Asianet Suvarna News Asianet Suvarna News

ಗೂಗಲ್‌ ಸಿಇಒ ಸುಂದರ್‌ ಪಿಚೈಗೆ ಪದ್ಮಭೂಷಣ ಪ್ರದಾನ

ಗೂಗಲ್‌ ಹಾಗೂ ಅಲ್ಫಾಬೆಟ್‌ ಸಿಇಒ ಆಗಿರುವ ಸುಂದರ್‌ ಪಿಚೈ ಅವರಿಗೆ ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿ ನೀಡಿ ಶುಕ್ರವಾರ ಗೌರವಿಸಲಾಗಿದೆ.

Ambassador of India Taranjit Singh Sandhu presents Padma Bhushan award to Google CEO Sundar Pichai in San Francisco akb
Author
First Published Dec 4, 2022, 9:53 AM IST

ವಾಷಿಂಗ್ಟನ್‌: ಗೂಗಲ್‌ ಹಾಗೂ ಅಲ್ಫಾಬೆಟ್‌ ಸಿಇಒ ಆಗಿರುವ ಸುಂದರ್‌ ಪಿಚೈ ಅವರಿಗೆ ಪ್ರತಿಷ್ಠಿತ ಪದ್ಮ ಭೂಷಣ ಪ್ರಶಸ್ತಿ ನೀಡಿ ಶುಕ್ರವಾರ ಗೌರವಿಸಲಾಗಿದೆ. 2022ನೇ ಸಾಲಿನ ಪದ್ಮ ಭೂಷಣ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಮಧುರೈ ಮೂಲದ ಸುಂದರ್‌ ಪಿಚೈ ಕೂಡಾ ಒಬ್ಬರು. ಈ ಹಿನ್ನೆಲೆಯಲ್ಲಿ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಭಾರತದ ರಾಯಭಾರಿ ತರಣ್‌ಜಿತ್‌ ಸಿಂಗ್‌ ಸಂಧು (Taranjit Singh Sandhu) ಅವರು ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಭೂಷಣ ಪ್ರಶಸ್ತಿಯನ್ನು ಸುಂದರ್‌ ಪಿಚೈ ಅವರಿಗೆ ನೀಡಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಪಿಚೈ,‘ನಾನು ಈ ಗೌರವ (Padma Bhushan award) ನೀಡಿದ್ದಕ್ಕೆ ಭಾರತ ಸರ್ಕಾರ (Government of India) ಹಾಗೂ ಭಾರತೀಯರಿಗೆ ಆಭಾರಿಯಾಗಿರುತ್ತೇನೆ. ನನ್ನನ್ನು ರೂಪಿಸಿದ ದೇಶದಿಂದ ಹೀಗೆ ಗೌರವಿಸಲ್ಪಡುವುದು ನನಗೆ ಅತ್ಯಂತ ಸಂತೋಷ ನೀಡಿದೆ. ಭಾರತವು ನನ್ನ ಭಾಗವಾಗಿದೆ. ನಾನೆಲ್ಲೇ ಹೋದರೂ ಅದು ನನ್ನೊಂದಿಗೆ ಇರುತ್ತದೆ ಎಂದು ಹೇಳಿದರು.

ಭಾರತದ ಡಿಜಿಟಲ್‌ ಭವಿಷ್ಯಕ್ಕೆ ಗೂಗಲ್‌ ಬದ್ಧ: Sundar Pichai

Google CEO ಸುಂದರ್ ಪಿಚೈ, ಮುಕೇಶ್ ಅಂಬಾನಿ ಜತೆ ಕ್ರಿಕೆಟ್‌ ಪಂದ್ಯ ವೀಕ್ಷಿಸಿದ ರವಿಶಾಸ್ತ್ರಿ

Follow Us:
Download App:
  • android
  • ios