PM Security Lapse ಪಂಜಾಬ್ ಸರ್ಕಾರ, ಪೊಲೀಸರ ಉದ್ದೇಶಿತ ಕೃತ್ಯ, ದೋಗ್ರಾ ಸೇರಿ ಭಾರತದ ಮಾಜಿ DGPಗಳಿಂದ ರಾಷ್ಟ್ರಪತಿಗೆ ಪತ್ರ!
- ಪ್ರಧಾನಿ ಮೋದಿ ಪಂಜಾಬ್ ಭೇಟಿಯಲ್ಲಿ ನಡೆದ ಭದ್ರತಾ ಲೋಪ
- ಕೃತ್ಯ ಹಿಂದೆ ಪಂಜಾಬ್ ಪೊಲೀಸ್, ಸರ್ಕಾರದ ಕೈವಾಡ ಎಂದ ಮಾಜಿ DGP
- ಕಠಿಣ ಕ್ರಮಕ್ಕೆ ಆಗ್ರಹಿಸಿ ಭಾರತದ ಮಾಜಿ DGPಗಳಿಂದ ರಾಷ್ಟ್ರಪತಿಗೆ ಪತ್ರ
ನವದೆಹಲಿ(ಜ.06): ಪ್ರಧಾನಿ ನರೇಂದ್ರ ಮೋದಿ(Narendra Modi) ಪಂಜಾಬ್ ಭೇಟಿ ವೇಳೆ ನಡೆದ ಭದ್ರತಾ ಲೋಪ(PM Security Lapse) ಭಾರತದ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿದೆ. ಅತೀ ಹೆಚ್ಚು ಬೆದರಿಕೆ ಇರುವ ಪ್ರಧಾನಿ ಎಂದರೆ ನರೇಂದ್ರ ಮೋದಿ. ಹೀಗಾಗಿ ಮೋದಿ ಭದ್ರತೆಯಲ್ಲಿ ಎಳ್ಳಷ್ಟು ಲೋಪವಾಗಲು ಅವಕಾಶವಿಲ್ಲ. ಆದರೆ ಅತೀ ದೊಡ್ಡ ಭದ್ರತಾ ಲೋಪ ನಡೆದು ಹೋಗಿದೆ. ಪ್ರತಿಭಟನಾಕಾರರ ನಡುವೆ ಪ್ರಧಾನಿ ಮೋದಿ ಹಾಗೂ ಬೆಂಗಾವಲು ವಾಹನ 15 ರಿಂದ 20 ನಿಮಿಷ ಸಿಲುಕಿತ್ತು. ಇದೀಗ ಪಂಜಾಬ್ ಪೊಲೀಸ್(Punjab Police) ಹಾಗೂ ಸರ್ಕಾರದ(Punjab Government) ವಿರುದ್ಧ ಟೀಕೆ, ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಪಂಜಾಬ್ ಮಾಜಿ DGP ಪಿಸಿ ದೋಗ್ರಾ ಸೇರಿದಂತೆ ಭಾರತ ಬಹುತೇಕ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಮಾಜಿ DPGಗಳು ಕಠಿಣ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ(president ram nath kovind) ಪತ್ರ ಬರೆದಿದ್ದಾರೆ.
ಪಿಸಿ ದೋಗ್ರಾ, ಕರ್ನಾಟಕದ(Karnataka) ಮಾಜಿ DPG ರಾಘವೇಂದ್ರ ಔರಾದ್ಕರ್ ಸೇರಿದಂತೆ ಭಾರತದ 27 ಮಾಜಿ DPGಗಳು ಸಹಿ ಹಾಕಿದ ಪತ್ರವನ್ನು ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ಈ ಪತ್ರದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಹಾಗೂ ಮಾಜಿ ಅಧಿಕಾರಿಗಳು ಹಲವು ಮಹತ್ವದ ಹಾಗೂ ಗಂಭೀರ ಲೋಪಗಳನ್ನು ಪತ್ತೆ ಹಚ್ಚಿ ಬಹಿರಂಗಪಡಿಸಿದ್ದಾರೆ. ಇದು ಆತಂಕವನ್ನು ಮತಷ್ಟು ಹೆಚ್ಚಿಸಿದೆ. ಇಷ್ಟೇ ಅಲ್ಲ ಈ ಘಟನೆ ಪೊಲೀಸರ ನಿರ್ಲಕ್ಷ್ಯ ಹಾಗೂ ಸರ್ಕಾರದ ರಾಜಕೀಯದಾಟಕ್ಕೆ ಹಿಡಿದ ಕನ್ನಡಿಯಾಗಿದೆ. ಹೀಗಾಗಿ ಮಾಜಿ ಡಿಜಿಪಿಗಳು ಪತ್ರದಲ್ಲಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಡಿಜಿಪಿಗಳು ಬರೆದ ಪತ್ರದ ಸಾರಾಂಶವಿದು...
