Historic Sceptre Sengol: ಕಾಂಗ್ರೆಸ್‌ ಮರೆತಿದ್ದ ರಾಜದಂಡವನ್ನು ಹೊಸ ಸಂಸತ್ತಿನಲ್ಲಿ ಇಡಲಿರುವ ಪ್ರಧಾನಿ ಮೋದಿ!

ಬ್ರಿಟಿಷರಿಂದ ಅಧಿಕಾರ ಹಸ್ತಾಂತರ ದ್ಯೋತಕವಾಗಿ ಅಂದಿನ ಪ್ರಧಾನಿ ಜವಹರಲಾಲ್‌ ನೆಹರು ಅವರಿಗೆ ಸೆಂಗೋಲ್ (ರಾಜದಂಡ) ನೀಡಲಾಗಿತ್ತು. ಇಲ್ಲಿಯವರೆಗೂ ಅಲಹಾಬಾದ್‌ ಮ್ಯೂಸಿಯಂನಲ್ಲಿದ್ದ ಈ ರಾಜದಂಡವನ್ನು ಪ್ರಧಾನಿ ಮೋದಿ ಹೊಸ ಸಂಸತ್‌ ಭವನದಲ್ಲಿ ಇರಿಲಿಸಲಿದ್ದಾರೆ.

PM Narendra Modi will keep Historic Sceptre Sengol in the new Parliament House san

ನವದೆಹಲಿ (ಮೇ.24): ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುವ ಸಮಯದಲ್ಲಿ ಬ್ರಿಟಿಷರು ಬರೀ ಘೋಷಣೆ ಮಾಡಿದ್ದು ಮಾತ್ರವಲ್ಲ, ಅಂದು ಸರ್ಕಾರದ ಮುಖ್ಯಸ್ಥರಾಗಿದ್ದ ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರು ಅವರಿಗೆ ಸೆಂಗೋಲ್ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿತ್ತು. ಸೆಂಗೋಲ್ ಎನ್ನುವುದು ರಾಜದಂಡ. ರಾಜದಂಡವನ್ನು ನೆಹರು ಅವರಿಗೆ ನೀಡಿದಾಗ ಭಾರತ ಅಧಿಕೃತವಾಗಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಬುಧವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇದೇ ವಿಚಾರವನ್ನು ಪ್ರಸ್ತಾಪ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಭಾನುವಾರ ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಹೊಸ ಸಂಸತ್‌ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ರಾಜದಂಡವನ್ನೂ ಸಂಸತ್ ಭವನದಲ್ಲಿ ಇಡಲಿದ್ದಾರೆ. ಸಂಸತ್‌ ಭವನದಲ್ಲಿ ಲೋಕಸಭಾ ಸ್ಪೀಕರ್‌ ಇರುವ ಖುರ್ಚಿಯ ಪಕ್ಕದಲ್ಲಿ ಈ ರಾಜದಂಡವನ್ನು ಇಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಸ್ವಾತಂತ್ರ್ಯದ ಸಮಯದಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅದನ್ನು ಬ್ರಿಟಿಷರಿಂದ ಇದನ್ನು ತೆಗೆದುಕೊಂಡಿದ್ದರು. ತಮಿಳುನಾಡಿನಿಂದ ಮೂಲದ ಈ ರಾಜದಂಡವನ್ನು, ಸ್ವಾತಂತ್ರ್ಯ ಪಡೆದ ಬಳಿಕ ಪ್ರಯಾಗರಾಜ್‌ನಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿತ್ತು. ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರತಿಬಿಂಬವಾಗಿ ಅದನ್ನು ಸಂಸತ್ತಿನಲ್ಲಿ ಇಡಲಾಗುತ್ತದೆ ಎಂದು ಅಮಿತ್‌ ಶಾ ಹೇಳಿದ್ದಾರೆ.

