ಉದ್ಯಮಿ ನಿಖಿಲ್ ಕಾಮತ್ ಪೋಡ್‌ಕಾಸ್ಟ್ ಪ್ರೋಮೋ ರಿಲೀಸ್, ಪ್ರಧಾನಿ ಮೋದಿ ಅತಿಥಿ?

ಯುವ ಉದ್ಯಮಿ ನಿಖಿಲ್ ಕಾಮತ್ ಪೋಡ್‌ಕಾಸ್ಟ್ ಮೂಲಕವೂ ಜನಪ್ರಿಯವಾಗಿದ್ದಾರೆ. ಇದೀಗ ಎಪಿಸೋಡ್ ಒಂದರ ಪ್ರೋಮೋ ರಿಲೀಸ್ ಮಾಡಿದ್ದಾರೆ. ಆದರೆ ಗೆಸ್ಟ್ ಯಾರೂ ಅನ್ನೋ ಸುಳಿವು ನೀಡಿಲ್ಲ. ಪ್ರೋಮದಲ್ಲಿ ನಿಖಿಲ್ ಕಾಮತ್ ಮಾತುಗಳನ್ನು ಕೇಳಿಸಿದರೆ ಅತಿಥಿ ಪ್ರಧಾನಿ ಮೋದಿ ಎಂದು ಹಲವರು ಊಹಿಸಿದ್ದಾರೆ.
 

Entrepreneur Nikhil Kamath WTF podcast promo release viewers guessed PM Modi as Guest

ನವದೆಹಲಿ(ಜ.09) ಝೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಯುವ ಉದ್ಯಮಿಯಾಗಿ ಸಾಧನೆ ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ಹೆಸರು ಗಳಿಸಿದ್ದಾರೆ. ಇದರ ಜೊತೆಗೆ ಪೋಡ್‌ಕಾಸ್ಟ್ ಮೂಲಕವೂ ನಿಖಿಲ್ ಕಾಮತ್ ಜನಪ್ರಿಯರಾಗಿದ್ದಾರೆ. ಹಲವು ಉದ್ಯಮಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಉದ್ಯಮಗಿಲ ಸವಾಲು, ಯಶೋಗಾಥೆ ಕುರಿತ ಮಾಹಿತಿಯನ್ನು ಪೋಡ್‍ಕಾಸ್ಟ್ ಮೂಲಕ ಜನರಿಗೆ ತಲುಪಿಸಿದ್ದಾರೆ. ಇದೀಗ ನಿಖಿಲ್ ಕಾಮತ್ ಪೋಡ್‌ಕಾಸ್ಟ್ ಎಪಿಸೋಡ್ ಒಂದರ ಪ್ರೋಮೋ ರಿಲೀಸ್ ಮಾಡಲಾಗಿದೆ. ಆದರೆ ಈ ಪ್ರೋಮೋ ಹಲವರ ಕುತೂಹಲ ಹೆಚ್ಚಿಸಿದೆ. ಕಾರಣ ನಿಖಿಲ್ ಕಾಮತ್ ಪೋಡ್‌ಕಾಸ್ಟ್‌ನ ಈ ಬಾರಿಯ ಅತಿಥಿ ಯಾರೂ ಅನ್ನೋ ಕುತೂಹಲವನ್ನು ಹಿಡಿದಿಟ್ಟುಕೊಂಡಿದ್ದರೆ. ಪ್ರೋಮೋ ನೋಡಿದ ವೀಕ್ಷಕರು ಈ ಬಾರಿಯ ಗೆಸ್ಟ್ ಪ್ರಧಾನಿ ನರೇಂದ್ರ ಮೋದಿ ಎಂದು ಊಹಿಸಿದ್ದಾರೆ. 

