Union Budget 2002 ಮುಂದಿನ 100 ವರ್ಷದ ಅಭಿವೃದ್ಧಿಗೆ ಬಜೆಟ್ ರಹದಾರಿ, ನಿರ್ಮಲಾಗೆ ಮೋದಿ ಅಭಿನಂದನೆ!

  • ಕೇಂದ್ರ ಬಜೆಟ್ ಕುರಿತು ಪ್ರಧಾನಿ ಮೋದಿ ಭಾಷಣ
  • ಅತ್ಯುತ್ತಮ ಬಜೆಟ್ ಮಂಡಿಸಿದ ನಿರ್ಮಲಾಗೆ ಅಭಿನಂದನೆ
  • ಎಲ್ಲಾ ಕ್ಷೇತ್ರಗಳಿಗೆ ಕೊಡುಗೆ, ಮೂಲಭೂತ ಸೌಕರ್ಯಕ್ಕೆ ಒತ್ತು
Budget brings new hopes PM Modi thanks Nirmala sitharaman for Best progressive Union Budget 2002 ckm

ನವದೆಹಲಿ(ಫೆ.01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ಕೇಂದ್ರ ಬಜೆಟ್(Union Budget 2022) ಮಂಡಿಸಿದ್ದಾರೆ. ಬಜೆಟ್ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಷೇರು ಸೂಚ್ಯಂಕ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(Narendra Modi) ಬಜೆಟ್ ಕುರಿತು ಭಾಷಣ ಮಾಡಿದ್ದಾರೆ. ಈ ಬಜೆಟ್ ಅತ್ಯುತ್ತಮ ಬಜೆಟ್ ಆಗಿದ್ದು, ಮುಂದಿನ 100 ವರ್ಷಗಳ ಅಭಿವೃದ್ಧಿ ಗಮನದಲ್ಲಿಟ್ಟು ಮಂಡನೆ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಈ ಬಜೆಟ್ ಅರ್ಥ ವ್ಯವಸ್ಥೆಯನ್ನು(Indian Economy) ಬಲಪಡಿಸಲಿದೆ. ಈ ಬಜೆಟ್‌ ಹೆಚ್ಚು ಮೂಲಭೂತ ಸೌಕರ್ಯ(infrastructure), ಉದ್ಯೋಗ, ಹೆಚ್ಚು ಹೂಡಿಕೆ, ಹೆಚ್ಚು ಪ್ರಗತಿಯೊಂದಿಗೆ ಜೋಡಣೆಯಾಗಿದೆ. ಇಷ್ಟೇ ಅಲ್ಲ ಸದ್ಯ ಎದುರಾಗಿರುವ ಅವಶ್ಯಕತೆಗಳನ್ನೂ ಪೂರೈಸಲು ನೆರವಾಗಲಿದೆ. ದೇಶದ ಯುವಕರ ಉಜ್ವಲ ಭವಿಷ್ಯಕ್ಕೂ ಈ ಬಾರಿ ಮಂಡಿಸಿದ ಬಜೆಟ್ ನೆರವಾಗಲಿದೆ ಎಂದು ಮೋದಿ ಹೇಳಿದ್ದಾರೆ. 

Budget 2022: ಬ್ಲಾಕ್‌ಚೈನ್ ಬಳಸಿ RBI ಡಿಜಿಟಲ್ ಕರೆನ್ಸಿ: ಡಿಜಿಟಲ್‌ ಸ್ವತ್ತು ಆದಾಯದ ಮೇಲೆ ತೆರಿಗೆ!

ಬಜೆಟ್ ಮಂಡನೆಯಾದ ಬಳಿಕ ವಿವಿಧ ಕ್ಷೇತ್ರದ ಜನರು, ತಜ್ಞರು ಬಜೆಟ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಪ್ರತಿಕ್ರಿಯೆ ಜನರ ಸೇವೆ ಮಾಡುವ ನಮ್ಮ ಉತ್ಸಾಹ ಹೆಚ್ಚಿಸಿದೆ. ಆಧುನಿಕತೆಯನ್ನು ಒಳಗೊಂಡಿರುವ ಬಜೆಟ್‌ನಲ್ಲಿ ರೈತರ ಡ್ರೋನ್, ವಂದೇ ಭಾರತ್ ರೈಲು, ಡಿಜಿಟಲ್ ಕರೆನ್ಸಿ, ಬ್ಯಾಂಕಿಂಗ್ ಡಿಜಿಟಲ್, ರಾಷ್ಟ್ರೀಯ ಅರೋಗ್ಯ ಡಿಜಿಟಲ್ ಇಕೋ ಸಿಸ್ಟಮ್ ಸೇರಿದಂತೆ ಹಲವು ತಂತ್ರಜ್ಞಾನಗಳ ಬಳಕ ನೀಡಿರುವ ವಿಶೇಷ ಒತ್ತು ನಮ್ಮ ಯುವ ಸಮೂಹಕ್ಕೆ ಹೆಚ್ಚಿನ ನೆರವು ನೀಡಲಿದೆ ಎಂದು ಮೋದಿ ಹೇಳಿದ್ದಾರೆ.  

