Asianet Suvarna News Asianet Suvarna News

ದೀಪಾವಳಿಗೆ ಬಿಗ್‌ ಗಿಫ್ಟ್‌: ದೇಶದ 75 ಸಾವಿರ ಯುವಕರಿಗೆ PM Modi ಉಡುಗೊರೆ

ಇತ್ತೀಚೆಗಷ್ಟೇ ರೈತರಿಗೆ ಹಾಗೂ ರೈಲ್ವೆ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ ನೀಡಿದ್ದ ನರೇಂದ್ರ ಮೋದಿ ಅವರ ಚಿತ್ತ ಈಗ ಯುವಕರತ್ತ ನೆಟ್ಟಿದೆ. ದೇಶದ ಯುವ ಜನತೆಗೆ ಪ್ರಧಾನಿ ಮೋದಿ  ದೀಪಾವಳಿಗೂ ಮುನ್ನ ವಿಶಿಷ್ಟ ಉಡುಗೊರೆ ನೀಡುತ್ತಿದ್ದಾರೆ.

pms diwali gift to 75 000 young people across the country job appointment letters ash
Author
First Published Oct 20, 2022, 2:15 PM IST | Last Updated Oct 20, 2022, 2:26 PM IST

ದೇಶದ ಯುವ ಜನತೆಗೆ (Youths) ಪ್ರಧಾನಿ ಮೋದಿ (PM Modi) ದೀಪಾವಳಿಗೂ (Diwali) ಮುನ್ನ ವಿಶಿಷ್ಟ ಉಡುಗೊರೆ (Gift) ನೀಡುತ್ತಿದ್ದಾರೆ. ಅಲ್ಲದೆ, ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ (Video Conferencing) ಮೂಲಕ ಪ್ರಧಾನಿ ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ರೈತರಿಗೆ ಹಾಗೂ ರೈಲ್ವೆ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ ನೀಡಿದ್ದ ನರೇಂದ್ರ ಮೋದಿ ಅವರ ಚಿತ್ತ ಈಗ ಯುವಕರತ್ತ ನೆಟ್ಟಿದೆ.

ಪ್ರಧಾನಿ ಮೋದಿ 75,000 ಯುವ ಜನತೆಗೆ ಸರ್ಕಾರಿ ಉದ್ಯೋಗ (Government Job) ನೀಡುತ್ತಿದ್ದು, ವಿವಿಧ ಸಚಿವಾಲಯಗಳು (Ministries) ಮತ್ತು ಸರ್ಕಾರಿ ಇಲಾಖೆಗಳಲ್ಲಿ (Government Departments) ಕೆಲಸ ಮಾಡಲು ಸಾವಿರಾರು ಯುವ ಜನತೆಗೆ ನೇಮಕಾತಿ ಪತ್ರಗಳನ್ನು (Appointment Letters) ಹಸ್ತಾಂತರಿಸಲಾಗುವುದು ಎಂದು ತಿಳಿದುಬಂದಿದೆ. 

ಇದನ್ನು ಓದಿ: ರೈತರಿಗೆ ಒಂದೇ ಕಡೆ ಎಲ್ಲ ಸೌಲಭ್ಯ: ದೇಶಾದ್ಯಂತ 600 ಕಿಸಾನ್‌ ಸಮೃದ್ಧಿ ಕೇಂದ್ರಗಳಿಗೆ Modi ಚಾಲನೆ

ರಕ್ಷಣಾ ಸಚಿವಾಲಯ, ರೈಲ್ವೆ ಸಚಿವಾಲಯ, ಅಂಚೆ ಇಲಾಖೆ, ಗೃಹ ಸಚಿವಾಲಯ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, ಕಸ್ಟಮ್ಸ್ ಮತ್ತು ಬ್ಯಾಂಕಿಂಗ್ ಇತ್ಯಾದಿ ಇಲಾಖೆಗಳಲ್ಲಿ ಉದ್ಯೋಗಗಳನ್ನು ನೀಡಲಾಗುತ್ತಿದ್ದು, ಅಕ್ಟೋಬರ್ 22 ರಂದು ನೇಮಕಾತಿ ಪತ್ರಗಳನ್ನು ವಿತರಿಸಲಾಗುತ್ತಿದೆ. 

ಈ ಹಿನ್ನೆಲೆ, ದೇಶದ ವಿವಿಧ ನಗರಗಳಿಂದ ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಒಡಿಶಾದಿಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಗುಜರಾತ್‌ನಿಂದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಚಂಡೀಗಢದಿಂದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಮಹಾರಾಷ್ಟ್ರದಿಂದ ಕೇಂದ್ರ  ವಾಣಿಜ್ಯ ಸಚಿವ ಪಿಯೂಶ್‌ ಗೋಯಲ್, ರಾಜಸ್ಥಾನದಿಂದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ತಮಿಳುನಾಡಿನಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉತ್ತರ ಪ್ರದೇಶದಿಂದ ಕೇಂದ್ರ ಭಾರಿ ಕೈಗಾರಿಕೆ ಸಚಿವ ಮಹೇಂದ್ರ ಪಾಂಡೆ, ಜಾರ್ಖಂಡ್‌ನಿಂದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಮತ್ತು ಬಿಹಾರದಿಂದ ಕೇಂದ್ರ ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: PM - KISAN ಯೋಜನೆ: ರೈತರ ಬ್ಯಾಂಕ್‌ ಖಾತೆಗೆ 16 ಸಾವಿರ ಕೋಟಿ ರೂ. ವರ್ಗಾಯಿಸಿದ ಪ್ರಧಾನಿ Modi

