ಅಹಮದಾಬಾದ್‌ನಲ್ಲಿ ಐಕಾನಿಕ್‌ ರಿವರ್‌ ಫ್ರಂಟ್‌ ಫೂಟ್‌ ಓವರ್‌ ಬ್ರಿಜ್‌ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮಾಡಿದ ಅತ್ಯಂತ ಮಹತ್ವದ ಕೆಲಸ ಸಾಬರಮತಿ ರಿವರ್‌ಫ್ರಂಟ್‌ ರಚನೆ. ರಿವರ್‌ಫ್ರಂಟ್‌ ಉದ್ಘಾಟನೆಯಾಗಿ 10 ವರ್ಷವಾದ ಹಿನ್ನಲೆಯಲ್ಲಿ ನಿರ್ಮಾಣ ಮಾಡಲಾಗಿರುವ ಫೂಟ್‌ ಓವರ್‌ ಬ್ರಿಜ್‌ಅನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟನೆ ಮಾಡಲಿದ್ದಾರೆ.

PM Narendra Modi to inaugurate iconic Riverfront Foot Over Bridge in Ahmedabad san

ನವದೆಹಲಿ (ಆ. 26): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಸಾಬರಮತಿ ರಿವರ್‌ಫ್ರಂಟ್‌. ಈ ರಿವರ್‌ಫ್ರಂಟ್‌ ಉದ್ಘಾಟನೆಯಾಗಿ 10 ವರ್ಷವಾದ ಹಿನ್ನಲೆಯಲ್ಲಿ ಅಹಮದಾಬಾದ್‌ನಲ್ಲಿ ನಿರ್ಮಾಣ ಮಾಡಲಾಗಿರುವ ರಿವರ್‌ಫ್ರಂಟ್‌ನ ಫೂಟ್‌ ಓವರ್‌ ಬ್ರಿಜ್‌ಅನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟನೆ ಮಾಡಲಿದ್ದಾರೆ. ಹೊಸ ಪೂಟ್‌ ಓವರ್‌ ಬ್ರಿಜ್‌ ಸಾಬರಮತಿ ರಿವರ್‌ಫ್ರಂಟ್‌ನ ಪೂರ್ವ ಹಾಗೂ ಪಶ್ಚಿಮ ಭಾಗವನ್ನು ಸಂಪರ್ಕ ಮಾಡಲಿದೆ. ಕಳೆದ ವಾರ ಭಾರತವು ತನ್ನ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸಿತು ಮತ್ತು ಅದೇ ದಿನ, ಅಹಮದಾಬಾದ್‌ನ ಐಕಾನಿಕ್ ಸಾಬರಮತಿ ರಿವರ್‌ಫ್ರಂಟ್ ಕೂಡ ಒಂದು ದಶಕವನ್ನು ಪೂರ್ಣ ಮಾಡಿತ್ತು. ಪ್ರವಾಸಿಗರು ಮತ್ತು ಪ್ರವಾಸಿಗರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಿಸ್ ಸೇತುವೆ ಮತ್ತು ಸರ್ದಾರ್ ಸೇತುವೆಯ ನಡುವೆ ಪೂಟ್‌ ಓವರ್‌ ಬ್ರಿಜ್‌ ನಿರ್ಮಾಣದೊಂದಿಗೆ ಮತ್ತೊಂದು ಆಕರ್ಷಣೆಯನ್ನು ಸೇರಿಸಲಾಗಿದೆ. ಸಾಬರಮತಿ ನದಿಯ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ಈ 300 ಮೀಟರ್ ಸೇತುವೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅನಾವರಣ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸೇತುವೆಯು ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಮತ್ತು ಪೂರ್ವ ಮತ್ತು ಪಶ್ಚಿಮ ದಂಡೆಯಲ್ಲಿ ವಿವಿಧ ಸಾರ್ವಜನಿಕ ಅಭಿವೃದ್ಧಿಗೆ ಸಂಪರ್ಕವನ್ನು ಒದಗಿಸುತ್ತದೆ ಮತ್ತು ವೆಸ್ಟ್ ಬ್ಯಾಂಕ್‌ನ ಫ್ಲವರ್ ಪಾರ್ಕ್ ಮತ್ತು ಈವೆಂಟ್ ಗ್ರೌಂಡ್ ನಡುವಿನ ಪ್ಲಾಜಾದಿಂದ ಪೂರ್ವ ದಂಡೆಯಲ್ಲಿರುವ ಪ್ರಸ್ತಾವಿತ ಕಲೆ / ಸಾಂಸ್ಕೃತಿಕ / ಪ್ರದರ್ಶನ ಕೇಂದ್ರಕ್ಕೆ ಸಂಪರ್ಕವನ್ನು ಒದಗಿಸುತ್ತದೆ. ವಿನ್ಯಾಸದಲ್ಲಿ ವಿಶಿಷ್ಟವಾಗಿರುವ ಸೇತುವೆ ತಾಂತ್ರಿಕವಾಗಿ ಮಾತ್ರವಲ್ಲದೆ, ನೋಡಲು ಕೂಡ ಅದ್ಭುತವಾಗಿ ಕಂಡಿದೆ. ರಿವರ್‌ಫ್ರಂಟ್‌ಗೆ ನಿರ್ಮಿಸಲಾಗಿರುವ ಫೂಟ್‌ ಓವರ್‌ ಬ್ರಿಜ್‌ ಅಹಮದಾಬಾದ್‌ ನಗರದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

PM Narendra Modi to inaugurate iconic Riverfront Foot Over Bridge in Ahmedabad san

