1,000 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ 44ನೇ ಚೆಸ್ ಒಲಿಂಪಿಯಾಡ್ ಉದ್ಘಾಟನೆಗೆ ಪ್ರಧಾನಿ ಮೋದಿ ಇದೇ 28 ಹಾಗೂ 29 ರಂದು ಗುಜರಾತ್ ಹಾಗೂ ತಮಿಳುನಾಡು  ಪ್ರವಾಸ ಮಾಡಲಿದ್ದಾರೆ.

ನವದೆಹಲಿ(ಜು.26): ಪ್ರಧಾನಿ ನರೇಂದ್ರ ಮೋದಿ ಜುಲೈ 28 ಹಾಗೂ 29 ರಂದು ಗುಜರಾತ್ ಹಾಗೂ ತಮಿಳುನಾಡು ಪ್ರವಾಸ ಕೈಗೊಳ್ಳಲಿದ್ದಾರೆ. 28 ರಂದು ಮಧ್ಯಾಹ್ನ 12 ಗಂಟೆಗೆ ಗುಜರಾತ್‌ನ ಸಬರ್‌ಕಾಂತ್‌ನ ಗಧೋಡದಲ್ಲಿ ಸಬರ್ ಡೈರಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಅದೇ ದಿನ ಸಂಜೆ 6 ಗಂಟೆಗೆ ಮೋದಿ, ಚೆನ್ನೈನಲ್ಲಿ ಆಯೋಜಿಸಲಾಗಿರುವ 44ನೇ ಚೆಸ್ ಒಲಿಂಪಿಯಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜುಲೈ 29ರ ಬೆಳಗ್ಗೆ 10 ಗಂಟೆಗೆ ಅಣ್ಣಾ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಮೋದಿ, ಗುಜರಾತ್‌ನ ಗಾಂಧಿನಗರಕ್ಕೆ ಪ್ರಯಾಣ ಮಾಡಲಿದ್ದಾರೆ. ಗಾಂಧಿನಗರದಲ್ಲಿ ಗಿಫ್ಟಿ ಸಿಟಿ ಯೋಜನೆಯಡಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಗ್ರಾಮೀಣ ಆರ್ಥಿಕತೆ ಮೇಲಕ್ಕೆತ್ತಲು ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲೂ ಕೃಷಿ, ಹೈನುಗಾರಿಕೆ, ಮತ್ಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳನ್ನು ಲಾಭದಾಯಕ ಮಾಡಲು ಕೇಂದ್ರ ಸರ್ಕಾರ ಅವಿರತ ಶ್ರಮಿಸುತ್ತಿದೆ. ಇದರ ಅಂಗವಾಗಿ ಗುಜರಾತ್‌ನ ಸಬರ್ ಡೈರಿಯಲ್ಲಿ 1,000 ಕೋಟಿ ರೂಪಾಯಿ ಮೌಲ್ಯದ ಹಲವು ಯೋಜನೆಗಳಿಗೆ ಮೋದಿ ಚಾಲನೆ ನೀಡುತ್ತಿದ್ದಾರೆ. ಈ ಯೋಜನೆಗಳು ಸ್ಥಳೀಯ ರೈತರು, ಹೈನುಗಾರಿಕೆಯನ್ನು ಸಶಕ್ತಗೊಳಿಸಲಿದೆ. ಇದು ನೇರವಾಗಿ ಗ್ರಾಮೀಣ ಆರ್ಥಿಕತೆ ವೇಗ ಹೆಚ್ಚಿಸಲಿದೆ. ಸಬರ್ ಡೈರಿಯಲ್ಲಿ 120 ಟನ್ ಸಾಮರ್ಥ್ಯದ ಪೌಡರ್ ಪ್ಲಾಂಟ್ ಉದ್ಘಾಟಿಸಲಿದ್ದಾರೆ. ಈ ಘಟಕ 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ಘಟಕ ಅಂತಾರಾಷ್ಟ್ರೀಯ ಗುಣಮಟ್ಟ ಹಾಗೂ ಮಾನದಂಡದಲ್ಲಿ ನಿರ್ಮಾಣಗೊಂಡಿದೆ. ಪ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಮಿಶಿನರಿಗಳನ್ನು ಅಳವಡಿಸಲಾಗಿದ್ದು, ಶುಚಿತ್ವ, ಹಾಗೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರ ಕರವಸ್ತ್ರ ಹೆಕ್ಕಿಕೊಟ್ಟ ಪ್ರಧಾನಿ ಮೋದಿ!

