PM Modi visits Hyderabad : ಹವಾಮಾನ ಬದಲಾವಣೆಯಿಂದ ರೈತರನ್ನು ರಕ್ಷಿಸುವ ಕೆಲಸವಾಗಬೇಕು!

ICRISAT ಸಂಸ್ಥೆಯ 50ನೇ ವಾರ್ಷಿಕೋತ್ಸವ ಉದ್ಘಾಟನೆ ಮಾಡಿದ ಪ್ರಧಾನಿ
ಇಕ್ರಿಸ್ಯಾಟ್‌ ನ ಕ್ಷಿಪ್ರ ಜನರೇಷನ್ ಅಡ್ವಾನ್ಸ್‌ಮೆಂಟ್ ಕೇಂದ್ರದ ಅನಾವರಣ
ಏಷ್ಯಾ ಹಾಗೂ ಸಬ್ ಸಹರಾ ಆಫ್ರಿಕಾದ ಸಣ್ಣ ರೈತರಿಗೆ ಈ ಕೇಂದ್ರ ಸಮರ್ಪಣೆ

PM Modi visits Hyderabad news In ICRISAT our focus is back to basics and march to future to save the farmer san

ಹೈದರಾಬಾದ್ (ಫೆ. 5): ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi)ವಿವಿಧ ಕಾರ್ಯಕ್ರಮಗಳಿಗಾಗಿ ಶನಿವಾರ ಹೈದರಾಬಾದ್ ಗೆ (Hyderabad) ಆಗಮಿಸಿದರು. ಈ ವೇಳೆ ಅರೆ-ಶುಷ್ಕ ಉಷ್ಣವಲಯಕ್ಕಾಗಿ ಅಂತರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ (ICRISAT) ನ ಎರಡು ಕೇಂದ್ರಗಳನ್ನು ಉದ್ಘಾಟನೆ ಮಾಡಿದ ಅವರು, ಭವಿಷ್ಯದ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ರೈತರನ್ನು ರಕ್ಷಣೆ ಮಾಡುವ ಕೆಲಸವಾಗಬೇಕಿದೆ ಎಂದು ಮೋದಿ ಅಭಿಪ್ರಾಯಪಟ್ಟರು. ICRISAT ನ ಸಸ್ಯ ಸಂರಕ್ಷಣೆಯ ಹವಾಮಾನ ಬದಲಾವಣೆ ಸಂಶೋಧನಾ ಕೇಂದ್ರ ಮತ್ತು ICRISAT ನ ಕ್ಷಿಪ್ರ ಜನರೇಷನ್ ಅಡ್ವಾನ್ಸ್‌ಮೆಂಟ್ ಕೇಂದ್ರವನ್ನು ಉದ್ಘಾಟಿಸಿದರು. ಈ ಎರಡು ಕೇಂದ್ರಗಳನ್ನು ಏಷ್ಯಾ (Asia) ಮತ್ತು ಉಪ-ಸಹಾರನ್ ಆಫ್ರಿಕಾದ (Sub-Sahara Africa) ಸಣ್ಣ ರೈತರಿಗೆ ಸಮರ್ಪಿಸಲಾಗಿದೆ.

ಪ್ರಧಾನಿ ಮೋದಿ ಅವರು ಇಕ್ರಿಸ್ಯಾಟ್‌ನ ವಿಶೇಷವಾಗಿ ವಿನ್ಯಾಸಗೊಳಿಸಿದ ಲೋಗೋವನ್ನು(logo )ಈ ವೇಳೆ ಅನಾವರಣಗೊಳಿಸಿದರು ಮತ್ತು ಈ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆ ಚೀಟಿಯನ್ನು (Postal Stamp ) ಬಿಡುಗಡೆ ಮಾಡಿದರು. ಸಂಜೆ 5 ಗಂಟೆಗೆ ಪ್ರಧಾನಿ ಸಮಾನತೆಯ ಪ್ರತಿಮೆಯನ್ನು (Statue of Equality ) ಉದ್ಘಾಟಿಸಲಿದ್ದಾರೆ. ICRISAT ನ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಇಕ್ರಿಸ್ಯಾಟ್‌ 5 ದಶಕಗಳ ಅನುಭವವಿದೆ ಎಂದು ಹೇಳಿದರು. ಈ 5 ದಶಕಗಳಲ್ಲಿ ನೀವು ಭಾರತ ಸೇರಿದಂತೆ ವಿಶ್ವದ ಹೆಚ್ಚಿನ ಭಾಗದಲ್ಲಿ ಕೃಷಿ ಕ್ಷೇತ್ರಕ್ಕೆ ಸಹಾಯ ಮಾಡಿದ್ದೀರಿ. ನಿಮ್ಮ ಸಂಶೋಧನೆ, ನಿಮ್ಮ ತಂತ್ರಜ್ಞಾನವು ಕಷ್ಟದ ಸಂದರ್ಭಗಳಲ್ಲಿ ಕೃಷಿಯನ್ನು ಸುಲಭ ಮತ್ತು ಸಮರ್ಥನೀಯವಾಗಿಸಿದೆ. ಹವಾಮಾನ ಸವಾಲನ್ನು ಎದುರಿಸಲು, ಭಾರತವು ಅದರ ಬಗ್ಗೆ ವಿಶೇಷ ಗಮನ ಹರಿಸುವಂತೆ ವಿಶ್ವವನ್ನು ಒತ್ತಾಯಿಸಿದೆ ಎಂದರು.

