Asianet Suvarna News Asianet Suvarna News

Major Dhyanchand Sports University: ಮೀರತ್ ನಲ್ಲಿ ತಲೆ ಎತ್ತಲಿರುವ ಕ್ರೀಡಾ ವಿವಿ ಹೀಗಿರುತ್ತೆ ನೋಡಿ!

ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿವಿಗೆ ಪಿಎಂ ಮೋದಿ ಶಿಲಾನ್ಯಾಸ
ಭಾನುವಾರ ನಡೆಯಲಿರುವ ಭವ್ಯ ಕಾರ್ಯಕ್ರಮ
1080 ಅಥ್ಲೀಟ್ ಗಳಿಗೆ ತರಬೇತಿ ನೀಡುವ ಸಾಮರ್ಥ್ಯ

pm modi will lay the foundation stone of state of the art sports university on sunday in  Uttar Pradeshs Meerut san
Author
Bengaluru, First Published Jan 1, 2022, 9:04 PM IST

ಮೀರತ್ (ಜ.1): ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಭಾನುವಾರ ಉತ್ತರ ಪ್ರದೇಶದ (Uttar Pradesh) ಮೀರತ್ ಗೆ (Meerut) ಭೇಟಿ ನೀಡಲಿದ್ದು, ಅಲ್ಲಿ ನಿರ್ಮಾಣವಾಗಲಿರುವ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ (Major Dhyanchand Sports University) ಶಿಲಾನ್ಯಾಸ (Lay foundation) ನೆರವೇರಿಸಲಿದ್ದಾರೆ. ಅಧಿಕೃತ ಪ್ರಕಟಣೆಯ ಪ್ರಕಾರ, ಮೀರತ್‌ನ ಸರ್ಧಾನ ಪಟ್ಟಣದ ಸಲಾವಾ ಮತ್ತು ಕೈಲಿ ಗ್ರಾಮಗಳಲ್ಲಿ ಅಂದಾಜು ₹ 700 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುತ್ತದೆ. ಪ್ರಧಾನಮಂತ್ರಿ ಕಚೇರಿ (ಪಿಎಂಓ) (PMO) ನೀಡಿರುವ ಪ್ರಕಟಣೆಯ ಪ್ರಕಾರ, ಈ ಕ್ರೀಡಾ ವಿಶ್ವವಿದ್ಯಾನಿಲಯವು 540 ಮಹಿಳೆಯರು ಹಾಗೂ 540 ಪುರುಷ ಅಥ್ಲೀಟ್ ಗಳು ಸೇರಿದಂತೆ 1080 ಕ್ರೀಡಾಪಟುಗಳಿಗೆ ಏಕಕಾಲದಲ್ಲಿ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿರಲಿದೆ.

ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವುದು ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯವನ್ನು ಸ್ಥಾಪಿಸುವುದು ತಮ್ಮ ಸರ್ಕಾರದ ಗಮನದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದು ಮೋದಿ ಈ ಹಿಂದೆ ಹೇಳಿದ್ದರು. ಕಳೆದ ಚುನಾವಣೆಯ ವೇಳೆ ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡುವುದು ತಮ್ಮ ಗುರಿ ಎಂದು ಹೇಳಿದ್ದರು. ಅದರಂತೆ ಉತ್ತರಪ್ರದೇಶ ರಾಜ್ಯ ಚುನಾವಣೆಯ ಹೊಸ್ತಿಲಲ್ಲಿ ಇರುವಾಗ  ಮೀರತ್ ನಲ್ಲಿ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾನಿಲಯಕ್ಕೆ ಮೋದಿ ಅಡಿಗಲ್ಲು ಹಾಕಲಿದ್ದಾರೆ. ಆ ಮೂಲಕ ಸ್ಥಳೀಯ ಜನರಲ್ಲಿ ತಾವು ನೀಡಿದ ಆಶ್ವಾಸನೆಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸುವ ಉದ್ದೇಶದಲ್ಲಿದ್ದಾರೆ.