ನಾವು ಮಾಜಿ ಪೊಲೀಸ್ ಅಧಿಕಾರಿಗಳು. ಈ ದೇಶದ ಭದ್ರತಾ ವ್ಯವಸ್ಥೆಯಲ್ಲಿ ನಾವು ಸೇವೆ ಸಲ್ಲಿಸಿದ್ದೇವೆ. ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇವೆ, ಹಲವು ಘಟನೆಗಳನ್ನು ಎದುರಿಸಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿಯಲ್ಲಿ ನಡೆದ ಭದ್ರತಾ ಲೋಪ ಆತಂಕ ಹಾಗೂ ಆಶ್ಚರ್ಯ ತಂದಿದೆ. ಪ್ರಧಾನಿ ಮೋದಿ ಪ್ರಯಾಣಿಸುವ ಮಾರ್ಗದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ಮಾಡಿ ಪ್ರಧಾನಿ 15 ರಿಂದ 10 ನಿಮಿಷ ಸಿಲುಕಿ ಹಾಕಿಕೊಳ್ಳುವಂತೆ ಮಾಡಲಾಗಿದೆ. ಇದು ಸ್ಪಷ್ಟವಾದ ಭದ್ರತಾ ಲೋಪವಾಗಿದೆ. ಪ್ರತಿಭಟನಾಕಾರರ ಜೊತೆಗೆ ಕೈಜೋಡಿಸಿರುವ ಪಂಜಾಬ್ ಸರ್ಕಾರ ಪ್ರಧಾನಿ ಭದ್ರತೆಯಲ್ಲಿ ಮಾಡಿಕೊಂಡ ರಾಜಿ ಇದಾಗಿದೆ. ಭದ್ರತಾ ವಿಚಾರದಲ್ಲಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ. ಹೀಗಾಗಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.
PM Security Breach ರಾಷ್ಟ್ರಪತಿ ಭೇಟಿಯಾದ ನರೇಂದ್ರ ಮೋದಿ, ಭದ್ರತಾ ಲೋಪ ಕುರಿತು ಗಂಭೀರ ಚರ್ಚೆ!
ಪ್ರಧಾನಿ ಮೋದಿ ಪಂಜಾಬ್ ಭೇಟಿಯಲ್ಲಿ ಪ್ರೊಟೋಕಾಲ್‌ನಂತೆ SPG ಭದ್ರತೆ ನೀಡಿದೆ. ಇದರ ಜೊತೆಗೆ ಕೇಂದ್ರ ಗೃಹ ಸಚಿವಾಲಯ ರಾಜ್ಯ ಭದ್ರತಾ ಪಡೆಗಳ ಜೊತೆ ಸಂಪರ್ಕಿಸಿ ಪ್ರಯಾಣ ಸೇರಿದಂತೆ ಇತರ ಭದ್ರತೆಗೆ ಸೂಚಿಸುತ್ತದೆ. ಇದರಂತೆ ಮೋದಿ ಪ್ರಯಾಣಿಸುವ ಮಾರ್ಗ ಸೇರಿದಂತೆ ಹತ್ತಿರದ ಮಾರ್ಗಗಳನ್ನು ರಾಜ್ಯಪೊಲೀಸರು ಸುಪರ್ದಿಗೆ ತೆಗೆದುಕೊಳ್ಳಬೇಕು. ಮೋದಿ ಪ್ರಯಾಣ, ತುರ್ತು ಪ್ರಯಾಣದ ಮಾರ್ಗ, ಬದಲಿ ಮಾರ್ಗಗಳ ಕುರಿತು ಭದ್ರತಾ ಸಭೆಯಲ್ಲಿ ಮೊದಲೆ ಚರ್ಚಿತ ವಿಷಯ. ಇಷ್ಟಾದರೂ ಪಂಜಾಬ್ ಸರ್ಕಾರ ಪ್ರತಿಭಟನಕಾರಿಗೆ ಅವಕಾಶ ನೀಡಿದ್ದು ಅತೀ ದೊಡ್ಡ ಭದ್ರತಾ ಲೋಪ ಮಾತ್ರವಲ್ಲ, ಇದರ ಹಿಂದೆ ಅತೀ ದೊಡ್ಡ ಸಂಚು ಕೂಡ ಅಡಗಿದೆ.
ಈ ಘಟನೆ ದೇಶದ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಭದ್ರತಾ ಲೋಪವಾಗಿದೆ. ಪ್ರತಿಭಟನಾಕಾರರಿಗೆ ಮೋದಿ ಇದೇ ಮಾರ್ಗದಲ್ಲಿ ಸಂಚರಿಸಲಿದ್ದಾರೆ ಎಂದು ತಿಳಿದಿದ್ದು ಹೇಗೆ? ಮೋದಿ ಸಂಚರಿಸುವ ಮಾರ್ಗ ಕೇವಲ ನಿಯೋಜನೆಗೊಂಡ ಪೊಲೀಸ್ ಅಧಿಕಾರಿಗಳು ಭದ್ರತಾ ಪಡೆಗಳಿಗೆ ಮಾತ್ರ ತಿಳಿದಿರುತ್ತದೆ. ಇದು ಪ್ರತಿಭಟನಾಕಾರರಿಗೆ ಹೇಗೆ ತಿಳಿಯಿತು. ಪ್ರತಿಭಟನಾ ಕಾರರು ಫ್ಲೈ ಓವರ್ ಮೇಲೆ ಮೋದಿಯನ್ನು ಸಿಲುಕಿಸಿದ್ದಾರೆ. ಕಾರಣ ಇಲ್ಲಿ ಡೈವರ್ಶನ್ ಪಡೆದುಕೊಳ್ಳಲು ಮಾರ್ಗ ಬದಲಿಸಲು ಸಾಧ್ಯವಿಲ್ಲ. ವಾಹನ, ಬೆಂಗಾವಲು ಪಡೆ ನಿಲ್ಲಲಬೇಕು. ಇದೊಂದೆ ಕಾರಣವಲ್ಲ, ಇದು ಪೂರ್ವನಿಯೋಜಿತ ಹಾಗೂ ಉದ್ದೇಶಿತ ಕೃತ್ಯ ಎಂದು ಹೇಳಲು ಇನ್ನು ಕೆಲ ಕಾರಣಗಳಿವೆ.
