* ಹೊಸ ವರ್ಷವನ್ನು ವಿನೂತನವಾಗಿ ಸ್ವಾಗತಿಸಿದ ಭಾರತೀಯ ಕ್ರಿಕೆಟಿಗರು* ಅಭಿಮಾನಿಗಳಿಗೆ ಶುಭಕೋರಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್* ಹೊಸ ವರ್ಷ, ಹೊಸ ಪಯಣ ಖುಷಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದ ಕ್ರೀಡಾತಾರೆಯರು

ಬೆಂಗಳೂರು(ಜ.01): ಇಡೀ ಜಗತ್ತು 2022ರ ಹೊಸ ವರ್ಷವನ್ನು (Happy New Year 2022) ಅದ್ಧೂರಿಯಾಗಿ ಸ್ವಾಗತಿಸಿದೆ. ದಕ್ಷಿಣ ಆಫ್ರಿಕಾ ವಿರುದ್ದ ಬಾಕ್ಸಿಂಗ್ ಡೇ ಟೆಸ್ಟ್‌ (Boxing Day Test) ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ (Team India), ಒಂದು ದಿನ ಮುಂಚಿತವಾಗಿಯೇ ಕ್ರಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ನೀಡಿತ್ತು. ಇದೀಗ ವಿರಾಟ್ ಕೊಹ್ಲಿಯಿಂದ ಹಿಡಿದು ಸಚಿನ್‌ ತೆಂಡುಲ್ಕರ್‌ವರೆಗೆ ಹಲವು ಕ್ರೀಡಾ ತಾರೆಯರು ವಿನೂತನವಾಗಿ ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ.

ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ತಮ್ಮ ಪತ್ನಿ ಹಾಗೂ ಟೀಂ ಇಂಡಿಯಾ ಸಹ ಆಟಗಾರರ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಕೂ ಆ್ಯಪ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಹೊಸ ವರ್ಷ ನಮ್ಮೆಲ್ಲರಿಗೂ ಖುಷಿ-ಸಂತೋಷವನ್ನು ತಂದುಕೊಡಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ ನನ್ನ ಪ್ರೀತಿಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಈಗಾಗಲೇ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಸೆಂಚೂರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ಮೂರು ಪಂದ್ಯ ಫ್ರೀಡಂ ಟ್ರೋಫಿ (Freedom Trophy) ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇನ್ನೊಂದು ಪಂದ್ಯ ಜಯಿಸಿದರೆ, ದಕ್ಷಿಣ ಆಫ್ರಿಕಾದಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಟೆಸ್ಟ್ ಸರಣಿಯನ್ನು ಜಯಿಸಿದಂತಾಗಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು ಜನವರಿ 03ರಿಂದ ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್‌ನಲ್ಲಿ ಆರಂಭವಾಗಲಿದೆ.

ಇನ್ನು ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin), ಸಹ ಆಟಗಾರರು ಹೊಸವರ್ಷದ ಸಂಭ್ರಮಾಚರಣೆ ಮಾಡುತ್ತಿರುವ ಫೋಟೋದೊಂದಿಗೆ ಹೊಸ ವರ್ಷ, ಹೊಸ ಬರವಸೆ, ಎಲ್ಲರಿಗೂ ಹೊಸ ವರ್ಷ ಸಂತಸ ಹಾಗೂ ಸಮೃದ್ದಿಯನ್ನು ತಂದುಕೊಡಲಿ ಎಂದು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

Scroll to load tweet…

2011ರ ವಿಶ್ವಕಪ್ ಬಳಿಕ ನನಗೆ ಸೂಕ್ತ ಅವಕಾಶ ಕೊಡಲಿಲ್ಲ: ಹರ್ಭಜನ್ ಸಿಂಗ್ ಬೇಸರ..!

ಇನ್ನು ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಸಚಿನ್ ತೆಂಡುಲ್ಕರ್‌ (Sachin Tendulkar) ಕೂಡಾ ಟ್ವೀಟ್‌ ಮೂಲಕ ಶುಭಹಾರೈಸಿದ್ದು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷ ಎಲ್ಲರೂ ಆರೋಗ್ಯದಿಂದ ಇರಲಿ ಎಂದು ಹಾರೈಸಿದ್ದಾರೆ.

Scroll to load tweet…

ಟೀಂ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿಶಾಸ್ತ್ರಿ (Ravi Shastri) ಟ್ವಿಟರ್‌ನಲ್ಲಿ ಬಾಲಿವುಡ್‌ ನಟ ರಣಬೀರ್‌ ಸಿಂಗ್ ಜತೆ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರ ಜತೆಗೆ, ಈ ರೀತಿಯಾಗಿ 2022ರ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಡ್ಯಾನ್ಸ್‌ ಟಿಪ್ಸ್ ನೀಡಿದ್ದಕ್ಕೆ ರಣಬೀರ್‌ ಸಿಂಗ್‌ಗೆ ಧನ್ಯವಾದಗಳು. ಎಲ್ಲರಿಗೂ ಹೊಸ ವರ್ಷ ಸುಖ-ಶಾಂತಿ, ನೆಮ್ಮದಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದ್ದಾರೆ.

Scroll to load tweet…

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್(Virender Sehwag), ತಮ್ಮ ಕುಟುಂಬದೊಟ್ಟಿಗೆ ಹೊಸ ವರ್ಷವನ್ನು ಸ್ವಾಗತಿಸಿದ್ದು, 2020 ಹಾಗೂ 2021ರಲ್ಲಿ ನಾವೆಲ್ಲರೂ ಸಾಕಷ್ಟು ಸವಾಲುಗಳು ಎದುರಿಸಿದ್ದೇವೆ. 2022ರಲ್ಲಿ ಎಲ್ಲರಿಗೂ ಖುಷಿ ಹಾಗೂ ಆರೋಗ್ಯದ ಬದುಕು ಸಿಗಲಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Laxman) ಕೂಡಾ, ಹೊಸ ವರ್ಷವನ್ನು ಟ್ವೀಟ್‌ ಮೂಲಕ ವಿನೂತನವಾಗಿ ಸ್ವಾಗತಿಸಿದ್ದಾರೆ. ಹೊಸ ವರ್ಷ, ಹೊಸ ಪಯಣ, ಹೊಸ ಕಲಿಕೆ, ಹೊಸ ನೆನಪುಗಳು. ಎಲ್ಲರಿಗೂ ಹೊಸ ವರ್ಷವು ಖುಷಿ ಹಾಗೂ ಆರೋಗ್ಯವನ್ನು ತಂದುಕೊಡಲಿ ಎಂದು ಶುಭ ಹಾರೈಸಿದ್ದಾರೆ. 

Scroll to load tweet…