Asianet Suvarna News Asianet Suvarna News

ಯುದ್ಧ ಟ್ಯಾಂಕ್ ಸಮರ್ಪಣೆ, ಯೋಜನೆಗೆ ಅಡಿಪಾಯ; ಫೆ.14ಕ್ಕೆ ಕೇರಳ,ತಮಿಳುನಾಡಿಗೆ ಮೋದಿ!

ಫೆಬ್ರವರಿ 14ರಂದು ಪ್ರಧಾನಿ ನರೇಂದ್ರ ಮೋದಿಗೆ ಕೇರಳ ಹಾಗೂ ತಮಿಳುನಾಡಿಗೆ ಭೇಟಿ ನೀಡುತ್ತಿದ್ದಾರೆ. ಅರ್ಜುನ ಯುದ್ಧ ಟ್ಯಾಂಕ್ ಸಮರ್ಪಣೆ ಹಾಗೂ ಹಲವು ಯೋಜನೆಗಳಿಗೆ ಅಡಿಪಾಯ ಹಾಕಲು ಮೋದಿ ದಕ್ಷಿಣ ಭಾರತದತ್ತ ಪ್ರಯಾಣ ಬೆಳೆಸಲಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

PM to visit Tamil Nadu and Kerala on 14th Feb for lay foundation stone of multiple projects ckm
Author
Bengaluru, First Published Feb 12, 2021, 7:45 PM IST

ನವದೆಹಲಿ(ಫೆ.12):  ಪ್ರಧಾನಿ ನರೇಂದ್ರ ಮೋದಿ ಇದೇ ಫೆಬ್ರವರಿ 14 ರಂದು ಕೇರಳ ಹಾಗೂ ತಮಿಳುನಾಡು ಪ್ರವಾಸ ಕೈಗೊಳ್ಳಲಿದ್ದಾರೆ. ಕೇರಳದಲ್ಲಿ ಹಲವು ಯೋಜನೆಗಳಿಗೆ ಅಡಿಪಾಯ ಹಾಕಲಿರುವ ಮೋದಿ, ತಮಿಳುನಾಡಿನಲ್ಲಿ ರಾಷ್ಟ್ರಕ್ಕೆ ಯುದ್ಧಟ್ಯಾಂಕ್ ಸಮರ್ಪಿಸಲಿದ್ದಾರೆ. ಈ ಮೂಲಕ ರಾಜ್ಯದ ಬೆಳವಣಿಗೆ ಹೊಸ ವೇಗ ನಿಡಲಿದೆ. 

ನಮ್ಮ ಪ್ರಾರ್ಥನೆಗೆ ಸ್ಪಂದಿಸಿದ ಮೋದಿಗೆ ಧನ್ಯವಾದ; ಡೋಮಿನಿಕ ಪ್ರಧಾನಿ ಮನದಾಳ!.

ತಮಿಳುನಾಡು:
ತಮಿಳುನಾಡಿನಲ್ಲಿ ಪ್ರಧಾನಿ ಮೊದಲಿಗೆ 3,770 ಕೋಟಿ ರೂಪಾಯಿ ಮೊತ್ತದ ಚೆನ್ನೈ ಮೆಟ್ರೋ ವಿಸ್ತರಣೆ ಯೋಜನೆಗೆ ಅಡಿಪಾಯ ಹಾಕಲಿದ್ದಾರೆ. ಇನ್ನು ಚೆನ್ನೈ-ಅತ್ತಿಪಟ್ಟು ನಡುವಿನ ನಾಲ್ಕನೇ ರೈಲ್ವೇ ಯೋಜನೆಗೆ ಚಾಲನೆ ನೀಡಲಿದ್ದಾರೆ.  293.40 ಕೋಟಿ ರೂಪಾಯಿ ವೆಚ್ಚದಲ್ಲಿ 22.1 ಕಿ.ಮೀ ಉದ್ದದ ರೈಲು ಯೋಜನೆ ಇದಾಗಿದೆ.

