ನವದೆಹಲಿ(ಅ.26):  ಭಾರತದ ಎನರ್ಜಿ ಭವಿಷ್ಯ ಉಜ್ವಲವಾಗಿದೆ. ಇಷ್ಟೇ ಅಲ್ಲ ಸುರಕ್ಷಿತವಾಗಿದೆ . ಭಾರತದ ಇಂಧನ ಶಕ್ತಿ, ಇಡೀ ವಿಶ್ವವನ್ನೇ ಬೆಳಗಲಿದೆ. ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  ಭಾರತ ದೇಸಿ ವಿಮಾನಯಾನ ಬಳಸುತ್ತಿರುವ ವಿಶ್ವದ 3ನೇ ಅತೀ ದೊಡ್ಡ ದೇಶವಾಗಿದೆ. ಹಳ್ಳಿ ಹಳ್ಳಿಗೂ ವಿದ್ಯುತ್ ಶಕ್ತಿ ನೀಡಲಾಗಿದೆ. ಮನೆ ಮನೆಗೆ ಎಲ್‌ಪಿಜಿ ಗ್ಯಾಸ್ ನೀಡಲಾಗಿದೆ. ಹೊಸ ಭಾರತದಲ್ಲಿ ಇಂಧನ ಬಹುದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಖಾದಿ ಬಟ್ಟೆ ಉತ್ಪಾದನೆಗೆ ಬೆಂಬಲ ಅಗತ್ಯ: ಮನ್ ಕೀ ಬಾತ್‌ನಲ್ಲಿ ಮೋದಿ ಮಾತು!.

ಸೆರಾವೀಕ್ ಭಾರತದ ಇಂಧನ ಶಕ್ತಿ ವೇದಿಕೆ ಸಮ್ಮೇಳನವನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ಉದ್ಘಾಟನೆ ಮಾಡಿ ಭಾಷಣ ಮಾಡಿದರು. ಅಕ್ಟೋಬರ್ 26 ರಿಂದ 28 ವರೆಗೆ ನಡಯಲಿರುವ ಈ ಸಮ್ಮೇಳನದಲ್ಲಿ ಮೋದಿ ಉದ್ಘಾಟನಾ ಭಾಷಣ ಮಾಡಿದ್ದಾರೆ. ಭಾರತ ಸೇರಿದಂತೆ 30 ದೇಶಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. 

 

ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಡಿಯಲ್ಲಿ ಭಾರತ ನೈಸರ್ಗಿಕ ಗ್ಯಾಸ್ ಉತ್ಪಾದನೆ, ಪುನರ್ ನವೀಕರಿಸಬಹುದಾದ ಇಂಧನ ಬಳಕೆಗೆ ಒತ್ತು ನೀಡಲಾಗುತ್ತಿದೆ. ಈ ಮೂಲಕ ಇಂಗಾಲ ಹೊರಸೂಸುವಿಕೆ ತಡೆಯಲು ಸರ್ಕಾರ ಬದ್ಧವಾಗಿದೆ. ಎಲ್‌ಇಡಿ ಬಲ್ಬ್ ವಿತರಣೆಯಿಂದ ವಿದ್ಯುತ್ ಶಕ್ತಿ ಬಳಕೆ ಪ್ರಮಾಣ ಸರಿಯಾದ ರೀತಿಯಲ್ಲಿ ಮಾಡಲು ಸಾಧ್ಯವಾಗಿದೆ. ಅನಗತ್ಯ ವಿದ್ಯುತ್ ಪೋಲಾಗುತ್ತಿರುವುದನ್ನು ತಡೆಯಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಮತ್ತೊಮ್ಮೆ ಮೋದಿಯೇ ದೇಶಕ್ಕೆ ಪ್ರಧಾನಿ : ಭವಿಷ್ಯ.

ಇತ್ತೀಚಿನ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆ, ಮಾರುಕಟ್ಟೆಯಲ್ಲಿನ ಬದಲಾವಣೆಗನ್ನು ವಿಶ್ವವೇ ಗಮನಿಸಿದೆ. ಈ ಸಂಕಷ್ಟಕ್ಕೆ ಮುಕ್ತಿ ನೀಡಲು ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪಾರದರ್ಶಕತೆ, ಹೊಸ ನೀತಿಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಭಾರತ ಹೆಜ್ಜೆ ಹಾಕುತ್ತಿದೆ. ಇಂಧನ ವಿಭಾಗದ ಡಿಜಿಟಲೀಕರಣ ಪ್ರಮುಖವಾಗಿದೆ ಎಂದು ಮೋದಿ ಹೇಳಿದರು.

