ತ್ರಿವರ್ಣ ಧ್ವಜದೊಂದಿಗೆ ಫೋಟೋ ಕಳಿಸಲು ಮೋದಿ ಮನವಿ: ಈ ವೆಬ್‌ಸೈಟ್‌ನಲ್ಲಿ ಸೆಲ್ಫಿ ಅಪ್ಲೋಡ್ ಮಾಡೋದು ಹೇಗೆ ನೋಡಿ..
ಆಗಸ್ಟ್ 13 ರಿಂದ 15 ರ ನಡುವೆ #HarGharTiranga ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮನ್ನು ಕೋರುತ್ತೇನೆ. ತಿರಂಗದೊಂದಿಗೆ ನಿಮ್ಮ ಫೋಟೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಿ https://hargartiranga.com " ಎಂದು ಮೋದಿ ಮನವಿ ಮಾಡಿದ್ದಾರೆ.
ನವದೆಹಲಿ(ಆಗಸ್ಟ್ 12, 2023): ಮಂಗಳವಾರ ಅಂದರೆ ಆಗಸ್ಟ್ 15, ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನ. 77ನೇ ಸ್ವಾತಂತ್ರ್ಯೋತ್ಸವವನ್ನು (Independence Day) ದೇಶಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆ ಆಗಸ್ಟ್ 13 ರಿಂದ 15 ರ ನಡುವೆ 'ಹರ್ ಘರ್ ತಿರಂಗ' ಆಂದೋಲನ ನಡೆಯಲಿದೆ. ಇದರ ಅಡಿಯಲ್ಲಿ harghartiranga.com ವೆಬ್‌ಸೈಟ್‌ನಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡಲು ಪ್ರಧಾನಿ ನರೇಂದ್ರ ಮೋದಿ ನಾಗರಿಕರಿಗೆ ಮನವಿ ಮಾಡಿದ್ದಾರೆ.
"ತಿರಂಗವು ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಏಕತೆಯ ಚೈತನ್ಯವನ್ನು ಸಂಕೇತಿಸುತ್ತದೆ. ಪ್ರತಿಯೊಬ್ಬ ಭಾರತೀಯನು ತ್ರಿವರ್ಣ ಧ್ವಜದೊಂದಿಗೆ (Tri Colour Flag) ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದಾನೆ ಮತ್ತು ಇದು ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಆಗಸ್ಟ್ 13 ರಿಂದ 15 ರ ನಡುವೆ #HarGharTiranga ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮನ್ನು ಕೋರುತ್ತೇನೆ. ತಿರಂಗದೊಂದಿಗೆ ನಿಮ್ಮ ಫೋಟೋಗಳನ್ನು ಇಲ್ಲಿ ಅಪ್‌ಲೋಡ್ ಮಾಡಿ- https://hargartiranga.com " ಎಂದು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ (ಈ ಹಿಂದಿನ ಟ್ವಿಟ್ಟರ್) ಪ್ರಧಾನಿ ಮೋದಿ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ: Explainer: ಕಚ್ಚತೀವು ದ್ವೀಪದ ಬಗ್ಗೆ ಮೋದಿ ಪ್ರಸ್ತಾಪ: ಶ್ರೀಲಂಕಾದಲ್ಲಿರೋ ಈ ದ್ವೀಪದ ಇತಿಹಾಸ, ಪ್ರಾಮುಖ್ಯತೆ ಹೀಗಿದೆ..
'ಹರ್ ಘರ್ ತಿರಂಗ' (Har Ghar Tiranga) ಎಂಬುದು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಗುರುತಿಸಲು 2022 ರಲ್ಲಿ ಆರಂಭಿಸಿದ ಸಂಸ್ಕೃತಿ ಸಚಿವಾಲಯದ ಉಪಕ್ರಮವಾಗಿದೆ. ಸಚಿವಾಲಯವು ಹರ್ ಘರ್ ತಿರಂಗ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. ಅದು ಭಾರತೀಯ ನಾಗರಿಕರಿಗೆ ರಾಷ್ಟ್ರೀಯ ಧ್ವಜವನ್ನು ವಾಸ್ತವಿಕವಾಗಿ ಪಿನ್ ಮಾಡಲು ಮತ್ತು ತ್ರಿವರ್ಣ ಧ್ವಜದೊಂದಿಗೆ ತಮ್ಮ ಸೆಲ್ಫಿಗಳನ್ನು ಶೇರ್ ಮಾಡಲು ಅನುವು ಮಾಡಿಕೊಡುತ್ತದೆ.
ತಿರಂಗ ಸೆಲ್ಫಿಗಳನ್ನು ಅಪ್‌ಲೋಡ್ ಮಾಡೋದು ಹೇಗೆ..