ಈ ಬಜೆಟ್‌ನ ಮತ್ತೊಂದು ಪ್ರಮುಖ ಧ್ಯೇಯ ಎಂದರೆ ಬಡವರ ಅಭಿವೃದ್ಧಿಯಾಗಿದೆ. ಬಡವರಿಗೆ ಮನೆ, ಶೌಚಾಲಯ, ಗ್ಯಾಸ್ ಸಂಪರ್ಕ, ಇಂಟರ್ನೆಟ್ ಸಂಪರ್ಕ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ. ಇನ್ನು ಪರ್ವತ ಪ್ರದೇಶಗಳಲ್ಲಿನ ಜನರು ಮೂಲಭೂತ ಸೌಕರ್ಯಗಳಿಲ್ಲದ ಅಲ್ಲಂದ ಪಲಾಯನ ಮಾಡಬಾರದು. ಹಿಮಾಲಯ ಉತ್ತರಖಂಡ, ಜಮ್ಮು ಕಾಶ್ಮರೀ ಸೇರಿದಂತೆ ಪರ್ವತ ಪ್ರದೇಶಗಳ ರಾಜ್ಯಗಳ ಅಭಿವೃೃದ್ಧಿಗೆ ಪರ್ವತ್ ಮಾಲಾ ಯೋಜನೆ ಜಾರಿಗೊಳಿಸಲಾಗಿದೆ.  ಸಾರಿಗೆ ವ್ಯವಸ್ಥೆ, ಅಂತರ್ಜಾಲಾ ಸಂಪರ್ಕ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ ಎಂದರು. 

 

Union Budget 2022 ಆಟೋ ಕ್ಷೇತ್ರಕ್ಕೆ ಬ್ಯಾಟರಿ ಸ್ವ್ಯಾಪ್ ನೀತಿ, ಎಲೆಕ್ಟ್ರಿಕ್ ವಾಹನ ನಿರ್ವಹಣೆ ಮತ್ತಷ್ಟು ಅಗ್ಗ!

ರೈತರ ಅಭಿವೃದ್ಧಿಗಾಗಿ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ. ಗಂಗಾ ಕಿನಾರೆ ಯೋಜನೆ ಮೂಲಕ ರೈತರ ಅಭಿವೃದ್ಧಿಯಾಗಲಿದೆ. ಗಂಗೆ ಶುಚಿತ್ವ ಜೊತೆಗೆ ರೈತರ ಕಲ್ಯಾಣಕ್ಕಾಗಿ ಉತ್ತರಖಂಡ, ಜಾರ್ಖಂಡ್, ಉತ್ತರ ಪ್ರದೇಶ,  ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಗಂಗಾ ಕಿನಾರೆ ರಾಜ್ಯಗಳಲ್ಲಿ ಗಂಗಾ ಕಿನಾರೆ ನ್ಯಾಚ್ಯುರಲ್ ಫಾರ್ಮಿಂಗ್‍‌ಗೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.

ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿನ ಗಡಿ ಭಾಗದ ಜನರ ಅಭಿವೃದ್ಧಿ ಹಾಗೂ ಅವರ ಸುರಕ್ಷತೆಗೆ ಈ ಬಜೆಟ್ ಸಹಕಾರಿಯಾಗಿದೆ ಎಂದು ಮೋದಿ ಹೇಳಿದ್ದಾರೆ. ಕಣಿವೆ ಪ್ರದೇಶಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಹಳ್ಳಿಗಳ, ಗ್ರಾಮೀಣ ಪ್ರದೇಶದ ಅಭಿವೃದ್ಧಿಯೂ ಆಗಲಿದೆ. ಸಣ್ಣ ಉದ್ಯಮ, ಕೈಗಾರಿಕೋದ್ಯಮಗಳ, MSME ಸೆಕ್ಟರ್ ಸೇರಿದಂತೆ ಎಲ್ಲಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೂ ಒತ್ತು ನೀಡಲಾಗಿದೆ ಎಂದು ಮೋದಿ ತಮ್ಮ ಬಜೆಟ್ ಮೇಲಿನ ಭಾಷಣದಲ್ಲಿ ಹೇಳಿದ್ದಾರೆ.

Union Budget 2022 ಪ್ರತಿಯೊಬ್ಬರ ಮನೆ ಕನಸಿಗೆ ಜೀವ, ಕೈಗೆಟುಕುವ ದರದಲ್ಲಿ ಸಿಗಲಿದೆ ವಸತಿ!

ಅತ್ಯುತ್ತಮ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಹಾಗೂ ಎಲ್ಲಾ ಸಹದ್ಯೋಗಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾಳೆ(ಫೆ.02) ಬಿಜೆಪಿ ಪಕ್ಷ 11 ಗಂಟೆಗೆ ಬಜೆಟ್ ಹಾಗೂ ಆತ್ಮನಿರ್ಭರ್ ಕುರಿತು ಮಾತನಾಡಲು ಅಹ್ವಾನಿಸಿದೆ. ಈ ವೇಳೆ ಬಜೆಟ್ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಮೋದಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios