ಜಡ್ಜ್‌ಗಳ ನೇಮಕ ವ್ಯವಸ್ಥೆಗೆ ಸಂಬಂಧಿಸಿದಂತೆ ಒಂದೆಡೆ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ಸಂಘರ್ಷ ನಡೆಯುತ್ತಿದ್ದರೆ ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾ. ಚಂದ್ರಚೂಡ್‌ರನ್ನು ಪ್ರಶಂಸಿಸಿರುವುದು ಗಮನಾರ್ಹ.

ನವದೆಹಲಿ(ಜ.23): ಸ್ಥಳೀಯ ಭಾಷೆಗಳಲ್ಲಿ ಕೋರ್ಚ್‌ಗಳು ತೀರ್ಪು ನೀಡುವಂತಾಗಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸುವ ಒಲವು ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಚ್‌ ಮುಖ್ಯ ನ್ಯಾ. ಡಿ.ವೈ.ಚಂದ್ರಚೂಡ್‌ ನೀಡಿದ್ದ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಜಡ್ಜ್‌ಗಳ ನೇಮಕ ವ್ಯವಸ್ಥೆಗೆ ಸಂಬಂಧಿಸಿದಂತೆ ಒಂದೆಡೆ ಸರ್ಕಾರ ಹಾಗೂ ನ್ಯಾಯಾಂಗದ ನಡುವೆ ಸಂಘರ್ಷ ನಡೆಯುತ್ತಿದ್ದರೆ ಇನ್ನೊಂದೆಡೆ ಮೋದಿ ಅವರು ನ್ಯಾ. ಚಂದ್ರಚೂಡ್‌ರನ್ನು ಪ್ರಶಂಸಿಸಿರುವುದು ಗಮನಾರ್ಹ.

ಶನಿವಾರ ಮಾತನಾಡಿದ್ದ ಚಂದ್ರಚೂಡ್‌, ‘ಸ್ಥಳೀಯ ಭಾಷೆಗಳಲ್ಲಿ ಕೋರ್ಚ್‌ ತೀರ್ಪು ನೀಡುವುದು ಉತ್ತಮ. ಅದಕ್ಕಾಗಿ ನಾವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು’ ಎಂದು ಹೇಳಿದ್ದರು.
ಇದನ್ನು ಮೋದಿ ಸ್ವಾಗತಿಸಿದ್ದು, ‘ಇದೊಂದು ಉತ್ತಮ ಸಲಹೆ. ಭಾರತ ಸಾಕಷ್ಟು ಸ್ಥಳೀಯ ಭಾಷೆಗಳನ್ನು ಒಳಗೊಂಡಿದೆ. ಸ್ಥಳೀಯ ಭಾಷೆಗಳಲ್ಲಿ ತೀರ್ಪು ನೀಡುವುದರಿಂದ ಯುವಕರಿಗೂ ಹಾಗೂ ಇತರರಿಗೂ ಸಹಾಯವಾಗಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಮತ್ತೆ ಸುಪ್ರೀಂ- ಕೇಂದ್ರ ಜಟಾಪಟಿ : ಕೇಂದ್ರ ತಿರಸ್ಕರಿಸಿದ್ದ 2 ಹೆಸರು ಮತ್ತೆ ಶಿಫಾರಸು ಮಾಡಿದ ಕೊಲಿಜಿಯಂ

‘ಕೇಂದ್ರ ಸರ್ಕಾರ ಈ ಮೊದಲು ಸ್ಥಳೀಯ ಭಾಷೆಯಲ್ಲಿ ತೀರ್ಪು ನೀಡುವ ಕುರಿತು ಹೇಳಿತ್ತು. ಮಾತೃ ಭಾಷೆಯಲ್ಲೂ ಕಲಿಯವುದಕ್ಕೆ ಸಹಕಾರ ನೀಡಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಈ ರೀತಿಯ ಬದಲಾವಣೆಯಿಂದಾಗಿ ಸ್ಥಳೀಯ ಭಾಷೆಗಳಿಗೂ ಒತ್ತು ನೀಡಿದಂತಾಗುತ್ತದೆ’ ಎಂದು ಮೋದಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.