PM Security Lapse ಪ್ರಧಾನಿ ರಕ್ಷಣೆ ಹೇಗೆ? ತಿಳಿದುಕೊಳ್ಳಲೇಬೇಕು ಮೋದಿ ಭದ್ರತೆ ಹೊಣೆ ಹೊತ್ತಿರುವ SPG, ಬ್ಲೂಕ್ ಬುಕ್ ನಿಯಮ!

  • ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ
  • ಪ್ರಧಾನಿ ಮೋದಿ ಭದ್ರತೆ ಹೊಣೆ ಹೊತ್ತಿದೆ SPG
  • SPG ಭದ್ರತೆ ಹೇಗಿರುತ್ತೆ? ಬ್ಲೂ ಬುಕ್ ನಿಯಮವೇನು?
  • ಪ್ರಧಾನಿ ಮೋದಿ ಭದ್ರತೆಯಲ್ಲಿ ಆಗಿರುವ ಲೋಪವೇನು?
How prime minister of India is guarded by SPG and Blue Book rules Security responsibility ckm

ನವದೆಹಲಿ(ಜ.06): ಪ್ರಧಾನಿ ನರೇಂದ್ರ ಮೋದಿ(PM Narendra Modi) ಪಂಜಾಬ್ ಭೇಟಿಯಲ್ಲಿ(Punjab) ಆಗಿರುವ ಭದ್ರತಾ ಲೋಪ(PM Security Lapse) ದೇಶವನ್ನೇ ಬೆಚ್ಚಿ ಬೀಳಿಸಿದೆ. ಪ್ರಧಾನಿ ಮೋದಿ ಸಂಚರಿಸುವ ರಸ್ತೆಯಲ್ಲಿ ಪ್ರತಿಭಟನಾಕಾರಿಂದ ಮೋದಿ ಸುಮಾರು 20 ನಿಮಿಷಗಳ ಕಾಲ ಸಿಲುಕಿದ್ದರು. ಇದೇ ವೇಳೆ ಮೋದಿ ವಾಹನ ಹಾಗೂ ಬೆಂಗಾವಲು ವಾಹನ ಸನಿಹದಲ್ಲಿ ಸಾರ್ವಜನಿಕರ ವಾಹನಗಳು ಹಾದು ಹೋಗುವ ದೃಶ್ಯಗಳು ಭದ್ರತಾ ಲೋಪದ ಗಂಭೀರತೆಯನ್ನು ಸಾರಿ ಹೇಳಿದೆ. ಈ ಘಟನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲರು ಭದ್ರತಾ ಲೋಪದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತ ಬಿಜೆಪಿ(BJP) ಹಾಗೂ ಕಾಂಗ್ರೆಸ್(Congress) ನಡುವೆ ಕೆಸರೆರಾಟವೂ ಆರಂಭಗೊಂಡಿದೆ. ಇದು ಪಂಜಾಬ್ ಪೊಲೀಸರು(Punjab Police) ಹಾಗೂ ಪಂಜಾಬ್ ಕಾಂಗ್ರೆಸ್(Punjab Congress) ಸರ್ಕಾರದ ಪಿತೂರಿ ಎಂದು ಬಿಜೆಪಿ ಆರೋಪಿಸಿದ್ದರೆ, ಮೋದಿಗೆ ಯಾವುದೇ ಭದ್ರತಾ ಬೆದರಿಕೆ ಇರಲಿಲ್ಲ ಎಂದು ಪಂಜಾಬ್ ವಾದಿಸಿದೆ. ಹಾಗಾದರೆ ಪ್ರಧಾನಿ ಮೋದಿ ಭದ್ರತೆ ಯಾರ ಹೊಣೆ? ಮೋದಿ ಭದ್ರತೆಗೆ ಇರುವ ಪ್ರೊಟೋಕಾಲ್(protocol) ಏನು? ಇಲ್ಲಿದೆ ವಿವರ.

ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್(SPG)
ಭಾರತದ ಪ್ರಧಾನಿಯ(Prime Minister) ಸಂಪೂರ್ಣ ರಕ್ಷಣೆ ಹಾಗೂ ಭದ್ರತಾ ಹೊಣೆ ಸ್ಪೆಷಲ್ ಪೊಟೆಕ್ಷನ್ ಗ್ರೂಪ್(SPG)ಗೆ ಸೇರಿದೆ. ಪ್ರಧಾನಿಗೆ ಎಲ್ಲಾ ಸಂದರ್ಭದಲ್ಲೂ SPG ರಕ್ಷಣೆ ನೀಡಲಿದೆ. ಭಾರತದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ, ಪ್ರಧಾನಿ ಕಚೇರಿ, ಮನೆ, ರಾಜ್ಯ ಪ್ರವಾಸ, ವಿದೇಶ ಪ್ರವಾಸ ಸೇರಿದಂತೆ ಎಲ್ಲೆ ಹೋದರು SPG ರಕ್ಷಣೆ ಹಾಗೂ ಭದ್ರತೆ ನೀಡಲಿದೆ. ಪ್ರಧಾನಿ ಜೊತೆಗೆ ಪ್ರಧಾನಿ ಕುಟುಂಬಕ್ಕೂ ರಕ್ಷಣೆ ನೀಡಲಿದೆ.

PM Modi security breach : ಚನ್ನಿಗೆ ಹೇಳ್ಬಿಡಿ, "ಟೈಗರ್ ಅಭಿ ಜಿಂದಾ ಹೇ" ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮೋದಿ ಅಲೆ!

ಭಾರತದ ಸಂಸತ್ತಿನ ಕಾಯಿದೆ( Parliament of India) ಮೂಲಕ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್(SPG) 1988ರಲ್ಲಿ ಸ್ಥಾಪಿಸಲಾಯಿತು. 2019ರಲ್ಲಿ SPG ರಕ್ಷಣಾ ನಿಯಮ ಹಾಗೂ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. SPGಗೆ ಕೇವಲ ಪ್ರಧಾನಿಯ ಭದ್ರತೆ ಹಾಗೂ ರಕ್ಷಣೆ ಹೊಣೆ ನೀಡಲಾಗಿದೆ. SPG ತಂಡಕ್ಕೆ ಕೇಂದ್ರ ಶಸಸ್ತ್ರ ಪಡೆಯಿಂದ(Central Armed Police Forces) ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತದೆ.  ಬಾರ್ಡರ್ ಸೆಕ್ಯುರಿಟಿ ಫೋರ್ಸ್, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಹಾಗೂ ರೈಲ್ವೇ ಪ್ರೊಟೆಕ್ಷನ್ ಫೋರ್ಸ್‌ನಿಂದ ಅತ್ಯುತ್ತಮ ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಶಸಸ್ತ್ರ ಪಡೆ ಭಾರತದ ಅತ್ಯುತ್ತಮರಲ್ಲಿ ಅತ್ಯುತ್ತಮ ಪಡೆಯಾಗಿದೆ. 

PM Security Breach ರಾಷ್ಟ್ರಪತಿ ಭೇಟಿಯಾದ ನರೇಂದ್ರ ಮೋದಿ, ಭದ್ರತಾ ಲೋಪ ಕುರಿತು ಗಂಭೀರ ಚರ್ಚೆ!

ಇವರ ಆಯ್ಕೆಯೂ ಅಷ್ಟೇ ಕಠಿಣ ಹಾಗೂ ಹಲವು ಭದ್ರತಾ ಪರೀಕ್ಷೆಗಳನ್ನು ಒಳಗೊಂಡಿದೆ. ಈ ಪರೀಕ್ಷೆಯಲ್ಲಿ ಪಾಸ್ ಆದ ಅತ್ಯುತ್ತಮ ಸಿಬ್ಬಂದಿಗಳನ್ನು  SPGಗೆ ಆಯ್ಕೆ ಮಾಡಲಾಗುತ್ತದೆ. ಪ್ರಧಾನಿ ಮೋದಿ ಭದ್ರತೆಯಲ್ಲಿರುವ ಈ SPG ತಂಡದ ಸಿಬ್ಬಂದಿಗಳು ಕಪ್ಪು ಬಣ್ಣದ ಧಿರಿಸಿನಲ್ಲಿರುತ್ತಾರೆ. ಸನ್‌ಗ್ಲಾಸ್ ಹಾಕಿದ್ದು, ಕೈಯಲ್ಲಿ ಟು ವೇ ಎನ್‌ಕ್ರಿಪ್ಟೆಡ್ ಸಂವಹನ ಇಯರ್‌ಪೀಸ್, ಹಾಗೂ ಹ್ಯಾಂಡ್ ಗನ್ ಹೊಂದಿರುತ್ತಾರೆ.

