Explainer: ಕಚ್ಚತೀವು ದ್ವೀಪದ ಬಗ್ಗೆ ಮೋದಿ ಪ್ರಸ್ತಾಪ: ಶ್ರೀಲಂಕಾದಲ್ಲಿರೋ ಈ ದ್ವೀಪದ ಇತಿಹಾಸ, ಪ್ರಾಮುಖ್ಯತೆ ಹೀಗಿದೆ..

ಭಾರತದ ಭಾಗವಾಗಿದ್ದ ಕಚ್ಚತೀವು ದ್ವೀಪವನ್ನು ಇಂದಿರಾಗಾಂಧಿ ಶ್ರೀಲಂಕಾಕ್ಕೆ ನೀಡಿದರು ಎಂದು ಮೋದಿ ಹೇಳಿದ್ದಾರೆ.. ತಮಿಳುನಾಡಿನ ಡಿಎಂಕೆ ಸರ್ಕಾರವು ಕಚ್ಚತೀವು ದ್ವೀಪವನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

modi says indira gave katchatheevu to sri lanka island s history and why its a political hot potato ash

ನವದೆಹಲಿ (ಆಗಸ್ಟ್‌ 11, 2023): ಲೋಕಸಭೆಯಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಧಾನಿ ಮೊದಿ ಮಾತನಾಡುವಾಗ ಕಚ್ಚತೀವು ದ್ವೀಪದ ಬಗ್ಗೆ ಮಾತನಾಡಿದ್ದಾರೆ. ಈ ದ್ವೀಪ ಪ್ರಸ್ತುತ ಶ್ರೀಲಂಕಾದಲ್ಲಿದೆ. ಆದರೆ, ಇದು ಭಾರತಕ್ಕೆ ಯಾಕೆ ಪ್ರಾಮುಖ್ಯತೆ, ಮತ್ತು ಮೋದಿ ಈ ಬಗ್ಗೆ ಮಾತನಾಡಿದ್ದು ಯಾಕೆ ಅಂತೀರಾ..?

ಭಾರತದ ಭಾಗವಾಗಿದ್ದ ಕಚ್ಚತೀವು ದ್ವೀಪವನ್ನು ಇಂದಿರಾಗಾಂಧಿ ಶ್ರೀಲಂಕಾಕ್ಕೆ ನೀಡಿದರು ಎಂದು ಮೋದಿ ಗುರುವಾರ ಆರೋಪಿಸಿದ್ದಾರೆ. ತಮಿಳುನಾಡಿನ ಡಿಎಂಕೆ ಸರ್ಕಾರವು ಕಚ್ಚತೀವು ದ್ವೀಪವನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಕಳೆದ ತಿಂಗಳು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಭಾರತಕ್ಕೆ ಭೇಟಿ ನೀಡುವ ಒಂದು ದಿನ ಮೊದಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದು, ದ್ವೀಪವನ್ನು ಹಿಂಪಡೆಯಲು ರಾಜತಾಂತ್ರಿಕ ಪ್ರಯತ್ನಗಳನ್ನು ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ವಿಪಕ್ಷದ ಪ್ರಶ್ನೆಗಳಿಗೆ ಮೋದಿ ಸಿಡಿಗುಂಡು: ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಹೀನಾಯ ಸೋಲು

ಈ ದ್ವೀಪ ಹಿಂಪಡೆಯುವುದರಿಂದ ಐತಿಹಾಸಿಕ ಮೀನುಗಾರಿಕೆ ಹಕ್ಕುಗಳನ್ನು ಮರುಸ್ಥಾಪಿಸುತ್ತದೆ ಮತ್ತು ನಮ್ಮ ಮೀನುಗಾರರಿಗೆ ಶಾಶ್ವತ ಪರಿಹಾರವನ್ನು ನೀಡುತ್ತದೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವ ಮೂಲಕ, 1974 ಮತ್ತು 1976 ರಲ್ಲಿ ಉಭಯ ದೇಶಗಳ ನಡುವೆ ಸಹಿ ಹಾಕಲಾದ ಭಾರತ - ಶ್ರೀಲಂಕಾ ಕಡಲ ಗಡಿ ಒಪ್ಪಂದಗಳನ್ನು ಉಲ್ಲೇಖಿಸಿ ಮೋದಿ ತಮ್ಮ ನಡುವಿನ ಅಂತಾರಾಷ್ಟ್ರೀಯ ಗಡಿಯ ಬಗ್ಗೆ ಉಲ್ಲೇಖಿಸಿದ್ದಾರೆ.

