Asianet Suvarna News Asianet Suvarna News

ದಿವ್ಯಾಂಗ ಮಹಿಳೆಯ ಕಾಲು ಮುಟ್ಟಿ ನಮಸ್ಕರಿಸಿದ PM Modi

  • ವಿಕಲಚೇತನ ಮಹಿಳೆಯ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ
  • ಪ್ರಧಾನಿ ಭೇಟಿಗೆ ಬಂದಿದ್ದ ವಿಕಲಚೇತನೆ ಶಿಖಾ ರಸ್ತೋಗಿ 
  • ಪ್ರಧಾನಿ ಮೋದಿ ವಾರಾಣಸಿ ಭೇಟಿ ವೇಳೆ ಘಟನೆ
PM Narendra Modi touches feet of divyang woman in Varanasi akb
Author
Bangalore, First Published Dec 17, 2021, 12:54 PM IST

ವಾರಾಣಸಿ: ತಮ್ಮ ಇತ್ತೀಚಿನ ವಾರಾಣಸಿ ಭೇಟಿ  ವೇಳೆ ತಮ್ಮನ್ನು ಭೇಟಿ ಮಾಡಲು ಬಂದಿದ್ದ ದಿವ್ಯಾಂಗ ಮಹಿಳೆಯೋರ್ವರ ಕಾಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪೂರ್ಣವಾಗಿ ಬಗ್ಗಿ ನಮಸ್ಕರಿಸಿದ ಘಟನೆ ನಡೆದಿದೆ. ಡಿ.13ರಂದು ಕಾಶಿ ವಿಶ್ವನಾಥ ಕಾರಿಡಾರ್‌( Kashi Vishwanath Corridor project) ಉದ್ಘಾಟನೆಗೆ ಪ್ರಧಾನಿ ಮೋದಿ ವಾರಾಣಸಿ (Varanasi)ಗೆ ಆಗಮಿಸಿದ್ದರು. ಉದ್ಘಾಟನೆ ಬಳಿಕ ಮೋದಿ ಅವರನ್ನು ಭೇಟಿ ಮಾಡಲು ಶಿಖಾ ರಸ್ತೋಗಿ( Shikha Rastogi) ಎಂಬ ವಿಕಲ ಚೇತನ ಮಹಿಳೆ ಬಂದಿದ್ದರು.ಈ ವೇಳೆ ಅವರು ಪ್ರಧಾನಿ ಮೋದಿಯವರನ್ನು ಕಂಡ ತಕ್ಷಣ ನಮಸ್ಕರಿಸಲು ಮುಂದಾಗಿದ್ದಾರೆ. ಆದರೆ ಅವರನ್ನು ತಡೆದ ಮೋದಿಯವರೇ ಆಕೆಯ ಕಾಲಿಗೆ ನಮಸ್ಕರಿಸಿದ್ದಾರೆ. ಈ ಫೋಟೋವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮೋದಿಯವರ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವದ ಅತ್ಯಂತ ಶಕ್ತಿಶಾಲಿ ರಾಜಕೀಯ ನಾಯಕರಲ್ಲಿ ಒಬ್ಬರಾಗಿರುವ ಭಾರತದ ಪ್ರಧಾನಿ, ಅಂಗವಿಕಲ ಮಹಿಳೆಯ ಪಾದಗಳನ್ನು ಸ್ಪರ್ಶಿಸಿದ ದೃಶ್ಯವು ಅಲ್ಲಿದ್ದ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಪ್ರಧಾನ ಮಂತ್ರಿಯವರೇ ತನ್ನ ಕಾಲಿಗೆ ನಮಸ್ಕರಿಸಿದ್ದು ನೋಡಿ ಆ ಮಹಿಳೆಯೇ ದಂಗಾಗಿದ್ದರು. ಶಿಖಾ ಹುಟ್ಟಿನಿಂದಲೇ ಅಂಗವಿಕಲರಾಗಿ ಜನಿಸಿದವರು. ಬಳಿಕ ಮಾತನಾಡಿದ ಶಿಖಾ ಸಹೋದರ ವಿಶಾಲ್ ರಸ್ತೋಗಿ (Vishal Rastogi), ನನ್ನ ಸಹೋದರಿಯ ಬಗ್ಗೆ ನನಗೆ ಹೆಮ್ಮೆ ಇದೆ.  ಯಾರೂ ಕೂಡ ತಮ್ಮ ಮನೆಯಲ್ಲಿ ಇರುವ ವಿಕಲ ಚೇತನರನ್ನು ದುರ್ಬಲರು ಎಂದು ಪರಿಗಣಿಸಬೇಡಿ ಎಂದು ನಾನು ಮನವಿ ಮಾಡಲು ಬಯಸುತ್ತೇನೆ ಎಂದರು.

