ನಮ್ಮ ಪ್ರಾರ್ಥನೆಗೆ ಸ್ಪಂದಿಸಿದ ಮೋದಿಗೆ ಧನ್ಯವಾದ; ಡೋಮಿನಿಕ ಪ್ರಧಾನಿ ಮನದಾಳ!
ಕೊರೋನಾ ವೈರಸ್ ವಿರುದ್ಧದ ಲಸಿಕೆ ಹೋರಾಟದಲ್ಲಿ ಇತರ ದೇಶಗಳಿಗಿಂತ ಮುಂಚೂಣಿಯಲ್ಲಿರುವ ಭಾರತ, ಇದೀಗ ವಿದೇಶಕ್ಕೂ ಲಸಿಕೆ ಪೂರೈಕೆ ಮಾಡುತ್ತಿದೆ. ಸಂಕಷ್ಟದಲ್ಲಿರುವ ಕೆರಿಬಿಯನ್ ದೇಶ ಡೊಮಿನಿಕ, ಲಸಿಕೆ ಅವಶ್ಯಕತೆ ಕುರಿತು ಪ್ರಧಾನಿ ಮೋದಿಗೆ ವಿವರಿಸಿತ್ತು. ತಕ್ಷಣವೇ ಮೋದಿ, ಡೋಮಿನಿಕಗೆ ಲಸಿಕೆಗೆ ತಲುಪಿಸಿದ್ದಾರೆ. ಈ ಕುರಿತು ಡೋಮಿನಿಕ ಪ್ರಧಾನಿ ಮನದಾಳ ಹಂಚಿಕೊಂಡಿದ್ದಾರೆ.
ಡೋಮಿನಿಕ(ಫೆ.10): ಭಾರತದಲ್ಲಿ ಕೊರೋನಾ ಲಸಿಕೆ ನೀಡುವಿಕೆ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಿಸಲಾಗಿದೆ. ಇದರ ನಡುವೆ ಅಗತ್ಯ ದೇಶಗಳಿಗೂ ಲಸಿಕೆ ರವಾನಿಸಲಾಗಿದೆ. ಹೀಗಿ ಭಾರತದ ಬಳಿ ಮನವಿ ಮಾಡಿದ ಕೇರಿಬಿಯನ್ ರಾಷ್ಟ್ರ ಡೋಮಿನಕಾಗೆ ಲಸಿಕೆ ವಿತರಣೆ ಮಾಡಲಾಗಿದೆ.
"
ಸಂಜೀವಿನಿ ಹೊತ್ತ ಹನುಮಂತನ ಫೋಟೋ ಜೊತೆ ಮೋದಿಗೆ ಥ್ಯಾಂಕ್ಸ್ ಹೇಳಿದ ಬ್ರೆಜಿಲ್ ಅಧ್ಯಕ್ಷ
ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದೇ ಹಾಗೂ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಡೋಮಿನಕಾ, ಪ್ರಧಾನಿ ನರೇಂದ್ರ ಮೋದಿ ಬಳಿ ಡೋಮಿನಿಕ ಪ್ರಧಾನಿ ರೂಸೆವೆಲ್ಟ್ ಸ್ಕೆರಿಟ್ ಮನವಿ ಮಾಡಿದ್ದರು. ತಕ್ಷಣವೆ ಸ್ಪಂದಿಸಿದ ಮೋದಿ, ಡೋಮಿನಿಕಾಗೆ ಲಸಿಕೆ ವಿತರಣೆ ಮಾಡಿದ್ದಾರೆ. ಲಸಿಕೆಯನ್ನು ಖುದ್ದು ಸ್ವೀಕರಿಸಿದ ರೊಸೆವೆಲ್ಟ್, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ.
ನಮ್ಮ ದೇಶದ ಪ್ರಾರ್ಥನೆಯನ್ನು ಇಷ್ಟೇ ಬೇಗ, ಇಷ್ಟು ತ್ವರಿತವಾಗಿ ಪರಿಗಣಿಸಲಾಗುತ್ತದೆ ಎಂದು ಭಾವಿಸಿರಲಿಲ್ಲ. ನಾವು 72,000 ಜನಸಂಖ್ಯೆ ಹೊಂದಿರುವ ಸಣ್ಣ ದ್ವೀಪ ರಾಷ್ಟ್ರ. ಹೀಗಾಗಿ ತಕ್ಷಣ ನಮ್ಮ ಮನವಿಗೆ ಸ್ಪಂದಿಸುವ ಕುರಿತು ಯಾವುದೇ ಕಲ್ಪನೆ ಇರಲಿಲ್ಲ. ಆದರೆ ಫ್ರಧಾನಿ ಮೋದಿ, ತಕ್ಷಣವೇ ಸ್ಪಂದಿಸಿ ಲಸಿಕೆ ಕಳುಹಿಸಿದ್ದಾರೆ. ದೇಶದ ಜನರ ಪರವಾಗಿ ನಾನು ಮೋದಿಗೆ ಧನ್ಯವಾದ ಹೇಳುತ್ತಿದ್ದೇನೆ ಎಂದು ರೊಸೆವೆಲ್ಟ್ ಹೇಳಿದ್ದಾರೆ.