ಕಾಶಿ ತಮಿಳ್ ಸಂಗಮಮ್ ಉದ್ಘಾಟಿಸಿದ ಮೋದಿ, ಪ್ರಧಾನಿ ಭಾಷಣ ಟ್ರಾನ್ಸ್‌ಲೇಟ್ ಮಾಡಿದ ಭಾಷಿಣಿ ಎಐ!
ಸ್ವ ಕ್ಷೇತ್ರ ವಾರಣಾಸಿಗೆ ಎರಡು ದಿನಗಳ ಭೇಟಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವುದರ ಜೊತೆಗೆ ಕನ್ಯಾಕುಮಾರಿ ಮತ್ತು ವಾರಣಾಸಿ ನಡುವೆ ಓಡುವ ಕಾಶಿ ತಮಿಳು ಸಂಗಮಮ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು.
ನವದೆಹಲಿ (ಡಿ.17): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಾರಣಾಸಿಯಲ್ಲಿ ಕಾಶಿ ತಮಿಳು ಸಂಗಮಮ್ 2.0 ಅನ್ನು ಉದ್ಘಾಟಿಸಿದರು. ಕಾಶಿ ತಮಿಳು ಸಂಗಮಮ್ ಉದ್ಘಾಟನಾ ಸಮಾರಂಭದಲ್ಲಿ ಅವರ ಭಾಷಣದ ಅನುವಾದದಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ತಮಿಳು ವೀಕ್ಷಕರಿಗೆ ಭಾಷಣಿ ಮೂಲಕ ಏಕಕಾಲಿಕ ಎಐ ಆಧಾರಿತ ತಮಿಳು ಅನುವಾದ ಮಾಡಲಾಗಿದೆ. ಎರಡು ದಿನಗಳ ಭೇಟಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವುದರ ಜೊತೆಗೆ ಕನ್ಯಾಕುಮಾರಿ ಮತ್ತು ವಾರಣಾಸಿ ನಡುವೆ ಓಡುವ ಕಾಶಿ ತಮಿಳು ಸಂಗಮ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಮಾಡಿದರು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಇತರ ನಾಯಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಕೃತಕ ಬುದ್ಧಿಮತ್ತೆ ಬಳಸಿ ಮೋದಿ ಭಾಷಣ ಟ್ರಾನ್ಸ್‌ಲೇಷನ್: ಕಾಶಿ ತಮಿಳು ಸಂಗಮಮ್‌ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಅವರ ಉದ್ಘಾಟನಾ ಭಾಷಣದ ಅನುವಾದದಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಭಾಷಣಿ ಮೂಲಕ ಏಕಕಾಲದಲ್ಲಿ ಎಐ ಆಧಾರಿತ ತಮಿಳು ಅನುವಾದವನ್ನು ಮಾಡಲಾಯಿತು. ನೀವೆಲ್ಲರೂ ಇಲ್ಲಿಗೆ ಬಂದಿರುವುದು ಅತಿಥಿಗಳಾಗಿ ಅಲ್ಲ, ನನ್ನ ಕುಟುಂಬದ ಸದಸ್ಯರಾಗಿ ಎಂದು ಪ್ರಧಾನಿ ಮೋದಿ ಹೇಳಿದರು. ಕಾಶಿ ತಮಿಳು ಸಂಗಮಕ್ಕೆ ಸುಸ್ವಾಗತ. ಇಂದು ಇಲ್ಲಿ ಕೃತಕ ಬುದ್ಧಿಮತ್ತೆಯ ಮೂಲಕ ಹೊಸ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ, ಇದು ನಿಮ್ಮನ್ನು ತಲುಪಲು ಸುಲಭವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಕಾಶಿ ಮತ್ತು ತಮಿಳಿನ ನಡುವೆ ಭಾವನಾತ್ಮಕ ಸಂಬಂಧವಿದೆ ಎಂಬುದನ್ನು ಕಳೆದ ಒಂದು ವರ್ಷದಲ್ಲಿ ಮಾಡಿರುವ ಕೆಲಸ ತೋರಿಸುತ್ತದೆ ಎಂದರು. ತಮಿಳುನಾಡಿನಿಂದ ಕಾಶಿಗೆ ಬರುವುದೆಂದರೆ ಮಹಾದೇವನ (ಶಿವ) ಮನೆಯಿಂದ ಇನ್ನೊಂದು ಮನೆಗೆ ಬಂದಂತೆ ಎಂದು ಮೋದಿ ಹೇಳಿದ್ದಾರೆ.
