ನಿನ್ನೆ ಎರಡನೇ ದಿನದ ಗುಜರಾತ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ, ಜಮ್ನಾಗರ್‌ನಲ್ಲಿ ರೋಡ್‌ ಶೋ ನಡೆಸಿದ್ದರು. ಈ ವೇಳೆ ತಮ್ಮ ಕಾರಿನಿಂದ ಇಳಿದು ಜನರತ್ತ ಪ್ರಧಾನಿ ನಡೆದು ಬಂದು ಜನರನ್ನು ಮಾತನಾಡಿಸಿದರು.

ಜಮ್ನಾಗರ್: ನಿನ್ನೆ ಎರಡನೇ ದಿನದ ಗುಜರಾತ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ, ಜಮ್ನಾಗರ್‌ನಲ್ಲಿ ರೋಡ್‌ ಶೋ ನಡೆಸಿದ್ದರು. ಈ ವೇಳೆ ತಮ್ಮ ಕಾರಿನಿಂದ ಇಳಿದು ಜನರತ್ತ ಪ್ರಧಾನಿ ನಡೆದು ಬಂದು ಜನರನ್ನು ಮಾತನಾಡಿಸಿದ್ದಾರೆ. ರಸ್ತೆಯ ಎರಡು ಕಡೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಮೋದಿ ನೋಡಲು ಜನ ನೆರೆದಿದ್ದು, ಇವರನ್ನು ನೋಡಿದ ಪ್ರಧಾನಿ ಕಾರಿನಿಂದ ಇಳಿದು ಹೋಗಿ ಜನ ಸಾಮಾನ್ಯರನ್ನು ಮಾತನಾಡಿಸಿದರು. ಆದರೆ ಈ ಸಂದರ್ಭದಲ್ಲಿ ಪ್ರಧಾನಿಯವರ ಭದ್ರತಾ ಸಿಬ್ಬಂದಿ ಆತಂಕದಿಂದ ಚಡಪಡಿಸುತ್ತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.

ಇದೇ ವೇಳೆ ಅನೇಕರು ಪ್ರಧಾನಿಗೆ ಉಡುಗೊರೆಯನ್ನು (gifts) ಹಸ್ತಾಂತರಿಸಿದರು. ಒಬ್ಬರು ನರೇಂದ್ರ ಮೋದಿಯವರಿಗೆ, ನರೇಂದ್ರ ಮೋದಿ (Narendra Modi) ಹಾಗೂ ಅವರ ತಾಯಿ ಇರುವ ಪೇಟಿಂಗ್‌ನ್ನು ಉಡುಗೊರೆಯಾಗಿ ನೀಡಿ ಮತ್ತೊಂದು ಅದೇ ಪೇಂಟಿಂಗ್‌ಗೆ ಮೋದಿಯವರಿಂದ ಆಟೋಗ್ರಾಫ್ ಹಾಕಿಸಿಕೊಂಡರು.

Scroll to load tweet…

ಇದಕ್ಕೂ ಮೊದಲು ಪ್ರಧಾನಿ (Prime Minister) ನರೇಂದ್ರ ಮೋದಿ ಗುಜರಾತ್‌ನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಪ್ರಧಾನಿ 2001 ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪವನ್ನು (earthquake) ನೆನೆದರು. ಅಂದು ಗುಜರಾತ್ ಮತ್ತೆ ಹೀಗೆ ಮೇಲೇಳಬಹುದು ಎಂಬುದನ್ನು ಯಾರೂ ನಂಬಲಿಲ್ಲ ಎಂದು ಪ್ರಧಾನಿ ಹೇಳಿದರು. ಇದೇ ವೇಳ ಜಮ್ನಾಗರ್ ಆಡಳಿತಗಾರನಾಗಿದ್ದ ಜಾಮ್ ಸಾಹೇಬ್ ಮಹರಾಜ್ ದಿಗ್ವಿಜಯ್ ಸಿನ್ಹಾ (Jam Saheb Maharaj Digvijay Sinha)ಅವರನ್ನು ಪ್ರಧಾನಿ ಹೊಗಳಿದರು. ಪ್ರಸ್ತುತ 20 ರಿಂದ 25 ರ ಹರೆಯದಲ್ಲಿರುವ ಮಕ್ಕಳು ನಿಜವಾಗಿಯೂ ಅದೃಷ್ಟವಂತರು ಏಕೆಂದರೆ ಅವರ ತಂದೆ ತಾಯಿ ಅನುಭವಿಸಿದ ಕಷ್ಟಗಳು ಅವರಿಗೆ ಇಲ್ಲ. ಕುಡಿಯುವುದಕ್ಕಾಗಲಿ ಕೃಷಿಗಾಗಲಿ ನೀರಿರಲಿಲ್ಲ. ಗಂಟೆಗಟ್ಟಲೇ ನೀರಿನ ಟ್ಯಾಂಕರ್ ಮುಂದೆ ನಿಲ್ಲಬೇಕಾದಂತಹ ಪರಿಸ್ಥಿತಿ ಇತ್ತು, ಆದರೆ ಈ ಮಗ ಮನೆ ಮನೆಗೆ ನೀರು ತಲುಪಿಸುವ ಮೂಲಕ ಅವನ ತಾಯಂದಿರ ನೀರಿನ ಕಷ್ಟವನ್ನು ಕೊನೆಗಾಣಿಸಿದ ಎಂದು ಮೋದಿ ಹೇಳಿದರು.

