ಉಗ್ರವಾದದ ವಿಷಸರ್ಪ ಹೆಡೆ ಎತ್ತಿದರೆ ಹುತ್ತದಿಂದ ತೆಗೆದು ಹೊಡೀತೇವೆ. ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.

ಪಿಟಿಐ ಕಾರಾಕಾಟ್ / ಕಾನ್ಪುರ (ಮೇ.31): ಪಾಕಿಸ್ತಾನ ಪೋಷಿತ ಉಗ್ರವಾದವನ್ನು ಸರ್ಪಕ್ಕೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಅವುಗಳು ಮತ್ತೆ ತಲೆ ಎತ್ತಿದರೆ, ಹುತ್ತದಿಂದ ಹೊರಗೆ ಎಳೆದು ಹೊಡೆದು ಹಾಕುತ್ತೇವೆ' ಎಂದು ಕಠೋರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, 'ನಮ್ಮ ಬ್ರಹ್ಮಸ್ ಕ್ಷಿಪಣಿ ಪಾಕ್ ಸೇನೆಯ ನಿದ್ದೆ ಕೆಡಿಸಿದೆ' ಎಂದೂ ಹೇಳಿದ್ದಾರೆ.

'ಮೇ 9ರಂದು ಬೆಳಗ್ಗಿನ ನಮಾಜ್ ಬಳಿಕ ಭಾರತದ ಮೇಲೆ ದಾಳಿಗೆ ಸಜ್ಜಾಗಿದ್ದ ನಮ್ಮ ಮೇಲೆ ಬ್ರಹ್ಮೋಸ್‌ ದಾಳಿ ಮಾಡಿ ನಮ್ಮ ನಿದ್ದೆ ಗೆಡಿಸಿತು" ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ಬೆನ್ನಲ್ಲೇ ಮೋದಿ ಈ ನುಡಿಗಳನ್ನಾಡಿದ್ದಾರೆ.

ಬಿಹಾರದ ಕಾರಾಕಾಟ್ ಹಾಗೂ ಉತ್ತರ ಪ್ರದೇಶದ ಕಾನ್ಸುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ ಅವರು, 'ಆಪರೇಷನ್ ಸಿಂದೂರ ಮುಗಿದಿಲ್ಲ, ಸ್ಥಗಿತವೂ ಆಗಿಲ್ಲ. ಅದು ಭಾರತದ ಬತ್ತಳಿಕೆಯಲ್ಲಿರುವ ಒಂದು ಅಸ್ತವಷ್ಟೇ' ಎಂದರು.

ಬಿಹಾರದ ಕಾರಾಕಟ್‌ನಲ್ಲಿ ಮಾತನಾಡಿದ ಅವರು, ಏ.22ರ ಪಹಲ್ಲಾಂ ನರಮೇಧದ ಮರುದಿನ ತಾವು ಬಿಹಾರದ ಮಧುಬನಿಯಲ್ಲಿ ಮಾಡಿದ ಭಾಷಣವನ್ನು ನೆನಪಿಸಿ ಕೊಂಡರು. 'ಅಪರಾಧಿಗಳಿಗೆ ಕನಸಿನಲ್ಲಿಯೂ ಊಹಿಸಲಾಗದ ಶಿಕ್ಷೆಯಾಗುತ್ತದೆ ಎಂದು ನಾನು ಭರವಸೆ ನೀಡಿದ್ದೆ. ಆ ಪ್ರತಿಜ್ಞೆಯನ್ನು ಪೂರೈಸಿ ಇಂದು ನಾನು ನಿಮ್ಮೆದುರು ನಿಂತಿದ್ದೇನೆ. ಭಾರತೀಯ ಮಹಿಳೆಯರು ಧರಿಸುವ ಸಿಂದೂರದ ತಾಕತ್ತನ್ನು ಪಾಕಿಸ್ತಾನ ಸೇರಿದಂತೆ ಇಡೀ ವಿಶ್ವವೇನೋಡಿದೆ. ಪಾಕ್ ಸೇನೆಯ ರಕ್ಷಣೆಯಲ್ಲಿ ಉಗ್ರರು ಸುರಕ್ಷಿತರಾಗಿದ್ದರು. ಆದರೆ ಭಾರತ ಅವರನ್ನು ಮಂಡಿಯೂರುವಂತೆ ಮಾಡಿದೆ. ಅವರ ವಾಯುನೆಲೆಗಳನ್ನು ನಮ್ಮ ಸ್ವದೇಶಿ ಶಸ್ತ್ರಾಸ್ತ್ರಗಳು ನಾಶ ಮಾಡಿದೆವು' ಎಂದರು.

ಪಹಲ್ಗಾಂ ಉಗ್ರ ದಾಳಿಯಲ್ಲಿ ಮೃತಪಟ್ಟ ಶುಭ ಶುಭಂ ದ್ವಿವೇದಿ ಅವರ ಕುಟುಂಬವನ್ನು ಕಾನ್ಸುರ ಬಳಿ ಏರ್‌ಪೋರ್‌ನಲ್ಲಿ ಭೇಟಿಯಾಗಿ ಮೋದಿ ಸಾಂತ್ವನ ಹೇಳಿದರು.

