Asianet Suvarna News Asianet Suvarna News

ಪ್ರಧಾನಿ ಮೋದಿಯ ಡಿಜಿಟಲ್‌ ಇಂಡಿಯಾ ದೃಷ್ಟಿಕೋನವನ್ನು ಕೊಂಡಾಡಿದ ಗೂಗಲ್‌ ಸಿಇಒ ಸುಂದರ್ ಪಿಚೈ

ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ದೃಷ್ಟಿಕೋನವು ಖಂಡಿತವಾಗಿಯೂ ಪ್ರಗತಿಗೆ ವೇಗವರ್ಧಕವಾಗಿದೆ ಮತ್ತು ಗೂಗಲ್ ಭಾರತದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದೆ ಎಂದು ನನಗೆ ಹೆಮ್ಮೆ ಇದೆ ಎಂದೂ ಸುಂದರ್ ಪಿಚೈ ಹೇಳಿದ್ದಾರೆ. 

pm modis digital india vision accelerator of progress google ceo sundar pichai ash
Author
First Published Dec 4, 2022, 4:28 PM IST

ಗೂಗಲ್‌ (Google) ಮತ್ತು ಆಲ್ಫಬೆಟ್‌ (Alphabet) ಸಿಇಒ ಸುಂದರ್‌ ಪಿಚೈ (Sundar Pichai) ಪ್ರಧಾನಿ ಮೋದಿಯವರ (PM Narendra Modi) ಡಿಜಿಟಲ್‌ ಇಂಡಿಯಾ (Digital India) ದೃಷ್ಟಿಕೋನವನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ತಾಂತ್ರಿಕ (Technology) ಕ್ಷೇತ್ರದಲ್ಲಿ ಭಾರತದಲ್ಲಿ (India) ವೇಗವಾಗಿ ಬದಲಾವಣೆಯಾಗುತ್ತಿರುವ ಕುರಿತು ಸಹ ಭಾರತೀಯ ಮೂಲದ ಸುಂದರ್‌ ಪಿಚೈ ಮಾತನಾಡಿದ್ದಾರೆ. ಹಾಗೂ, ಈ ಅಭಿವೃದ್ಧಿಯ ವೇಗಕ್ಕೆ ಪ್ರಧಾನಿ ಮೋದಿಯವರ ಡಿಜಿಟಲ್‌ ಇಂಡಿಯಾದ ಭವಿಷ್ಯದ ದೃಷ್ಟಿಕೋನವೇ ಕಾರಣ ಎಂದೂ ಅವರು ಹೊಗಳಿದ್ದಾರೆ. ಡಿಜಿಟಲ್‌ ಪಾವತಿಯಿಂದ ಹಿಡಿದು ಧ್ವನಿ ತಂತ್ರಜ್ಞಾನ - ಹೀಗೆ ಭಾರತದಲ್ಲಾಗುತ್ತಿರುವ ಆವಿಷ್ಕಾರಗಳು ಜಗತ್ತಿನ ಜನತೆಗೂ ಇದರ ಲಾಭವಾಗುತ್ತಿದೆ ಎಂದೂ ಹೇಳಿದರು. 

ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ದೃಷ್ಟಿಕೋನವು ಖಂಡಿತವಾಗಿಯೂ ಪ್ರಗತಿಗೆ ವೇಗವರ್ಧಕವಾಗಿದೆ ಮತ್ತು ಸರ್ಕಾರಗಳು, ವ್ಯವಹಾರಗಳು ಮತ್ತು ಸಮುದಾಯಗಳೊಂದಿಗೆ ಪಾಲುದಾರಿಕೆಯೊಂದಿಗೆ ಗೂಗಲ್ ಭಾರತದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದೆ ಎಂದು ನನಗೆ ಹೆಮ್ಮೆ ಇದೆ ಎಂದು ಗೂಗಲ್ ಸಿಇಒ ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ. ಅಮೆರಿಕದ ಭಾರತೀಯ ರಾಯಭಾರಿಯಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಪದ್ಮಭೂಷಣ ಪ್ರದಾನ

ಭಾರತವು ಮುನ್ನಡೆಸಬೇಕು
 2022 ರಲ್ಲಿ, ಯಂತ್ರ ಕಲಿಕೆಯಲ್ಲಿ ಹೊಸ ಪ್ರಗತಿಯನ್ನು ಬಳಸಿಕೊಂಡು ಗೂಗಲ್ ತನ್ನ ಅನುವಾದ ಸೇವೆಗೆ 24 ಹೊಸ ಭಾಷೆಗಳನ್ನು ಸೇರಿಸಿತು. ಇವುಗಳಲ್ಲಿ 8 ಭಾಷೆಗಳು ಭಾರತಕ್ಕೆ ಸ್ಥಳೀಯವಾಗಿವೆ. ಜನರು ತಮ್ಮ ಆದ್ಯತೆಯ ಭಾಷೆಯಲ್ಲಿ ಮಾಹಿತಿ ಮತ್ತು ಜ್ಞಾನವನ್ನು ಹೇಗೆ ಪ್ರವೇಶಿಸಬಹುದು ಮತ್ತು ಜಗತ್ತು ಅವರಿಗೆ ಹೊಸ ರೀತಿಯಲ್ಲಿ ತೆರೆದುಕೊಳ್ಳುವುದನ್ನು ನೋಡಲು ಇದು ತುಂಬಾ ಅರ್ಥವಾಗಿದೆ. ಅದಕ್ಕಾಗಿಯೇ ನಾನು ತಂತ್ರಜ್ಞಾನದ ಬಗ್ಗೆ ತುಂಬಾ ಆಶಾವಾದಿಯಾಗಿ ಮುಂದುವರಿಯುತ್ತೇನೆ ಮತ್ತು ಭಾರತವು ಮುನ್ನಡೆಸುವುದನ್ನು ಮುಂದುವರಿಸಬಹುದು ಮತ್ತು ಮುಂದುವರಿಸಬೇಕು ಎಂದು ನಾನು ನಂಬುತ್ತೇನೆ ಎಂದೂ ಅವರು ಹೇಳಿದರು.