ಕಚ್ಚತೀವು ದ್ವೀಪದ ಇತಿಹಾಸ ಮತ್ತು ಅದರ ಸುತ್ತಲಿನ ಸಮಸ್ಯೆಗಳ ವಿವರ ಹೀಗಿದೆ..

ಭಾರತ ಮತ್ತು ಶ್ರೀಲಂಕಾ ನಡುವಿನ ದ್ವೀಪ
2008 ರಲ್ಲಿ ಶ್ರೀಲಂಕಾ ಸಂಸತ್ತಿನಲ್ಲಿ ಆಗಿನ ಶ್ರೀಲಂಕಾದ ವಿದೇಶಾಂಗ ಸಚಿವ ರೋಹಿತ ಬೊಗೊಲ್ಲಗಾಮಾ ಅವರು ಮಾಡಿದ ಭಾಷಣದ ಪ್ರಕಾರ, ಕಚ್ಚತೀವು ತಮಿಳುನಾಡಿನ ರಾಮನಾಥಪುರಂನ ಈಶಾನ್ಯಕ್ಕೆ ಸುಮಾರು 15 ಮೈಲಿಗಳು (24 ಕಿಲೋಮೀಟರ್) ಮತ್ತು ಶ್ರೀಲಂಕಾದ ಡೆಲ್ಫ್ಟ್ ದ್ವೀಪಗಳ ನೈಋತ್ಯಕ್ಕೆ ಸರಿಸುಮಾರು 14 ಮೈಲಿಗಳು (22 ಕಿಲೋಮೀಟರ್) ಪಾಕ್ ಜಲಸಂಧಿಯಲ್ಲಿ ನೆಲೆಗೊಂಡಿರುವ ಬಂಜರು ದ್ವೀಪವಾಗಿದೆ. ಶ್ರೀಲಂಕಾದ ಜಾಫ್ನಾ ಡಯಾಸಿಸ್‌ನಿಂದ ನಿರ್ವಹಿಸಲ್ಪಡುವ ಸೇಂಟ್ ಆಂಥೋನಿ ಶ್ರೈನ್ ಎಂಬ ರೋಮನ್ ಕ್ಯಾಥೋಲಿಕ್ ಚರ್ಚ್ ಅನ್ನು ಹೊರತುಪಡಿಸಿ ಈ ದ್ವೀಪದಲ್ಲಿ ಯಾವುದೇ ನಿವಾಸಿಗಳು ಅಥವಾ ಶಾಶ್ವತ ರಚನೆಗಳಿಲ್ಲ.

ಇದನ್ನೂ ಓದಿ: HAL ಮುಳುಗುತ್ತಿದೆ ಎಂದು ವಿಕ್ಷಗಳು ಟೀಕಿಸಿದ್ದವು; ಇಂದು ರಾಷ್ಟ್ರದ ಹೆಮ್ಮೆಯಾಗಿದೆ: ಮೋದಿ

