ಸಂಕ್ರಾಂತಿ ಹಬ್ಬದಂದು ರಾಜ್ಯದ ಜನತೆಗೆ ಸಂತಸದ ಸುದ್ದಿ ನೀಡಿದ ಪ್ರಧಾನಿ: ಮೋದಿಗೆ ಸಿಎಂ ಕೃತಜ್ಞತೆ

*   18 ಲಕ್ಷ ವಸತಿರಹಿತರು, 6.6 ಲಕ್ಷ ನಿವೇಶನರಹಿತರಿಗೆ ಅನುಕೂಲ
*   ರಾಜ್ಯದ ಬಹುದಿನದ ಬೇಡಿಕೆ ಈಡೇರಿಸಿದ ಕೇಂದ್ರ ಸರ್ಕಾರ
*   ಕರ್ನಾಟಕದ ಸಬಲೀಕರಣಕ್ಕೆ ನಿರಂತರ ಶ್ರಮ: ಮೋದಿ ಮೆಚ್ಚುಗೆ
 

CM Basavaraj Bommai Thanks to Narendra Modi for PM Awas home for the Homeless grg

ಬೆಂಗಳೂರು(ಜ.15): ಗ್ರಾಮೀಣ ಭಾಗದ(Rural Area) ವಸತಿ ರಹಿತರ ಮತ್ತು ನಿವೇಶನ ರಹಿತರ ಪಟ್ಟಿಯನ್ನು ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ(Pradhan Mantri Awas Yojana) ನಮೂದಿಸಲು ಅನುಮೋದನೆ ನೀಡುವ ಬಹುದಿನದ ಬೇಡಿಕೆಯನ್ನು ಈಡೇರಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು ಕೇಂದ್ರದ ಆವಾಸ್‌ ಪ್ಲಸ್‌ ಡಾಟಾಬೇಸ್‌ನಲ್ಲಿ ಕರ್ನಾಟಕದ(Karnataka) ಗ್ರಾಮೀಣ ಬಡ ವರ್ಗದ 18,78,671 ವಸತಿ ರಹಿತ ಮತ್ತು 6,61,535 ನಿವೇಶನ ರಹಿತರ ಪಟ್ಟಿ ಸೇರಿಸುವ ಬಹುದಿನಗಳ ಬೇಡಿಕೆಯನ್ನು ಅನುಮೋದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇದು ನಿಜವಾಗಿ ಆ ಎಲ್ಲ ಜನರ ಜೀವನದಲ್ಲಿ ಹೊಸ ಸಂತೋಷವನ್ನು ತರುವುದರ ಜತೆಗೆ ಮಕರ ಸಂಕ್ರಾಂತಿಯನ್ನು(Makar Santranti) ಇನ್ನಷ್ಟು ವಿಶೇಷವಾಗಿಸಿದೆ ಎಂದು ತಿಳಿಸಿದ್ದಾರೆ.

 

Bengaluru: ಒಂದು ಲಕ್ಷ ಮನೆ ನಿರ್ಮಾಣಕ್ಕೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ: ಸೋಮಣ್ಣ

ಕರ್ನಾಟಕದ ಬೇಡಿಕೆ ಏನಿತ್ತು?:

ರಾಜ್ಯ ಗ್ರಾಮೀಣ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಆವಾಸ್‌ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗಿದೆ. ಸಾಮಾಜಿಕ, ಆರ್ಥಿಕ ಜಾತಿ ಜನಗಣತಿ ಪಟ್ಟಿಯಲ್ಲಿ ಕೈಬಿಟ್ಟಿದ್ದ ವಸತಿ ರಹಿತ ಮತ್ತು ನಿವೇಶನ ರಹಿತರ ಸಮೀಕ್ಷೆಯನ್ನು ಕೇಂದ್ರದ ಸರ್ಕಾರದ(Central Government) ಮಾರ್ಗಸೂಚಿಯನ್ವಯ ರಾಜ್ಯಾದ್ಯಂತ 2018ರಲ್ಲಿ ಕೈಗೊಳ್ಳಲಾಗಿತ್ತು. ಅದರಂತೆ ರಾಜ್ಯದಲ್ಲಿ 18,78,671 ವಸತಿ ರಹಿತರು ಮತ್ತು 6,61535 ನಿವೇಶನ ರಹಿತರು ಕಂಡುಬಂದಿದ್ದಾರೆ. ಇವರ ವಿವರಗಳನ್ನು ಕೇಂದ್ರದ ಆವಾಸ್‌ ಪ್ಲಸ್‌ ಡಾಟಾಬೇಸ್‌ನಲ್ಲಿ ನಮೂದು ಮಾಡುವಂತೆ ರಾಜ್ಯ ಸರ್ಕಾರ(Government of Karnataka) ಪ್ರಸ್ತಾವನೆ ಸಲ್ಲಿಸಿತ್ತು. ಹಲವು ವರ್ಷಗಳಿಂದ ಇದು ಕೇಂದ್ರದ ಪರಿಶೀಲನೆಯಲ್ಲಿತ್ತು. ಇದೀಗ ಕೇಂದ್ರ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಕರ್ನಾಟಕದ ಸಬಲೀಕರಣಕ್ಕೆ ನಿರಂತರ ಶ್ರಮ: ಮೋದಿ ಮೆಚ್ಚುಗೆ

