ಜೂನ್‌ನಲ್ಲಿ ಅಮೆರಿಕಕ್ಕೆ ಮೋದಿ ಮೊದಲ ಅಧಿಕೃತ ಭೇಟಿ..! ಪ್ರಧಾನಿ ಮೋದಿಗೆ ಅಮೆರಿಕದ ವಿಶೇಷ ಗೌರವ
ಉಭಯ ದೇಶಗಳು ಈ ಭೇಟಿಯ ಕುರಿತಾಗಿ ಯೋಜನೆಗಳನ್ನು ರೂಪಿಸಲು ಆರಂಭಿಸಿವೆ. ಮುಂದಿನ ಜೂನ್ ಅಥವಾ ಜುಲೈ ತಿಂಗಳಲ್ಲಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಧಿಕೃತ ಭೇಟಿಯ ಸಮಯದಲ್ಲಿ ಆಹ್ವಾನಿತ ಅತಿಥಿಗೆ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗುವುದಲ್ಲದೇ, ಅಮೆರಿಕ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಾಗುತ್ತದೆ.
ನವದೆಹಲಿ (ಮಾರ್ಚ್ 12, 2023): ಮುಂಬರುವ ಜೂನ್ ವೇಳೆ ಅಮೆರಿಕಕ್ಕೆ ಭೇಟಿ ನೀಡುವಂತೆ ಅಧ್ಯಕ್ಷ ಜೋ ಬೈಡೆನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಒಪ್ಪಿ ಮೋದಿ ತೆರಳಿದಲ್ಲಿ ಅದು ಅಮೆರಿಕಕ್ಕೆ ಅವರ ಮೊದಲ ಅಧಿಕೃತ ಭೇಟಿಯಾಗಲಿದೆ.
ಪ್ರಧಾನಿಯಾದ (Prime Minister) ಬಳಿಕ ಮೋದಿ (Modi) ಹಲವು ಬಾರಿ ಅಮೆರಿಕಕ್ಕೆ (United States) ಭೇಟಿ ನೀಡಿರುವವರಾದರೂ, ಅದು ವಿವಿಧ ಕಾರ್ಯನಿಮಿತ್ತ ಭೇಟಿಗಳಾಗಿದ್ದವು. ಆದರೆ ಈಗಿನದ್ದು ಅಧಿಕೃತ (ಸ್ಟೇಟ್ ವಿಸಿಟ್) (State Visit) ಭೇಟಿಯಾಗಲಿದೆ. ಸಾಮಾನ್ಯವಾಗಿ ದೇಶವೊಂದರ (Country) ಮುಖ್ಯಸ್ಥರಿಗೆ, ಆ ದೇಶದ ಜೊತೆಗಿನ ಗರಿಷ್ಠ ಸ್ನೇಹ ಸಂಬಂಧ ಸೂಚಕವಾಗಿ ಇಂಥ ಆಹ್ವಾನ ನೀಡಲಾಗುತ್ತದೆ. ಈ ಕಾರಣಕ್ಕಾಗಿಯೇ ಜೋ ಬೈಡೆನ್ (Joe Biden) ನೀಡಿರುವ ಈ ಆಹ್ವಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಚೀನಾ (China) ಮತ್ತು ರಷ್ಯಾ (Russia) ಜೊತೆಗಿನ ಅಮೆರಿಕ ಸಂಬಂಧ ಹದಗೆಡುತ್ತಿರುವ ನಡುವೆ ಮತ್ತು ಜಾಗತಿಕವಾಗಿ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹೆಚ್ಚುತ್ತಿರುವ ವೇಳೆ ಇಂಥದ್ದೊಂದು ಆಹ್ವಾನ ನೀಡಲಾಗಿದೆ.
ಇದನ್ನು ಓದಿ: ಮೋದಿ ಸರ್ಕಾರಕ್ಕೆ ಅದಾನಿ ಗದ್ದಲ ಕುತ್ತು: ಅಮೆರಿಕ ಹೂಡಿಕೆದಾರ ಜಾರ್ಜ್ ಸೊರೋಸ್ ಬಾಂಬ್; ಭಾರಿ ಸಂಚಲನ, ವಿವಾದ ಸೃಷ್ಟಿ
ಉಭಯ ದೇಶಗಳು ಈ ಭೇಟಿಯ ಕುರಿತಾಗಿ ಯೋಜನೆಗಳನ್ನು ರೂಪಿಸಲು ಆರಂಭಿಸಿವೆ. ಮುಂದಿನ ಜೂನ್ ಅಥವಾ ಜುಲೈ ತಿಂಗಳಲ್ಲಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಧಿಕೃತ ಭೇಟಿಯ ಸಮಯದಲ್ಲಿ ಆಹ್ವಾನಿತ ಅತಿಥಿಗೆ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗುವುದಲ್ಲದೇ, ಅಮೆರಿಕ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಲಾಗುತ್ತದೆ.
