Asianet Suvarna News Asianet Suvarna News

ಎನ್‌ಐಎ ತನಿಖೆಯ ಬಿಗ್‌ ನ್ಯೂಸ್‌, ಪಿಎಫ್‌ಐ ಟಾರ್ಗೆಟ್‌ ಆಗಿತ್ತು ಪ್ರಧಾನಿ ಮೋದಿಯ ಪಾಟ್ನಾ ಸಮಾವೇಶ..!

ಕೇರಳದಿಂದ ಬಂಧಿತರಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯ ಶಫೀಕ್ ಪೈತ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಚಾರಣೆಗೊಳಪಡಿಸಿದೆ. ಇದರಲ್ಲಿ ಆಘಾತಕಾರಿ ಸುದ್ದಿ ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶಗಳೇ ನನ್ನ ಗುರಿಯಾಗಿತ್ತು ಎಂದು ಷರೀಫ್ ಪೈತ್ ಹೇಳಿದ್ದಾನೆ.
 

PM Narendra Modi Patna rally was on the target of PFI big disclosure in NIA inquiry san
Author
First Published Sep 24, 2022, 11:54 AM IST

ನವದೆಹಲಿ (ಸೆ. 24): ಕೇರಳದಿಂದ ಬಂಧಿತರಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯ ಶಫೀಕ್ ಪೈತ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ವಿಚಾರಣೆಗೊಳಪಡಿಸಿದೆ. ವಿಚಾರಣೆಯ ವೇಳೆ ಪೈತ್‌ ಆಘಾತಕಾರಿ ಸುದ್ದಿಯನ್ನು ಬಹಿರಂಗ ಮಾಡಿದ್ದಾನೆ. ನನ್ನ ಗುರಿ ಪ್ರಧಾನಿ ನರೇಂದ್ರ ಮೋದಿಯವರ ಪಾಟ್ನಾ ಸಮಾವೇಶವಾಗಿತ್ತು ಎಂದು ಶಫೀಕ್‌ ಪೈತ್ ಎನ್‌ಐಎಗೆ ತಿಳಿಸಿದ್ದಾನೆ. ಶಫೀಕ್‌ ಪ್ರಕಾರ, ಪಿಎಫ್‌ಐ ನಾಯಕರು ಸಮಾವೇಶದ ಸಮಯದಲ್ಲಿ ವಾತಾವರಣವನ್ನು ಕದಡಲು ಬಯಸಿದ್ದರು. ಇದಕ್ಕಾಗಿ ಬ್ಯಾನರ್‌-ಪೋಸ್ಟರ್‌ಗಳನ್ನೂ ತಯಾರಿಸಲಾಗಿತ್ತು. ಎನ್‌ಐಎ ನಡೆಸಿದ ವಿಚಾರಣೆಯಲ್ಲಿ, ಈ ವರ್ಷ ಜುಲೈ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾದಲ್ಲಿ ಸಮಾವೇಶ ನಡೆಸಿದ್ದರು ಎಂದು ಶಫೀಕ್ ಹೇಳಿದ್ದಾರೆ. ಈ ಸಮಾವೇಶವು ಪಿಎಫ್‌ಐ ಗುರಿಯಾಗಿತ್ತು. ತನಿಖೆಯ ವೇಳೆ ಪಿಎಫ್ ಐ ಖಾತೆಗೆ ಒಂದು ವರ್ಷದಲ್ಲಿ ಸುಮಾರು 120 ಕೋಟಿ ರೂಪಾಯಿ ಬಂದಿರುವುದು ಪತ್ತೆಯಾಗಿದೆ. ಇದರೊಂದಿಗೆ ಖಾತೆಗೆ ಜಮೆಯಾಗಿದ್ದ ಹಣದ ದುಪ್ಪಟ್ಟು ನಗದು ರೂಪದಲ್ಲಿ ಸಂಗ್ರಹವಾಗಿದೆ.