1945ರ ಆಗಸ್ಟ್‌ 14 ರಂದು ಸ್ವೀಕರಿಸಿದ್ದ ನೆಹರು: ಸೆಂಗೋಲ್ ಬಗ್ಗೆ ಪ್ರಧಾನಿ ಮೋದಿಗೆ ಗೊತ್ತಾದಾಗ ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ತಿಳಿಸಿದ್ದರು. 1945ರ ಆಗಸ್ಟ್ 14 ರಂದು, 10:45 ರ ಸುಮಾರಿಗೆ, ನೆಹರು ಅದರನ್ನು ಬ್ರಿಟಿಷರಿಂದ ಸ್ವೀಕರಿಸಿದ್ದರು. ಅದಕ್ಕೂ ಮುನ್ನ ತಮಿಳುನಾಡಿನಿಂದ ಅದನ್ನು ತರಿಸಲಾಗಿತ್ತು. ಆದರೆ, 1947ರ ನಂತರ ಈ ಸೆಂಗೋಲ್ಅನ್ನು ಮರೆತುಬಿಡಲಾಯಿತು. ಅದನ್ನು ಎಲ್ಲಿಯೂ ಉಲ್ಲೇಖ ಸಹ ಮಾಡಿರಲಿಲ್ಲ. ಇದಾದ 24 ವರ್ಷಗಳ ಬಳಿಕ ತಮಿಳುನಾಡಿನ ವಿದ್ವಾಂಸರೊಬ್ಬರು ಇದರ ಬಗ್ಗೆ ಪ್ರಸ್ತಾಪ ಮಾಡಿದ್ದರು. 2021-22ರ ಸರ್ಕಾರಿ ದಾಖಲೆಯಲ್ಲೂ ಇದರ ಅಂಶವಿತ್ತು. 1947ರಲ್ಲಿ ಸೆಂಗೋಲ್ ರಚನೆ ಮಾಡುವ ವೇಳೆ 96 ವರ್ಷದ ತಮಿಳು ವಿದ್ವಾಂಸರು ಕೂಡ ಉಪಸ್ಥಿತರಿದ್ದರು ಎಂದು ಅಮಿತ್‌ ಶಾ ತಿಳಿಸಿದ್ದಾರೆ.

ಸೆಂಗೋಲ್ಎಂಬ ಪದವು ಸಂಸ್ಕೃತದ 'ಸಂಕು' ದಿಂದ ಬಂದಿದೆ. ಇದರ ಅರ್ಥ ಶಂಖ. ಸೆಂಗೋಲ್ ಮೇಲ್ಭಾಗದಲ್ಲಿ ನಂದಿಯನ್ನು ಹೊಂದಿದೆ ಮತ್ತು ಕೆಲವು ಕಲಾಕೃತಿಗಳನ್ನು ಅದರ ಅಕ್ಕಪಕ್ಕ ಚಿತ್ರಿಸಲಾಗಿದೆ. ಇದು ಚಿನ್ನ ಮತ್ತು ಬೆಳ್ಳಿಯಿಂದ ಮಾಡಲ್ಪಟ್ಟಿದೆ. ಭಾರತದಲ್ಲಿ ಸೆಂಗೋಲ್ ಇತಿಹಾಸವು ಬಹಳ ಹಳೆಯದು. ಇದನ್ನು ಮೊದಲು ಮೌರ್ಯ ಸಾಮ್ರಾಜ್ಯ (322–185 BCE) ಬಳಕೆ ಮಾಡಿತ್ತು. ಸೆಂಗೋಲ್ಅನ್ನು ತರುವಾಯ ಗುಪ್ತ ಸಾಮ್ರಾಜ್ಯ (ಕ್ರಿ.ಶ. 320-550), ಚೋಳ ಸಾಮ್ರಾಜ್ಯ (ಕ್ರಿ.ಶ. 907-1310), ಮತ್ತು ವಿಜಯನಗರ ಸಾಮ್ರಾಜ್ಯ (ಕ್ರಿ.ಶ. 1336-1646) ಬಳಸಿದವು. ನಂತರ ಇದು ಚೋಳ ರಾಜವಂಶದಿಂದ ಮೊಘಲರಿಗೆ ಬಂದಿತು ಮತ್ತು ಬ್ರಿಟಿಷರು ಭಾರತಕ್ಕೆ ಬಂದಾಗ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಇದನ್ನು ಸ್ವಾಧೀನಪಡಿಸಿಕೊಂಡಿತು.