ಮೋದಿ ಎರಡು ದಿನಗಳ ಗುಜರಾತ್‌ ಪ್ರವಾಸ: ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ 27 ರಿಂದ ಎರಡು ದಿನಗಳ ಕಾಲ ಗುಜರಾತ್‌ ಪ್ರವಾಸವನ್ನು ಮಾಡಲಿದ್ದಾರೆ. ಈ ವೇಳೆ ವಿವಿಧ ಕಾರ್ಯಕ್ರಮಗಳಿಗೆ ಅವರು ಚಾಲನೆ ನೀಡಲಿದ್ದಾರೆ.  2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದ ನಂತರ ಜನರು ತೋರಿದ ಸಹಿಷ್ಣುತೆಯ ಮನೋಭಾವವನ್ನು ಆಚರಿಸುವ ಸ್ಮೃತಿ ವನವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಗುಜರಾತ್‌ ಭೇಟಿಯ ಸಮಯದಲ್ಲಿ ಭುಜ್‌ನಲ್ಲಿ ಉದ್ಘಾಟಿಸಲಿದ್ದಾರೆ. ಆ ಬಳಿಕ ಸಬರಮತಿ ನದಿಯ ಮುಂಭಾಗದಲ್ಲಿ 'ಖಾದಿ ಉತ್ಸವ'ವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಮತ್ತು ಭಾರತದಲ್ಲಿ ಸುಜುಕಿಯ 40 ವರ್ಷಗಳ ಸ್ಮರಣಾರ್ಥ ಗಾಂಧಿನಗರದಲ್ಲಿ ಭಾನುವಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಹೇಳಿಕೆಯಲ್ಲಿ ತಿಳಿಸಿದೆ.

PM Narendra Modi to inaugurate iconic Riverfront Foot Over Bridge in Ahmedabad san

30 ಎಕರೆ ಪ್ರದೇಶದಲ್ಲಿ ಸಮಾವೇಶ: ಮೋದಿ ಮಂಗ್ಳೂರು ರ‍್ಯಾಲಿಗೆ ಭಾರಿ ಸಿದ್ಧತೆ

ಪ್ರಧಾನಮಂತ್ರಿಯವರು ಕಲ್ಪಿಸಿರುವ ಸ್ಮೃತಿ ವನ್ ಒಂದು ರೀತಿಯ ಉಪಕ್ರಮವಾಗಿದೆ, ಸುಮಾರು 13,000 ಜನರ ಮರಣದ ನಂತರ ಜನರು ತೋರಿಸಿದ ಸಹಿಸ್ಣುತಾ ಮನೋಭಾವವನ್ನು ಆಚರಿಸಲು 470 ಎಕರೆ ಭೂಮಿಯಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಪಿಎಂಒ ಹೇಳಿದೆ. 2001 ರಲ್ಲಿ ಭೂಕಂಪದ ಕೇಂದ್ರಬಿಂದುವಾಗಿ ಭುಜ್‌ ಅನ್ನು ಗುರುತಿಸಲಾಗಿತ್ತು. ಈ ಸ್ಮಾರಕದಲ್ಲಿ ಭೂಕಂಪದ ವೇಳೆ ಸಾವು ಕಂಡ ವ್ಯಕ್ತಿಗಳ ಹೆಸರನ್ನು ದಾಖಲು ಮಾಡಲಾಗಿದೆ.

508 ದಿನಗಳಲ್ಲಿ ನನಸಾಗಲಿದೆ ಮೂರು ದಶಕದ ಕನಸು!

ಅತ್ಯಾಧುನಿಕ ಸ್ಮೃತಿ ವನ್‌ ಭೂಕಂಪದ ವಸ್ತುಸಂಗ್ರಹಾಲಯವು ಏಳು ವಿಷಯಗಳ ಆಧಾರದ ಮೇಲೆ ಏಳು ಬ್ಲಾಕ್‌ಗಳಲ್ಲಿ ಪ್ರತ್ಯೇಕಿಸಲ್ಪಟ್ಟಿದೆ. ಪುನರ್ಜನ್ಮ, ಮರುಶೋಧನೆ, ಮರುನಿರ್ಮಾಣ, ಪುನರ್ನಿರ್ಮಾಣ, ಮರುಚಿಂತನೆ, ಪುನರುಜ್ಜೀವನ ಮತ್ತು ನವೀಕರಣ ಆಧಾರವಾಗಿ ಇದರ ನಿರ್ಮಾಣ ಮಾಡಲಾಗಿದೆ. ಭುಜ್‌ನಲ್ಲಿ ಸುಮಾರು 4,400 ಕೋಟಿ ರೂಪಾಯಿಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ಮೋದಿ ಮಾಡಲಿದ್ದಾರೆ. 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ನಡೆಯುತ್ತಿರುವ ಒಂದು ರೀತಿಯ ಕಾರ್ಯಕ್ರಮದಲ್ಲಿ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಖಾದಿ ಮತ್ತು ಅದರ ಮಹತ್ವವನ್ನು ಗೌರವಿಸಲು 'ಖಾದಿ ಉತ್ಸವ'ವನ್ನು ಆಯೋಜಿಸಲಾಗುತ್ತಿದೆ. ಇದನ್ನು ಸಬರಮತಿ ರಿವರ್‌ಫ್ರಂಟ್‌ನಲ್ಲಿ ಆಯೋಜಿಸಲಾಗುತ್ತದೆ.

Latest Videos
Follow Us:
Download App:
  • android
  • ios