Asianet Suvarna News Asianet Suvarna News

Kullu Dussehra Festival: ಹಿಮಾಚಲ ಪ್ರದೇಶದಲ್ಲಿ ದಸರಾ ಆಚರಣೆ ಮಾಡಲಿರುವ ಪ್ರಧಾನಿ ಮೋದಿ!

ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ನರೇಂದ್ರ ಮೋದಿ ದಸರಾ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಕ್ಟೋಬರ್‌ 5 ರಂದು ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶದ ಕುಲುವಿಗೆ ಭೇಟಿ ನೀಡಲಿದ್ದು, ಅಲ್ಲಿನ ದಸರಾ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.
 

PM Narendra Modi will visit Dhalpur Ground Kullu Himachal Pradesh to celebrate Dussehra Festival san
Author
First Published Oct 4, 2022, 2:13 PM IST

ನವದೆಹಲಿ (ಅ.4): ಪ್ರತಿವರ್ಷ ನವರಾತ್ರಿ ಸಂಭ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಬಹಳ ವಿಶೇಷವಾಗಿ ಆಚರಣೆ ಮಾಡುತ್ತಾರೆ. ನವರಾತ್ರಿ 9 ದಿನಗಳಲ್ಲೂ ಉಪವಾಸ ವ್ರತವನ್ನು ಮಾಡುವ ಪ್ರಧಾನಿ ಮೋದಿ ವಿಜಯದಶಮಿ ಹಬ್ಬದ ಆಚರಣೆಯನ್ನು ಯಾವುದಾದರೂ ಒಂದು ರಾಜ್ಯದಲ್ಲಿ ಮಾಡುತ್ತಾರೆ. ಈ ಬಾರಿ ಇದೇ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಅವರು ದಸರಾ ಆಚರನೆ ಮಾಡಲಿದ್ದಾರೆ. ಕುಲ್ಲುವಿನಲ್ಲಿ ನಾಣೆ ನಡೆಯಲಿರುವ ಅಂತಾರಾಷ್ಟ್ರೀಯ ದಸರಾ ಸಂಭ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಹಿಮಾಚಲ ಪ್ರದೇಶದ ಅವರ ನಿಗದಿತ ವೇಳಾಪಟ್ಟಿಯನ್ನು ಕೂಡ ಪ್ರಧಾನ ಮಂತ್ರಿ ಕಚೇರಿ ಬಿಡುಗಡೆ ಮಾಡಿದೆ. ಕುಲು ಜಿಲ್ಲೆಯ ದಾಲ್ಪುರ್ ಮೈದಾನದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ದಸರಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ದಸರಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿರುವುದು ಇದೇ ಮೊದಲು. 300 ವಿಗ್ರಹಗಳ ಭವ್ಯ ರಥ ಯಾತ್ರೆ ನಡೆಯುವುದರಿಂದ ದಸರಾ ಹಬ್ಬವು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದಲ್ಲದೇ ಹಿಮಾಚಲ ಪ್ರದೇಶದಲ್ಲಿ ನಿರ್ಮಿಸಿರುವ ಏಮ್ಸ್ ಆಸ್ಪತ್ರೆಯನ್ನೂ ಪ್ರಧಾನಿ ಮೋದಿ ನಾಳೆ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಧಾನಿ ಮೋದಿ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಇಂತಹ ಕಾರ್ಯಕ್ರಮಗಳು ಮತ್ತು ಉತ್ಸವಗಳಲ್ಲಿ ಭಾಗವಹಿಸುತ್ತಿದ್ದಾರೆ. 

ಪ್ರಧಾನಿ ಮೋದಿ ತಮ್ಮ ಅಧಿಕಾರವಧಿಯಲ್ಲಿ ಇಂಥ ಅನೇಕ ಭಾರತೀಯ ಹಬ್ಬಗಳನ್ನು ಆಚರಿಸಿದ ಉದಾಹರಣೆಗಳಿವೆ

- ಕೆಲವೇ ದಿನಗಳ ಹಿಂದೆ, ಪ್ರಧಾನಿ ಗುಜರಾತ್‌ಗೆ ಭೇಟಿ ನೀಡಿದ್ದರು ಮತ್ತು ಅವರ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ಸೆಪ್ಟೆಂಬರ್ 29 ರಂದು ಅವರು ಅಹಮದಾಬಾದ್‌ನ ಜಿಎಂಡಿಸಿ ಮೈದಾನದಲ್ಲಿ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿದ್ದರು.

- 2022ರ ಆಗಸ್ಟ್‌ನಲ್ಲಿ ನಡೆದ ಗಣೇಶ ಚತುರ್ಥಿಯ ಸಂದರ್ಭದಲ್ಲಿ, ಪ್ರಧಾನಮಂತ್ರಿ,  ಪಿಯೂಷ್ ಗೋಯಲ್ ಅವರ ನಿವಾಸಕ್ಕೆ ಗಣೇಶನ ಆಶೀರ್ವಾದ ಪಡೆಯಲು ಭೇಟಿ ನೀಡಿದರು.

