ನವದೆಹಲಿ(ಅ.15): ಕೊರೋನಾ ವೈರಸ್ ಇದೀಗ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಲಂಡನ್ ಸೇರಿದಂತೆ ಇತರ ದೇಶದ ಪ್ರಮುಖ ನಗರಗಳಲ್ಲಿ ಮತ್ತೆ ಲಾಕ್‌ಡೌನ್  ಜಾರಿ ಮಾಡಲಾಗಿದೆ. ಭಾರತದಲ್ಲಿ ಕೊರೋನಾ ವೈರಸ್ ಮಿತಿ ಮೀರುತ್ತಿದೆ. ಕೊರೋನಾ ನಿಯಂತ್ರಣ ಇದೀಗ ಸವಾಲಾಗಿ ಪರಿಣಮಿಸುತ್ತಿದೆ. ಇದರ ನಡುವೆ ಲಸಿಕೆ ನಿಯೋಜನೆ, ಅಭಿವೃದ್ಧಿ, ಸಂಶೋಧನೆ ಕುರಿತು ಪ್ರಧಾನಿ ಮೋದಿ ಪರಿಶೀಲನೆ ಸಭೆ ನಡೆಸಿದ್ದಾರೆ.

#Unite2FightCorona, ಕೋವಿಡ್‌ ವಿರುದ್ಧ ಜನಾಂದೋಲನ, ಬೃಹತ್ ಕಾರ್ಯಕ್ರಮಕ್ಕೆ ಮೋದಿ ಚಾಲನೆ!. 

ಕೊರೋನಾ ವೈರಸ್ ಲಸಿಕೆ ಹಾಗೂ ಸಂಶೋಧನೆ ಮಾಹಿತಿ ಪಡೆದ ಪ್ರಧಾನಿ ಮೋದಿ, ಭಾರತದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಇಷ್ಟೇ ಅಲ್ಲ ಕೊರೋನಾ ವಿರುದ್ಧ ಹೋರಾಡಲು ಅತ್ಯಂತ ಶಕ್ತ ಲಸಿಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಔಷಧ ತಯಾರಕರು, ವಿಜ್ಞಾನಿಗಳು, ಸಂಶೋಧಕರ ಎಲ್ಲಾ ಪ್ರಯತ್ನಗಳಿಗೆ ಸರ್ಕಾರ ವಿಶೇಷ ಸೌಲಭ್ಯ ಹಾಗೂ ಬೆಂಬಲ ನೀಡಲಿದೆ ಎಂದು ಮೋದಿ ಹೇಳಿದರು. 

ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿದ ಮೋದಿ.. ಕಾರಣ ಸರಳ!.

ಲಸಿಕೆ ತಯಾರಿಕೆ, ಸಂಗ್ರಹ, ವಿತರಣೆ ಕುರಿತು ಸಾಕಷ್ಟು ಮುತವರ್ಜಿ ವಹಿಸಬೇಕಿದೆ. ಕೋಟ್ಯಾಂತರ ಜನರಿಗೆ ಲಸಿಕೆ ತಲುಪಿಸುವುದು ಸವಾಲಾಗಿದೆ. ಈ ನಿಟ್ಟಿನ ಆರೋಗ್ಯ ಸಚಿವಾಲಯ ಈಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಮೋದಿ ಹೇಳಿದರು. ನಿಯಮಿತವಾಗಿ, ವೇಗವಾಗಿ ಮತ್ತು ಅಗ್ಗವಾಗಿ ಪರೀಕ್ಷಿಸುವ ಸೌಲಭ್ಯ ಎಲ್ಲರಿಗೂ ಆದಷ್ಟೂ ಬೇಗ ಲಭ್ಯವಾಗಬೇಕು ಎಂದರು.

ಸಾಂಪ್ರದಾಯಿಕ ಔಷಧಿ ವೈಜ್ಞಾನಿಕ ಪರೀಕ್ಷೆ ಮತ್ತು ಮೌಲ್ಯಮಾಪನದ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದ್ದಾರೆ. ಈ ಕಷ್ಟದ ಸಮಯದಲ್ಲಿ ಸಾಕ್ಷ್ಯ ಆಧಾರಿತ ಸಂಶೋಧನೆ ನಡೆಸಲು ಮತ್ತು ವಿಶ್ವಾಸಾರ್ಹ ಪರಿಹಾರವನ್ನು ಒದಗಿಸಲು ಆಯುಷ್ ಸಚಿವಾಲಯ ಪ್ರಯತ್ನವನ್ನು ಮೋದಿ ಶ್ಲಾಘಿಸಿದ್ದಾರೆ 

ಪರಿಶೀಲನಾ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ನೀತಿ ಆಯೋಗದ ಪ್ರಧಾನ ವೈಜ್ಞಾನಿಕ ಸಲಹೆಗಾರ, ಹಿರಿಯ ವಿಜ್ಞಾನಿಗಳು ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.