Asianet Suvarna News Asianet Suvarna News

ಮಾರ್ಚ್ 4-5ಕ್ಕೆ ದಾಖಲೆಯ 1.09 ಲಕ್ಷ ಕೋಟಿ ರೂ ಅಭಿವೃದ್ಧಿ ಯೋಜನೆಗೆ ಮೋದಿ ಚಾಲನೆ!

ಮಾರ್ಚ್ 4-6ರಂದು ಪ್ರಧಾನಿ ಮೋದಿ ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೇರವೇರಿಸಲಿದ್ದಾರೆ. ದಾಖಲೆಯ 1.9 ಲಕ್ಷ ಕೋಟಿ ಮೌಲ್ಯದ ಅಭಿವದ್ಧಿ ಯೋಜನೆಗಳು ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೊಳ್ಳಲಿದೆ.

PM Modi to visit 5 state on march 4 and 5 to inaugurate dedicate lay foundation stone of projects ckm
Author
First Published Mar 3, 2024, 8:55 PM IST

ನವದೆಹಲಿ(ಮಾ.03) ವಿದ್ಯುತ್ ವಲಯ, ರಸ್ತೆ, ರೈಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಫಾಸ್ಟ್ ಬ್ರೀಡರ್ ರಿಯಾಕ್ಟರ್ ನ ಕೋರ್ ಲೋಡಿಂಗ್ ಸೇರಿದಂತೆ ಬರೋಬ್ಬರಿ 1.09 ಲಕ್ಷ ರೂಪಾಯಿ ಮೌಲ್ಯದ ಅಭಿದ್ಧಿ ಯೋಜನೆ ಉದ್ಘಾಟನೆ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ. ಇದಕ್ಕಾಗಿ ಮಾರ್ಚ್ 4 ಹಾಗೂ 5 ರಂದು ಮೋದಿ ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಮೋದಿ ಭೇಟಿ ನೀಡುತ್ತಿದ್ದಾರೆ. 

ಮಾರ್ಚ್ 4ರಂದು ಬೆಳಗ್ಗೆ  10.30ಕ್ಕೆ ಪ್ರಧಾನಮಂತ್ರಿಯವರು ತೆಲಂಗಾಣದ ಅದಿಲಾಬಾದ್ ನಲ್ಲಿ 56,000 ಕೋಟಿ ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ  3.30ಕ್ಕೆ ಪ್ರಧಾನಮಂತ್ರಿಯವರು ತಮಿಳುನಾಡಿನ ಕಲ್ಪಕ್ಕಂನಲ್ಲಿರುವ ಭವಿನಿಗೆ ಭೇಟಿ ನೀಡಲಿದ್ದಾರೆ.

ಮೋದಿ ಹಿಂದೂ ಅಲ್ಲ, ಪ್ರಧಾನಿ ಟೀಕಿಸಲು ತಾಯಿ ಹೀರಾಬೆನ್ ನಿಧನ ಬಳಸಿಕೊಂಡ ಲಾಲೂ ಯಾದವ್!