ಪ್ರಧಾನಿ ಭದ್ರತೆಯನ್ನು  SPG ನಿರ್ವಹಿಸುವುದೇ ಹೇಗೆ?
ಮೊದಲೇ ಹೇಳಿದಂತೆ SPG ತಂಡ ಯಾವಾಗಲು ಪ್ರಧಾನಿಯನ್ನು ಸುತ್ತುವರಿದಿರುತ್ತದೆ. ಇನ್ನು ಪ್ರಧಾನಿ ಮೋದಿಯ ಭದ್ರತೆ ಹೇಗೆ? ಇದರ ಪ್ರೊಟೊಕಾಲ್ ಏನು? ಪಾಲಿಸಬೇಕಾದ ನಿಯಮಗಳೇನು ಅನ್ನೋದು SPG ಬ್ಲೂ ಬುಕ್‌ನಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ. ಇನ್ನು ಈ ಬ್ಲೂ ಬುಕ್‌ನಲ್ಲಿರುವ ಸೂಚನೆಗಳನ್ನು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದೆ. SPG ದೇಶದ ಎಲ್ಲಾ ಭದ್ರತಾ ಪಡೆಗಳೊಂದಿಗೆ ನೇರ ಸಂಪರ್ಕ ಹೊಂದಿರುತ್ತದೆ. ಯಾವುದೇ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡುತ್ತಿದ್ದರೆ 3 ದಿನಗಳಿಗೂ ಮೊದಲು SPG ಸಂಬಂಧಿಸಿದ ರಾಜ್ಯದ ಗುಪ್ತಚರ ಇಲಾಖೆ ಅಧಿಕಾರಿಗಳು, ರಾಜ್ಯ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಸಭೆ ಅಥವಾ ಕಾರ್ಯಕ್ರಮ ಆಯೋಜಕರನ್ನು ಸಂಪರ್ಕಿಸಿ ಭದ್ರತೆ ಕುರಿತು ಮಹತ್ವದ ಸೂಚನೆಗಳನ್ನು ನೀಡಲಿದೆ. 

ಈ ಭದ್ರತಾ ಸಭೆಯಲ್ಲಿ  SPG ತಂಡ ಎಲ್ಲಾ ವಿವರಗಳನ್ನು ಕಲೆ ಹಾಕಿ ಭದ್ರತೆ ಕಾರ್ಯತಂತ್ರ ರೂಪಿಸಲಿದೆ. ಪ್ರಧಾನಿ ಪ್ರಯಾಣ, ಪ್ರಧಾನಿಯ ಬೆಂಗಾವಲು, ಸಮಯ ಕುರಿತ ಎಲ್ಲಾ ಮಾಹಿತಿಗಳನ್ನು ನೀಡಲಾಗುತ್ತದೆ. ಉದ್ದೇಶಿತ ಮಾರ್ಗ, ಬದಲಿ ಮಾರ್ಗಗಳ ವಿವರಗಳನ್ನು ನಿಗದಿಪಡಿಸಲಾಗುತ್ತದೆ. ಇದನ್ನು ಕೇಂದ್ರ ಹಾಗೂ ರಾಜ್ಯ ಗುಪ್ತಚರ ದಳದ ಮಾಹಿತಿಯೊಂದಿಗೆ ನಿರ್ಧರಿಸಲಾಗುತ್ತದೆ. ಇದರ ಜೊತೆಗೆ ತುರ್ತು ಪರಿಸ್ಥಿತಿ ಎದುರಾದರೆ ಭದ್ರತೆ ನೀಡಲು ಮೊದಲೆ ಯೋಜನೆ ಸಿದ್ದಪಡಿಸಿಕೊಂಡಿರುತ್ತದೆ.