ಹರ್ ಘರ್ ತಿರಂಗಾ ವೆಬ್‌ಸೈಟ್‌ನಲ್ಲಿ ನಾಗರಿಕರು ರಾಷ್ಟ್ರಧ್ವಜದೊಂದಿಗೆ ತಮ್ಮ ಸೆಲ್ಫಿಯನ್ನು ಅಪ್‌ಲೋಡ್ ಮಾಡಬಹುದು. ಹರ್ ಘರ್ ತಿರಂಗ ವೆಬ್‌ಸೈಟ್‌ನಲ್ಲಿ (https://hargartiranga.com) ಧ್ವಜದೊಂದಿಗೆ ನಿಮ್ಮ ಸೆಲ್ಫಿಯನ್ನು ಪೋಸ್ಟ್ ಮಾಡುವ ಹಂತಗಳು ಇಲ್ಲಿದೆ ನೋಡಿ..
ಇದನ್ನೂ ಓದಿ: ವಿಪಕ್ಷದ ಪ್ರಶ್ನೆಗಳಿಗೆ ಮೋದಿ ಸಿಡಿಗುಂಡು: ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಹೀನಾಯ ಸೋಲು
- 'ಅಪ್‌ಲೋಡ್ ಸೆಲ್ಫಿ ವಿತ್ ಫ್ಲಾಗ್’ ಬಟನ್ ಕ್ಲಿಕ್ ಮಾಡಿ. ವೆಬ್‌ಸೈಟ್‌ನ ಮುಖಪುಟದಲ್ಲಿ ಆಯ್ಕೆ ಇದೆ
- ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನಿಮ್ಮ ಹೆಸರನ್ನು ಬರೆಯಿರಿ.
- ನಿಮ್ಮ ತಿರಂಗಾ ಸೆಲ್ಫಿಯನ್ನು ಅಪ್‌ಲೋಡ್ ಮಾಡಿ, ಬಳಕೆದಾರರು ಇಲ್ಲಿ ಡ್ರಾಪ್‌ಡೌನ್ ಫೈಲ್‌ಗಳನ್ನು ಮಾಡಬಹುದು.
- 'ಸಬ್ಮಿಟ್' ಬಟನ್ ಕ್ಲಿಕ್ ಮಾಡಿ. ಸೆಲ್ಫಿಯನ್ನು ಅಪ್‌ಲೋಡ್ ಮಾಡಲು 'harghartiranga.com' ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರು ಮತ್ತು ಫೋಟೋಗಳನ್ನು ಬಳಸಲು ನೀವು ನಿಮ್ಮ ಒಪ್ಪಿಗೆಯನ್ನು ನೀಡಬೇಕಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ಈ ಪುಟವು ಬಳಕೆದಾರರಿಗೆ ತಮ್ಮ ತಿರಂಗ ಸೆಲ್ಫಿಗಳನ್ನು ಸರ್ಚ್ ಮಾಡಲು ಸಹ ಅನುಮತಿಸುತ್ತದೆ. "ನಿಮ್ಮ ಸೆಲ್ಫಿ ತೋರಿಸದಿದ್ದರೆ, 16 ಆಗಸ್ಟ್ 2023 ರಿಂದ ಬೆಳಿಗ್ಗೆ 8:00 ರಿಂದ ನಿಮ್ಮ ಸೆಲ್ಫಿಯನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ" ಎಂದೂ ಈ ವೆಬ್‌ಸೈಟ್‌ನ ಪುಟ ಹೇಳುತ್ತದೆ.
ಇದನ್ನೂ ಓದಿ: HAL ಮುಳುಗುತ್ತಿದೆ ಎಂದು ವಿಕ್ಷಗಳು ಟೀಕಿಸಿದ್ದವು; ಇಂದು ರಾಷ್ಟ್ರದ ಹೆಮ್ಮೆಯಾಗಿದೆ: ಮೋದಿ
ಈ ಮೂಲಕ 77ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ದೇಶದೊಂದಿಗೆ ನೀವೂ ಸಹ ತ್ರಿವರ್ಣ ಧ್ವದ ಫೋಟೋ ಅಪ್ಲೋಡ್ ಮಾಡಿ ಶೇರ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಇನ್ಮುಂದೆ ದೇಶದ್ರೋಹ ಕಾನೂನು ರದ್ದು; ಬ್ರಿಟಿಷರ ಕಾಲದ ಐಪಿಸಿ, ಸಿಆರ್‌ಪಿಸಿ ಸೇರಿ 3 ಕಾಯ್ದೆ ಬದಲು: ಅಮಿತ್ ಶಾ ಮಹತ್ವದ ಘೋಷಣೆ