ಚುನಾವಣೆ ಸಮೀಪದಲ್ಲಿ ಬೃಹತ್ ರೈತ ಪ್ರತಿಭಟನೆ ಹಿಂದೆ ಬಹುದೊಡ್ಡ ಟೂಲ್‌ಕಿಟ್ ಅಡಗಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ರಾಜಕೀಯ ಅಜೆಂಡಾದಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಅನ್ನೋ ಆರೋಪದ ನಡುವೆ ರೈತ ಮುಖಂಡನ ಹೇಳಿಕೆ ಅನುಮಾನ ಹೆಚ್ಚಿಸಿದೆ. ರಾಮ ಮಂದಿರ ಉದ್ಘಾಟನೆಯಿಂದ ಆಕಾಶದೆತ್ತರಕ್ಕೆ ಏರಿದ್ದ ಪ್ರಧಾನಿ ಮೋದಿ ಗ್ರಾಫ್ ಕೆಳಕ್ಕಿಳಿಸಲು ರೈತ ಪ್ರತಿಭಟನೆಗಿಂತ ಬೇರೆ ಅಸ್ತ್ರ ಯಾವುದಿದೆ? ಎಂದಿದ್ದಾರೆ. ಈ ವಿಡಿಯೋ ರೈತ ಹೋರಾಟವನ್ನೇ ಪ್ರಶ್ನಿಸುವಂತಿದೆ.
ದೆಹಲಿ(ಫೆ.15) ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರೈತರು ದಿಲ್ಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯೊಳಗೆ ನುಗ್ಗಲು ಯತ್ನಿಸುತ್ತಿರುವ ರೈತರನ್ನು ಪೊಲೀಸರು ತಡೆದಿದ್ದಾರೆ. 6 ತಿಂಗಳಿಗೆ ಬೇಕಾಗುವಷ್ಟ ಆಹಾರ ಧಾನ್ಯಗಳನ್ನು ಶೇಖರಿಸಿಕೊಂಡು ಭರ್ಜರಿ ತಯಾರಿಯೊಂದಿಗೆ ರೈತರು ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಪ್ರತಿಭಟನೆ ಟೂಲ್ ಕಿಟ್ ಭಾಗ ಅನ್ನೋ ಆರೋಪಗಳು ಬಲವಾಗಿ ಕೇಳಿಬರುತ್ತಿದೆ. ರಾಜಕೀಯ ಅಜೆಂಡಾಗೆ ತಕ್ಕಂತೆ ರೈತರು ಮಾತುಕತೆಗಿಂತ ಪ್ರತಿಭಟನೆ ಮೂಲಕ ಬಿಜೆಪಿ ಹಾಗೂ ಮೋದಿ ಸರ್ಕಾರವನ್ನು ಹಣಿಯಲು ಪ್ರತಿಭಟನೆ ನಡೆಸುತ್ತಿದ್ದಾರೆ ಅನ್ನೋ ಆರೋಪಗಳು ಬಲವಾಗುತ್ತಿದೆ. ಇದರ ನಡುವೆ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಪಂಜಾಬ್ ರೈತನ ಮಾತುಗಳು ಅನುಮಾನ ಹೆಚ್ಚಿಸಿದೆ. ರಾಮ ಮಂದಿರ ಉದ್ಘಾಟನೆಯಿಂದ ಪ್ರಧಾನಿ ಮೋದಿ ರಾಜಕೀಯ ಕರಿಯರ್ ಗ್ರಾಫ್ ಮೇಲಕ್ಕೇರಿದೆ. ರೈತ ಪ್ರತಿಭಟನೆ ಮೂಲಕ ಮೋದಿಯ ಈ ಗ್ರಾಫ್ ಕೆಳಕ್ಕಿಳಿಸಲಾಗುತ್ತದೆ ಎಂದು ರೈತ ಮುಖಂಡ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ರೈತ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡ ನಾಯಕರಲ್ಲಿ ಪ್ರಮುಖರಾಗಿರುವ ಜಗ್‌ಜಿತ್ ಸಿಂಗ್ ದಲ್ಲೇವಾಲ್ ನೀಡಿರುವ ಹೇಳಿಕೆ ಭಾರಿ ವೈರಲ್ ಆಗಿದೆ. ರೈತರನ್ನು ಮೂರನೇ ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ ಆಹ್ವಾನಿಸಿದೆ. ಕಳೆದ ಎರಡು ಸುತ್ತಿನ ಮಾತುಕತೆ ವಿಫಲವಾಗಿದೆ. ಇದೀಗ ಮೂರನೇ ಮಾತುಕತೆಗೂ ಮೊದಲೇ ಜಗ್‌ಜಿತ್ ಸಿಂಗ್ ದಲ್ಲೇವಾಲ್ ನೀಡಿದ ಹೇಳಿಕೆ ವೈರಲ್ ಆಗಿದೆ.