ಎಚ್ಚರ ಮರೆತರೆ ಅಪಾಯ ಕಟ್ಟಿಟ್ಟಬುತ್ತಿ; ದೇಶದ ಜನತೆಗೆ ಕೊರೋನಾ ವಾರ್ನಿಂಗ್ ನೀಡಿದ ಮೋದಿ

ಪ್ರಧಾನಿ ಮೋದಿ ಭಾಷಣಕ್ಕೂ ಮೊದಲು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಪ್ರಸ್ತಾವಿಕ ಮಾತನಾಡಿದರು. ಭಾರತದಲ್ಲಿ ಇಂಧನ ಶಕ್ತಿಯ ಭವಿಷ್ಯ ಹಾಗೂ ಸವಾಲುಗಳನ್ನು ಎದುರಿಸಲು ಈ ವೇದಿಕೆಯನ್ನ ಹುಟ್ಟುಹಾಕಲಾಗಿದೆ. ಭಾರತ 3ನೇ ಅತೀ ದೊಡ್ಡ ಇಂಧನ ಶಕ್ತಿ ರಾಷ್ಟ್ರವಾಗಿದೆ. ಭಾರತ ಎನರ್ಜಿ ಫೋರಂ ಗ್ಯಾಸ್, ತೈಲ ಸೇರಿದಂತೆ ಇತರ ಇಂಧನ ಶಕ್ತಿಗಳಿಗೆ ಉತ್ತಮ ವೇದಿಕೆ ಒದಗಿಸಲಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.

 

ಭಾರತ ಹಾಗೂ ಸೌದಿ ಆರೇಬಿಯಾ ಶತ ಶತಮಾನಗಳಿಂದ ಇಂಧನ ಭಾಂಧವ್ಯ ಹೊಂದಿದೆ.  ಇಂಧನ ಕ್ಷೇತ್ರದಲ್ಲಿ ಭಾರತ ಹಾಗೂ ಸೌದಿ ಅರೇಬಿಯಾ ಜೊತೆಯಾಗಿ ಹೆಜ್ಜೆ ಹಾಕುತ್ತಿದೆ. ಆರ್ಥಿಕತೆಯ ಮೇಲೆ ಇಂಧನ ಕೊಡುಗೆ ಅಪಾರವಾಗಿದೆ. ಸೌದಿ ಅರೇಬಿಯಾ ವಿಶ್ವದಲ್ಲಿ ಅತೀ ಹೆಚ್ಚುು ಇಂಧನ ರಫ್ತು ಮಾಡುವ ದೇಶವಾಗಿದೆ. ಹಾಗೇಯೇ ಭಾರತ ಅತೀ ಹೆಚ್ಚ ಇಂಧನ ಬಳಕೆ ಮಾಡುವ ದೇಶವಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸ ಭಾರತ ಉದಯವಾಗಿದೆ. ಹೊಸ ಶಕ್ತಿ, ಹೊಸ ವೇಗ ಸಿಕ್ಕಿದೆ.  ಸೌದಿ ಅರೇಬಿಯಾ ಹಾಗೂ ಭಾರತ ಜಂಟಿಯಾಗೆ ಕೊರೋನಾದಿಂದ ಉದ್ಭವಿಸಿರುವ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲಿದೆ ಎಂದು  ಸೌದಿ ಆರೇಬಿಯಾ ಎನರ್ಜಿ ಸಚಿವ ಅಬ್ದುಲೈಜಿಜ್ ಬಿನ್ ಸಲ್ಮಾನ್ ಹೇಳಿದರು.

ಎನರ್ಜಿ ಫೋರಮ್ ವಿಶ್ವದ  ನಾಯಕರನ್ನೊಳಗೊಂಡ  ಪ್ರತಿಷ್ಠಿತ ಕೂಟಗಳಲ್ಲಿ ಒಂದಾಗಿದೆ.  ಭಾರತದ ಇಂಧನ ಭವಿಷ್ಯ ಹಾಗೂ  ಕೊರೋನಾ ಸೇರಿದಂತೆ ಪ್ರಾಕೃತ್ತಿಕ ವಿಕೋಪಗಳಿಂದ ಎದುರಾಗುವ ಸವಾಲುಗಳನ್ನು ಎದರಿಸವ ಕುರಿತು ಬೆಳಕು ಚೆಲ್ಲವು ಕಾರ್ಯಕ್ರಮವಾಗಿದೆ.