1 ಕೋಟಿ ಸಬ್‌ಸ್ಕ್ರೈಬರ್ ಗಳಿಸಿದ ಪ್ರಧಾನಿ ಮೋದಿ ಯೂಟ್ಯೂಬ್ ಚಾನೆಲ್
- 1 ಕೋಟಿ ಸಬ್‌ಸ್ಕ್ರೈಬರ್ ಗಳಿಸಿದ ಪ್ರಧಾನಿ
- ಪ್ರಧಾನಿ ಯೂಟ್ಯೂಬ್ ಚಾನೆಲ್‌ಗೆ ಅತೀ ಹೆಚ್ಚು ಸಬ್‌ಸ್ಕ್ರೈಬರ್
- ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಫಸ್ಟ್
ನವದೆಹಲಿ(ಫೆ.1): ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ ಮಂಗಳವಾರ(ಫೆ.1) 1 ಕೋಟಿ ಚಂದಾದಾರನ್ನು ದಾಟಿದ್ದು ಇದು ಜಾಗತಿಕ ನಾಯಕರನ್ನು ಮೀರಿಸಿದೆ. ಪ್ರಧಾನಿ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಅಕ್ಟೋಬರ್ 2007 ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶುರು ಮಾಡಿದ್ದರು. ಇದುವರೆಗೆ ಚಾನೆಲ್ 164.31 ಕೋಟಿ ವೀಕ್ಷಕರನ್ನು ಗಳಿಸಿದೆ.
ತಂತ್ರಜ್ಞಾನವನ್ನು ಬಳಸುವಲ್ಲಿ ಬುದ್ಧಿವಂತ ಎಂದು ಪರಿಗಣಿಸಲ್ಪಟ್ಟಿರುವ ಪ್ರಧಾನಿ ಮೋದಿ, ಟ್ವಿಟಟರ್(Twitter), ಇನ್ಸ್ಟಾಗ್ರಾಮ್ (Instagram), ಯೂಟ್ಯೂಬ್ (YouTube), ಲಿಂಕ್‌ಡಿನ್(LinkedIn),ಪಿನಿಂಟೆರೆಸ್ಟ್ (Pinterest), ಫ್ಲಿಕರ್ (Flickr) ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
ಪ್ರಧಾನಿ ಮೋದಿಯವರ ಯೂಟ್ಯೂಬ್ ಚಾನೆಲ್‌ನಲ್ಲಿ ಇಲ್ಲಿಯವರೆಗಿನ ಅತ್ಯಂತ ಜನಪ್ರಿಯ ವೀಡಿಯೋ ಎಂದರೆ 'ದಿವ್ಯಾಂಗರು' ಪ್ರಧಾನಿಯನ್ನು ಕಾಶಿಯಲ್ಲಿ (Kashi) ಸ್ವಾಗತಿಸುವುದು. ಇದನ್ನು ಫೆಬ್ರವರಿ 2019 ರಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಈ ವಿಡಿಯೋವನ್ನು 70,128,707 ಜನ ವೀಕ್ಷಿಸಿದ್ದಾರೆ. ಇದಲ್ಲದೇ ನಟ ಅಕ್ಷಯ್ ಕುಮಾರ್ (Akshay Kumar) ಅವರೊಂದಿಗಿನ ಪ್ರಧಾನಿ ಸಂಭಾಷಣೆಯು ಈ ಚಾನೆಲ್‌ನ ಮತ್ತೊಂದು ಜನಪ್ರಿಯ ವೀಡಿಯೊ ಆಗಿದೆ. ಏಪ್ರಿಲ್ 2019 ರಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಇದುವರೆಗೆ 51,521,185 ಜನ ವೀಕ್ಷಿಸಿದ್ದಾರೆ. ಹಾಗೆಯೇ 2019 ರಲ್ಲಿ ಆಗಿನ ಇಸ್ರೋ ಮುಖ್ಯಸ್ಥ ಕೆ ಶಿವನ್ (K Sivan) ಅವರನ್ನು ಸಮಾಧಾನಪಡಿಸಿದ ಮತ್ತೊಂದು ವೀಡಿಯೊವನ್ನು 54,242,295 ಜನ ವೀಕ್ಷಿಸಿದ್ದಾರೆ.
ಅತೀ ಹೆಚ್ಚು ಚಂದಾದಾರನ್ನು ಹೊಂದಿರುವ ಜಾಗತಿಕ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ನಂತರ ಬ್ರೆಜಿಲ್ ಅಧ್ಯಕ್ಷ (Brazil President) ಜೈರ್ ಬೋಲ್ಸನಾರೊ (Jair Bolsonaro) ಅವರಿದ್ದು, ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಒಟ್ಟು 36 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ನಂತರದ ಸ್ಥಾನದಲ್ಲಿ 30.7 ಲಕ್ಷ ಚಂದಾದಾರರನ್ನು ಹೊಂದಿರುವ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ( Andres Manuel Lopez Obrador) ಸ್ಥಿರವಾಗಿದ್ದಾರೆ.
Foreign Policy: ವಿದೇಶ ನೀತಿಯನ್ನು ಮೋದಿ ಬದಲಿಸಿದ್ದು ಹೇಗೆ?
ದೇಶದ ಇತರ ರಾಷ್ಟ್ರೀಯ ನಾಯಕರಿಗೆ ಹೋಲಿಸಿದರೆ ಪಿಎಂ ಮೋದಿ ಅತೀಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿರುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)5.25 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಅದೇ ಪಕ್ಷದ ನಾಯಕ ಶಶಿ ತರೂರ್ (Shashi Tharoor) 4.39 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ, ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) 3.73 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಸ್ಟಾಲಿನ್ (MK Stalin) 2.12 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ (Manish Sisodia) ಯೂಟ್ಯೂಬ್‌ನಲ್ಲಿ 1.37 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ.
5 States Election: ಉತ್ತರ ಪ್ರದೇಶಕ್ಕೆ ಮೋದಿ ಎಂಟ್ರಿ, ಬಿಜೆಪಿಗೆ ಗಜ ಬಲ
ಪ್ರಧಾನಿ ಮೋದಿ ಕೇವಲ ಯೂಟ್ಯೂಬ್ ಮಾತ್ರವಲ್ಲದೇ ಇತರ ಸಾಮಾಜಿಕ ಜಾಲತಾಣಗಳಲ್ಲೂ ದೊಡ್ಡ ಮಟ್ಟದ ಅನುಯಾಯಿಗಳನ್ನು ಹೊಂದಿದ್ದಾರೆ. ಟ್ವಿಟರ್‌ನಲ್ಲಿ 7.5 ಕೋಟಿಗೂ ಹೆಚ್ಚು ಅನುಯಾಯಿಗಳು ಪ್ರಧಾನಿಗಿದ್ದು, ಇವರ ಫೇಸ್‌ಬುಕ್ ಪೇಜ್‌ನ್ನು 4 ಕೋಟಿಗೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.