PM Modi security breach : ರಾಷ್ಟ್ರಪತಿ, ಮಾಜಿ ಪ್ರಧಾನಿ ದೇವೇಗೌಡ ಕಳವಳ, ಹಿಂದೆಯೂ ಆಗಿತ್ತು ಇಂಥ ಘಟನೆಗಳು!

ಪ್ರಧಾನಿ ಭೇಟಿ ನೀಡಿದಾಗ ಇರುವ ಬೆಂಗಾವಲು ಪಡೆ ವಾಹನಗಳನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಮುಂಭಾಗದಲ್ಲಿ ಪೈಲೆಟ್ ವಾಹನ ಅಂದರೆ ಎಚ್ಚರಿಕೆ ವಾಹನ ಸಾಗಲಿದೆ. ತಾಂತ್ರಿಕ ಕಾರು, ವಿವಿಐಪಿ ವಾಹನ, ಆ್ಯಂಬುಲೆನ್ಸ್, ಹೆಚ್ಚುವರಿ ಕಾರು ಸೇರಿದಂತೆ ಭದ್ರತಾ ಪಡೆಗಳ ವಾಹನಗಳು ಸಾಗಲಿದೆ. 

ದಿಢೀರ್ ಪ್ಲಾನ್ ಬದಲಾದರೆ ಏನಾಗಲಿದೆ?
ಪ್ರಧಾನಿ ಪ್ರಯಾಣ, ಕಾರ್ಯಕ್ರಮ, ಸಭೆಗಳ ಪೂರ್ವನಿಯೋಜನೆಯಂತೆ ಆಗದೆ ದಿಢೀರ್ ಬದಲಾದ ಹಲವು ಊದಾಹರಣೆಗಳಿವೆ. ಆದರೆ ಬದಲಾದ ಪ್ಲಾನ್ ಪಾಲಿಸಲು ಕೆಲ ನಿಯಮಗಳಿವೆ. ಭದ್ರತಾ ಪಡೆಗಳ ಅನುಮಿತಿಯೂ ಅಗತ್ಯವಿದೆ. ಇದೀಗ ಪಂಜಾಬ್ ವಿಚಾರಕ್ಕೆ ಬಂದರೆ ಪ್ರಧಾನಿ ಮೋದಿ ಪಂಜಾಬ್ ಭೇಟಿಯಲ್ಲೂ ಪ್ಲಾನ್ ದಿಢೀರ್ ಬದಲಾಗಿದೆ. ಫಿರೋಜ್‌ಪುರ್ ರ್ಯಾಲಿಗಾಗಿ ಹೆಲಿಕಾಪ್ಟರ್ ಮೂಲಕ ಪ್ರಯಾಣ ನಿಗಧಿಯಾಗಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಹೆಲಿಕಾಪ್ಟರ್ ಪ್ರಯಾಣ ಅಸಾಧ್ಯವಾಗಿತ್ತು. ಹೀಗಾಗಿ ರಸ್ತೆ ಮೂಲಕ ಸಾಗಲು SPG ನಿರ್ಧರಿಸಿದೆ. ರಸ್ತೆ ಮೂಲಕ ಸುಮಾರು 2 ಗಂಟೆಗಳ ಪ್ರಯಾಣವಿದೆ. ಪ್ರಧಾನಿ ಮೋದಿ ಪ್ರಯಾಣ ರಸ್ತೆ ಮೂಲಕ ಸಾಗಲು SPG ಪಂಜಾಬ್ ಪೊಲೀಸ್‌ನ ಡಿಜಿಪಿ ಅನುಮತಿಯೊಂದಿಗೆ ನಡೆದಿದೆ. ಡಿಜಿಪಿ ರಸ್ತೆ ಪ್ರಯಾಣ ಸುರಕ್ಷಿತವಲ್ಲ ಎಂದರೆ ಬದಲಿ ಮಾರ್ಗ ಹಾಗೂ ರಕ್ಷಣೆಯನ್ನು SPG ನಿರ್ವಹಿಸಬೇಕು. ಇಲ್ಲಿ SPG ಪಂಜಾಬ್ ಡಿಜಿಪಿ ಅನುಮತಿ ನೀಡಿದ ಬಳಿಕವಷ್ಟೇ ರಸ್ತೆ ಪ್ರಯಾಣ ಮಾಡಿದೆ. ಇಲ್ಲೆ ನೋಡಿ ಭದ್ರತಾ ಲೋಪವಾಗಿರುವುದು. ಫ್ಲೈ ಓವರ್ ಮೇಲೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಾರೆ ಅನ್ನೋ ಮಾಹಿತಿಯನ್ನು ಪಂಜಾಬ್ ಪೊಲೀಸ್‌ಗ SPGಗೆ ನೀಡಿಲ್ಲ. ಮೋದಿ ಸಂಚರಿಸುವ ರಸ್ತೆಯನ್ನು ಪಂಜಾಬ್ ಪೊಲೀಸರು ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ. ಇದು ಭದ್ರತಾ ಲೋಪವಾಗಿದೆ. 

