Asianet Suvarna News Asianet Suvarna News

ಕೊರೋನಾ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲಿದೆ ಕೇಂದ್ರದ ಈ ಕಾರ್ಯಕ್ರಮ!

* ಕೊರೋನಾ ಕಾಲದಲ್ಲಿ ಕೇಂದ್ರದ ಮಹತ್ವದ ಹೆಜ್ಜೆ

* ಫ್ರಂಟ್‌ ಲೈನ್‌ ವರ್ಕರ್ಸ್‌ಗಾಗಿ ಪಿಎಂ ನರೇಂದ್ರ ಮೋದಿಯಿಂದ ವಿಶೇಷ ಕಾರ್ಯಕ್ರಮ ಉದ್ಘಾಟನೆ

* ದೇಶದ 26 ಜಿಲ್ಲೆಗಳ 111 ತರಬೇತಿ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಈ ಸಿಸಿಸಿ(Customized Crash Course) ಕಾರ್ಯಕ್ರಮ ಆರಂಭ

PM to launch Customized Crash Course programme for Covid 19 Frontline workers on 18th June pod
Author
Bangalore, First Published Jun 16, 2021, 4:19 PM IST

ನವದೆಹಲಿ(ಜೂ.16): ಕೊರೋನಾ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ, ಫ್ರಂಟ್‌ ಲೈನ್‌ ವರ್ಕರ್ಸ್‌ಗಾಗಿ ಪಿಎಂ ನರೇಂದ್ರ ಮೋದಿ ನಾಳೆ, ಗುರುವಾರ ಕಸ್ಟಮೈಸ್ಡ್ ಕ್ರ್ಯಾಶ್ ಕೋರ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ದೇಶದ 26 ಜಿಲ್ಲೆಗಳ 111 ತರಬೇತಿ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಈ ಸಿಸಿಸಿ(Customized Crash Course) ಕಾರ್ಯಕ್ರಮ ಆರಂಭವಾಗಲಿದೆ.

ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಳಿಕ ಭಾಷಣ ಮಾಡಲಿದ್ದಾರೆ. ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲ ಸಚಿವರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

'ದೇಶ ಹಾಳು ಮಾಡುತ್ತಿರುವ ಪ್ರಧಾನಿ ಮೋದಿ, ಅಮಿತ್‌ ಶಾ'

ದೇಶದ ಒಂದು ಲಕ್ಷ ಕೊರೋನಾ ವಾರಿಯರ್‌ಗಳ ಕೌಶಲ್ಯವನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಕಾರ್ಯಕ್ರಮ ಆರಂಭವಾಗುತ್ತಿದೆ. ಇದರಡಿ ಹೋಮ್ ಕೇರ್ ಸಪೋರ್ಟ್, ಬೇಸಿಕ್ ಕೇರ್ ಸಪೋರ್ಟ್, ಅಡ್ವಾನ್ಸ್ಡ್ ಕೇರ್ ಸಪೋರ್ಟ್, ಎಮರ್ಜೆನ್ಸಿ ಕೇರ್ ಸಪೋರ್ಟ್, ಸ್ಯಾಂಪಲ್ ಕಲೆಕ್ಷನ್ ಸಪೋರ್ಟ್, ಹಾಗೂ ಮೆಡಿಕಲ್ ಎಕ್ವಿಪ್ಮೆಂಟ್ ಸಪೋರ್ಟ್ ಎಂಬ ಆರು ಕಸ್ಟಮೈಸ್ಡ್‌ ತರಬೇತಿಯನ್ನು ಕೊರೋನಾ ವಾರಿಯರ್‌ಗಳಿಗೆ ನಿಡಲಾಗುತ್ತದೆ.

ಒಟ್ಟು 276 ಕೋಟಿ ರೂಪಾಯಿ ವೆಚ್ಚದ ಈ ಕಾರ್ಯಕ್ರಮವನ್ನು ಪ್ರಧಾನ್ ಮಂತ್ರಿ ಕೌಶಲ್ ವಿಕಾಸ್ ಯೋಜನೆಯಡಿ ವಿನ್ಯಾಸಗೊಳಿಸಲಾಗಿದೆ. ಕೊರೋನಾ ಕಾಲದಲ್ಲಿ ಆರಂಭವಾಗುತ್ತಿರುವ ಈ ಕಾರ್ಯಕ್ರಮ ಆರೋಗ್ಯ ಕ್ಷೇತ್ರದಲ್ಲಿ ಕಾಣುತ್ತಿರುವ ಮಾನವ ಶಕ್ತಿ ಕೊರತೆ ಹಾಘೂ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಬೇಕಾದ ನುರಿತ ವೈದ್ಯಕಿಯೇತರ ಆರೋಗ್ಯ ಕಾರ್ಯಕರ್ತರನ್ನು ರೂಪಿಸಲು ಸಹಾಯಕವಾಗಲಿದೆ. 

Follow Us:
Download App:
  • android
  • ios