ಪ್ರಧಾನಿ ಮೋದಿ ದೇಶದ ಜನರ ಮುಂದೆ 9 ಬೇಡಿಕೆ ಮಂಡಿಸಿದ್ದಾರೆ. ಈ ಬೇಡಿಕೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಆಗ್ರಹಪೂರ್ವಕ ಮನವಿ ಮಾಡಿದ್ದಾರೆ.
ವಾರಾಣಸಿ (ಡಿಸೆಂಬರ್ 19, 2023): ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಮುಂದೆ 9 ಬೇಡಿಕೆ ಮಂಡಿಸಿದ್ದಾರೆ. ಈ ಬೇಡಿಕೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಆಗ್ರಹಪೂರ್ವಕ ಮನವಿ ಮಾಡಿದ್ದಾರೆ.
ಅವು: ನೀರು ಉಳಿಸಿ, ಹಳ್ಳಿಯಲ್ಲಿ ಡಿಜಿಟಲ್ ವಹಿವಾಟು ಬಗ್ಗೆ ತಿಳಿಸಿ, ನಿಮ್ಮ ಊರನ್ನು ನಂ. 1 ಸ್ವಚ್ಛ ಊರು ಮಾಡಿ, ಸ್ಥಳೀಯ ಉತ್ಪನ್ನ ಉತ್ತೇಜಿಸಿ, ದೇಶದೊಳಗೆ ಪ್ರವಾಸ ಮಾಡಿ ದೇಶದಲ್ಲೇ ಮದುವೆ ಆಗಿ, ರೈತರಿಗೆ ನೈಸರ್ಗಿಕ ಕೃಷಿ ಬಗ್ಗೆ ತಿಳಿಸಿ, ಊಟದಲ್ಲಿ ಸಿರಿಧಾನ್ಯ ಬಳಸಿ, ಯೋಗ, ಜಿಮ್ ಮಾಡಿ, ಕನಿಷ್ಠ 1 ಬಡ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದನ್ನು ಓದಿ: ವಾರಾಣಸಿಯಲ್ಲಿ ವಿಶ್ವದ ಅತಿ ದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ: ವಿಶೇಷತೆ ಹೀಗಿದೆ..
ವಾರಾಣಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟನೆ
ಕಳೆದ ಎರಡು ದಿನಗಳಿಂದ ಸ್ವಕ್ಷೇತ್ರ ವಾರಾಣಸಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಸೋಮವಾರ ನಗರದಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರವನ್ನು ಉದ್ಘಾಟಿಸಿದರು. ಈ ಧ್ಯಾನಕೇಂದ್ರಕ್ಕೆ ಸ್ವರವೇದ ಮಹಾಮಂದಿರ ಎಂದು ನಾಮಕರಣ ಮಾಡಲಾಗಿದ್ದು, ಇದು 3 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಏಕಕಾಲಕ್ಕೆ 20 ಸಾವಿರ ಮಂದಿ ಧ್ಯಾನ ಮಾಡುವಷ್ಟು ವಿಶಾಲವಾಗಿದೆ ಹಾಗೂ 7 ಅಂತಸ್ತಿನ ಕಟ್ಟಡ ಇದಾಗಿದೆ.
ಉದ್ಘಾಟನೆಯ ಬಳಿಕ ಮಾತನಾಡಿದ ಪ್ರಧಾನಿ, ‘ಭಾರತವು ದಾಸ್ಯದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿದೆ. ಸ್ವಾತಂತ್ರ್ಯಾ ನಂತರ ನಮ್ಮ ಸಂಸ್ಕೃತಿಯ ಚಿಹ್ನೆಗಳನ್ನು ಮರುಸೃಷ್ಟಿ ಮಾಡುವ ಕಾರ್ಯ ನಡೆಯುತ್ತಿದೆ. ಸೋಮನಾಥ ದೇವಾಲಯ ಮರು ನಿರ್ಮಾಣ ಮಾಡುವಾಗ ಉಂಟಾದ ಅಡೆತಡೆಗಳಂತೆ ವಾರಾಣಸಿಯಲ್ಲೂ ಗತವೈಭವ ನಿರ್ಮಾಣ ಮಾಡುವಲ್ಲಿ ಹಲವು ತೊಡರುಗಳು ಎದುರಾದವು. ಆದಾಗ್ಯೂ ಸರ್ಕಾರ, ಸಾಧು-ಸಂತರು ಮತ್ತು ಸಮಾಜದ ಒಗ್ಗಟ್ಟಿನ ಬಲದಿಂದ ಕಾಶಿಯಲ್ಲಿ ಗತವೈಭವ ಮರುಕಳಿಸುವ ಕಾಲ ಸನ್ನಿಹಿತವಾಗಿದೆ’ ಎಂದು ಹೇಳಿದ್ದಾರೆ.
ಪಂಚರಾಜ್ಯ ರಿಸಲ್ಟ್ ದೇಶದ ಮೂಡ್ ತೋರಿಸಿದೆ; ಸ್ಥಿರ, ಶಾಶ್ವತ, ಬದ್ಧತೆಯ ಸರ್ಕಾರಕ್ಕೆ ಜನರ ಮತ: ಮೋದಿ
ಸ್ವರವೇದ ಮಹಾಮಂದಿರದ ಗೋಡೆಗಳ ಮೇಲೆ 3137 ಸ್ವರವೇದದ ಶ್ಲೋಕಗಳನ್ನು ಕೆತ್ತಲಾಗಿದೆ. ವಿಹಂಗಮ ಯೋಗ ಸಂಸ್ಥಾನ ಸ್ಥಾಪನೆಯಾಗಿ ಶತವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಭವ್ಯ ಮಂದಿರ ನಿರ್ಮಿಸಲಾಗಿದೆ. ಇದರ ಗುಮ್ಮಟವನ್ನು 125 ಕಮಲದ ದಳಗಳು ಆವರಿಸಿರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.
ಕಾಶಿ ತಮಿಳ್ ಸಂಗಮಮ್ ಉದ್ಘಾಟಿಸಿದ ಮೋದಿ, ಪ್ರಧಾನಿ ಭಾಷಣ ಟ್ರಾನ್ಸ್‌ಲೇಟ್ ಮಾಡಿದ ಭಾಷಿಣಿ ಎಐ!