ಅಷ್ಟೇ ಅಲ್ಲ ಭಾರತದ ವಿವಿಧ ನಗರಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಇಷ್ಟು (Shafeeque Payeth) ಕೋಟಿ ರೂಪಾಯಿ ಸಂಗ್ರಹವಾಗಿರುವುದು ಎನ್ ಐಎ ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಣವನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ,  ದೇಶದ ಹಲವು ಭಾಗಗಳಿಂದ 106 ಜನರನ್ನು ಬಂಧಿಸಲಾಯಿತು. ಬಂಧಿತರಲ್ಲಿ ಹೆಚ್ಚಿನವರು ಕೇರಳದವರು. ಕೇರಳದ 22 ಜನರನ್ನು ಎನ್‌ಐಎ ಬಂಧಿಸಿದೆ. ಪಿಎಫ್‌ಐ ಈಗಾಗಲೇ ತನ್ನ ಕಾರ್ಯಸೂಚಿಯನ್ನು ಮುಂದುವರಿಸಲು ಹಲವಾರು ಸಂಘಟನೆಗಳನ್ನು ರಚಿಸಿತ್ತು. ಈ ಮೂಲಕ ಪಿಎಫ್‌ಐ ತನ್ನ ಕಾರ್ಯಸೂಚಿಯನ್ನು ದೇಶದಲ್ಲಿ ಮುಂದುವರಿಸಲು ಸಂಪೂರ್ಣ ಯೋಜನೆ ರೂಪಿಸಿತ್ತು. ಆದರೆ, ಈ ವಿಷಯ ತಿಳಿದ ತಕ್ಷಣ ಏಜೆನ್ಸಿಗಳು ಅದನ್ನು ಭೇದಿಸಿವೆ.

ಮಾಹಿತಿಯ ಪ್ರಕಾರ, ಪಿಎಫ್‌ಐ ಒಂದಲ್ಲ ಎರಡಲ್ಲ ಅರ್ಧ ಡಜನ್‌ಗಿಂತಲೂ ಹೆಚ್ಚು ಸಂಸ್ಥೆಗಳನ್ನು ರಚಿಸಿದೆ. ಆಂತರಿಕ ಭದ್ರತಾ ಕಚೇರಿಯ ಉನ್ನತ ಮಟ್ಟದ ದಾಖಲೆಗಳ ಪ್ರಕಾರ, ಈ ಸಂಸ್ಥೆಗಳನ್ನು ಸರ್ಕಾರಿ ಸಂಸ್ಥೆ ನಿರ್ಬಂಧಗಳನ್ನು ತಪ್ಪಿಸಲು ಮತ್ತು ಭಯೋತ್ಪಾದಕ ಕಾರ್ಯಸೂಚಿಗಳನ್ನು ಹರಡಲು ರಚಿಸಲಾಗಿದೆ.

ಈ ವರ್ಷದ ಜುಲೈ 12 ರಂದು ಪ್ರಧಾನಿ ಮೋದಿ (Prime Minister Narendra Modi) ಸಮಾವೇಶ ಬಿಹಾರದ ಪಾಟ್ನಾದಲ್ಲಿ (Patna In Bihar) ನಡೆದಿತ್ತು. ಈ ವೇಳೆ ಮೋದಿ ಮೇಲೆ ದಾಳಿ ನಡೆಸುವ ನಿಟ್ಟಿನಲ್ಲಿ ಶಫೀಕ್‌ ಪೈತ್‌ ಸೇರಿದಂತೆ ಇನ್ನೂ ಹಲವರಿಗೆ ತರಬೇತಿಯನ್ನೂ ನೀಡಲಾಗಿತ್ತು ಎಂದು ಸ್ವತಃ ಪೈತ್‌ ಎನ್‌ಐಎ (NIA) ಹಾಗೂ ಇಡಿ ತನಿಖೆಯ ಮುಂದೆ ಬಹಿರಂಗ ಮಾಡಿದ್ದಾನೆ. ಇದೇ ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ 2013ರ ಅಕ್ಟೋಬರ್‌ನಲ್ಲಿ ಇಂಡಿಯನ್‌ ಮುಜಾಹಿದ್ದೀನ್‌ಗೆ ಸೇರಿದ ಜಿಹಾದಿ ಭಯೋತ್ಪಾದಕರಿಂದ ಆತ್ಮಾಹುತಿ ದಾಳಿಯ ಬೆದರಿಕೆ ಎದುರಿಸಿದ್ದರು. ಪಿಎಫ್‌ಐ ರೀತಿಯಲ್ಲಿಯೇ ವ್ಯವಹರಿಸಿದ್ದ ಇಂಡಿಯನ್‌ ಮುಜಾಹಿದ್ದೀನ್‌, ಸಿಮಿ (SIMI) ಸಂಘಟನೆಯ ಸದಸ್ಯರನ್ನು ಬಳಸಿಕೊಂಡು ಪ್ರಧಾನಿ ಮೋದಿ ನಡೆಸಿದ್ದ ಸಮಾವೇಶದಲ್ಲಿ ಬಾಂಬ್‌ ಸ್ಪೋಟ ಮಾಡಿತ್ತು. ಅದರೆ, ಪ್ರಧಾನಿ ಮೋದಿ ಸಮಾವೇಶ ಮುಗಿದ ಹೊರನಡೆದ ಬಳಿಕ ಈ ಬಾಂಬ್‌ ಸ್ಪೋಟಗೊಂಡಿತ್ತು.

