ಪ್ರಧಾನಿ ನರೇಂದ್ರ ಮೋದಿ ಹಿಂದೂ ಅಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಈ ಹೇಳಿಕೆಯನ್ನು ಸಮರ್ಥಿಸಲು ಮೋದಿ ತಾಯಿ ಹೀರಾಬೆನ್ ನಿಧನ ಉಲ್ಲೇಖಿಸಿ ಟೀಕಿಸಿದ್ದಾರೆ. ಇದೀಗ ಲಾಲೂ ಹೇಳಿಕೆಗೆ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಪಾಟ್ನಾ(ಮಾ.03) ಪ್ರಧಾನಿ ನರೇಂದ್ರ ಮೋದಿ ಹಿಂದೂ ಅಲ್ಲ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.ತಾಯಿ ಹೀರಾಬೆನ್ ನಿಧನರಾದಾಗ ಪ್ರಧಾನಿ ಮೋದಿ ಕೇಶ ಮುಂಡನ ಮಾಡಿಸಿಲ್ಲ. ಹೀಗಾಗಿ ಮೋದಿ ಹಿಂದೂ ಅಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ. ಮೋದಿ ಟೀಕಿಸಲು ಹೋದ ಲಾಲೂ ಪ್ರಸಾದ್ ಯಾದವ್, ಮೋದಿ ತಾಯಿ ನಿಧನವನ್ನು ರಾಜಕೀಯ ಎಳೆದು ತಂದು ವಿವಾದ ಎಬ್ಬಿಸಿದ್ದಾರೆ.

ಇಂಡಿಯಾ ಮೈತ್ರಿ ಕೂಟ ಪಕ್ಷಗಳು ಪಾಟ್ನಾದ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಲಾಲು ಪ್ರಸಾದ್ ಯಾದವ್, ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಮೋದಿ ಹಿಂದೂ ಆಗಿದ್ದರೆ, ಅವರ ತಾಯಿ ನಿಧನರಾದಾಗ ಕೇಶ ಮುಂಡನ ಮಾಡಿಸಿಲ್ಲ ಯಾಕೆ? ಎಂದು ಲಾಲು ಪ್ರಸಾದ್ ಯಾದವ್ ಪ್ರಶ್ನಿಸಿದ್ದಾರೆ. 

ಬಿಜೆಪಿ ಪಕ್ಷ ನಿಧಿಗೆ 2,000 ರೂ ಡೋನೇಶನ್ ನೀಡಿದ ಮೋದಿ, ದೇಶ ಕಟ್ಟಲು ದೇಣಿಗೆ ಸಂದೇಶ ಸಾರಿದ ಪ್ರಧಾನಿ!

ಪ್ರಧಾನಿ ಮೋದಿ ಪರಿವಾರವಾದ, ಕುಟುಂಬ ರಾಜಕಾರಣವನ್ನು ಟೀಕಿಸುತ್ತಿದ್ದಾರೆ. ಮೋದಿಗೆ ಕುಟುಂಬವಿಲ್ಲ ಎಂದು ಹೀಗೆ ಮಾಡುತ್ತಿದ್ದಾರೆ. ಮೋದಿಗೆ ಯಾಕೆ ಮಕ್ಕಳಿಲ್ಲ, ಮೋದಿ ಹಿಂದೂವೇ ಅಲ್ಲ ಎಂದು ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ. ಲಾಲೂ ಪ್ರಸಾದ್ ಯಾದವ್ ಹೇಳಿಕೆಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವ್ಯಕ್ತವಾಗಿದೆ.

ಜನ ವಿಶ್ವಾಸ ರ್ಯಾಲಿಯಲ್ಲಿ ಮಾತನಾಡಿದ ತೇಜಸ್ವಿ ಯಾದವ್, ಬಿಜೆಪಿ ವಿರುದ್ಧ ಹರಿಹಾಯಿದ್ದಾರೆ. ಮೋದಿ ಇತ್ತೀಚೆಗೆ ಲಾಲೂ ಪ್ರಸಾದ್ ಯಾದವ್ ಕುರಿತು ಟೀಕೆ ಮಾಡಿದ್ದರು. ಲಾಲೂ ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದ ವೇಳೆ 90,000 ಕೋಟಿ ರೂಪಾಯಿ ಆದಾಯ ತಂದುಕೊಟ್ಟಿದ್ದಾರೆ. ಆದರೆ ಉತ್ತಮ ಕೆಲಸಗಳು ಮೋದಿಗೆ ಕಾಣುವುದಿಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಮೈತ್ರಿ ಮುರಿದು ಬೆಜೆಪಿ ಜೊತೆ ಸೇರಿ ನಿತೀಶ್ ಕುಮಾರ್ ಸರ್ಕಾರ ರಚಿಸಿದ ಬಳಿಕ ಆರ್‌ಜೆಡಿ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ತಮ್ಮ ಮೈತ್ರಿ ಸರ್ಕಾರ ಪತನದ ಬಳಿಕ ತಮ್ಮ ಪಕ್ಷದ ಬಲವನ್ನು ಹೆಚ್ಚಿಸಲು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಬಿಹಾರದಾದ್ಯಂತ ‘ಜನ ವಿಶ್ವಾಸ ಯಾತ್ರೆ’ಯನ್ನು ಕೈಗೊಂಡಿದ್ದಾರೆ. 11 ದಿನಗಳ ಕಾಲ ಈ ಯಾತ್ರೆಯಡಿ ತೇಜಸ್ವಿ ಅವರು ರಾಜ್ಯದ ಎಲ್ಲಾ 38 ಜಿಲ್ಲೆಗಳಾದ್ಯಂತ ಸಂಚರಿಸಲಿದ್ದಾರೆ. ಈ ಬಗ್ಗೆ ತಿಳಿಸಿದ ಅವರು ‘ಬಿಹಾರದ ಜನರು ಆರ್‌ಜೆಡಿ ಮೇಲೆ ತಮ್ಮ ಪ್ರೀತಿಯನ್ನು ಧಾರೆಯೆರೆದಿದ್ದಾರೆ. ಅವರ ಸೇವೆ ಮಾಡಲು ನಮಗೆ ಅವಕಾಶ ನೀಡುವ ಸಲುವಾಗಿ ನಮ್ಮನ್ನು ಇನ್ನಷ್ಟು ಬಲವಾಗಿ ಬೆಂಬಲಿಸುವಂತೆ ನಾನು ರಾಜ್ಯದ ಜನರಲ್ಲಿ ಒತ್ತಾಯಿಸಲಿದ್ದೇನೆ’ ಎಂದರು.

ಬಿಜೆಪಿ ಪಟ್ಟಿಯಿಂದ ಹರ್ಷ ವರ್ಧನ್ ಔಟ್, ನಿವೃತ್ತಿ ಘೋಷಿಸಿ ಡಾಕ್ಟರ್ ವೃತ್ತಿಗೆ ಮರಳಿದ ಸಂಸದ!