ಪ್ರಧಾನಿ ಪ್ರಯಾಣದ ವೇಳೆ ಎಂದಾದರೂ ಭದ್ರತೆಯ ಉಲ್ಲಂಘನೆಯಾಗಿದೆಯೇ?
ಪ್ರಧಾನಿ ಪ್ರಯಾಣದ ವೇಳೆ ಈ  ಹಿಂದೆ  ಮನ್‌ಮೋಹನ್ ಸಿಂಗ್ ಅವರಿಗೂ ಭದ್ರತಾ ಲೋಪ ಎದುರಾಗಿದೆ. 2006ರಲ್ಲಿ ಮನ್‌ಮೋಹನ್ ಸಿಂಗ್ ಬೆಂಗಾವಲು ವಾಹನದಲ್ಲಿನ ಪೈಲೆಟ್ ವಾಹನ ತಿರುವನಂತಪುರಂ ನಗರದ ಮೂಲಕ ರಾಜಭವನಕ್ಕೆ ತೆರಳಬೇಕಿದ್ದ ಮಾರ್ಗದ ಬದಲು ಬೈವೇ ಮೂಲಕ ಸಾಗಿತ್ತು. ಈ ಮಾರ್ಗದಲ್ಲಿ ಕೇರಳ ಪೊಲೀಸರು ಯಾವುದೇ ಭದ್ರತೆ ನಿಯೋಜಿಸಿರಲಿಲ್ಲ. ಇಷ್ಟೇ ಅಲ್ಲ ಈ ಮಾರ್ಗದ ಮೂಲಕ ಸಾಗುವ ಯಾವುದೇ ಮುನ್ಸೂಚನೆಯೂ ಇರಲಿಲ್ಲ.

ಭದ್ರತಾ ಕಾರಣಕ್ಕೆ SPG ಗುಂಡು ಹಾರಿಸಿದೆಯೇ?
ವರದಿಗಳ ಪ್ರಕಾರ  SPG ಕೇವಲ ಒಂದು ಬಾರಿ ಸಾರ್ವಜನಿಕಾಗಿ ಗುಂಡು ಹಾರಿಸಿದೆ. ಜನವರಿ 25, 2000ನೇ ಇಸವಿಯಲ್ಲಿ  ಮಾಜಿ ಪ್ರಧಾನಿ ಚಂದ್ರಶೇಕರ್ ರೈಲಿನ ಮೂಲಕ  ತೆರಳಿದ್ದರು. ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಸಾದತ್ ನಿಲ್ದಾಣದಲ್ಲಿ ರೈಲು ನಿಂತಿತ್ತು. ಈ ವೇಳೆ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ಮೂಲಕ  ಚಂದ್ರಶೇಖರ್ ಬೋಗಿ ಹತ್ತಲು ಯತ್ನಿಸಿದ್ದಾರೆ. ಈ ವೇಳೆ SPG ಗುಂಡು ಹಾರಿಸಿದೆ. ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದರೆ, ಮತ್ತೊರ್ವ ಗಂಭೀರವಾಗಿ ಗಾಯಗೊಂಡಿದ್ದ.

Latest Videos
Follow Us:
Download App:
  • android
  • ios