PM Modi security breach: ಪಂಜಾಬ್ ಸರ್ಕಾರದಿಂದ ತನಿಖೆ, ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ!
ಸುದ್ದಿ ವಾಹನಿ, ಆನ್‌ಲೈನ್ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಭದ್ರತಾ ಲೋಪದಲ್ಲಿ ಪಂಜಾಬ್ ಪೊಲೀಸರ ಕೈವಾಡ ಸ್ಪಷ್ಟವಾಗಿ ಗೋಚರಿಸುತ್ತಿದೆ. ಘಟನಾ ಸ್ಥಳದಲ್ಲಿ ಯಾವುದೇ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿರಲಿಲ್ಲ. ಇನ್ನು ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ರಸ್ತೆ ತಡೆಯಿಂದ ಮುಕ್ತಗೊಳಿಸುವ ಬದಲು ಚಹಾ ಸೇವನೆಯಲ್ಲಿ ಬ್ಯುಸಿಯಾಗಿದ್ದರು. ಇಲ್ಲೇ ಪೊಲೀಸರ ಉದ್ದೇಶ ಸ್ಪಷ್ಟವಾಗಿದೆ. ಇಂತಹ ನಡೆ ಭಾರತದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.
ಈ ಘಟನೆ ಪಂಜಾಬ್‌ನಲ್ಲಿ ನಿಗದಿತ ಸರ್ಕಾರ ಆಡಳಿತವಿದೆ ಅನ್ನೋ ಕಾರಣಕ್ಕೆ ಆತಂಕ ಸೃಷ್ಟಿಸಿಲ್ಲ. ಪಂಜಾಬ್ ಅತ್ಯಂತ ಸೂಕ್ಷ್ಮ ರಾಜ್ಯ, ಕಾರಣ ಪಾಕಿಸ್ತಾನ ಜೊತೆ ಗಡಿ ಹಂಚಿಕೊಂಡಿರುವ ಪಂಜಾಬ್ ರಾಜ್ಯ ಪಾಕಿಸ್ತಾನ ನುಸುಳುಕೋರರು, ಉಗ್ರರ ಬೆದರಿಕೆ ಇರುವ ರಾಜ್ಯವಾಗಿದೆ. ಸದಾ ಅಶಾಂತಿ ಸೃಷ್ಟಿಸುವ ಹಲವು ಘಟನೆಗಳು ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದಿದೆ. ಲೂಧಿಯಾನದಲ್ಲಿ ನಡೆದ IED ಬ್ಲಾಸ್ಟ್‌ನಲ್ಲಿ ಪಂಜಾಬ್ ಉಚ್ಚಾಟಿತ ಪೊಲೀಸ್ ಅಧಿಕಾರಿ ಶಾಮೀಲಾಗಿದ್ದಾರೆ. ಪಂಜಾಬ್‌ನಲ್ಲಿರುವ ಹಲವರು ಉಗ್ರರ ಜೊತೆಗೆ ಕೈಜೋಡಿಸಿರುವ ಹಲವ ಘಟನೆಗಳು ನಡೆದಿದೆ. ಹೀಗಾಗಿ ಮೋದಿ ಭದ್ರತಾ ಲೋಪದ ಗಂಭೀರತೆ ಎಷ್ಟಿದೆ ಅನ್ನೋದು ಅರ್ಥವಾಗಲಿದೆ.
ನಿವೃತ್ತ ಡಿಜಿಪಿಗಳಾದ ನಾವು ಈ ಘಟನೆ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಭದ್ರತೆಯಲ್ಲಿ ಯಾವುದೇ ರಾಜೀ ಇಲ್ಲ. ಪಂಜಾಬ್‌ನಲ್ಲಿ ಶೀಘ್ರದಲ್ಲೇ ಚುನಾವಣೆ ಆಗಮಿಸಲಿದೆ. ಈ ಎಲ್ಲಾ ದೃಷ್ಟಿಯಿಂದ ಈ ಘಟನೆಗೆ ಕಾರಣರಾದವನ್ನು ಶಿಕ್ಷಿಸಬೇಕು ಎಂದು ಮನವಿ ಮಾಡುತ್ತೇವೆ.