ಕಾಶಿ ತಮಿಳು ಸಂಘದ (KTS) ಎರಡನೇ ಆವೃತ್ತಿಯು 17-30 ಡಿಸೆಂಬರ್ 2023 ರವರೆಗೆ ನಡೆಯಲಿದೆ. ಇದು ದೇಶದ ಉತ್ತರ ಮತ್ತು ದಕ್ಷಿಣದ ಹಂಚಿಕೆಯ ಇತಿಹಾಸ ಮತ್ತು ಸಂಸ್ಕೃತಿಯ ಆಚರಣೆಯಾಗಿದೆ. ಈ ಕಾರ್ಯಕ್ರಮ ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಎರಡು ಪ್ರದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ತಮಿಳುನಾಡು ಮತ್ತು ಪುದುಚೇರಿಯಿಂದ 1,400 ಪ್ರತಿನಿಧಿಗಳು ಕಾಸಿ ತಮಿಳು ಸಂಗಮಂನಲ್ಲಿ ಭಾಗವಹಿಸುತ್ತಿದ್ದಾರೆ. ತಮಿಳುನಾಡಿನ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳ ಗುಂಪಿನೊಂದಿಗೆ ತಮಿಳು ತಂಡದ ಮೊದಲ ಬ್ಯಾಚ್ ವಾರಣಾಸಿಗೆ ಮುಂಚಿತವಾಗಿ ತಲುಪಿತು. ಶಿಕ್ಷಕರು, ವೃತ್ತಿಪರರು, ಆಧ್ಯಾತ್ಮಿಕ ಮಾರ್ಗದರ್ಶಕರು, ರೈತರು ಮತ್ತು ಕುಶಲಕರ್ಮಿಗಳು, ಬರಹಗಾರರು, ವ್ಯಾಪಾರಿಗಳು ಮತ್ತು ಉದ್ಯಮಿಗಳ ಆರು ಗುಂಪುಗಳು ವಾರಣಾಸಿಗೆ ಆಗಮಿಸಿವೆ.
2014ರಲ್ಲಿ ಅಧಿಕಾರಕ್ಕೆ ಏರಿದ ದಿನದಿಂದ ಪ್ರಧಾನಿ ಮೋದಿಗೆ ಇಲ್ಲಿಯವರೆಗೂ 14 ದೇಶದಿಂದ ಶ್ರೇಷ್ಠ ಗೌರವ!
ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ತಮಿಳುನಾಡು ಮತ್ತು ಕಾಶಿ ಎರಡೂ ರಾಜ್ಯಗಳ ಕಲೆ, ಸಂಗೀತ, ಕೈಮಗ್ಗ, ಕರಕುಶಲ ವಸ್ತುಗಳು, ತಿನಿಸುಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ. ಸಾಹಿತ್ಯ, ಪುರಾತನ ಗ್ರಂಥಗಳು, ತತ್ವಶಾಸ್ತ್ರ, ಆಧ್ಯಾತ್ಮಿಕತೆ, ಸಂಗೀತ, ನೃತ್ಯ, ನಾಟಕ, ಯೋಗ ಮತ್ತು ಆಯುರ್ವೇದ ಕುರಿತು ಉಪನ್ಯಾಸಗಳನ್ನು ಕಾಶಿ ತಮಿಳು ಸಂಗಮದಲ್ಲಿ ಆಯೋಜಿಸಲಾಗಿದೆ. ಕಾಶಿ ತಮಿಳು ಸಂಗಮ್‌ನ ಮೊದಲ ಆವೃತ್ತಿಯು 16 ನವೆಂಬರ್‌ನಿಂದ 16 ಡಿಸೆಂಬರ್ 2022 ರವರೆಗೆ ನಡೆದಿತ್ತು.
370ನೇ ವಿಧಿ ವಾಪಾಸ್ ತರುವ ಯಾವ ಶಕ್ತಿ ಕೂಡ ಜಗತ್ತಿನಲ್ಲಿಲ್ಲ, ಸಂಸತ್ತಿನಲ್ಲಾದ ಘಟನೆ ಕಳವಳಕಾರಿ: ಪ್ರಧಾನಿ ಮೋದಿ