ಪಿಎಫ್‌ಐ ದಾಳಿ ವೇಳೆ ಸಾವರ್ಕರ್‌ ಸೇರಿ ಹಲವು ಪುಸ್ತಕ, ಹಣ ಪತ್ತೆ

ಇಡಿ (ED) ದೆಹಲಿಯಲ್ಲಿ ಪರ್ವೇಜ್ ಅಹ್ಮದ್, ಮೊಹಮ್ಮದ್ ಇಲಿಯಾಸ್ ಮತ್ತು ಅಬ್ದುಲ್ ಮುಖೀತ್ ಸೇರಿದಂತೆ ಇತರ ಮೂವರು ಇಸ್ಲಾಮಿಸ್ಟ್ ನಾಯಕರನ್ನು ಬಂಧಿಸಿದೆ. 2018 ರಲ್ಲಿ ಪಿಎಫ್ಐ ವಿರುದ್ಧ ಮನಿ ಲಾಂಡರಿಂಗ್ ತನಿಖೆ ಪ್ರಾರಂಭವಾದಾಗಿನಿಂದ, ಸಂಸ್ಥೆಯು ಅವರೆಲ್ಲರನ್ನೂ ಹಲವಾರು ಬಾರಿ ಪ್ರಶ್ನಿಸಿದೆ. ಈ ಹಿಂದೆ ಕತಾರ್‌ನಲ್ಲಿ ನೆಲೆಸಿದ್ದ ಬಂಧಿತ ಪಿಎಫ್‌ಐ ಸದಸ್ಯ ಶಫೀಕ್ ಪೈತ್‌ ವಿರುದ್ಧ ಜಾರಿ ನಿರ್ದೇಶನಾಲಯವು ಭಾರತದಲ್ಲಿ ತನ್ನ ಎನ್‌ಆರ್‌ಐ ಖಾತೆಯನ್ನು ಅಕ್ರಮವಾಗಿ ಬಳಸಿಕೊಂಡು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ಉಂಟುಮಾಡುವ ಸಲುವಾಗಿ ಹೊರಗಿನಿಂದ ಪಿಎಫ್‌ಐಗೆ ಹಣವನ್ನು ವರ್ಗಾಯಿಸಿದ ಆರೋಪ ಮಾಡಿದೆ.

ಭಯೋತ್ಪಾದಕರಾಗಲು ಯುವಕರಿಗೆ ಪಿಎಫ್‌ಐ ಪ್ರಚೋದನೆ: ಎನ್‌ಐಎ

ಗುರುವಾರ ದೇಶದ 15 ರಾಜ್ಯಗಳಾದ್ಯಂತ 93 ಸ್ಥಳಗಳಲ್ಲಿ ಕಾನೂನು ಜಾರಿ ಸಂಸ್ಥೆಗಳು ಶೋಧ ನಡೆಸಿದ ನಂತರ ಪಿಎಫ್‌ಐ ಸಂಭವನೀಯ ನಿಷೇಧವನ್ನು ಎದುರಿಸುತ್ತಿದೆ. ಇಡಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಭಾರತದಾದ್ಯಂತ ರಾಜ್ಯ ಪೊಲೀಸ್ ಪಡೆಗಳು ಪಿಎಫ್‌ಐನ ಹಲವಾರು ಸ್ಥಳಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ದಾಳಿ ನಡೆಸಿವೆ.

Follow Us:
Download App:
  • android
  • ios