'ಭಾರತ ನನ್ನ ಭಾಗವಾಗಿದೆ'
ಭಾರತೀಯ-ಅಮೆರಿಕನ್ ಆದ ಸುಂದರ್‌ ಪಿಚೈ ಅವರಿಗೆ ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದಲ್ಲಿ 2022 ಕ್ಕೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಮಧುರೈ ಮೂಲದ ಸುಂದರ್‌ ಪಿಚೈ ಅವರು ಈ ವರ್ಷದ ಆರಂಭದಲ್ಲಿ 17 ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದರು. ಶುಕ್ರವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗೂಗಲ್‌ ಸಿಇಒ ಸುಂದರ್‌ ಪಿಚೈ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಿ ಫ್ಯಾನ್‌ಗೆ 'ಸುಂದರ..ಅತಿ ಸುಂದರ..' ರಿಪ್ಲೈ ನೀಡಿದ ಗೂಗಲ್‌ ಸಿಇಒ!

"ಭಾರತವು ನನ್ನ ಭಾಗವಾಗಿದೆ ಮತ್ತು ನಾನು ಎಲ್ಲಿಗೆ ಹೋದರೂ ಅದನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ" ಎಂದು ಗೂಗಲ್ ಮತ್ತು ಆಲ್ಫಬೆಟ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ. ಈ ಅಗಾಧವಾದ ಗೌರವಕ್ಕಾಗಿ ಭಾರತ ಸರ್ಕಾರ ಮತ್ತು ಭಾರತದ ಜನತೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದೂ ಗೂಗಲ್ ಸಿಇಒ ಹೇಳಿದ್ದಾರೆ. "ನನ್ನನ್ನು ರೂಪಿಸಿದ ದೇಶವು ಈ ರೀತಿಯಾಗಿ ಗೌರವಿಸಲ್ಪಟ್ಟಿರುವುದು ನಂಬಲಾಗದಷ್ಟು ಅರ್ಥಪೂರ್ಣವಾಗಿದೆ" ಎಂದು 50 ವರ್ಷ ವಯಸ್ಸಿನ ಸುಂದರ್‌ ಪಿಚೈ ಅವರು ಯುಎಸ್‌ನಲ್ಲಿನ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರಿಂದ ಪ್ರಶಸ್ತಿ ಸ್ವೀಕರಿಸುವಾಗ ಹರ್ಷ ವ್ಯಕ್ತಪಡಿಸಿದ್ದಾರೆ. ಗೂಗಲ್ ಮತ್ತು ಭಾರತದ ನಡುವಿನ ಉತ್ತಮ ಪಾಲುದಾರಿಕೆಯನ್ನು ಮುಂದುವರಿಸಲು ತಾನು ಎದುರು ನೋಡುತ್ತಿದ್ದೇನೆ ಎಂದೂ ಸುಂದರ್‌ ಪಿಚೈ ಹೇಳಿದರು. ಏಕೆಂದರೆ "ತಂತ್ರಜ್ಞಾನದ ಪ್ರಯೋಜನಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ." ಎಮದು ತಿಳಿಸಿದರು. 

ಭಾರತಕ್ಕೆ G20 ಅಧ್ಯಕ್ಷತೆಯ ಬಗ್ಗೆ ಸುಂದರ್‌ ಪಿಚೈ ಹೇಳಿದ್ದೀಗೆ: 
G20 ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಂಡಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಗೂಗಲ್‌ ಸಿಇಒ, ಮುಕ್ತ, ಸಂಪರ್ಕಿತ, ಸುರಕ್ಷಿತ ಮತ್ತು ಎಲ್ಲರಿಗೂ ಕೆಲಸ ಮಾಡುವ ಇಂಟರ್ನೆಟ್ ಅನ್ನು ಮುನ್ನಡೆಸುವ ಮೂಲಕ ಜಾಗತಿಕ ಆರ್ಥಿಕತೆ ಬಲಪಡಿಸುವ ಕುರಿತು ಒಮ್ಮತವನ್ನು ನಿರ್ಮಿಸಲು ಇದು ಅದ್ಭುತ ಅವಕಾಶವಾಗಿದೆ. ಅದು ನಾವು ಹಂಚಿಕೊಳ್ಳುವ ಗುರಿಯಾಗಿದೆ ಮತ್ತು ನಿಮ್ಮೊಂದಿಗೆ ಮುನ್ನಡೆಯಲು ಬದ್ಧರಾಗಿದ್ದೇವೆ ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ಭಾರತದ ಡಿಜಿಟಲ್‌ ಭವಿಷ್ಯಕ್ಕೆ ಗೂಗಲ್‌ ಬದ್ಧ: Sundar Pichai

ಭಾರತವು ಗುರುವಾರ ಔಪಚಾರಿಕವಾಗಿ ಜಿ20 ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ಈ ಕೆಲಸವನ್ನು ಒಟ್ಟಾಗಿ ಮಾಡಲು ಮತ್ತು ತಂತ್ರಜ್ಞಾನದ ಪ್ರಯೋಜನಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ನಾನು ದೊರೆತಿರುವ ಅವಕಾಶಕ್ಕಾಗಿ ಕೃತಜ್ಞನಾಗಿದ್ದೇನೆ" ಎಂದೂ ಭಾರತ ಮೂಲದ ಸುಂದರ್‌ ಪಿಚೈ ಹೇಳಿದರು.

Follow Us:
Download App:
  • android
  • ios