ನಿಖಿಲ್ ಕಾಮತ್ ಅವರ ಪೀಪಲ್ ಬೈ WTF ಅನ್ನೋ ಪಾಡ್‌ಕಾಸ್ಟ್ ಸಿರೀಸ್‌ನಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅತಿಥಿಯಾಗಿದ್ದಾರಾ? ಹೌದು ಎನ್ನುತ್ತಿದೆ ಪ್ರೋಮೋ ನೀಡುತ್ತಿರುವ ಮಾಹಿತಿ. ಈ ಪ್ರೋಮದಲ್ಲಿ ನಿಖಿಲ್ ಕಾಮತ್ ಹಿಂದಿಯಲ್ಲಿ ಮಾತನಾಡುತ್ತಿರುವ ಸಣ್ಣ ವಿಡಿಯೋ ಕ್ಲಿಪ್ ಇದೆ. ಅತಿಥಿಗೆ ಪ್ರಶ್ನೆ ಕೇಳುತ್ತಾ ನಡುವಿನ ಸಂಭಾಷಣೆಯ ಸಣ್ಣ ವಿಡಿಯೋವನ್ನು ಪ್ರೋಮೋ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. 

ಬೆಂಗಳೂರಿನ ಸಮಸ್ಯೆಗೆ ಬೆಸ್ಟ್ ಐಡಿಯಾ ಕೊಟ್ಟು ತಲಾ 10 ಲಕ್ಷ ರೂ. ಗೆದ್ದುಕೊಂಡ ಐದು ಸಂಸ್ಥೆಗಳು!

ಈ ಮಾತುಕತೆಯಲ್ಲಿ ಅತಿಥಿಗಳ ಮುಖ ತೋರಿಸಲಿಲ್ಲ. ಇತ್ತ ನಿಖಿಲ್ ಕಾಮತ್ ಫೋಕಸ್ ಮಾಡಿರುವ ವಿಡಿಯೋದಲ್ಲಿ ಅತಿಯ ನಗುವಿನ ಶಬ್ದವಿದೆ. ನಿಖಿಲ್ ಕಾಮತ್ ಕೇಳಿದ ಪ್ರಶ್ನೆ, ಆಡಿದ ಮಾತು ಹಾಗೂ ಇತರ ಎಲ್ಲಾ ಮಾಹಿತಿ ಆಧರಿಸಿ ವೀಕ್ಷಕರು ಈ ಬಾರಿಯ ಅತಿಥಿ ಪ್ರಧಾನಿ ನರೇಂದ್ರ ಮೋದಿ ಎಂದು ಉತ್ತರಿಸಿದ್ದಾರೆ. ನಿಖಿಲ್ ಕಾಮತ್ ಪ್ರೋಮದಲ್ಲಿ, ನಿಮಗೆ ನೆನಪು ಇಲ್ಲದೆ ಇರಬಹದು, ಕೆಲ ವರ್ಷಗಳ ಹಿಂದೆ ನೀವು ಸ್ಟಾರ್ಟ್‌ಅಪ್ ಪ್ರಮುಖರನ್ನು ಭೇಟಿಯಾಗಲು ಬೆಂಗಳೂರಿಗೆ ಆಗಮಿಸಿದ್ದೀರಿ. ಆ ಕಾರ್ಯಕ್ರಮದ ಕೊನೆಯಲ್ಲಿ ಅಂದರೆ ರಾತ್ರಿ ನಮ್ಮ ಜೊತೆ ನೀವು ಮಾತನಾಡಿದ್ದೀರಿ. ಅಂದು ನಾವು 1 ಗಂಟೆ ಚರ್ಚಿಸಿದ್ದೇವು. ಅಂದು ಕೂಡ ನಾನು ನಿಮಗೆ ಪ್ರಶ್ನೆಗಳನ್ನು ಕೇಳಿದ್ದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಈ ವೇಳೆ ಅತಿಥಿಯ ನಗುವಿನ ಶಬ್ದ ಮಾತ್ರ ಕೇಳಿಸುತ್ತಿದೆ.