ಇದು ಪ್ರೊಟೆಸ್ಟೋ? ಯುದ್ಧವೋ? ರೈತ ಪ್ರತಿಭಟನೆ ಟೂಲ್ ಕಿಟ್ ಬಯಲು ಮಾಡಿದ ನೆಟಿಜನ್ಸ್!
ಆಯೋಧ್ಯೆ ರಾಮ ಮಂದಿರ ಉದ್ಘಾಟನೆಯಿಂದ ಮೋದಿ ಗ್ರಾಫ್ ಮೇಲಕ್ಕೇರಿದೆ. 2024ರ ಲೋಕಸಭಾ ಚುನಾವಣೆಗೆ ಇನ್ನೇ ಕೆಲ ತಿಂಗಳು ಮಾತ್ರ ಬಾಕಿ. ನಮಗೆ ಹೆಚ್ಚಿನ ಸಮಯವಿಲ್ಲ. ಈ ಕಡಿಮೆ ಅವಧಿಯಲ್ಲಿ ಮೋದಿ ಗ್ರಾಫ್ ಕೆಳಕ್ಕೆ ಇಳಿಸಲು ಹೋರಾಟ ಮಾಡುತ್ತೇವೆ ಎಂದು ಜಗ್‌ಜಿತ್ ಸಿಂಗ್ ದಲ್ಲೇವಾಲ್ ಹೇಳಿದ್ದಾರೆ. ರೈತ ಪ್ರತಿಭಟನೆ ನಿಜವಾದ ರೈತರ ಬೇಡಿಕೆಯಲ್ಲ, ಇದು ರಾಜಕೀಯ ಅಜೆಂಡಾದ ಭಾಗ ಅನ್ನೋದನ್ನು ಈ ವಿಡಿಯೋದಲ್ಲಿ ಸೂಚ್ಯವಾಗಿ ಹೇಳಲಾಗಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಲ್ಲಿ ಭಾರಿ ವೈರಲ್ ಆಗಿದೆ. ಸಣ್ಣ ತುಣುಕಿನ ಈ ವಿಡಿಯೋ ಸಂಚಲನ ಸೃಷ್ಟಿಸಿದೆ. ವೈರಲ್ ವಿಡಿಯೋದಲ್ಲಿರುವ ಮಾಹಿತಿ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
6 ತಿಂಗಳ ಗುರುದ್ವಾರದ ಆಹಾರ ಶೇಖರಣೆ, ರೈತ ಪ್ರತಿಭಟನೆ ಅಪಾಯ ಎಚ್ಚರಿಸಿದ ಗುಪ್ತಚರ ಇಲಾಖೆ!
ಇಂದು ರೈತರು ರೈಲು ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಫೆಬ್ರವರಿ 16ರಂದು ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ದೆಹಲಿ ಗಡಿಗಳಲ್ಲಿ ಪೊಲೀಸರು ರೈತರನ್ನು ತಡೆಯಲಾಗಿದೆ. ಬ್ಯಾರಿಕೇಟ್, ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಆದರೆ ಎಲ್ಲದ್ದಕ್ಕೂ ಸಜ್ಜಾಗಿ ಬಂದಿರುವ ರೈತರು ಬ್ಯಾರಿಕೇಡ್ ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆ.
