Asianet Suvarna News Asianet Suvarna News

Modi ಅಪೇಕ್ಷೆಯಂತೆ ಭಾರತ 6ಜಿಯಲ್ಲಿ ವಿಶ್ವದಲ್ಲೇ ಮುನ್ನಡೆ ಸಾಧಿಸಲಿದೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

6G ಯಲ್ಲಿ ಜಾಗತಿಕವಾಗಿ ಮುನ್ನಡೆ ಸಾಧಿಸುವ ಪ್ರಧಾನಿ ಮೋದಿಯವರ ಬಯಕೆಯಂತೆ, 6G ಯಲ್ಲಿ ಭಾರತವು ಮುನ್ನಡೆ ಸಾಧಿಸುತ್ತದೆ" ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು. ತಂತ್ರಜ್ಞಾನದಲ್ಲಿ ಭಾರತೀಯ ಪರಿಹಾರಗಳನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತಿದೆ ಮತ್ತು ಅದರಲ್ಲಿ ಹೂಡಿಕೆ ಮಾಡುತ್ತಿದೆ ಎಂದೂ ಅವರು ಹೇಳಿದರು. 

india will take global lead in 6g as pm modi desires it ashwini vaishnaw ash
Author
First Published Oct 3, 2022, 11:41 AM IST

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ 5G ಸೇವೆಗೆ ಚಾಲನೆ ನೀಡಿದ ಒಂದು ದಿನದ ನಂತರ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು "6G ಯಲ್ಲಿ ಜಾಗತಿಕ ಮುನ್ನಡೆ (Lead) ಸಾಧಿಸಲು ಪ್ರಧಾನಿ ಬಯಸಿದ್ದಾರೆ" ಎಂದು ಹೇಳಿದರು. "6G ಯಲ್ಲಿ ಜಾಗತಿಕವಾಗಿ ಮುನ್ನಡೆ ಸಾಧಿಸುವ ಪ್ರಧಾನಿ ಮೋದಿಯವರ ಬಯಕೆಯಂತೆ, 6G ಯಲ್ಲಿ ಭಾರತವು ಮುನ್ನಡೆ ಸಾಧಿಸುತ್ತದೆ" ಎಂದು ಅಶ್ವಿನಿ ವೈಷ್ಣವ್ ಹೇಳಿದರು. ಈ ವರ್ಷದ ಆಗಸ್ಟ್‌ನಲ್ಲಿ, ತಮ್ಮ ಸರ್ಕಾರವು ಈ ದಶಕದ ಅಂತ್ಯದ ವೇಳೆಗೆ 6G ಸೇವೆಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಅಲ್ಲದೆ, ತಂತ್ರಜ್ಞಾನದಲ್ಲಿ ಭಾರತೀಯ ಪರಿಹಾರಗಳನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತಿದೆ ಮತ್ತು ಅದರಲ್ಲಿ ಹೂಡಿಕೆ ಮಾಡುತ್ತಿದೆ ಎಂದೂ ಅವರು ಹೇಳಿದರು. 

ಹೈಸ್ಪೀಡ್ 5G ಸೇವೆಗಳ ಪ್ರಾರಂಭವು "ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಬ್ಯಾಂಕಿಂಗ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಮೂಲಭೂತ ಬದಲಾವಣೆಗಳನ್ನು ತರುತ್ತದೆ" ಎಂದು ಅಶ್ವಿನಿ ವೈಷ್ಣವ್ ಈ ಹಿಂದೆ ಹೇಳಿದ್ದರು. ಅಲ್ಲದೆ, “ಟೆಲಿಕಾಂ (Telecom) ಡಿಜಿಟಲ್ ಇಂಡಿಯಾದ (Digital India)  ಹೆಬ್ಬಾಗಿಲು. ಟೆಲಿಕಾಂ ನಮ್ಮ ಆಧುನಿಕ ಜೀವನದಲ್ಲಿ ನಾವು ನೋಡುತ್ತಿರುವ ಎಲ್ಲಾ ಡಿಜಿಟಲ್ ಸೇವೆಗಳ ಮೂಲವಾಗಿದೆ. 5G ಸೇವೆಗಳು ಶಿಕ್ಷಣ, ಆರೋಗ್ಯ, ಕೃಷಿ, ಲಾಜಿಸ್ಟಿಕ್ಸ್ ಮತ್ತು ಬ್ಯಾಂಕಿಂಗ್ - ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮೂಲಭೂತ ಬದಲಾವಣೆಯನ್ನು ತರುತ್ತವೆ. ಇದು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದೂ ಅವರು ಹೇಳಿದರು.

ಇದನ್ನು ಓದಿ: 5G Technology: ದೆಹಲಿಯಲ್ಲಿದ್ದುಕೊಂಡು ಸ್ವೀಡನ್‌ನಲ್ಲಿ ಕಾರು ಓಡಿಸಿದ ಪ್ರಧಾನಿ ಮೋದಿ