ಸಬರ್ ಡೈರಿಯಲ್ಲಿ ಪ್ರಧಾನಿ ಹಾಲು ಪ್ಯಾಕಿಂಗ್ ಘಟಕ ಉದ್ಘಾಟಿಸಲಿದ್ದಾರೆ. ಪ್ರತಿ ದಿನ 3 ಲಕ್ಷ ಲೀಟರ್ ಹಾಲು ಪ್ಯಾಕ್ ಮಾಡುವ ಸಾಮರ್ಥ್ಯ ಈ ಘಟಕಕ್ಕಿದೆ. 125 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಘಟಕ ನಿರ್ಮಾಣಗೊಂಂಡಿದೆ. ಇದರ ಜೊತೆಗೆ ಸಬರ್ ಚೀಸ್, ಚೆದ್ದರ್ ಚೀಸ್ ಸೇರಿದಂತೆ ಹಾಲಿನ ಉತ್ಪನ್ನಗಳ ಹಲವು ಘಟಕಗಳಿಗೆ ಶಿಲನ್ಯಾಸ ನೆರವೇರಿಸಲಿದ್ದಾರೆ. ಗುಜರಾತ್ ಅಂತಾರಾಷ್ಟ್ರೀಯ ಟೆಕ್ ಸಿಟಿ(GIFT city)IFSCA ಕೇಂದ್ರ, IFSCs ಕೇಂದ್ರ ಕಟ್ಟಗಳ ಶಿಲನ್ಯಾಸ ನೆರವೇರಿಸಲಿದ್ದಾರೆ.

ಇದರ ಜೊತೆಗೆ ಅಂತಾರಾಷ್ಟ್ರೀಯ ಬುಲಿಯನ್ ಎಕ್ಸ್‌ಚೇಂಜ್(IIBX)ಆರಂಭಿಸಲಿದ್ದಾರೆ. ಇದು ಭಾರತದ ಮೊದಲ ಅಂತಾರಾಷ್ಟ್ರೀಯ ಬುಲಿಯನ್ ಎಕ್ಸ್‌ಚೇಂಜ್ ಘಟಕ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. IIBXನಲ್ಲಿ ಚಿನ್ನದ ಆರ್ಥಿಕತೆಗೆ ಪ್ರಚೋದನೆ ನೀಡುವುದರ ಜೊತೆಗೆ ಸಮರ್ಥ ಬೆಲೆ ಅನ್ವೇಷಣೆಯನ್ನು ಸುಗಮಗೊಳಿಸುತ್ತದೆ. ಇದೇ ವೇಳೆ ಮೋದಿ NSE IFSC-SGX ಕನೆಕ್ಟ್‌ಗೆ ಚಾಲನೆ ನೀಡಲಿದ್ದಾರೆ. ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ (IFSC) ಮತ್ತು ಸಿಂಗಾಪುರ್ ಎಕ್ಸ್ಚೇಂಜ್ ಲಿಮಿಟೆಡ್ (SGX) ನಲ್ಲಿ NSEಅಂಗಸಂಸ್ಥೆ ಕೇಂದ್ರವಾಗಿದಿದೆ. ಈ ಮೂಲಕ ಸಿಂಗಾಪುರ್ ಎಕ್ಸ್‌ಚೇಂಜ್‌ನ ಸದಸ್ಯರು ಇರಿಸಿರುವ NIFTY ಉತ್ಪನ್ನಗಳ ಮೇಲಿನ ಎಲ್ಲಾ ಆರ್ಡರ್‌ಗಳನ್ನು NSE-IFSC ಆರ್ಡರ್ ಮ್ಯಾಚಿಂಗ್ ಮತ್ತು ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗೆ ರವಾನಿಸಲಾಗುತ್ತದೆ. 

ಚೆನ್ನೈನಲ್ಲಿ ಮೋದಿ 44ನೇ ಚೆಸ್ ಒಲಿಂಪಿಯಾಡ್ ಉದ್ಘಾಟನೆ ಮಾಡಲಿದ್ದಾರೆ. ಚೆನ್ನೈನ ಜೆಎಲ್‌ಎನ್ ಇಂಡೋರ್ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜೂನ್ 19, 2022 ರಂದು ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್‌ಗೆ ಮೋದಿ ಚಾಲನೆ ನೀಡಿದ್ದರು. 

ಬಿಜೆಪಿ ರಾಜ್ಯಗಳಿಗೆ ಮೋದಿ ಚುರುಕು: ಎಲ್ಲರಿಗೂ ಸೌಲಭ್ಯ ತಲುಪಿಸಿ

44ನೇ ಚೆಸ್ ಒಲಿಂಪಿಯಾಡ್ ಜುಲೈ 28 ರಂದು ಭವ್ಯ ಉದ್ಘಾಟನೆಗೆ ಸಾಕ್ಷಿಯಾಗಲಿದ್ದು, ಚೆನ್ನೈನ ಜೆಎಲ್‌ಎನ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಉಡಾವಣಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಇದನ್ನು ಉದ್ಘಾಟಿಸಲಿದ್ದಾರೆ. ಪ್ರತಿಷ್ಠಿತ ಸ್ಪರ್ಧೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಮತ್ತು 30 ವರ್ಷಗಳ ನಂತರ ಏಷ್ಯಾದಲ್ಲಿ ಆಯೋಜಿಸಲಾಗುತ್ತಿದೆ 187 ದೇಶಗಲ್ಲಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದೆ.