Asianet Suvarna News Asianet Suvarna News

ಲೋಕಸಭೆಗೆ 'ಕಮಲ' ಚಿನ್ಹೆಯೇ ಸ್ಪರ್ಧಿ, 370 ಸೀಟ್‌ ಗೆದ್ದರೆ ಶ್ಯಾಮ್‌ ಪ್ರಸಾದ್‌ ಮುಖರ್ಜಿಗೆ ಸೂಕ್ತ ಶ್ರದ್ಧಾಂಜಲಿ: ಮೋದಿ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಮಲ ಚಿನ್ಹೆಯೇ ಬಿಜೆಪಿಯ ಸ್ಪರ್ಧಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅದರೊಂದಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯೇ ಏಕಾಂಗಿಯಾಗಿ 370 ಸೀಟ್‌ ಗೆದ್ದರೆ ಅದು ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರಿಗೆ ನಾವು ನೀಡುವ ಸೂಕ್ತ ಶ್ರದ್ಧಾಂಜಲಿ ಎಂದು ಹೇಳಿದ್ದಾರೆ.

PM Modi says for Lok Sabha lotus BJP candidate aims for 370 seats as tribute to Syama Prasad Mookerjee san
Author
First Published Feb 17, 2024, 4:15 PM IST

ನವದೆಹಲಿ (ಫೆ.17): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿ ಯಾರು ಅನ್ನೋದನ್ನ ನೋಡೋಕೆ ಹೋಗಬೇಡಿ. ಕಮಲ ಚಿನ್ಹೆಯೇ ಸ್ಪರ್ಧಿಯಾಗಲಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಆ ಮೂಲಕ ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ಉಪಸ್ಥಿತರಿದ್ದ ಸದಸ್ಯರಿಗೆ ತಮ್ಮ ಗೆಲುವನ್ನು ಖಚಿತಪಡಿಸಿಕೊಳ್ಳಲು ಹುರಿದುಂಬಿಸಿದ್ದಾರೆ. ಕನಿಷ್ಠ 370 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಗುರಿಯನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಬಲವಾಗಿ ವಿರೋಧ ಮಾಡಿದ್ದ ಜನಸಂಘದ ಸಂಸ್ಥಾಪಕ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರಿಗೆ ನಾವು ನೀಡುವ ನಿಜವಾದ ಶ್ರದ್ಧಾಂಜಲಿ ಇದಾಗಿರುತ್ತದೆ. ಹಾಗಾಗು 370 ಕ್ಷೇತ್ರಗಳಲ್ಲಿ ಬಿಜೆಪಿಯೇ ಏಕಾಂಗಿಯಾಗಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಕ್ರಮವಾಗಿ 370 ಹಾಗೂ 400 ಸೀಟ್‌ಗಳನ್ನು ಗೆಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 370 ಸೀಟ್‌ಗಳನ್ನು ಗೆಲ್ಲುವ ಮೂಲಕ ಬಿಜೆಪಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರಿಗೆ ಸೂಕ್ತವಾದ ಶ್ರದ್ಧಾಂಜಲಿ ನೀಡಲು ಬಯಸಿದೆ ಎಂದು ಬಿಜೆಪಿ ನಾಯಕ ವಿನೋದ್‌ ತಾವ್ಡೆ ಸುದ್ದಿಗೋಷ್ಠೀಯಲ್ಲಿ ಹೇಳಿದ್ದಾರೆ. ಮೋದಿ ಸರ್ಕಾರವು ಆಗಸ್ಟ್ 2019 ರಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಿತ್ತಲ್ಲದೆ, ಸುಪ್ರೀಂ ಕೋರ್ಟ್‌ ಕೂಡ ಈ ವರ್ಷ ನೀಡಿದ ತೀರ್ಪಿನಲ್ಲಿ ಕೇಂದ್ರ ಸರ್ಕಾರ ಮಾಡಿರುವ ಕೆಲಸ ಸರಿಯಾಗಿದೆ ಎಂದು ಹೇಳಿದೆ.