ಈ ದ್ವೀಪವು ರಾಮನಾಡಿನ (ಇಂದಿನ ರಾಮನಾಥಪುರಂ) ರಾಜನ ಒಡೆತನದಲ್ಲಿತ್ತು ಮತ್ತು ನಂತರ ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಯಿತು. 1921 ರಿಂದ 1974 ರವರೆಗೆ, ಭಾರತ ಮತ್ತು ಶ್ರೀಲಂಕಾ ಎರಡೂ ದೇಶಗಳು ಈ ದ್ವೀಪದಲ್ಲಿ  ಮೀನುಗಾರಿಕೆಗಾಗಿ ಹಕ್ಕು ಸಾಧಿಸಿದವು ಮತ್ತು ಎರಡೂ ದೇಶಗಳ ನಡುವೆ ಒಪ್ಪಂದಗಳಿಗೆ ಸಹಿ ಹಾಕುವವರೆಗೂ ಇದು ವಿವಾದಾಸ್ಪದವಾಗಿತ್ತು ಎಂದು ತಿಳಿದುಬಂದಿದೆ.

ಎರಡು ಕಡಲ ಗಡಿ ಒಪ್ಪಂದಗಳು
ಜೂನ್ 1974 ರಲ್ಲಿ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಶ್ರೀಲಂಕಾ ಮಾಜಿ ಪಿಎಂ ಸಿರಿಮಾವೊ ಬಂಡಾರನಾಯಕೆ ಅವರು 'ಎರಡು ದೇಶಗಳ ನಡುವಿನ ಐತಿಹಾಸಿಕ ನೀರಿನಲ್ಲಿ ಗಡಿ ಮತ್ತು ಸಂಬಂಧಿತ ವಿಷಯಗಳು' ಎಂಬ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಅಡಿಯಲ್ಲಿ, ಕಚ್ಚತೀವು ಶ್ರೀಲಂಕಾದ ಭೂಪ್ರದೇಶದ ಪಾಲಾಯಿತು. ಈ ಒಪ್ಪಂದದ 5 ನೇ ವಿಧಿಯ ಅಡಿಯಲ್ಲಿ ಭಾರತೀಯ ಮೀನುಗಾರರು ಮತ್ತು ಯಾತ್ರಿಕರು ಶ್ರೀಲಂಕಾದಿಂದ ಪ್ರಯಾಣದ ದಾಖಲೆಗಳನ್ನು ಪಡೆಯುವ ಅಗತ್ಯವಿಲ್ಲದೆ ಕಚ್ಚತೀವಿಗೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿತ್ತು.

ಇದನ್ನೂ ಓದಿ: ಇನ್ಮುಂದೆ ದೇಶದ್ರೋಹ ಕಾನೂನು ರದ್ದು; ಬ್ರಿಟಿಷರ ಕಾಲದ ಐಪಿಸಿ, ಸಿಆರ್‌ಪಿಸಿ ಸೇರಿ 3 ಕಾಯ್ದೆ ಬದಲು: ಅಮಿತ್‌ ಶಾ ಮಹತ್ವದ ಘೋಷಣೆ

ಆದರೆ, 1976 ರಲ್ಲಿ ಎರಡು ಸರ್ಕಾರಗಳ ನಡುವೆ ‘ಮನ್ನಾರ್ ಗಲ್ಫ್ ಮತ್ತು ಬಂಗಾಳ ಕೊಲ್ಲಿಯಲ್ಲಿನ ಸಮುದ್ರ ಗಡಿ’ ಕುರಿತು ಎರಡನೇ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಪ್ರಕಾರ, ಪ್ರತಿ ದೇಶವು ಸಾರ್ವಭೌಮ ಹಕ್ಕುಗಳನ್ನು ಮತ್ತು ಸಂಪನ್ಮೂಲಗಳ ಮೇಲೆ ವಿಶೇಷ ನ್ಯಾಯವ್ಯಾಪ್ತಿಯನ್ನು ಹೊಂದಿರುತ್ತದೆ, ಜೀವಂತವಾಗಿರಲಿ ಅಥವಾ ನಿರ್ಜೀವವಾಗಿರಲಿ, ಅದರ ಗಡಿಗಳ ಬದಿಯಲ್ಲಿ ಬೀಳುತ್ತದೆ. ಅಂದರೆ, ತಮಿಳುನಾಡಿನ ಮೀನುಗಾರರಿಗೆ ಇನ್ನು ಮುಂದೆ ದ್ವೀಪದ ಸುತ್ತ ಮೀನುಗಾರಿಕೆ ಹಕ್ಕು ಇಲ್ಲ ಎಂಬ ಕಾನೂನು ಜಾರಿಗೆ ಬಂತು..