Scroll to load tweet…
Scroll to load tweet…

ಜಮಾ ನಗರದ ಫ್ಯಾಕ್ಟರಿಗಳು ಇಡೀ ದೇಶದ ಒಟ್ಟು ಬಳಕೆಯ ತೈಲದ ಶೇಕಡಾ 35 ಷ್ಟನ್ನು ಪರಿಷ್ಕರಿಸುತ್ತಿವೆ. ನರೇಂದ್ರ ಹಾಗೂ ಭೂಪೇಂದ್ರರ ಡಬ್ಬಲ್ ಇಂಜಿನ್ ಸರ್ಕಾರ (double engine government) ಈಗ ಗುಜರಾತ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು. ಪ್ರಸ್ತುತ ಅಮೃತಸರ-ಭಟಿಂಡ-ಜಮ್ನಾಗರ ಕಾರಿಡಾರ್‌ (Amritsar-Bhatinda-Jamnagar corridor) ಪ್ರಸ್ತುತ 26 ಸಾವಿರ ಕೋಟಿ ವೆಚ್ಚದಲ್ಲಿ ಅಬಿವೃದ್ಧಿಯಾಗುತ್ತಿದೆ. ವ್ಯವಹಾರವನ್ನು ಸುಲಭಗೊಳಿಸಲು ಅಡ್ಡಿಯಾಗಿದ್ದ ಬ್ರಿಟಿಷರ ಕಾಲದ 2,000 ಬಳಕೆಯಲ್ಲಿಲ್ಲದ ಕಾನೂನುಗಳನ್ನು ನಾನು ರದ್ದುಗೊಳಿಸಿದ್ದೇನೆ. ನಮ್ಮ ಸರ್ಕಾರ ವ್ಯವಹಾರವನ್ನು ಸುಲಭಗೊಳಿಸಲು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸ್ವಿಸ್ ಬ್ಯಾಂಕ್‌ನ ಕಪ್ಪು ಹಣ ಖಾತೆದಾರರ ವಿವರ ಕೇಂದ್ರ ಸರ್ಕಾರಕ್ಕೆ ಲಭ್ಯ, ಹಲವರಿಗೆ ಶುರುವಾಗಿದೆ ನಡುಕ!

ಪ್ರಸ್ತುತ ಅಮೆರಿಕಾ ಹಾಗೂ ಯುರೋಪ್ ದೇಶಗಳು ತೀವ್ರವಾದ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿವೆ. ಆದರೆ ಭಾರತದ ಆರ್ಥಿಕತೆ (Indian economy) ಮಾತ್ರ ಸ್ಥಿರವಾಗಿದೆ. 2015ರಲ್ಲಿ ಭಾರತದ ಆರ್ಥಿಕತೆಯೂ ವಿಶ್ವ ಮಟ್ಟದಲ್ಲಿ 15ನೇ ಸ್ಥಾನದಲ್ಲಿತ್ತು. ಆದರೆ ಈಗ ಐದನೇ ಸ್ಥಾನಕ್ಕೇರಿದೆ ಎಂದರು. ಗುಜರಾತ್ ಸರ್ಕಾರದ ಕಾರ್ಯವೈಖರಿ ಶ್ಲಾಘಿಸಿದ ಮೋದಿ, ಗುಜರಾತ್ ಸರ್ಕಾರ ಜಾರಿಗೆ ತಂದ ಹೊಸ ಕೈಗಾರಿಕಾ ಯೋಜನೆ ಬಗ್ಗೆ ಉತ್ತಮವಾದ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೇ ದೇಶದ ಭದ್ರತೆಗೆ ತೊಡಕ್ಕಾಗಿದ್ದ ಕರಾವಳಿ ಪ್ರದೇಶ ದ್ವಾರಕಾದಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಕಟ್ಟಡಗಳನ್ನು ಧ್ವಂಸ ಮಾಡಿದ್ದಕ್ಕೆ ಪ್ರಧಾನಿಯವರು, ಸಿಎಂ ಭೂಪೇಂದ್ರ ಭಾಯ್ ಪಟೇಲ್ ಅವರನ್ನು ಅಭಿನಂದಿಸಿದರು.

ಉಕ್ರೇನ್ ರಷ್ಯಾ ಯುದ್ಧದ ವೇಳೆ ಪೋಲೆಂಡ್ ದೇಶ ನಮಗೆ ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಕರೆ ತರಲು ಸಹಾಯ ಮಾಡಿತು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಮ್ನಾಗರದ ಆಡಳಿತಗಾರ ಪೋಲೆಂಡ್ ಜನರಿಗೆ ಸಹಾಯ ಮಾಡಿದ್ದರು ಎಂದು ಮೋದಿ ಹೇಳಿದರು. ಚೀತಾಗಳನ್ನು ಕರೆತಂದ ಬಳಿಕ ಡಾಲ್ಫಿನ್‌ಗಳಿಗಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಧಾನಿ ಇದೇ ವೇಳೆ ಹೇಳಿದರು.

ಇತ್ತ ರಾಗಾ ಹಮ್‌ ದೋ ಹಮಾರೆ ದೋ, ಅತ್ತ ಗೆಹ್ಲೋಟ್‌ ಅದಾನಿ ಭಾಯ್‌ ಭಾಯ್‌