ಈ ಭೇಟಿಯನ್ನು 2 ಸಾರ್ವಭೌಮ ರಾಜ್ಯಗಳ ನಡುವಿನ ಸ್ನೇಹಪರ ದ್ವಿಪಕ್ಷೀಯ ಸಂಬಂಧಗಳ ಅತ್ಯುನ್ನತ ಅಭಿವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಹಾಗೂ, ಅಧಿಕೃತ ಸಾರ್ವಜನಿಕ ಸಮಾರಂಭಗಳು ಮತ್ತು ಅಮೆರಿಕ ಸರ್ಕಾರದ ಔತಣಕೂಟವನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ಮೊದಲ ಬಾರಿಗೆ ಶ್ವೇತ ಭವನಕ್ಕೆ ಪ್ರಧಾನಿ ಮೋದಿ ಪ್ರವಾಸ: ಜೋ ಬೈಡೆನ್ ಆತಿಥ್ಯಕ್ಕೆ ಶೀಘ್ರದಲ್ಲೇ ಡೇಟ್ ಫಿಕ್ಸ್..!
ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಈಗಾಗಲೇ ಈ ಬಗ್ಗೆ ಪ್ರಧಾನಿ ಮೋದಿಗೆ ಆಹ್ವಾನವನ್ನು ನೀಡಿದ್ದಾರೆ ಎಂದು ಹೇಳಲಾಗಿದ್ದು, ಮತ್ತು ಎರಡೂ ಸರ್ಕಾರಗಳು ಸೇರಿ ಜೂನ್ ಅಥವಾ ಜುಲೈನಲ್ಲಿ ಪರಸ್ಪರ ಅನುಕೂಲಕರವಾಗುವ ಡೇಟ್ ಫಿಕ್ಸ್ ಮಾಡುವ ನಿಟ್ಟಿನಲ್ಲಿ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ಸುದ್ದಿಯನ್ನು ಮೊದಲು ವರದಿ ಮಾಡಿದ ಪಿಟಿಐ ತಿಳಿಸಿದೆ. ಇನ್ನು, ದೇಶದ ರಾಜತಾಂತ್ರಿಕ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿರುವ ಜಿ-20 ಶೃಂಗಸಭೆಗೆ (G20 Summit) ಭಾರತ (India) ಆತಿಥ್ಯ ವಹಿಸುವ ಮೊದಲು ಅಮೆರಿಕ ಪ್ರವಾಸ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಮುಖ ಜಿ 20 ಶೃಂಗಸಭೆ ಸೆಪ್ಟೆಂಬರ್ 2023ರಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿದೆ.
ಈ ಹಿಂದೆ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ವೇತಭವನದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಶ್ವೇತ ಭವನಕ್ಕೆ ಆಹ್ವಾನ ನೀಡಿದ್ದರು. ನವೆಂಬರ್ 2009 ರಲ್ಲಿ ನಡೆದ ಈ ಭೇಟಿಯ ನಂತರ ಈವರೆಗೆ ಯಾವುದೇ ಭಾರತದ ಪ್ರಧಾನಿ, ಅಮೆರಿಕದ ಶ್ವೇತ ಭವನಕ್ಕೆ ಅಧಿಕೃತ ಭೇಟಿಗೆ ತೆರಳಿಲ್ಲ. ಈ ಮಧ್ಯೆ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಡಿಸೆಂಬರ್ 2022ರಲ್ಲಿ ಅಮೆರಿಕದ ಶ್ವೇತ ಭವನಕ್ಕೆ ಹೋಗಿದ್ದರು. ಇದು ಅಮೆರಿಕ ಅಧ್ಯಕ್ಷ ಬೈಡೆನ್ ವಹಿಸಿದ ಕೊನೆಯ ರಾಜ್ಯ ಪ್ರವಾಸವಾಗಿದೆ ಎಂದೂ ತಿಳಿದುಬಂದಿದೆ. ಅಲ್ಲದೆ, ಈಗಿನ ಅಮೆರಿಕ ಅಧ್ಯಕ್ಷರ ಅವಧಿಯಲ್ಲಿ ಫ್ರೆಂಚ್ ಅಧ್ಯಕ್ಷರು ಮಾತ್ರ ಶ್ವೇತ ಭವನಕ್ಕೆ ಭೇಟಿ ನೀಡಿದ್ದಾರೆ.