- ಈ ವರ್ಷ ಪ್ರಧಾನಿ ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಹೆಣ್ಣುಮಕ್ಕಳೊಂದಿಗೆ ರಕ್ಷಾ ಬಂಧನವನ್ನು (Rakshabandan) ಆಚರಿಸಿದರು, ಅವರು ಪ್ರಧಾನಿಯ ಕೈಗಳಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.

- ಏಪ್ರಿಲ್ 2022 ರಲ್ಲಿ ಬಿಹು ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ನವದೆಹಲಿಯಲ್ಲಿ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರ ನಿವಾಸದಲ್ಲಿ ಬಿಹು (Bihu) ಆಚರಣೆಯಲ್ಲಿ ಪಾಲ್ಗೊಂಡಿದ್ದರು.

- ಏಪ್ರಿಲ್ 2022 ರಲ್ಲಿ, ಪ್ರಕಾಶ್ ಪುರಬ್ ಆಚರಣೆಯ ಸಂದರ್ಭದಲ್ಲಿ, ಕೆಂಪು ಕೋಟೆಯಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಜಿಯವರ 400 ನೇ ಪ್ರಕಾಶ್ ಪುರಬ್ ಆಚರಣೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಿದ್ದರು.

-ರವಿದಾಸ್ ಜಯಂತಿಯ ಸಂದರ್ಭದಲ್ಲಿ, 2022ರ ಫೆಬ್ರವರಿಯಲ್ಲಿ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ದಲಿತ ಐಕಾನ್ ಗುರು ರವಿದಾಸ್ ಅವರಿಗೆ ಸಮರ್ಪಿತವಾದ ದೇವಾಲಯಕ್ಕೆ ಪ್ರಧಾನ ಮಂತ್ರಿ ಭೇಟಿ ನೀಡಿದರು ಮತ್ತು 'ಶಾಬಾದ್ ಕೀರ್ತನ್' ನಲ್ಲಿ ಭಾಗವಹಿಸಿದರು.

- 2021ರ ಡಿಸೆಂಬರ್ 25 ರಂದು ಗುರುಪುರಬ್ ಸಂದರ್ಭದಲ್ಲಿ, ಗುಜರಾತ್‌ನ ಗುರುದ್ವಾರ ಲಖ್‌ಪತ್ ಸಾಹಿಬ್‌ನಲ್ಲಿ ಗುರು ನಾನಕ್ ದೇವ್‌ಜಿ ಅವರ ಗುರುಪುರಬ್ ಆಚರಣೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

- 2020ರ ನವೆಂಬರ್‌ನಲ್ಲಿ ದೇವ್ ದೀಪಾವಳಿಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ವಾರಣಾಸಿಯಲ್ಲಿ ದೇವ್ ದೀಪಾವಳಿ (Dev Deepavali) ಮಹೋತ್ಸವದಲ್ಲಿ ಭಾಗವಹಿಸಿದರು.

- 2018ರ ಏಪ್ರಿಲ್‌ನಲ್ಲಿ ಬುದ್ಧ ಜಯಂತಿಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ನವದೆಹಲಿಯ (New Delhi) ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಚರಣೆಯಲ್ಲಿ ಪಾಲ್ಗೊಂಡರು.

ಹಿಮಾಚಲ ಪ್ರದೇಶಕ್ಕೆ ನಾಳೆ Modi ಭೇಟಿ: ನಡತೆ ಪ್ರಮಾಣಪತ್ರ ತರುವಂತೆ ಪತ್ರಕರ್ತರಿಗೆ ಸೂಚನೆ..!

- 2017ರ ಅಕ್ಟೋಬರ್‌ನಲ್ಲಿ ಶ್ರೀ ಗುರು ಗೋವಿಂದ್ ಸಿಂಗ್ ಜಿ ಮಹಾರಾಜ್ ಅವರ 350 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಪಾಟ್ನಾದಲ್ಲಿ ಶ್ರೀ ಗುರು ಗೋವಿಂದ್ ಸಿಂಗ್ ಜಿ ಮಹಾರಾಜ್ ಅವರ 350 ನೇ ಜನ್ಮ ವಾರ್ಷಿಕೋತ್ಸವದ ಆಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು.

 

Modi ಅಪೇಕ್ಷೆಯಂತೆ ಭಾರತ 6ಜಿಯಲ್ಲಿ ವಿಶ್ವದಲ್ಲೇ ಮುನ್ನಡೆ ಸಾಧಿಸಲಿದೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

- 2017ರ ಫೆಬ್ರವರಿಯಲ್ಲಿ ಮಹಾ ಶಿವರಾತ್ರಿಯ ಸಂದರ್ಭದಲ್ಲಿ, ಪಿಎಂ ಮೋದಿ (PM Modi) ಕೊಯಮತ್ತೂರುಗೆ ಭೇಟಿ ನೀಡಿದರು ಮತ್ತು ಆದಿಯೋಗಿ ಶಿವನ 112 ಅಡಿ ಪ್ರತಿಮೆಯನ್ನು ಅನಾವರಣಗೊಳಿಸಿದರು.

- 2016ರ ಅಕ್ಟೋಬರ್‌ನಲ್ಲಿಪ್ರಧಾನಿ ಮೋದಿ ಲಕ್ನೋದಲ್ಲಿ ದಸರಾ ಆಚರಿಸಿದ್ದರು.
 

Follow Us:
Download App:
  • android
  • ios