ವಿಲ್ಲುಪುರಂ - ಕಡಲೂರು - ಮಯಿಲಾಡುತುರೈ - ತಂಜಾವೂರು ಮತ್ತು ಮಯಿಲಾಡುತುರೈ-ತಿರುವರೂರುಗಳಲ್ಲಿ ಸಿಂಗಲ್ ಲೈನ್ ವಿಭಾಗದ ರೈಲ್ವೆ ವಿದ್ಯುದ್ದೀಕರಣ ಯೋಜನೆ 423 ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ.  ಇನ್ನು ಅರ್ಜುನ ಯುದ್ಧ ಟ್ಯಾಂಕ್ (MK-1A) ಸೇನೆಗೆ ಸಮರ್ಪಣೆ ಮಾಡಲಿದ್ದಾರೆ.

ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಬಗ್ಗೆ ಮಾತನಾಡುತ್ತಾ ಭಾವುಕರಾದ ಮೋದಿ!

2640 ಕೋಟಿ ರೂಪಾಯಿ ವೆಚ್ಚದ ನೀರಾವರಿ ಯೋಜನೆ, 1,000 ಕೋಟಿ ರೂಪಾಯಿ ಐಐಟಿ ಕ್ಯಾಂಪಸ್ ಸೇರಿದಂತೆ ಹಲವು ಯೋಜನೆಗಳಿಗೂ ಮೋದಿ ಚಾಲನೆ ನೀಡಲಿದ್ದಾರೆ.

ಕೇರಳ:
BPCL ಪ್ರೊಪಿಲೀನ್ ಡೆರಿವೇಟಿವ್ ಪೆಟ್ರೋಕೆಮಿಕಲ್ ಪ್ರಾಜೆಕ್ಟ್‌ನ್ನು (PDPP) ಪ್ರಧಾನಿ  ಮೋದಿರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಈ ಸಂಕೀರ್ಣವು ಅಕ್ರಿಲೇಟ್‌ಗಳು, ಅಕ್ರಿಲಿಕ್ ಆಸಿಡ್ ಮತ್ತು ಆಕ್ಸೊ-ಆಲ್ಕೋಹಾಲ್ ಅನ್ನು ಉತ್ಪಾದಿಸುತ್ತದೆ . ಸದ್ಯ ಈ ಎಲ್ಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಈ ಯೋಜನೆಯಿಂದ ಆಮದು ನಿಲ್ಲಲಿದೆ. ಇಷ್ಟಚೇ ಅಲ್ಲ 3700 ರಿಂದ 4000 ಕೋಟಿ ಉಳಿತಾಯವಾಗುವ ನಿರೀಕ್ಷೆಯಿದೆ.

ಕೊಚ್ಚಿನ್‌ನ ವಿಲ್ಲಿಂಗ್ಡನ್ ದ್ವೀಪಗಳಲ್ಲಿ ರೋ-ರೋ ಹಡಗುಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಭಾರತದ ಅಂತರರಾಷ್ಟ್ರೀಯ ಜಲಮಾರ್ಗ ಪ್ರಾಧಿಕಾರವು ಬೊಲ್ಗಾಟ್ಟಿ ಮತ್ತು ವಿಲ್ಲಿಂಗ್ಡನ್ ದ್ವೀಪದ ನಡುವೆ ಎರಡು ಹೊಸ ರೋಲ್-ಆನ್ ಹಾಗೂ  ರೋಲ್-ಆಫ್ ಹಡಗುಗಳನ್ನು ರಾಷ್ಟ್ರೀಯ ಜಲಮಾರ್ಗ -3 ರಲ್ಲಿ ನಿಯೋಜಿಸಲಿದೆ.

ಇಂಟರ್ನ್ಯಾಷನಲ್ ಕ್ರೂಸ್ ಟರ್ಮಿನಲ್ ಸಾಗರಿಕಾ, ಮೆರೈನ್ ಎಂಜಿನಿಯರಿಂಗ್ ತರಬೇತಿ ಸಂಸ್ಥೆ, ವಿಜಯಾನ ಸಾಗರ್  ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್, ಕೊಚ್ಚಿನ್ ಬಂದರಿನಲ್ಲಿ ದಕ್ಷಿಣ ಕಲ್ಲಿದ್ದಲು ಘಚಕದ ಪುನರ್ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

Follow Us:
Download App:
  • android
  • ios