ಅಲ್ಲದೆ, ವಿವಿಧ ನಗರಗಳಿಂದ ಇತರ ಕೇಂದ್ರ ಸಚಿವರು ಸಹ ಸೇರಲಿದ್ದಾರೆ ಮತ್ತು ಎಲ್ಲಾ ಬಿಜೆಪಿ ಸಂಸದರು ತಮ್ಮ ಸಂಸದೀಯ ಕ್ಷೇತ್ರಗಳಿಂದ ಈ ಕಾರ್ಯಕ್ರಮಕ್ಕೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ದೇಶಾದ್ಯಂತ ಆಯ್ಕೆಯಾದ ಹೊಸ ಉದ್ಯೋಗಿಗಳು ಕೆಂದ್ರ ಸರ್ಕಾರದ 38 ಸಚಿವಾಲಯಗಳು/ಇಲಾಖೆಗಳಿಗೆ ಸೇರಿಕೊಳ್ಳುತ್ತಾರೆ. ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್ ಇನ್‌ಸ್ಪೆಕ್ಟರ್, ಕಾನ್ಸ್‌ಟೇಬಲ್, ಎಲ್‌ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ತನಿಖಾಧಿಕಾರಿಗಳು, MTS, ಇತರ ಹುದ್ದೆಗಳಿಗೆ ಗ್ರೂಪ್ - ಎ, ಗ್ರೂಪ್ - ಬಿ (ಗೆಜೆಟೆಡ್), ಗ್ರೂಪ್ - ಬಿ (ನಾನ್ ಗೆಜೆಟೆಡ್) ಮತ್ತು ಗ್ರೂಪ್ - ಸಿ ಹುದ್ದೆಗಳಲ್ಲಿ ನೇಮಕಾತಿಗಳನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ: Bharat ಬ್ರ್ಯಾಂಡ್‌ ಯೂರಿಯಾ ನಾಳೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಈ ನೇಮಕಾತಿಗಳನ್ನು ಸಚಿವಾಲಯಗಳು ಮತ್ತು ಇಲಾಖೆಗಳು ಸ್ವತಃ ಅಥವಾ UPSC, SSC, ರೈಲ್ವೇ ನೇಮಕಾತಿ ಮಂಡಳಿಯಂತಹ ನೇಮಕಾತಿ ಏಜೆನ್ಸಿಗಳ ಮೂಲಕ ಮಾಡಲಾಗುತ್ತಿದೆ. ತ್ವರಿತ ನೇಮಕಾತಿಗಾಗಿ, ಆಯ್ಕೆ ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದೆ ಮತ್ತು ತಂತ್ರಜ್ಞಾನವನ್ನು ಸಕ್ರಿಯಗೊಳಿಸಲಾಗಿದೆ ಎಂದೂ ತಿಳಿದುಬಂದಿದೆ.

ದೇಶದಲ್ಲಿ ಉದ್ಯೋಗಕ್ಕಾಗಿ ಜನರು ಹಾತೊರೆಯುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧವೂ ಸಾಕಷ್ಟು ಟೀಕೆಗಳು ಕೇಳಿಬರುತ್ತಿದೆ. ಹಾಗೂ, ಉದ್ಯೋಗದ ಅಂಕಿಅಂಶಗಳು ಸಹ ಕ್ಷೀಣಿಸುತ್ತಿದ್ದು, ಈ ಹಿನ್ನೆಲೆ ಮುಂದಿನ 18 ತಿಂಗಳಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಈ ವರ್ಷದ ಜೂನ್‌ನಲ್ಲಿ ಪ್ರಧಾನಿ ಮೋದಿ ಘೋಷಿಸಿದ್ದರು. ಈ ವಿಚಾರವಾಗಿ ಟೀಕೆ ಮಾಡಿದ್ದ ರಾಹುಲ್‌ ಗಾಂಧಿ, ಇದು "ಮಹಾ ಜುಮ್ಲಾ" ಸರ್ಕಾರ ಎಂದು ಹೇಳಿದ್ದರು. 

ಇನ್ನು, 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡುವ ಪ್ರಧಾನಿ ಮೋದಿಯವರ ಹೊಸ ಘೋಷಣೆಯು 8 ವರ್ಷಗಳ ಹಿಂದೆ 2 ಕೋಟಿ ಉದ್ಯೋಗಗಳನ್ನು ಒದಗಿಸುವ ಭರವಸೆಯನ್ನು ಹೋಲುತ್ತದೆ ಎಂದು ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದರು. 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗೂ ಮುನ್ನ 2 ಕೋಟಿ ಉದ್ಯೋಗಗಳ ಭರವಸೆ ನೀಡಿದ್ದರು. 
 
ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಪ್ರತಿಪಕ್ಷಗಳು, ಅವರು ಆರ್ಥಿಕತೆಯನ್ನು "ನಾಶಗೊಳಿಸುತ್ತಿದ್ದಾರೆ", ಇದರಿಂದ ನಿರುದ್ಯೋಗಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಉದ್ಯೋಗವು ಸಹ ಪ್ರಮುಖ ಚುನಾವಣಾ ಯೋಜನೆಗಳಲ್ಲಿ ಒಂದಾಗಿದೆ.

Latest Videos
Follow Us:
Download App:
  • android
  • ios