ಪಾಕ್ 4 ತುಂಡಾಗುತ್ತಿತ್ತು: ರಾಜನಾಥ್

ಪಣಜಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತೊಮ್ಮೆ ವೈರಿ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಗುಡುಗಿದ್ದು, 'ಆಪರೇಷನ್ ಸಿಂದೂರದಲ್ಲಿ ನೌಕಾಪಡೆ ಕಾರ್ಯಾಚರಣೆಗೆ ಇಳಿದಿದ್ದರೆ 1971ಕ್ಕಿಂತಲೂ ಪಾಕಿಸ್ತಾನ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತಿತ್ತು. 4 ಭಾಗಗಳಾಗಿ ತುಂಡಾಗುತ್ತಿತ್ತು' ಎಂದಿದ್ದಾರೆ. ಗೋವಾದಲ್ಲಿ ದೇಶದ ಮೊದಲ ಸ್ವದೇಶಿ ನಿರ್ಮಿತ ನೌಕೆ ಐಎನ್‌ಎಸ್ ವಿಕ್ರಾಂತ್‌ಗೆ ಭೇಟಿ ನೀಡಿ ಮಾತನಾಡಿದ ಅವರು, 'ಭಾರತದ ನೌಕಾಪಡೆ ಅಖಾಡಕ್ಕಿಳಿದರೆ ಪಾಕ್ 2 ಭಾಗವಾಗುತ್ತದೆ ಎನ್ನುವುದಕ್ಕೆ 1971ರಯುದ್ಧಸಾಕ್ಷಿ ಇನ್ನು ಇನ್ನು ಒಂದು ವೇಳೆ ಆಪರೇಷನ್ ಸಿಂದೂರದ ವೇಳೆ ನೌಕಾಪಡೆ ದಾಳಿ ಮಾಡಿದ್ದರೆ ಪಾಕ್ 2 ಅಲ್ಲ, 4 ಭಾಗ ಅಗ್ತಿತ್ತು' ಎಂದರು.

ಕಾಶ್ಮೀರ ಅಭಿವೃದ್ಧಿ ನಿಲ್ಲಲ್ಲ: ಅಮಿತ್ ಶಾ

ಪೂಂಛ್‌: ಭಾರತ-ಪಾಕಿಸ್ತಾನ ಸಂಘರ್ಷದ ವೇಳೆ ಪಾಕ್ ನಡೆಸಿದ ಶೆಲ್ ದಾಳಿ ಸಂತ್ರಸ್ತರಾದ ಜಮ್ಮು ಮತ್ತು ಕಾಶ್ಮೀರದ ಪೂಂಛನ ಜನರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಭೇಟಿಯಾದರು. ಈ ವೇಳೆ ಸಂತ್ರಸ್ತರ ಜತೆ ಮಾತನಾಡಿದ ಅವರು, 'ಕಾಶ್ಮೀರದ ಅಭಿವೃದ್ಧಿ ಇಂಥ ದಾಳಿಗಳಿಗೆಲ್ಲ ನಿಲ್ಲುವುದಿಲ್ಲ, ನಿಧಾನವಾಗುವುದೂ ಇಲ್ಲ. ಭಾರತಕ್ಕೆ ಹಾನಿ ಮಾಡಲು ಪ್ರಯತ್ನಿಸುವವರು ಯಾರೇ ಆದರೂ ತಕ್ಕ ಉತ್ತರ ನೀಡಲಾಗುವುದು. ಈಗಾಗಲೇ ಭಾರತವು ಪಾಕ್‌ನ 118 ಮುಂಚೂಣಿ ನೆಲೆಗಳನ್ನು ರ ನೆಲೆಗಳನ್ನು ಧ್ವಂಸ ಮಾಡಿದೆ' ಎಂದರು.

370ನೇ ವಿಧಿ ರದ್ದತಿ ನಂತರ ಕಾಶ್ಮೀರ ಸಮೃದ್ಧಿ: ಖುರ್ಷಿದ್

ನವದೆಹಲಿ: 'ಜಮ್ಮು ಕಾಶ್ಮೀರ 370ನೇ ವಿಧಿ ರದ್ದತಿ ಬಳಿಕ ಸಮೃದವಾಗಿದೆ' ಎಂದು ಮಾಜಿ ವಿದೇಶಾಂಗ ಸಚಿವ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಪಾಕಿಸ್ತಾನದ ಬಣ್ಣ ಬಯಲು ಮಾಡಲು ಇಂಡೋನೇಷ್ಯಾಗೆ ತೆರಳಿರುವ ಖುರ್ಷಿದ್ ಸಂದರ್ಶನ ನೀಡಿ, 'ಕಾಶ್ಮೀರವು ದೀರ್ಘಕಾ ಲದವರೆಗೆ ಒಂದು ಪ್ರಮುಖ ಸಮಸ್ಯೆಯನ್ನು ಹೊಂದಿತ್ತು. ಅದು 370ನೇ ವಿಧಿಯಲ್ಲಿ ಪ್ರತಿಫಲಿಸಿತ್ತು. ಅದು ಭಾರತದಿಂದ ಕಾಶ್ಮೀರವು ಪ್ರತ್ಯೇಕ ಎಂಬ ಭಾವನೆ ಹೊಂದಿತ್ತು. ಆದರೆ 370ನೇ ವಿಧಿ ರದ್ದತಿ ಬಳಿಕ ಅಲ್ಲಿನ ಪ್ರತ್ಯೇಕತಾ ಭಾವನೆ ಹೋಗಿದೆ' ಎಂದು ಹೇಳಿದರು.