ಯಾಸ್ ಆರ್ಭಟ ಆರಂಭ: ಒಡಿಶಾ, ಬಂಗಾಳದಲ್ಲಿ ಭಾರೀ ಗಾಳಿ, ಮಳೆ!

* ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಯಾಸ್‌ ಅಬ್ಬರ ಆರಮಭ, ಲಕ್ಷಾಂತರ ಜನರ ಸ್ಥಳಾಂತರ

* ಯಾಸ್‌ ಚಮಡಮಾರುತ ಪರಿಣಾಮ ಭಾರೀ ಭೂಕುಸಿತ

* ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿ ಪ್ರದೇಶದಲ್ಲಿ ಭಾರೀ ಗಾಳಿ, ಮಳೆ ಆರಂಭ

Cyclone Yaas Lakhs Evacuated In Bengal Odisha Ahead Of Cyclone Yaas Landfall pod

ಕೋಲ್ಕತ್ತಾ(ಮೇ.26): ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದಲ್ಲಿ ಯಾಸ್ ಚಂಡಮಾರುತದ ಆರ್ಭಟ ಆರಂಭವಾಗಿದೆ. ಭಾರೀ ಗಾಳಿ ಮಳೆಯಾಗುತ್ತಿದ್ದು, ಬುಧವಾರ ಮಧ್ಯಾಹ್ನದ ಬಳಿಕ ಇದರ ತೀವ್ರತೆ ಮತ್ತಷ್ಟು ಹೆಚ್ಚಲಿದೆ. ಇನ್ನು ಕೆಲವೆಡೆ ಯಾಸ್‌ ಚಮಡಮಾರುತ ಪರಿಣಾಮ ಭಾರೀ ಭೂಕುಸಿತವಾಗಿದೆ.

"

ಬಲ ಚಂಡಮಾರುತ ಯಾಸ್ ಒಡಿಶಾದ ಭದ್ರಕ್ ಜಿಲ್ಲೆಯ ಧಾಮ್ರ ಬಂದರು ಸಮೀಪದಲ್ಲಿ ಬುಧವಾರ ಮಧ್ಯಾಹ್ನ ಅಪ್ಪಳಿಸಲಿದ್ದು, ರಾತ್ರಿ ವೇಳೆಗೆ ಜಾರ್ಕಂಡ್‌ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದೆ. ಈ ಮಧ್ಯೆ ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿ ಪ್ರದೇಶದಲ್ಲಿ ಭಾರೀ ಗಾಳಿ, ಮಳೆ ಆರಂಭವಾಗಿದೆ.

ಒಡಿಶಾ ತೀರಕ್ಕೆ ಇಂದು ಅಪ್ಪಳಿಸಲಿದೆ ಸೈಕ್ಲೋನ್‌: 185 ಕಿ.ಮೀ. ಶರವೇಗದಲ್ಲಿ ದಾಳಿ!

ಯಾಸ್ ಚಂಡಮಾರುತದ ಪರಿಣಾಮ ಪಶ್ಚಿಮಬಂಗಾಳದ ಪೂರ್ವ ಮಿಡ್ನಾಪುರ್ ದ ನ್ಯೂ ಡಿಘಾ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಈ ಹಿನ್ನೆಲೆ ಜನವಸತಿ ಇರುವ ಸ್ಥಳಕ್ಕೆ ನೀರು ನುಗ್ಗಿರುವುದಾಗಿ ವರದಿ ವಿವರಿಸಿದೆ. ಒಡಿಶಾದ ಬಾಲಾಸೋರ್ ನಲ್ಲಿ ಪ್ರಬಲ ಯಾಸ್ ಚಂಡಮಾರುತ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾಸ್ ಚಂಡಮಾರುತ ಮೂರರಿಂದ ನಾಲ್ಕು ಗಂಟೆಗಳ ಕಾಲ ಅಬ್ಬರಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್ ಡಿಆರ್ ಎಫ್ ತಂಡ ಸನ್ನದ್ಧವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಕ್ಕಿದೆಯಾದ ‘ಯಾಸ್‌’ಚಂಡಮಾರುತ : ಹವಾಮಾನ ಇಲಾಖೆ ಸ್ಪಷ್ಟನೆ

ಯಾಸ್ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಡಿಶಾ ಮತ್ತು ಬಂಗಾಳ ಕರಾವಳಿ ಪ್ರದೇಶದಿಂದ ಸುಮಾರು 20 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಯಾಸ್ ಚಂಡಮಾರುತ ಒರಿಸ್ಸಾದಿಂದ 40 ಕಿ.ಮೀ. ದೂರದಲ್ಲಿದೆ. ಒರಿಸ್ಸಾ ಒಂದರಲ್ಲೇ 10 ಲಕ್ಷಕ್ಕೂ ಹೆಚ್ಚು ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ಅತ್ತ ಒರಿಸ್ಸಾದ 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಿಸಲಾಗಿದೆ. ಈಗಾಗಲೇ 149 ಎನ್​ಡಿಆರ್​ಎಫ್​ ತಂಡಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ.

Latest Videos
Follow Us:
Download App:
  • android
  • ios