ಭಾರತೀಯ ಮೀನುಗಾರರ ಬಂಧನ
ಆರಂಭದಲ್ಲಿ, ಭಾರತ ಮತ್ತು ಶ್ರೀಲಂಕಾ ಮೀನುಗಾರರ ನಡುವೆ ಐತಿಹಾಸಿಕ ಮೀನುಗಾರಿಕೆ ಹಕ್ಕುಗಳನ್ನು ಕಚ್ಚತೀವು ದ್ವೀಪದ ಸುತ್ತಮುತ್ತ ನಿರ್ವಹಿಸಲಾಯಿತು. ನಂತರ, ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ಉತ್ತರ ಶ್ರೀಲಂಕಾದಲ್ಲಿ ಕಾರ್ಯನಿರ್ವಹಿಸುವವರೆಗೂ, ಲಂಕಾ ಸರ್ಕಾರವು ಆ ಪ್ರದೇಶದಲ್ಲಿ ಅವರ ಮೀನುಗಾರರ ಸುಲಭ ಚಲನೆಯನ್ನು ನಿರ್ಬಂಧಿಸಿತು. ನಂತರ, 2009 ರಲ್ಲಿ ಶ್ರೀಲಂಕಾ ಅಂತರ್ಯುದ್ದ ಕೊನೆಗೊಂಡ ನಂತರ, ದೇಶದ ನೌಕಾಪಡೆಯು ಉತ್ತರ ಶ್ರೀಲಂಕಾದ ಸುತ್ತಲಿನ ಸಮುದ್ರಗಳಲ್ಲಿ ಮತ್ತೆ ಗಸ್ತು ತಿರುಗಲು ಪ್ರಾರಂಭಿಸಿತು.

ಇದನ್ನೂ ಓದಿ: ನವ ಭಾರತಕ್ಕೆ ಹೊಸ ಕಾನೂನು; ಇನ್ಮುಂದೆ ಗುಂಪು ಹತ್ಯೆಗೆ ಗಲ್ಲು ಶಿಕ್ಷೆ: ಅಮಿತ್‌ ಶಾ ಘೋಷಣೆ

ಇದು ಭಾರತೀಯ ಮೀನುಗಾರರನ್ನು ಬಂಧಿಸಲು ಮತ್ತು ಅವರ ದೋಣಿಗಳು ಮತ್ತು ಮೀನುಗಾರಿಕೆ ಟ್ರಾಲರ್‌ಗಳನ್ನು ವಶಪಡಿಸಿಕೊಳ್ಳಲು ಕಾರಣವಾಯಿತು. 2020 ಮತ್ತು 2022 ರ ನಡುವೆ, 501 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ ಎಂದು ಸಂಸತ್ತಿನಲ್ಲಿ ಕೆಂದ್ರ ಸಚಿವರೇ ಉತ್ತರಿಸಿದ್ದಾರೆ.

ತಮಿಳುನಾಡು ವರ್ಸಸ್‌ ಕೇಂದ್ರ ಸರ್ಕಾರ
1991 ರಲ್ಲಿ, ತಮಿಳುನಾಡು ವಿಧಾನಸಭೆಯು ಕಚ್ಚತೀವು ದ್ವೀಪವನ್ನು ಹಿಂಪಡೆಯಲು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತು. 2008 ರಲ್ಲಿ, ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಗಡಿ ಒಪ್ಪಂದಗಳು ಅಸಾಂವಿಧಾನಿಕವೆಂದು ಮತ್ತು ಒಪ್ಪಂದಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗಿದೆ.

Latest Videos
Follow Us:
Download App:
  • android
  • ios