ಲಂಡನ್(ಅ.15): ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಲಾಕ್‌ಡೌನ್ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸದ ಬಳಿಕ ಇದೀಗ ಕೊರೋನಾ ಅಬ್ಬರವೂ ಹೆಚ್ಚಾಗಿದೆ. ಇದೀಗ ಲಂಡನ್, ಎಸೆಕ್ಸ್, ಯಾರ್ಕ್ ಸೇರಿದಂತೆ ಹಲವು ನಗರಗಳಲ್ಲಿ ಲೆವೆಲ್ 2 ನಿರ್ಬಂಧನೆ ವಿಧಿಸಲಾಗಿದೆ.

ಕೊರೋನಾ ನಿಯಂತ್ರಣದಲ್ಲಿ ಆರೋಗ್ಯ ಸೇತು ಆ್ಯಪ್ ಪ್ರಮಖ ಪಾತ್ರ; WHO ಮೆಚ್ಚುಗೆ!

ಕೊರೋನಾ ವೈರಸ್ ನಿಯಂತ್ರಕ್ಕೆ ಹೈಲೆವಲ್ ಅಲರ್ಟ್ ನೀಡಲಾಗಿದೆ. ಬಾರ್, ರೆಸ್ಟೋರೆಂಟ್ ರಾತ್ರಿ ಗಂಟೆಗೆ ಬಂದ್ ಆಗುತ್ತಿದೆ. ಹೊರಗಡೆ 6 ಜನಕ್ಕಿಂತ ಹೆಚ್ಚು ಸೇರುವಂತಿಲ್ಲ. ಇನ್ನು ನೆರೆ ಮನೆ, ಸಂಬಂಧಿಕರ ಮನೆಗೆ ಭೇಟಿ ನೀಡುವಂತಿಲ್ಲ. ಇಂಗ್ಲೆಂಡ್‌ನ ಅರ್ಧ ಭಾಗದಷ್ಟು ಜನ ಇದೀಗ ಲೆವೆಲ್ 2 ನಿರ್ಬಂಧನೆಗೆ ಒಳಪಟ್ಟಿದ್ದಾರೆ. 

ಚೀನಾ ಲ್ಯಾಬ್‌ನಿಂದ ಕೊರೋನಾ ಬಂದಿದೆ: ಮತ್ತೊಮ್ಮೆ ಸತ್ಯ ಬಿಟ್ಟಿಟ್ಟ ಚೀನಾ ವೈರೊಲಜಿಸ್ಟ್!

ಗ್ರೇಟರ್ ಮ್ಯಾಂಚೆಸ್ಟರ್‌ನಲ್ಲಿ ಕೊರೋನಾ ಹಾವಳಿ ವಿಪರೀತವಾಗಿರುವ ಕಾರಣ ಲೆವಲ್ 3 ನಿರ್ಬಂಧನೆಗಳನ್ನು ಹಾಕಲಾಗಿದೆ. ಸದ್ಯ ಸರ್ಕಾರಕ್ಕೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಕೊರೋನಾ ನಿಯಂತ್ರಣ, ಜನರ ಆರೋಗ್ಯ ರಕ್ಷಣೆಗೆ ಲೆವೆಲ್ 2 ನಿರ್ಬಂಧನೆ ಅಗತ್ಯ ಎಂದು ಲಂಡನ್ ಆರೋಗ್ಯ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ.

ಈ ವಾರಾಂತ್ಯದಿಂದ ಹೈ ಅಲರ್ಟ್ ನಿರ್ಬಂಧನೆಕ್ಕೊಳಗಾಲಿರುವ ನಗರ
ಲಂಡನ್
ಎಸೆಕ್ಸ್
ಎಲ್ಮಬ್ರಿಡ್ಜ್ ಸರೆ
ಬ್ಯಾರೋ ಇನ್ ಫರ್ನೆಸ್, ಕಂಬ್ರಿಯಾ
ಯಾರ್ಕ್
ನಾರ್ತ್ ಈಸ್ಟ್ ಡರ್ಬಿಶೇರ್
ಚೆಸ್ಟರ್‌ಫೀಲ್ಡ್

ಕೊರೋನಾ ನಿಯಮ ಮೀರಿ ಸೆಲ್ಫಿ; ಕ್ಷಮೆ ಕೇಳಿದ ಪ್ರಧಾನಿ!.

ಇಂಗ್ಲೆಂಡ್‌ನಲ್ಲ್ 3 ರೀತಿಯ ಅಲರ್ಟ್ ನೀಡಲಾಗುತ್ತಿದೆ. ಮಿಡೀಯಂ, ಹೈ ಹಾಗೂ ವೆರಿ ಹೈ ಅಲರ್ಟ್ ಎಂದು ವರ್ಗೀಕರಿಸಲಾಗಿದೆ. ಸದ್ಯ ಲಿವರ್‌ಪೂಲ್ ನಗರದಲ್ಲಿ ವೆರಿ ಹೈ ಅಲರ್ಟ್ ಘೋಷಿಸಲಾಗಿದೆ. ಲಂಡನ್‌ನ ಪ್ರತಿ ದಿನದ ಕೊರೋನಾ ವರದಿಯಲ್ಲಿ ಆತಂಕಕಾರಿ ಸಂಖ್ಯೆ ಹೊರಬೀಳುತ್ತಿದೆ. ಹೀಗಾಗಿ ಕೊರೋನಾ ಚೈನ್ ಬ್ರೇಕ್ ಮಾಡಲು ಇದೀಗ ಅಲರ್ಟ್ ಘೋಷಿಸಲಾಗುತ್ತಿದೆ.

ಅಕ್ಟೋಬರ್ 7ರ ಅಂತ್ಯಕ್ಕೆ ಇಂಗ್ಲೆಂಡ್‌ನಲ್ಲಿ ಮನೆಯಿಂದ ಹೊರಗಡೆ ತೆರಳವು ಶೇಕಡಾ 62 ರಷ್ಟು ಮಂದಿಯಲ್ಲಿ ಕೊರೋನಾ ಪಾಸಿಟೀವ್ ಕಂಡು ಬಂದಿದೆ.