ಯಾಸ್ ಚಂಡಮಾರುತಕ್ಕೆ ತತ್ತರಿಸಿದ ಒಡಿಶಾ, ಬಂಗಾಳಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ!
- ಯಾಸ್ ಅಬ್ಬರಕ್ಕೆ ನಲುಗಿದ ಒಡಿಶಾ, ಪಶ್ಚಿಮ ಬಂಗಾಳ
- ಒಡಿಶಾ-ಬಂಗಾಳಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ, ವೈಮಾನಿಕ ಸಮೀಕ್ಷೆ
- ಸ್ಥಿತಿ-ಗತಿ ಸಭೆ ಬಳಿಕ ಹಾನಿಗೊಳಗಾದ ಪ್ರದೇಶದಲ್ಲಿ ಸಮೀಕ್ಷೆ
ನವದೆಹಲಿ(ಮೇ.27): ತೌಕ್ಟೆ ಚಂಡಮಾರುತದ ಬೆನ್ನಲ್ಲೇ ಇದೀಗ ಭಾರತದಲ್ಲಿ ಯಾಸ್ ಚಂಡಮಾರುತದ ಅಬ್ಬರ ಜೋರಾಗಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಯಾಸ್ ಚಂಡಮಾರುತಕ್ಕೆ ತತ್ತರಿಸಿದೆ. ಒಡಿಶಾದಲ್ಲಿ ಸುಮಾರು 150 ಕಿ.ಮೀ ವೇಗದಲ್ಲಿ ಯಾಸ್ ಅಪ್ಪಳಿಸಿದೆ. ಇನ್ನು ಬಂಗಾಳದಲ್ಲಿ 3 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಯಾಸ್ ಹಾನಿ ಮಾಡಿದೆ. ಯಾಸ್ ಅಬ್ಬರಕ್ಕೆ ನಲುಗಿದ ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ(ಮೇ.27) ಭೇಟಿ ನೀಡಿಲಿದ್ದಾರೆ.
ಯಾಸ್ ಆರ್ಭಟ ಆರಂಭ: ಒಡಿಶಾ, ಬಂಗಾಳದಲ್ಲಿ ಭಾರೀ ಗಾಳಿ, ಮಳೆ!.
ದೆಹೆಲಿಯಿಂದ ನಾಳೆ ನೇರವಾಗಿ ಒಡಿಶಾದ ಭುವನೇಶ್ವರಕ್ಕೆ ಮೋದಿ ಆಗಮಸಲಿದ್ದಾರೆ. ಬಳಿಕ ಯಾಸ್ ಚಂಡಮಾರುತ ಪರಿಸ್ಥಿತಿ ಅವಲೋಕನ ಸಭೆ ನಡೆಸಲಿದ್ದಾರೆ. ಬಳಿಕ ಯಾಸ್ ಅಬ್ಬರಕ್ಕೆ ನಲುಗಿದ ಪ್ರದೇಶಗಳಲ್ಲಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಾಲಸೂರ್, ಭದ್ರಾಕ್, ಹಾಗೂ ಪುರ್ಬಾ ಮೆದಿನಪುರ್ ಪ್ರದೇಶಗಳಲ್ಲಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಒಡಿಶಾದಲ್ಲಿ ಯಾಸ್ ಚಂಡಮಾರುತದಿಂದ ಉಂಟಾದ ನಷ್ಟದ ವಿವರಗಳನ್ನು ಮೋದಿ ಪಡೆಯಲಿದ್ದಾರೆ. ಜೊತೆಗೆ ಪರಿಹಾರ ಕಾರ್ಯಗಳ ಕುರಿತು ಮಹತ್ವದ ಸೂಚನೆ ನೀಡಲಿದ್ದಾರೆ. ಒಡಿಶಾ ಬಳಿಕ ಮೋದಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ. ಬಂಗಾಳದಲ್ಲಿ ಯಾಸ್ ಪರಿಸ್ಥಿತಿ ಅವಲೋಕನ ಸಭೆ ನಡೆಸಲಿದ್ದಾರೆ.
ಯಾಸ್ ರುದ್ರ ನರ್ತನ: ಹಾರಿ ಹೋಯ್ತು ಮನೆ ಛಾವಣಿ, ಹಳ್ಳಿಗಳೆಲ್ಲಾ ಸಮುದ್ರಮಯ
ಯಾಸ್ ಚಂಡಮಾರುತ ಕಾರಣ ಪಶ್ಚಿಮ ಬಂಗಾಳದಲ್ಲಿ 15 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇತ್ತ ಒಡಿಶಾದಲ್ಲಿ 5.8 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಸುಂಟರಗಾಳಿ ಸಹಿತ ಮಳೆ ಮುಂದುವರಿದಿದೆ. ಹಲವು ಹಳ್ಳಿಗಳು ಮುಳುಗಡೆಯಾಗಿದೆ.