Asianet Suvarna News Asianet Suvarna News

ಹಿಮಾಚಲ ಪ್ರದೇಶಕ್ಕೆ ನಾಳೆ Modi ಭೇಟಿ: ನಡತೆ ಪ್ರಮಾಣಪತ್ರ ತರುವಂತೆ ಪತ್ರಕರ್ತರಿಗೆ ಸೂಚನೆ..!

ಪ್ರಧಾನಿ ಮೋದಿ ಹಿಮಾಚಲ ಪ್ರದೇಶ ಕಾರ್ಯಕ್ರಮವನ್ನು ವರದಿ ಮಾಡುವ ಪತ್ರಕರ್ತರು ನಡತೆ ಪ್ರಮಾಣ ಪತ್ರ ನೀಡಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಲಾಗಿದೆ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. 

journalists will have to give character certificates to cover pm modi event in himachal pradesh ash
Author
First Published Oct 4, 2022, 11:36 AM IST

ಪ್ರಧಾನಿ ಮೋದಿ ಅಕ್ಟೋಬರ್ 5, 2022 ಅಂದರೆ ನಾಳೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ವರದಿ ಮಾಡಲು ಪತ್ರಕರ್ತರು (Journalists) ಸೆಕ್ಯುರಿಟಿ ಪಾಸ್‌ (Security Pass) ತೆಗೆದುಕೊಳ್ಳಲು ಹಾಗೂ ಆ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ಎಲ್ಲ ಪತ್ರಕರ್ತರು ನಡತೆ ಪ್ರಮಾಣ ಪತ್ರ (Character Certificate) ನೀಡಬೇಕೆಂದು ಸೂಚನೆ ನೀಡಲಾಗಿದೆ. ಪ್ರಧಾನಿ ಮೋದಿಯವರು ಸೆಪ್ಟೆಂಬರ್ 24 ರಂದು ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆಯಬೇಕಿದ್ದ ರ‍್ಯಾಲಿ (Rally) ರದ್ದಾಗಿತ್ತು. ಈ ಹಿನ್ನೆಲೆ ನಾಳೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದರಿಂದ ಹಲವರ ಚಿತ್ತ ಈ ಕಾರ್ಯಕ್ರಮದತ್ತ ನೆಟ್ಟಿದೆ. ಹವಾಮಾನ ವೈಪರೀತ್ಯದ ಕಾರಣದಿಂದ ಪ್ರಧಾನಿ ಮೋದಿಯ ಕಾರ್ಯಕ್ರಮ ರದ್ದಾಗಿತ್ತು. ಇನ್ನು, ನಡತೆ ಪ್ರಮಾಣ ಪತ್ರ ನೀಡಬೇಕೆಂಬ ಜಿಲ್ಲಾಡಳಿತದ ಆದೇಶ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.  

ಖಾಸಗಿ ಒಡೆತನದ ಮುದ್ರಣ, ಡಿಜಿಟಲ್ ಮತ್ತು ಸುದ್ದಿ ಮಾಧ್ಯಮದ ಪತ್ರಕರ್ತರು ಮಾತ್ರವಲ್ಲ, ಆಲ್ ಇಂಡಿಯಾ ರೇಡಿಯೋ (All India Radio) (AIR) ಮತ್ತು ದೂರದರ್ಶನ ಸೇರಿದಂತೆ ಸರ್ಕಾರಿ ಮಾಧ್ಯಮದ ಪ್ರತಿನಿಧಿಗಳು ಸಹ "ನಡತೆ" ಪ್ರಮಾಣಪತ್ರಗಳನ್ನು ತರುವಂತೆ ಹೇಳಲಾಗಿದೆ. ಈ ವಿಷಯದ ಕುರಿತು ಸೆಪ್ಟೆಂಬರ್ 29, 2022 ರಂದು ಪೊಲೀಸರು ಅಧಿಕೃತ ಅಧಿಸೂಚನೆಯನ್ನು ಸಹ ಹೊರಡಿಸಿದ್ದಾರೆ. ಎಲ್ಲಾ ಪತ್ರಿಕಾ ವರದಿಗಾರರು, ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ಗಳು ಮತ್ತು ದೂರದರ್ಶನ ಹಾಗೂ AIR ತಂಡಗಳ ಪಟ್ಟಿಯನ್ನು "ಅವರ ನಡತೆಯ ಪ್ರಮಾಣಪತ್ರ" ದೊಂದಿಗೆ ಪೂರೈಸಲು ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ (District Public Relations Officer) (DPRO) ಅವರನ್ನು ಅಧಿಸೂಚನೆಯು ಕೇಳಿದೆ.

ಇದನ್ನು ಓದಿ: Modi ಅಪೇಕ್ಷೆಯಂತೆ ಭಾರತ 6ಜಿಯಲ್ಲಿ ವಿಶ್ವದಲ್ಲೇ ಮುನ್ನಡೆ ಸಾಧಿಸಲಿದೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

"ಕ್ಯಾರೆಕ್ಟರ್ ಪ್ರಮಾಣಪತ್ರವನ್ನು ಅಕ್ಟೋಬರ್ 1, 2022 ರೊಳಗೆ ಉಪ ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ, ಬಿಲಾಸ್‌ಪುರ ಕಚೇರಿಗೆ ಸರಬರಾಜು ಮಾಡಬಹುದು. ರ‍್ಯಾಲಿ ಅಥವಾ ಸಭೆಯೊಳಗೆ ಅವರ ಪ್ರವೇಶವನ್ನು ಈ ಕಚೇರಿ ನಿರ್ಧರಿಸುತ್ತದೆ" ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪೊಲೀಸ್ ಅಧಿಸೂಚನೆಗೆ ಪ್ರತಿಕ್ರಿಯಿಸಿದ ಎಎಪಿ ವಕ್ತಾರ ಪಂಕಜ್ ಪಂಡಿತ್ ಪತ್ರಿಕೋದ್ಯಮದಲ್ಲಿ ತನ್ನ 22 ವರ್ಷಗಳ ವೃತ್ತಿಜೀವನದಲ್ಲಿ, ಇದೀಗ ಮೊದಲ ಬಾರಿಗೆ ಇಂತಹ ವಿಲಕ್ಷಣ ಬೇಡಿಕೆಗೆ ಸಾಕ್ಷಿಯಾಗಿದ್ದೇನೆ.

"ಮೋದಿ ಜೀ ಅವರು ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿಲ್ಲ. ನಡತೆ ಪ್ರಮಾಣಪತ್ರವನ್ನು ನೀಡುವ ಬೇಡಿಕೆಯು ಅವಮಾನಕರ ಮತ್ತು ಮಾಧ್ಯಮದ ಚಟುವಟಿಕೆಗಳನ್ನು ತಡೆಯುವ ಪ್ರಯತ್ನವಾಗಿದೆ" ಎಂದು ಪಂಕಜ್ ಪಂಡಿತ್ ಹೇಳಿದರು. ಹಿಮಾಚಲ ಕಾಂಗ್ರೆಸ್ ಸಮಿತಿಯ ಮುಖ್ಯ ವಕ್ತಾರ ನರೇಶ್ ಚೌಹಾಣ್ ಕೂಡ ಆಡಳಿತದ ಬೇಡಿಕೆಯನ್ನು ಖಂಡಿಸಿದ್ದಾರೆ ಮತ್ತು ಈ ಕ್ರಮವು ಮಾಧ್ಯಮದ ಸ್ವಾತಂತ್ರ್ಯದ ವಿರುದ್ಧವಾಗಿದೆ ಎಂದು ಹೇಳಿದರು.

DPRO ಬಿಲಾಸ್‌ಪುರ್ ಅವರನ್ನು ಸಂಪರ್ಕಿಸಿದಾಗ, ಭದ್ರತಾ ಪಾಸ್‌ಗಳನ್ನು ನೀಡಲು ಅಧಿಕೃತ ಗುರುತಿನ ಚೀಟಿಗಳನ್ನು ಸ್ವೀಕರಿಸಲು ನಿರಾಕರಿಸಿದರು. ಹಾಗೂ, ನಡತೆ ಪ್ರಮಾಣಪತ್ರವು ಕಡ್ಡಾಯವಾಗಿದೆ ಎಂದು ಹೇಳಿದರು. ಅಲ್ಲದೆ, ಪತ್ರಕರ್ತರ ಡಿಜಿಟಲ್ ಐಡಿ ಕಾರ್ಡ್‌ಗಳ ಮೇಲೆ ಅಧಿಕೃತ ಮುದ್ರೆ ಹಾಕಬೇಕೆಂದು ಅವರು ಹೇಳಿಕೊಂಡಿದ್ದಾರೆ.  “ಈ ಔಪಚಾರಿಕತೆಯು ಎಲ್ಲರಿಗೂ ಕಡ್ಡಾಯವಾಗಿದೆ. ಎಸ್ಪಿ ಮತ್ತು ಸಿಐಡಿ ಇಲಾಖೆಗಳು ನಡತೆಯ ಪ್ರಮಾಣಪತ್ರಗಳನ್ನು ಕೇಳುತ್ತಿವೆ ಎಂದು ಡಿಪಿಾರ್‌ಒ ಕುಲದೀಪ್ ಗುಲೇರಿಯಾ ಹೇಳಿದ್ದಾರೆ.

ಇದನ್ನೂ ಓದಿ: 'ಗಾಂಧೀಜಿ ತೋರಿದ ದಾರಿಯಲ್ಲಿ ಮೋದಿ ಸರ್ಕಾರ'

ವಿಪರ್ಯಾಸವೆಂದರೆ ಪತ್ರಕರ್ತರಿಗೆ ಚಾರಿತ್ರ್ಯ ದೃಢೀಕರಣದ ಪ್ರಮಾಣಪತ್ರಗಳನ್ನು ನೀಡುವಂತೆ ಕೇಳಿದರೆ, ರ‍್ಯಾಲಿಯಲ್ಲಿ ಭಾಗವಹಿಸಲು ಕರೆತರುವ ಸಾವಿರಾರು ಜನರು ಯಾವುದೇ ಗುರುತಿನ ಪುರಾವೆಗಳನ್ನು ನೀಡುವ ಅಗತ್ಯವಿಲ್ಲ. ಪ್ರಧಾನಿ ಮೋದಿ ಅವರು ಹಿಮಾಚಲದ ಬಿಲಾಸ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಜೊತೆಗೆ ಏಮ್ಸ್‌ನ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಕುಲ್ಲು ದಸರಾ ಆಚರಣೆಯಲ್ಲೂ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.

Follow Us:
Download App:
  • android
  • ios