Asianet Suvarna News Asianet Suvarna News

ಕೊರೋನಾ ಲಸಿಕೆ ವಿತರಣೆ ಹಾಗೂ ಸ್ಥಿತಿಗತಿ ಕುರಿತು ಪ್ರಧಾನಿ ಮೋದಿ ಮಹತ್ವದ ಸಭೆ!

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತ ಕೊರೋನಾ ಲಸಿಕೆ ಅಭಿವೃದ್ಧಿ ಹಾಗೂ ಉತ್ಪಾದನೆ ಕೂಡ ವೇಗ ಪಡೆದುಕೊಂಡಿದೆ. ವಿಶ್ವವೇ ಭಾರತದ ಕೊರೋನಾ ಲಸಿಕೆಗೆ ಕಾಯುತ್ತಿದೆ. ಇದರ ಬೆನ್ನಲ್ಲೇ ಪ್ರದಾನಿ ನರೇಂದ್ರ ಮೋದಿ ಕೊರೋನಾ ಲಸಿಕೆ ವಿತರಣೆ ಹಾಗೂ ಸ್ಥಿತಿಗತಿ ಕುರಿತು ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ.

PM modi reviewed the Covid 19 vaccine delivery distribution and administration ckm
Author
Bengaluru, First Published Oct 17, 2020, 6:10 PM IST
  • Facebook
  • Twitter
  • Whatsapp

ನವದೆಹಲಿ(ಅ.17): ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಆಯಾ ರಾಜ್ಯಗಳ ಮುಖ್ಯಮಂತ್ರಿ ಕುರಿತು ಸಭೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಕೊರೋನಾ ಸಂಶೋಧರು, ತಜ್ಞರ ತಂಡದ ಜೊತೆ ಚರ್ಚೆನಡೆಸಿದ್ದಾರೆ. ಇದೀಗ ಕೊರೋನಾ ಲಸಿಕೆ ವಿತರಣೆ ಹಾಗೂ  ಕೊರೋನಾ ಸ್ಥಿತಿಗತಿಗಳ ಕುರಿತು ಮಹತ್ವದ ಸಭೆ ನಡೆಸಿದ್ದಾರೆ.

ಕೊರೋನಾ ಲಸಿಕೆ ಹಾಗೂ ಸಂಶೋಧನೆ ಕುರಿತು ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ!

ದೇಶದಲ್ಲಿನ ಕೊರೋನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಲಸಿಕೆ ಅತ್ಯವಶ್ಯಕವಾಗಿದೆ. ಸದ್ಯ ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಕೊರೋನಾ ಲಸಿಕೆ ಅಂತಿಮ ಹಂತದಲ್ಲಿದೆ.   ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿ, ಲಸಿಕೆ ವಿತರಣೆ ಹಾಗೂ ಆಡಳಿತ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. 

ಬಾರ್‌-ರೆಸ್ಟೋರೆಂಟ್ ಬಂದ್, 6 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ; ಲಂಡನ್‌ನಲ್ಲಿ ಮತ್ತೆ ಲಾಕ್‌ಡೌನ್!..