ನಿಖಿಲ್ ಕಾಮತ್ ಈ ಮಾತುಗಳೇ ಅತಿಥಿಯನ್ನು ಊಹಿಸುವಂತೆ ಮಾಡಿದೆ. ಹಲವರು ನಿಖಿಲ್ ಕಾಮತ್ ಪ್ರೋಮೋಗೆ ಕಮೆಂಟ್ ಮಾಡಿದ್ದಾರೆ. ಇದು ನರೇಂದ್ರ ಮೋದಿ, ನಾವೆಲ್ಲಾ ಉತ್ಸುಕರಾಗಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಪಿಸೋಡ್ ವೀಕ್ಷಿಸಲು ಕಾತುರರಾಗಿದ್ದೇವೆ. ಅದಷ್ಟು ಬೇಗ ಎಪಿಸೋಡ್ ಪೋಸ್ಟ್ ಮಾಡಿ ಎಂದು ಹಲವರು ಮನವಿ ಮಾಡಿದ್ದಾರೆ. ಇದರ ಜೊತೆ ಕೆಲ ವಿವಾದಗಳು ಎದ್ದಿದೆ. ನಿಖಿಲ್ ಕಾಮತ್ ಹಿಂದಿಯಲ್ಲಿ ಏಕೆ ಮಾತನಾಡಿದ್ದಾರೆ ಅನ್ನೋ ವಿವಾದವೂ ಹುಟ್ಟಿಕೊಂಡಿದೆ. ಭಾಷೆ ಆಯ್ಕೆ ಕುರಿತು ಹಲವರು ವಿವಾದ ಎಬ್ಬಿಸಿದ್ದಾರೆ. 

 

 

ನಿಖಿಲ್ ಕಾಮತ್ ಭಾರತದ ಯುವ ಉದ್ಯಮಿ ಹಾಗೂ ಹೂಡಿಕೆದಾರ. ಜೆರೋಧಾ ಕೋ ಫೌಂಡರ್ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ನಿಖಿಲ್ ಕಾಮತ್, 2024ರ ಫೋರ್ಬ್ಸ್ 100 ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ನಿಖಿಲ್ ಕಾಮತ್ ಒಟ್ಟು 3.1 ಬಿಲಿಯನ್ ಆಸ್ತಿ ಎಂದು ಪೋರ್ಬ್ಸ್ ವರದಿ ಮಾಡಿದೆ. ಜೆರೋಧಾ ಮಾತ್ರವಲ್ಲ 2020ರಲ್ಲಿ ಟ್ರು ಬೆಕಾನ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ. ಟ್ರು ಬೆಕಾನ್ ಸಂಸ್ಥೆ ಸಹ ಸಂಸ್ಥಾಪಕರಾಗಿದ್ದಾರೆ. 2021ರಲ್ಲಿ ಗ್ರುಹಾಸ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ. 2023ರಲ್ಲಿ  ಪೀಪಲ್ ಬೈ WTF ಅನ್ನೋ ಪಾಡ್‌ಕಾಸ್ಟ್ ಸೀರಿಸ್ ಆರಂಭಿಸಿದ್ದಾರೆ. ಇದೀಗ ಕಳೆದ ಒಂದು ವರ್ಷದಿಂದ ನಿಖಿಲ್ ಕಾಮತ್ ಪೋಡ್‌ಕಾಸ್ಟ್ ಅತ್ಯಂತ ಜನಪ್ರಿಯರಾಗಿದ್ದಾರೆ.

ಬೆಂಗಳೂರಿನ ಸಮಸ್ಯೆ ಪರಿಹಾರಕ್ಕೆ ನಿಮ್ಮಲ್ಲಿ ಐಡಿಯಾ ಇದ್ಯಾ, ನಿಖಿಲ್‌ ಕಾಮತ್‌ ನೀಡ್ತಿದ್ದಾರೆ ನಿಮಗೆ ಚಾನ್ಸ್‌!

Entrepreneur Nikhil Kamath WTF podcast promo release viewers guessed PM Modi as Guest
 

Latest Videos
Follow Us:
Download App:
  • android
  • ios