ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ವರ್ಚುವಲ್ ಸಭೆ ಜಪಾನ್, ಆಸ್ಟ್ರೇಲಿಯಾ, ಇಂಡೋನೇಷಿಯಾ ಸೇರಿದಂತೆ ವಿಶ್ವ ನಾಯಕರು ಭಾಗಿ ಕೊರೋನಾ ಕಾರಣ ಸತತ 2ನೇ ಬಾರಿಗೆ ವರ್ಚುವಲ್ ಸಭೆ

ನವದೆಹಲಿ(ಜ.16): ಕೊರೋನಾ ವೈರಸ್ ಕಾರಣ ಸತತ ಎರಡನೇ ಬಾರಿಗೆ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ಸಭೆ(World Economic Forum’s Davos Agenda) ವರ್ಚುವಲ್ ಆಗಿ ನಡೆಯುತ್ತಿದೆ. ಜನವರಿ 17 ರಿಂದ 21ರ ವರೆಗೆ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ಸಭೆ ನಡೆಯಲಿದೆ. ಉದ್ಘಾಟನಾ ದಿನ(ಜ.17) ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ವರ್ಚುವಲ್ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.

ಪ್ರಸ್ತುತ ಜಗತ್ತು ಎದುರಿಸುತ್ತಿರುವ ಸವಾಲುಗಳು, ಪರಿಹಾರ ಸೂತ್ರ ಕುರಿತು ವಿಶ್ವ ನಾಯಕರು ಚರ್ಚಿಸಲಿದ್ದಾರೆ. ಕೊರೋನಾದಿಂದ(Coronavirus) ಎದುರಾಗಿರುವ ಹೊಸ ಸಮಸ್ಯೆಗಳು, ಆರೋಗ್ಯ, ಆರ್ಥಿಕ, ಭದ್ರತೆ ಸೇರಿದಂತೆ ಹಲವು ವಿಚಾರಗಳು ಈ ಸಭೆಯಲ್ಲಿ ಚರ್ಚೆಯಾಗಲಿದೆ. 

National Startup Day 2022: ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳ ಸುವರ್ಣಯುಗ ಆರಂಭ: ಪ್ರಧಾನಿ ಮೋದಿ!

ವಿಶ್ವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬಳಿಕ ಜಪಾನ್ ಪ್ರಧಾನ ಮಂತ್ರಿ ಕಿಶಿಡಾ ಫ್ಯೂಮಿಯೋ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ. ಇನ್ನು ಈ ವಿಶೇಷ ಸಭೆಯಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುವಾ ವಾನ್‌ಡರ್ ಲೇಯನ್, ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್, ಇಂಡೋನೇಷಿಯಾ ಅಧ್ಯಕ್ಷ ಜೋಕೋ ವಿಡೋಡೋ, ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವು ವಿಶ್ವ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ಭಾರತ ಸೇರಿದಂತೆ ವಿಶ್ವ ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆ ಕೊರೋನಾ ವೈರಸ್. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಉಲ್ಲೇಖಿಸಲಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಒಗ್ಗಾಟ್ಟಾಗಿ ಹೋರಾಟದ ಮಂತ್ರ ಜಪಿಸಲಿದ್ದಾರೆ. ಇದೇ ವೇಳೆ ಭಾರತದಲ್ಲಿನ ಲಸಿಕಾ ಅಭಿಯಾನದ ಕುರಿತು ಮೋದಿ ಮಾತನಾಡುವ ಸಾಧ್ಯತೆ ಇದೆ. ಕೊರೋನಾ ನಡುವೆ ದೇಶದ ಆರ್ಥಿಕ ಚೇತರಿಕೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಮೋದಿ ಭಾಷಣದಲ್ಲಿ ಉಲ್ಲೇಖಿಸಲಿದ್ದಾರೆ. 2020ರಿಂದ ಬಹುತೇಕ ಎಲ್ಲಾ ದೇಶಗಳು ಕೊರೋನಾಗೆ ಸಿಲುಕಿ ಒದ್ದಾಡುತ್ತಿದೆ. ಪ್ರತಿ ವರ್ಷ ಹೊಸ ಹೊಸ ರೂಪಾಂತರಿ ವೈರಸ್‌ ದಾಳಿ ಮಾಡುತ್ತಲೇ ಇದೆ.

ಸಂಕ್ರಾಂತಿ ಹಬ್ಬದಂದು ರಾಜ್ಯದ ಜನತೆಗೆ ಸಂತಸದ ಸುದ್ದಿ ನೀಡಿದ ಪ್ರಧಾನಿ: ಮೋದಿಗೆ ಸಿಎಂ ಕೃತಜ್ಞತೆ

ಇದೇ ವರ್ಷದಲ್ಲಿ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ವಾರ್ಷಿಕ ಶೃಂಗ ಸಭೆ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ಸಭೆಗೂ ಮುನ್ನ ನಡೆಯುತ್ತಿರುವ ವರ್ಚುವಲ್ ಶೃಂಗ ಸಭೆಯಲ್ಲಿ ಸಾಮೂಹಿಕ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶ್ವ ನಾಯಕರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಳ್ಳುವ ದಿಗ್ಗಜ ನಾಯಕರು ಹಾಗೂ ಇಡೀ ವಿಶ್ವವೇ ಇದೀಗ ಪ್ರಧಾನಿ ಮೋದಿ ಭಾಷಣಕ್ಕೆ ಕಾಯುತ್ತಿದೆ.

ವಿಶ್ವ ಶೃಂಗ ಸಭೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಮುಂದಿರುವ ದಾರಿಗಳು, ಕೊರೋನಾ ನಡುವೆ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಾಗೂ ಕೊರೋನಾ ನಡುವೆ ಜನರ ಜೀವನ ಹಸನಾಗಿಸಲು ಮಾಡಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಗೆಬ್ರಿಯೆಸ್ ಪಾಲ್ಗೊಳ್ಳಲಿದ್ದಾರೆ. ಇನ್ನು ವಿಶ್ವವೇ ಎದುರಿಸುತ್ತಿರುವ ಜಾಗತಿಕ ತಾಪಮಾನ, ಪ್ರಾಕೃತಿ ವಿಕೋಪ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣ ಹಾಗೂ ಪ್ರತಿ ದೇಶಗಳು ಮಾಡಬೇಕಾದ ಕರ್ತ್ಯವ್ಯದ ಕುರಿತು ಚರ್ಚೆ ನಡೆಯಲಿದೆ. ಈ ಚರ್ಚೆಯಲ್ಲಿ ಅಮೆರಿಕಾ ಹವಾಮಾನ ಕೇಂದ್ರದ ವಿಶೇಷ ರಾಯಭಾರಿ ಜಾನ್ ಎಫ್ ಕೆರಿ, IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿಲಿನಾ ಜಾರ್ಜಿವಾ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಇಕೊರೋನಾ ನಿಯಂತ್ರಗೊಂಡರೆ ದೇ ವರ್ಷದಲ್ಲಿ ನಡೆಸಲಿರುವ ವಾರ್ಷಿಕ ಸಭೆ ಸಾಮಾನ್ಯ ರೂಪದಲ್ಲಿ ನಡೆಯುವ ಸಾಧ್ಯವಿದೆ.