ಮಾರ್ಚ್ 5 ರಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನಮಂತ್ರಿಯವರು ಹೈದರಾಬಾದ್ ನಲ್ಲಿ ನಾಗರಿಕ ವಿಮಾನಯಾನ ಸಂಶೋಧನಾ ಸಂಸ್ಥೆ (ಸಿಎಆರ್ ಒ) ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಪ್ರಧಾನಮಂತ್ರಿಯವರು ತೆಲಂಗಾಣದ ಸಂಗಾರೆಡ್ಡಿಯಲ್ಲಿ 6,800 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:30 ರ ಸುಮಾರಿಗೆ ಪ್ರಧಾನಮಂತ್ರಿಯವರು ಒಡಿಶಾದ ಜಜ್ಪುರದ ಚಂಡಿಖೋಲೆಯಲ್ಲಿ 19,600 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮಾರ್ಚ್ 6 ರಂದು ಬೆಳಿಗ್ಗೆ 10:15 ಕ್ಕೆ ಪ್ರಧಾನಮಂತ್ರಿಯವರು ಕೋಲ್ಕತ್ತಾದಲ್ಲಿ 15,400 ಕೋಟಿ ರೂ.ಗಳ ಬಹು ಸಂಪರ್ಕ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ, ಮಧ್ಯಾಹ್ನ 3:30 ರ ಸುಮಾರಿಗೆ ಪ್ರಧಾನಮಂತ್ರಿಯವರು ಬಿಹಾರದ ಬೆಟ್ಟಿಯಾದಲ್ಲಿ ಸುಮಾರು 8,700 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ಸಮರ್ಪಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ತೆಲಂಗಾಣದ ಪೆದ್ದಪಲ್ಲಿಯಲ್ಲಿ ಎನ್ ಟಿಪಿಸಿಯ 800 ಮೆಗಾವ್ಯಾಟ್ (ಘಟಕ-2) ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್ ಯೋಜನೆಯನ್ನು ಸಮರ್ಪಿಸಲಿದ್ದಾರೆ. ಅಲ್ಟ್ರಾ-ಸೂಪರ್ ಕ್ರಿಟಿಕಲ್ ತಂತ್ರಜ್ಞಾನದ ಆಧಾರದ ಮೇಲೆ, ಈ ಯೋಜನೆಯು ತೆಲಂಗಾಣಕ್ಕೆ 85% ವಿದ್ಯುತ್ ಅನ್ನು ಪೂರೈಸುತ್ತದೆ ಮತ್ತು ಭಾರತದ ಎನ್ ಟಿಪಿಸಿಯ ಎಲ್ಲಾ ವಿದ್ಯುತ್ ಕೇಂದ್ರಗಳಲ್ಲಿ ಸುಮಾರು 42% ರಷ್ಟು ಹೆಚ್ಚಿನ ವಿದ್ಯುತ್ ಉತ್ಪಾದನಾ ದಕ್ಷತೆಯನ್ನು ಹೊಂದಿರುತ್ತದೆ. ಇದೇ ವೇಳೆ ಜಾರ್ಖಂಡ್ ನ ಚತ್ರಾದಲ್ಲಿ ಉತ್ತರ ಕರಣ್ ಪುರ ಸೂಪರ್ ಥರ್ಮಲ್ ವಿದ್ಯುತ್ ಯೋಜನೆಯ 660 ಮೆಗಾವ್ಯಾಟ್ (ಘಟಕ-2) ಅನ್ನು ಸಮರ್ಪಿಸಲಿದ್ದಾರೆ. ಇದು ದೇಶದ ಮೊದಲ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ರಾಜೆಕ್ಟ್ ಆಗಿದ್ದು, ಇಷ್ಟು ದೊಡ್ಡ ಪ್ರಮಾಣದ ಏರ್ ಕೂಲ್ಡ್ ಕಂಡೆನ್ಸರ್ (ಎಸಿಸಿ) ಯೊಂದಿಗೆ ರೂಪಿಸಲಾಗಿದೆ.

ಬಿಜೆಪಿ ಪಕ್ಷ ನಿಧಿಗೆ 2,000 ರೂ ಡೋನೇಶನ್ ನೀಡಿದ ಮೋದಿ, ದೇಶ ಕಟ್ಟಲು ದೇಣಿಗೆ ಸಂದೇಶ ಸಾರಿದ ಪ್ರಧಾನಿ!

ತ್ತರ ಪ್ರದೇಶದ ಸೋನ್ ಭದ್ರದಲ್ಲಿ ಸಿಂಗ್ರೌಲಿ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ನ ಹಂತ -3 (2x800 ಮೆಗಾವ್ಯಾಟ್) ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಛತ್ತೀಸ್ಗಢದ ರಾಯ್ಗಢದ  ಲಾರಾದಲ್ಲಿರುವ 4 ಜಿ ಎಥೆನಾಲ್ ಸ್ಥಾವರಕ್ಕೆ ಫ್ಲೂ ಗ್ಯಾಸ್ CO2; ಆಂಧ್ರಪ್ರದೇಶದ ವಿಶಾಖಪಟ್ಟಣಂನ ಸಿಂಹಾದ್ರಿಯಲ್ಲಿರುವ ಹಸಿರು ಹೈಡ್ರೋಜನ್ ಸ್ಥಾವರಕ್ಕೆ ಸಮುದ್ರದ ನೀರು; ಮತ್ತು  ಛತ್ತೀಸ್ ಗಢದ ಕೊರ್ಬಾದಲ್ಲಿ ಫ್ಲೈ ಬೂದಿ ಆಧಾರಿತ ಎಫ್ ಎಎಲ್ ಜಿ ಅಗ್ರಿಗೇಟ್ ಘಟಕ. ಪ್ರಧಾನಮಂತ್ರಿಯವರು ಏಳು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಒಂದು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ರಾಷ್ಟ್ರೀಯ ಗ್ರಿಡ್ ಅನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
 

Follow Us:
Download App:
  • android
  • ios