ಸೆಂಗೋಲ್ ಕೊಟ್ಟಿದ್ದೇಕೆ: ಭಾರತಕ್ಕೆ ಸ್ವಾತಂತ್ರ್ಯ ನೀಡುವ ಭಾಗವಾಗಿ ಬ್ರಿಟಿಷರ ಕೊನೆಯ ವೈಸ್‌ರಾಯ್‌ ಆಗಿದ್ದ ಮೌಂಟ್‌ ಬ್ಯಾಟನ್‌, ಪ್ರಧಾನಿ ಆಗಲಿದ್ದ ಜವಹರಲಾಲ್‌ ನೆಹರು ಅವರಿಗೆ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಅಧಿಕಾರ ಹಸ್ತಾಂತರವಾಗಿದೆ ಎನ್ನುವುದಕ್ಕೆ ಗುರುತು ಎನ್ನುವ ರೀತಿಯಲ್ಲಿ ಏನಾದರೂ ಬೇಕಿತ್ತು ಎಂದು ತಿಳಿಸಿದ್ದರು. ಆಗ ನೆಹರು, ದೇಶದ ಕೊನೆಯ ಗವರ್ನರ್‌ ಜನರಲ್‌ ಆಗಿದ್ದ ಸಿ ರಾಜಗೋಪಾಲಾಚಾರಿ ಅಥವಾ ರಾಜಾಜಿ ಅವರ ಬಳಿ ಈ ಕುರಿತಾದ ಸಲಹೆ ಕೇಳಿದ್ದರು.

New Parliament Building: ನೂತನ ಸಂಸತ್‌ ಭವನ ಉದ್ಘಾಟನೆಗೆ 19 ಪಕ್ಷಗಳ ಬಾಯ್ಕಾಟ್‌!

ಸಾಮಾನ್ಯವಾಗಿ ಪ್ರಧಾನ ಅರ್ಚಕರು, ಅಧಿಕಾರಕ್ಕೆ ಬಂದಾಗ ಹೊಸ ರಾಜನಿಗೆ ರಾಜದಂಡವನ್ನು ಹಸ್ತಾಂತರಿಸುವ ತಮಿಳು ಸಂಪ್ರದಾಯದ ಬಗ್ಗೆ ತಿಳಿಸಿದರು. ರಾಜಾಜಿ, ಚೋಳರ ಆಳ್ವಿಕೆಯಲ್ಲಿ ಈ ಸಂಪ್ರದಾಯವನ್ನು ಅನುಸರಿಸಲಾಯಿತು ಮತ್ತು ಇದು ಬ್ರಿಟಿಷ್‌ ರಾಜ್‌ನಿಂದ ಭಾರತದ ಸ್ವಾತಂತ್ರ್ಯವನ್ನು ಇದರ ಮೂಲಕ ಗುರುತಿಸಬಹುದು ಎಂದು ಸೂಚಿಸಿದರು. ಇದರಿಂದಾಗಿ ಐತಿಹಾಸಿಕ ಕ್ಷಣಕ್ಕಾಗಿ ರಾಜದಂಡವನ್ನು ವ್ಯವಸ್ಥೆ ಮಾಡಲಾಗಿತ್ತು.

Photos: ವಿಶ್ವದ ಬೃಹತ್‌ ಪ್ರಜಾಪ್ರಭುತ್ವದ ಹೊಸ ದೇಗುಲಕ್ಕೆ ನರೇಂದ್ರ ಮೋದಿ ಭೇಟಿ!
 

Latest Videos
Follow Us:
Download App:
  • android
  • ios