ಫೀಲ್ಡ್ ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಈ ವಿವಿಗೆ ಇಡಲಾಗಿದೆ, ಕ್ರೀಡಾ ವಿಶ್ವವಿದ್ಯಾನಿಲಯವು ಸಿಂಥೆಟಿಕ್ ಹಾಕಿ ಮೈದಾನ (synthetic hockey ground) , ಫುಟ್ಬಾಲ್ ಮೈದಾನ ( football ground,), ಬಾಸ್ಕೆಟ್‌ಬಾಲ್ (basketball), ವಾಲಿಬಾಲ್ (volleyball), ಹ್ಯಾಂಡ್‌ಬಾಲ್ (handball) ಮತ್ತು ಕಬಡ್ಡಿಗಾಗಿ (kabaddi) ಪ್ರತ್ಯೇಕ ಮೈದಾನಗಳನ್ನು ಒಳಗೊಂಡಂತೆ ಎಲ್ಲಾ ಆಧುನಿಕ, ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ಹೊಂದಿರಲಿದೆ. ಅದರೊಂದಿಗೆ ಇದು ಲಾನ್ ಟೆನಿಸ್ ಕೋರ್ಟ್ (), ಜಿಮ್ನಾಶಿಯಂ ಹಾಲ್, ಸಿಂಥೆಟಿಕ್ ರನ್ನಿಂಗ್ ಸ್ಟೇಡಿಯಂ, ಸ್ವಿಮ್ಮಿಂಗ್ ಪೂಲ್, ವಿವಿಧೋದ್ದೇಶ ಹಾಲ್ ಮತ್ತು ಸೈಕ್ಲಿಂಗ್ ವೆಲೋಡ್ರೋಮ್ ಅನ್ನು ಸಹ ಒಳಗೊಂಡಿರಲಿದೆ. ಸರ್ಕಾರದ ಬಿಡುಗಡೆಯ ಪ್ರಕಾರ, ವಿಶ್ವವಿದ್ಯಾನಿಲಯವು ಶೂಟಿಂಗ್, ಸ್ಕ್ವಾಷ್, ಜಿಮ್ನಾಸ್ಟಿಕ್ಸ್, ವೇಟ್‌ಲಿಫ್ಟಿಂಗ್, ಆರ್ಚರಿ, ಕ್ಯಾನೋಯಿಂಗ್ ಮತ್ತು ಕಯಾಕಿಂಗ್‌ ಕ್ರೀಡೆಗಳಿಗೆ ಸಂಬಂಧಪಟ್ಟಂಥ ವ್ಯವಸ್ಥೆಗಳನ್ನೂ ಒಳಗೊಂಡಿರಲಿದೆ.
 


ಹಾಕಿ ಕ್ರೀಡೆಯ ಇತಿಹಾಸದ ಶ್ರೇಷ್ಠ ಆಟಗಾರ ಎನಿಸಿಕೊಂಡಿರುವ ಮೇಜರ್ ಧ್ಯಾನ್ ಚಂದ್ ( Major Dhyan Chand) ಭಾರತದ ಪರವಾಗಿ 1928, 1932 ಹಾಗೂ 1936ರಲ್ಲಿ ಒಲಿಂಪಿಕ್ ಸ್ವರ್ಣವನ್ನು ಜಯಿಸಿದ್ದರು. ಇವರು ತಂಡದಲ್ಲಿದ್ದ ಸಮಯವನ್ನು ಭಾರತೀಯ ಹಾಕಿಯ ಸುವರ್ಣ ದಿನಗಳು ಎಂದೇ ಕರೆಯಲಾಗುತ್ತಿತ್ತು. ಭಾರತದ ಪರವಾಗಿ ಆಡಿದ್ದರೂ, ಹಾಕಿಯ ಸರ್ವಶ್ರೇಷ್ಠ ಆಟಗಾರನ ಪ್ರಭಾವ ಪಾಶ್ಚಿಮಾತ್ಯ ದೇಶಗಳಲ್ಲೂ ವಿಸ್ತರಿಸಿತ್ತು.

Happy New Year 2022: ಹೊಸ ವರ್ಷಕ್ಕೆ ಶುಭಕೋರಿದ ಕ್ರೀಡಾತಾರೆಯರು
ಅಲ್ಲದೆ, ಅವರನ್ನು ಹಾಕಿಯ ಮೊಹಮದ್ ಅಲಿ ಎಂದೂ ಬಣ್ಣನೆ ಮಾಡಲಾಗಿತ್ತು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮೋದಿ ಅವರೊಂದಿಗೆ ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ (Governor Anandiben Patel), ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Chief Minister Yogi Adityanath) ಹಾಜರಿರಲಿದ್ದು, ಅಂದಾಜು 36 ಹೆಕ್ಟೇರ್ ಪ್ರದೇಶದಲ್ಲಿ ಇದು ವಿವಿ ನಿರ್ಮಾಣವಾಗಲಿದೆ.

Follow Us:
Download App:
  • android
  • ios