ಭಾರತವು 2070 ರ ವೇಳೆಗೆ ಶೂನ್ಯ ಇಂಗಾಲದ ಗುರಿಯನ್ನು ಮಾತ್ರವೇ ನಿಗದಿಪಡಿಸಿಲ್ಲ, ನಾವು ಜೀವನ - ಪರಿಸರಕ್ಕಾಗಿ ಜೀವನಶೈಲಿಯ ಅಗತ್ಯವನ್ನು ಎತ್ತಿ ತೋರಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಪ್ರೊ ಪ್ಲಾನೆಟ್ ಪೀಪಲ್ ಎನ್ನುವುದು ಪ್ರತಿ ಸಮುದಾಯವನ್ನು ಸಂಪರ್ಕಿಸುವ ಒಂದು ಆಂದೋಲನವಾಗಿದೆ, ಹವಾಮಾನದ ಸವಾಲನ್ನು ನಿಭಾಯಿಸಲು ಹವಾಮಾನ ಜವಾಬ್ದಾರಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೂ ಆಗಿದೆ. ಇದು ಕೇವಲ ಮಾತಿಗೆ ಮಾತ್ರ ಸೀಮಿತವಾಗದೆ, ಭಾರತ ಸರ್ಕಾರದ ಕಾರ್ಯಗಳಲ್ಲಿಯೂ ಪ್ರತಿಫಲಿಸುತ್ತಿದೆ ಎಂದರು.
 


ಭಾರತದಲ್ಲಿ 15 ಕೃಷಿ ಹವಾಮಾನ ವಲಯ: ಭಾರತದಲ್ಲಿ 15 ಕೃಷಿ-ಹವಾಮಾನ ವಲಯಗಳಿವೆ ಎಂದು ಹೇಳಿದರು. ನಮ್ಮಲ್ಲಿ 6 ಋತುಗಳಿವೆ - ವಸಂತ, ಬೇಸಿಗೆ, ವರ್ಷ, ಶರದ್, ಹೇಮಂತ್ ಮತ್ತು ಶಿಶಿರ್. ಅಂದರೆ, ಕೃಷಿಗೆ ಸಂಬಂಧಿಸಿದ ಅತ್ಯಂತ ವೈವಿಧ್ಯಮಯ ಮತ್ತು ಅತ್ಯಂತ ಪ್ರಾಚೀನ ಅನುಭವವನ್ನು ನಾವು ಹೊಂದಿದ್ದೇವೆ. ಹವಾಮಾನದ ಸವಾಲಿನಿಂದ ನಮ್ಮ ರೈತರನ್ನು ರಕ್ಷಿಸಲು, ನಮ್ಮ ಗಮನವು ಬೇಸಿಕ್ಸ್‌ಗೆ ಬ್ಯಾಕ್‌ ಟು ಫ್ಯೂಚರ್‌ ಮತ್ತು ಮಾರ್ಚ್‌ ಟು ಫ್ಯೂಚರ್‌ ಎರಡರ ಸಮ್ಮಿಳನವಾಗಿದೆ. ನಮ್ಮ ಗಮನವು ನಮಗೆ ಹೆಚ್ಚು ಅಗತ್ಯವಿರುವ ದೇಶದ ಶೇಕಡ 80 ಕ್ಕಿಂತ ಹೆಚ್ಚು ಸಣ್ಣ ರೈತರ ಮೇಲೆ ಕೇಂದ್ರೀಕೃತವಾಗಿದೆ ಎಂದು ಹೇಳಿದರು.

1 ಕೋಟಿ ಸಬ್‌ಸ್ಕ್ರೈಬರ್‌ ಗಳಿಸಿದ ಪ್ರಧಾನಿ ಮೋದಿ ಯೂಟ್ಯೂಬ್ ಚಾನೆಲ್
ಬದಲಾಗುತ್ತಿರುವ ಭಾರತದ ಪ್ರಮುಖ ಅಂಶವೆಂದರೆ ಡಿಜಿಟಲ್ ಕೃಷಿ. ಇದು ನಮ್ಮ ಭವಿಷ್ಯ ಮತ್ತು ಇದರಲ್ಲಿ ಭಾರತದ ಪ್ರತಿಭಾವಂತ ಯುವಕರು ಉತ್ತಮ ಕೆಲಸ ಮಾಡಬಹುದು. ಡಿಜಿಟಲ್ ತಂತ್ರಜ್ಞಾನದಿಂದ ನಾವು ರೈತನನ್ನು ಹೇಗೆ ಸಬಲಗೊಳಿಸಬಹುದು ಎಂಬುದಕ್ಕೆ ಭಾರತದಲ್ಲಿ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ.

Union Budget 2002 ಮುಂದಿನ 100 ವರ್ಷದ ಅಭಿವೃದ್ಧಿಗೆ ಬಜೆಟ್ ರಹದಾರಿ, ನಿರ್ಮಲಾಗೆ ಮೋದಿ ಅಭಿನಂದನೆ!
ICRIST ಅಂತರಾಷ್ಟ್ರೀಯ ಸಂಸ್ಥೆ: ICRISAT ಏಷ್ಯಾ ಮತ್ತು ಉಪ-ಸಹಾರನ್ ಆಫ್ರಿಕಾದಲ್ಲಿ ಅಭಿವೃದ್ಧಿಗಾಗಿ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ಉತ್ತಮ ಬೆಳೆ ಪ್ರಭೇದಗಳು ಮತ್ತು ಮಿಶ್ರತಳಿಗಳನ್ನು ಒದಗಿಸುವ ಮೂಲಕ ರೈತರಿಗೆ ಸಹಾಯ ಮಾಡುತ್ತದೆ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಒಣ ಭೂಮಿಯಲ್ಲಿ ಸಣ್ಣ ರೈತರಿಗೆ ಸಹಾಯ ಮಾಡುತ್ತದೆ.

Latest Videos
Follow Us:
Download App:
  • android
  • ios