ನಿನ್ನೆ 5G ಸೇವೆ ಪ್ರಾರಂಭಿಸಿದ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ಕುಮಾರ್ ಮಂಗಳಂ ಬಿರ್ಲಾ ಮತ್ತು ಸುನಿಲ್ ಭಾರತಿ ಮಿತ್ತಲ್ ಅವರೊಂದಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕೂಡ ಉಪಸ್ಥಿತರಿದ್ದರು. ಇನ್ನು, ಕೇಂದ್ರ ವಾಣಿಜ್ಯ ಸಚಿವ ಪಿಯೂಶ್‌ ಗೋಯಲ್ ಅವರು ಶನಿವಾರ, ದೇಶದಲ್ಲಿ 5G ಸೇವೆ ಪ್ರಾರಂಭವಾಗಿರುವುದು ಭಾರತದ ಬೆಳವಣಿಗೆಯ ಆಕಾಂಕ್ಷೆಗಳಿಗೆ ಬಹಳ ದೊಡ್ಡ ವಿಶ್ವಾಸ ವರ್ಧಕವಾಗಿದೆ ಮತ್ತು ಚಾಲನೆಯ ಸುತ್ತಲಿನ ಉತ್ಸಾಹವು ನಿಜವಾಗಿಯೂ ಸಶಕ್ತವಾಗಿದೆ ಎಂದು ಹೇಳಿದರು. ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ಸ್ ಯೂನಿಯನ್ ಅಡಿಯಲ್ಲಿ 5G ಮತ್ತು ಆರನೇ ತಲೆಮಾರಿನ (6th Generation) (6G) ಮೊಬೈಲ್ ಸಿಸ್ಟಮ್‌ನ ಭವಿಷ್ಯದ ಅಭಿವೃದ್ಧಿಗಾಗಿ ಪ್ರಮುಖ ಅಧ್ಯಯನ ಗುಂಪುಗಳು ಈಗ ಭಾರತೀಯ ಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿವೆ ಎಂದೂ ಅಶ್ವಿನಿ ವೈಷ್ಣವ್ ಹೇಳಿದರು.

5ಜಿ ತಂತ್ರಜ್ಞಾನದ ಮೂಲಕ ಕ್ಷೇತ್ರವನ್ನು ಕ್ರಾಂತಿಗೊಳಿಸುವ ಪ್ರಧಾನಿಯವರ ದೃಷ್ಟಿಕೋನಕ್ಕೆ ಟೆಲಿಕಾಂ ವಲಯದ ಮುಖ್ಯಸ್ಥರು ಶನಿವಾರ ಬೆಂಬಲ ತೋರಿಸಿದರು. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಭಾರ್ತಿ ಏರ್‌ಟೆಲ್ ಅಧ್ಯಕ್ಷ ಸುನೀಲ್ ಭಾರ್ತಿ ಮಿತ್ತಲ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಅವರು 5G ಸೇವೆಗಳ ಪ್ರಾರಂಭದಲ್ಲಿ ಪ್ರಧಾನಿ ಮೋದಿಯವರೊಂದಿಗೆ ಇದ್ದರು.

6G ಸೆಲ್ಯುಲಾರ್ ಡೇಟಾ ನೆಟ್‌ವರ್ಕ್‌ಗಳನ್ನು ಬೆಂಬಲಿಸುವ ವೈರ್‌ಲೆಸ್ ಸಂವಹನ ತಂತ್ರಜ್ಞಾನಗಳಿಗಾಗಿ ಪ್ರಸ್ತುತ ಅಭಿವೃದ್ಧಿಯಲ್ಲಿರುವ ಆರನೇ ತಲೆಮಾರಿನ ಮೊಬೈಲ್ ಸಿಸ್ಟಮ್ ಮಾನದಂಡವಾಗಿದೆ. ಇದು 5G ಗೆ ಯೋಜಿತ ಉತ್ತರಾಧಿಕಾರಿಯಾಗಿದೆ ಮತ್ತು ಇದು ಗಮನಾರ್ಹವಾಗಿ ವೇಗವಾಗಿರುತ್ತದೆ.

ಇದನ್ನೂ ಓದಿ: 5G Internet in India: ಮೋದಿ ಯುಗದ ಮತ್ತೊಂದು ಮೈಲುಗಲ್ಲು: ಹೇಗಿರಲಿದೆ ಡಿಜಿಟಲ್ ಭವಿಷ್ಯ?

6G ನೆಟ್‌ವರ್ಕ್‌ಗಳು ಬಹುಶಃ ಬ್ರಾಡ್‌ಬ್ಯಾಂಡ್ ಸೆಲ್ಯುಲಾರ್ ನೆಟ್‌ವರ್ಕ್‌ಗಳಾಗಿರಬಹುದು, ಇದರಲ್ಲಿ ಸೇವಾ ಪ್ರದೇಶವನ್ನು ಸೆಲ್ ಎಂದು ಕರೆಯಲಾಗುವ ಸಣ್ಣ ಭೌಗೋಳಿಕ ಪ್ರದೇಶಗಳಾಗಿ ವಿಂಗಡಿಸಲಾಗಿದೆ. Anritsu, NTT Docomo, Keysight, Fly, Nokia, Ericsson, Huawei, Samsung, LG, Apple, Xiaomi, Jio, Airtel ಮುಂತಾದ ಹಲವಾರು ಕಂಪನಿಗಳು ಮತ್ತು ಟೆಕ್ನಾಲಜಿ ಇನ್ನೋವೇಶನ್ ಇನ್‌ಸ್ಟಿಟ್ಯೂಟ್‌ನಂತಹ ಸಂಶೋಧನಾ ಸಂಸ್ಥೆಗಳು 6G ನೆಟ್‌ವರ್ಕ್‌ಗಳಲ್ಲಿ ಆಸಕ್ತಿ ತೋರಿಸಿವೆ.

Follow Us:
Download App:
  • android
  • ios