ಬೊಮ್ಮಾಯಿ ಅವರ ಕೃತಜ್ಞತಾ ಟ್ವೀಟ್‌ಗೆ ಪ್ರತಿಯಾಗಿ ಕನ್ನಡ(Kannada) ಭಾಷೆಯಲ್ಲಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ರಾಷ್ಟ್ರೀಯ ಪ್ರಗತಿಗೆ ಅಭೂತಪೂರ್ವ ಕೊಡುಗೆಗಳನ್ನು ನೀಡುತ್ತಿರುವ ಕರ್ನಾಟಕದ ನನ್ನ ಸಹೋದರ, ಸಹೋದರಿಯರಿಗೆ ಮಕರ ಸಂಕ್ರಾಂತಿಯ ಶುಭಾಶಯಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನರ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಲಿವೆ’ ಎಂದಿದ್ದಾರೆ.

 

ಮನೆ ನಿರ್ಮಾಣ 2 ತಿಂಗಳಲ್ಲಿ ಪೂರ್ಣಗೊಳಿಸಿ: ಸೋಮಣ್ಣ

ಬೆಂಗಳೂರು: ಗೋಡೆ ಮತ್ತು ಛಾವಣಿ ಹಂತದಲ್ಲಿರುವ ಮನೆಗಳನ್ನು ಬರುವ ಮಾ.22ರೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ವಸತಿ ಸಚಿವ ವಿ.ಸೋಮಣ್ಣ(V Somanna) ಸೂಚನೆ ನೀಡಿದ್ದಾರೆ.

Karnataka Housing Projects : ಆದಿವಾಸಿಗಳ ಮನೆ ನಿರ್ಮಾಣಕ್ಕೆ ನೆರವು -ಮೊತ್ತವೆಷ್ಟು?

ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ ನೀಡಲಾದ ಹೊಸ ಮನೆಗಳ ಫಲಾನುಭವಿಗಳ ಆಯ್ಕೆ ಮತ್ತು ರಾಜ್ಯದ(Karnataka) ಗ್ರಾಮೀಣ ಭಾಗದಲ್ಲಿ(Rural Area) ವಸತಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜ.05 ರಂದು ರಾಜ್ಯದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಅವರು ವಿಡಿಯೋ ಸಂವಾದ ನಡೆಸಿದ್ದರು. ಈ ವೇಳೆ ಪ್ರಗತಿಯಲ್ಲಿರುವ ಮನೆಗಳನ್ನು ಅದರಲ್ಲಿಯೂ ಗೋಡೆ ಮತ್ತು ಛಾವಣಿ ಹಂತದಲ್ಲಿರುವ ಮನೆಗಳನ್ನು ಮಾ.22ರ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದ್ದರು.

ಈಗಾಗಲೇ ನೀಡಿರುವ ಸರ್ಕಾರಿ ಆದೇಶದಂತೆ(Government Order) ಮತ್ತು ನಿಯಮಾವಳಿಗಳಂತೆ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆ ಮೂಲಕ ಆಯ್ಕೆ ಮಾಡಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಮುಚಿತ ಮಾರ್ಗದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆಗನುಗುಣವಾಗಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಬೇಕು. ಇನ್ನು 10 ತಿಂಗಳೊಳಗೆ ಮನೆಗಳ ನಿರ್ಮಾಣ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು. 

Latest Videos
Follow Us:
Download App:
  • android
  • ios