ಸಭೆಯಲ್ಲಿ ದೇಶದಲ್ಲಿನ ಕೊರೋನಾ ವೈರಸ್ ಹೊಸ ಪ್ರಕರಣ, ಚೇತರಿಕೆ ಪ್ರಮಾಣವನ್ನು ಪರಿಶೀಲಿಸಿದ್ದಾರೆ.  ಭಾರತದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಕೊರೋನಾ ಲಸಿಕೆ ಅಂತಿಮ ಹಂತದಲ್ಲಿದೆ. 2 ಲಸಿಕೆಗಳು ಹಂತ II ಮತ್ತು ಹಂತ IIIರಲ್ಲಿದೆ.  ಭಾರತದ ಸಂಶೋಧನಾ ಹಾಗೂ ತಜ್ಞರ ತಂಡ ನೆರೆಯ ರಾಷ್ಟ್ರಗಳಾದ ಅಫ್ಘಾನಿಸ್ತಾನ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಮಾರಿಷಸ್, ನೇಪಾಳ ಮತ್ತು ಶ್ರೀಲಂಕಾದಲ್ಲಿನ ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಗೆ ಸಹಕರಿಸುತ್ತಿದೆ. ನಮ್ಮ ದೇಶದಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಬಾಂಗ್ಲಾ, ಮ್ಯಾನ್ಮಾರ್, ಕತಾರ್ ಹಾಗೂ ಭೂತಾನ್ ರಾಷ್ಟ್ರಗಳು ಮನವಿ ಸಲ್ಲಿಸಿದೆ. ಭಾರತ ತಯಾರಿಸುತ್ತಿರುವ ಲಸಿಕೆ  ಸಮಸ್ತ ಭಾರತೀರಿಗೆ ಸುಲಭವಾಗಿ ಸಿಗುವಂತಾಗಬೇಕು. ಇಷ್ಟೇ ಅಲ್ಲ ಜಾಗತಿಕ ಸಮುದಾಯಕ್ಕೆ ನೆರವು ನೀಡವು ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ಮೋದಿ ಹೇಳಿದ್ದಾರೆ. 

ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ. ರಾಷ್ಟ್ರೀಯ ತಜ್ಞರ ನೆರವಿನಿಂದ ಕೊರೋನಾ ಲಸಿಕೆ ಸಂಗ್ರಹಣೆ, ವಿತರಣೆ, ಸಾಗಾಣಿಕೆ ಕುರಿತು ನೀಲನಕ್ಷೆ ಸಿದ್ಧವಾಗಿದೆ. ಈ ಕುರಿತು ಆಯಾ ರಾಜ್ಯಗಳ ಜೊತೆ ಸಮಾಲೋಚಿಸಿ ತಜ್ಞರ ತಂಡ ಲಸಿಕೆ ವಿತರಣೆ ಕಾರ್ಯನಿರ್ವಹಿಸಲಿದೆ.

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಮನದಲ್ಲಿಟ್ಟುಕೊಂಡು, ಆಯಾ ರಾಜ್ಯಗಳಿಗೆ ಲಸಿಕೆ ವಿತರಣೆಯಾಗಬೇಕು. ಲಾಜಿಸ್ಟಿಕ್, ವಿತರಣೆ, ಆಡಳಿತ ಸೇರಿದಂತೆ ಪ್ರತಿಯೊಂದ ಹಂತದಲ್ಲಿ ಯಾವುದೇ ಲೋಪವಾಗದಂತೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.   ಕೋಲ್ಡ್ ಸ್ಟೋರೇಜ್ ಸುಧಾರಿತ ಯೋಜನೆ, ವಿತರಣಾ ಜಾಲ, ಮೇಲ್ವಿಚಾರಣಾ ಕಾರ್ಯವಿಧಾನ, ಮುಂಗಡ ಮೌಲ್ಯಮಾಪನ ಮತ್ತು ಅಗತ್ಯವಿರುವ ಪೂರಕ ಸಾಧನಗಳಾದ ವೈಲ್ಸ್, ಸಿರಿಂಜ್ ಇತ್ಯಾದಿಗಳನ್ನು ತಯಾರಿಸುವ ಹಾಗೂ ವಿತರಿಸುವ ಜಾಲ ಸಮರ್ಪಕವಾಗಿರಬೇಕು ಎಂದು ಮೋದಿ ಹೇಳಿದರು.

ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್, ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ,  ನೀತಿ ಆಯೋಗದ ಸದಸ್ಯ, ಪ್ರಧಾನ ವೈಜ್ಞಾನಿಕ ಸಲಹೆಗಾರ, ಹಿರಿಯ ವಿಜ್ಞಾನಿಗಳು, PMO ಅಧಿಕಾರಿಗಳು ಹಾಗೂ  ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. 
 

Follow Us:
Download App:
  • android
  • ios