Kashi Vishwanath Dham: ಸನಾತನ ಧರ್ಮ, ಸಂಸ್ಕೃತಿ, ಆಧ್ಯಾತ್ಮ ಪರಂಪರೆ ರಕ್ಷಕ ಪ್ರಧಾನಿ ಮೋದಿ

ಇದಾದ ಬಳಿಕ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಕೂಡ ಮುಂದೆ ಬಂದು ಮಹಿಳೆಗೆ ಶುಭಾಶಯ ಕೋರಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಭದ್ರತಾ ಸಿಬ್ಬಂದಿ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಧಾನಿ ಮಹಿಳೆಯ ಪಾದಗಳನ್ನು ಸ್ಪರ್ಶಿಸಿದ ಚಿತ್ರವು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್‌ ಮಾಡಲಾಗಿದೆ.  ಬಿಜೆಪಿ ಮಹಿಳಾ ಮೋರ್ಚಾ (BJP Mahila Morcha) ದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ (Vanathi Srinivasan) ಕೂಡ ಟ್ವಿಟ್ಟರ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಇದನ್ನು ಎಲ್ಲಾ ಮಹಿಳಾ ಶಕ್ತಿಗೆ ಪ್ರಧಾನಿ ಸೂಚಿಸಿದ ಗೌರವ ಎಂದು ಕರೆದಿದ್ದಾರೆ. ಇದು ಎಲ್ಲಾ ಮಹಿಳಾ ಶಕ್ತಿಗೆ ಪ್ರಧಾನಿ ನೀಡಿದ ದೊಡ್ಡ ಗೌರವವಾಗಿದೆ. ನಾವೆಲ್ಲರೂ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

 

ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಅಪಾರವಾದ ಗೌರವಕ್ಕೆ ಹೆಸರುವಾಸಿಯಾಗಿರುವ ಪ್ರಧಾನಿ, ಈ ಹಿಂದೆಯೂ ಇಂತಹ ಹೃದಯಸ್ಪರ್ಶಿ  ಕಾರ್ಯಗಳ ಮೂಲಕ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದರು. 

Rajnath Singh : ಕರ್ನಲ್ ಹೋಶಿಯಾರ್ ಸಿಂಗ್ ಪತ್ನಿಯ ಕಾಲಿಗೆ ನಮಸ್ಕರಿಸಿದ ರಕ್ಷಣಾ ಮಂತ್ರಿ!

ಕೆಲದಿನಗಳ ಹಿಂದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು, ನೆರೆಯ ಪಾಕಿಸ್ತಾನ ವಿರುದ್ಧ 1971ರಲ್ಲಿ (1971 War)ನಡೆದ ಯುದ್ಧದ ಸ್ಮರಣೀಯ ಗೆಲುವಿಗೆ 50 ವರ್ಷವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಎರಡು ದಿನಗಳ ಸಂಭ್ರಮಾಚರಣೆಯ ಕೊನೆಯ ಹಂತದಲ್ಲಿ ಯುದ್ಧದಲ್ಲಿ ಹೋರಾಡಿದ್ದ ಸೈನಿಕರು ಹಾಗೂ ಯುದ್ಧದ ಬಳಿಕ ಶೌರ್ಯ ಪದಕ ವಿಜೇತರಾದ ಸೈನಿಕರ ಕುಟುಂಬದವರನ್ನೂ ಭೇಟಿ ಮಾಡಿದ್ದರು. 1971ರ ಯುದ್ಧದಲ್ಲಿ ತಮ್ಮ ಅಪರಿಮಿತ ಶೌರ್ಯದ ಕಾರಣದಿಂದಾಗಿ ಪರಮವೀರ ಚಕ್ರ (Param Vir Chakra)ಪುರಸ್ಕಾರ ಪಡೆದಿದ್ದ ಕರ್ನಲ್ ಹೋಶಿಯಾರ್ ಸಿಂಗ್  (Col Hoshiar Singh ) ಅವರ ಪತ್ನಿ ಧನ್ನೋ ದೇವಿ  (Dhanno Devi) ಅವರನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್ (Rajnath Singh),ಅವರ ಕಾಲಿಗೆ ನಮಸ್ಕರಿಸುವ ಮೂಲಕ ಗೌರವ ತೋರಿದರು. ಇತರ ಮಾಜಿ ಸೈನಿಕರ ಕುಟುಂಬದವರೂ ಮಾತ್ರವಲ್ಲದೆ, ಬಾಂಗ್ಲಾದೇಶದ ಯೋಧರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow Us:
Download App:
  • android
  • ios