಉತ್ತರ ಭಾರತದ ಯಾವುದು ರಾಜ್ಯದಿರಬಹುದು ಎಂದು ಊಹೆ ಮಾಡಲಾಗಿದೆ. 

ಭಾರತೀಯ ಅರಣ್ಯ ಸೇವೆ ಅಧಿಕಾರಿ ದೀಪಾಂಶು ಕಬ್ರಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಚಪ್ಪಲಿ ಸ್ಟ್ಯಾಂಡ್ ಮೇಲೆ ಇರುವ ಶೂವಿನಿಂದ ಹಾವೊಂದು ಹೆಡೆ ಎತ್ತಿ ನಿಂತಿದ್ದು, ಉರಗ ಸ್ನೇಹಿ ಮಹಿಳೆಯೊಬ್ಬರು ಅದನ್ನು ಹೊರ ತೆಗೆದು ರಕ್ಷಣೆ ಮಾಡಿದ್ದರು.
 

Follow Us:
Download App:
  • android
  • ios