"ನಮ್ಮ ಅಭಿಯಾನವು ಅಭಿವೃದ್ಧಿ ಮತ್ತು ಬಡವರ ಕಲ್ಯಾಣದ ಸುತ್ತ ಕೇಂದ್ರೀಕೃತವಾಗಿರುತ್ತದೆ ಮತ್ತು ರಾಷ್ಟ್ರವನ್ನು ವಿಶ್ವದಲ್ಲಿ ಹೆಮ್ಮೆಯ ಸ್ಥಾನದಲ್ಲಿ ಇರಿಸುತ್ತದೆ, ನಾವು ಈ ವಿಷಯಗಳನ್ನು ಜನರ ಬಳಿಗೆ ಕೊಂಡೊಯ್ಯಬೇಕಾಗಿದೆ" ಎಂದು ತಾವ್ಡೆ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಶನಿವಾರ ಮುಂಜಾನೆ ಭಾರತ ಮಂಟಪಕ್ಕೆ ಆಗಮಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ಅವರನ್ನು ಸ್ವಾಗತಿಸಿದರು. ನಂತರ ಭಾರತ ಮಂಟಪದಲ್ಲಿ ನಡೆದ ವಸ್ತುಪ್ರದರ್ಶನಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು.

ಸಮಾವೇಶಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ನಾಯಕರು ಆಗಮಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಪ್ರತಿಪಕ್ಷಗಳು "ಅನಗತ್ಯ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು" ಎತ್ತುತ್ತವೆ ಆದರೆ ಪಕ್ಷದ ಸದಸ್ಯರು ಅಭಿವೃದ್ಧಿ, ಬಡವರ ಪರ ನೀತಿಗಳು ಮತ್ತು ದೇಶದ ಏರುತ್ತಿರುವ ಜಾಗತಿಕ ಸ್ಥಾನಮಾನದ ವಿಷಯಗಳತ್ತ ಗಮನ ನೀಡಬೇಕು ಎಂದು ಪ್ರಧಾನ ಮಂತ್ರಿ ಸಭೆಯಲ್ಲಿ ಹೇಳಿದರು ಎಂದು ತಾವ್ಡೆ ತಿಳಿಸಿದ್ದಾರೆ.

ಭಾರತದ ಮಾಜಿ ನೌಕಾ ಅಧಿಕಾರಿಗಳಿಗೆ ಗಲ್ಲುಶಿಕ್ಷೆಯಿಂದ ಮುಕ್ತಿ ನೀಡಿದ ಕತಾರ್ ದೊರೆಗೆ ಧನ್ಯವಾದ ಹೇಳಿದ ಮೋದಿ

"ಇದು 'ಆರೋಪ್ ಮುಕ್ತ' ಮತ್ತು 'ವಿಕಾಸ್ ಯುಕ್ತ' ಅವಧಿಯಾಗಿದೆ," ಅವರು ತಮ್ಮ ಮಾತಿನ ವೇಳೆ ಹೇಳಿದರು. ಸುದೀರ್ಘ ಅಧಿಕಾರ ಅವಧಿಯಲ್ಲಿ ಸಾಮಾನ್ಯವಾಗಿ ನಾಯಕರ ಮೇಲೆ ಆರೋಪಗಳು ಅಂಟಿಕೊಳ್ಳುತ್ತವೆ. ಆದರೆ, ಬಿಜೆಪಿಯ ಅಧಿಕಾರವಧಿಯಲ್ಲಿ ಹಾಗಾಗಿಲ್ಲ. ಇದನ್ನೇ ಜನರ ಮುಂದೆ ಪ್ರಚಾರ ಮಾಡಬೇಕು ಎಂದು ಮೋದಿ ತಿಳಿಸಿದ್ದಾರೆ ಎನ್ನಲಾಗಿದೆ.

ರಾಮಮಂದಿರದಿಂದ ಏರಿದ ಮೋದಿ ಗ್ರಾಫ್ ಕೆಳಕ್ಕಿಳಿಸಲು ಪ್ರತಿಭಟನೆ, ರೈತ ನಾಯಕನ ವೈರಲ್ ವಿಡಿಯೋ!

Follow Us:
Download App:
  • android
  • ios