ಮೊದಲ ಬಾರಿಗೆ ಶ್ವೇತ ಭವನಕ್ಕೆ ಪ್ರಧಾನಿ ಮೋದಿ ಪ್ರವಾಸ: ಜೋ ಬೈಡೆನ್ ಆತಿಥ್ಯಕ್ಕೆ ಶೀಘ್ರದಲ್ಲೇ ಡೇಟ್ ಫಿಕ್ಸ್..!
ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಈಗಾಗಲೇ ಈ ಬಗ್ಗೆ ಪ್ರಧಾನಿ ಮೋದಿಗೆ ಆಹ್ವಾನವನ್ನು ನೀಡಿದ್ದಾರೆ ಎಂದು ಹೇಳಲಾಗಿದ್ದು, ಮತ್ತು ಎರಡೂ ಸರ್ಕಾರಗಳು ಸೇರಿ ಜೂನ್ ಅಥವಾ ಜುಲೈನಲ್ಲಿ ಪರಸ್ಪರ ಅನುಕೂಲಕರವಾಗುವ ಡೇಟ್ ಫಿಕ್ಸ್ ಮಾಡುವ ನಿಟ್ಟಿನಲ್ಲಿ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ (ಫೆಬ್ರವರಿ 1, 2023): ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸವಾದ ಶ್ವೇತ ಭವನಕ್ಕೆ ಮೊದಲ ಬಾರಿ ಪ್ರಧಾನಿ ಮೋದಿ ಈ ವರ್ಷ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಬೇಸಿಗೆಯ ಅವಧಿಯಲ್ಲಿ ಭೇಟಿ ನೀಡುವ ಮೂಲಕ ವಿಮರ್ಶಾತ್ಮಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಪರಿಶೀಲನೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ನಿಲುವು ಉತ್ತೇಜನಕ್ಕೆ ಸಿದ್ಧವಾಗಿದೆ ಎಂದೂ ತಿಳಿದುಬಂದಿದೆ. ಈಗಾಗಲೇ ಮೋದಿ ಪ್ರಧಾನಿಯಾದ ನಂತರ ಅರ್ಧ ಡಜನ್‌ಗಿಂತಲೂ ಹೆಚ್ಚು ಬಾರಿ ಯುಎಸ್‌ಗೆ ಭೇಟಿ ನೀಡಿದ್ದರೂ, ಅವುಗಳು ಹೆಚ್ಚಾಗಿ ಅಧಿಕೃತ ಭೇಟಿಗಳು ಅಥವಾ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರವಾಸದ ನಡುವಿನ ಭೇಟಿಗಳಾಗಿವೆ.
ಆದರೆ, ಈ ವರ್ಷ ಮೊದಲ ಬಾರಿಗೆ ಅಮೆರಿಕದ (United States) ಶ್ವೇತ ಭವನಕ್ಕೆ (White House) ಹಾಗೂ ಮೊದಲ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ಮೂಲಗಳನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದೆ. ಈ ಭೇಟಿಯನ್ನು 2 ಸಾರ್ವಭೌಮ ರಾಜ್ಯಗಳ ನಡುವಿನ ಸ್ನೇಹಪರ ದ್ವಿಪಕ್ಷೀಯ ಸಂಬಂಧಗಳ ಅತ್ಯುನ್ನತ ಅಭಿವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಹಾಗೂ, ಅಧಿಕೃತ ಸಾರ್ವಜನಿಕ ಸಮಾರಂಭಗಳು ಮತ್ತು ಅಮೆರಿಕ ಸರ್ಕಾರದ ಔತಣಕೂಟವನ್ನು ಒಳಗೊಂಡಿರುತ್ತದೆ.
ಇದನ್ನು ಓದಿ: ರಷ್ಯಾ-ಉಕ್ರೇನ್ ಬಿಕ್ಕಟ್ಟು ಪರಿಹಾರ: ಮೋದಿ ಬೈಡೆನ್ ಚರ್ಚೆ
ಯುಎಸ್ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಈಗಾಗಲೇ ಈ ಬಗ್ಗೆ ಪ್ರಧಾನಿ ಮೋದಿಗೆ ಆಹ್ವಾನವನ್ನು ನೀಡಿದ್ದಾರೆ ಎಂದು ಹೇಳಲಾಗಿದ್ದು, ಮತ್ತು ಎರಡೂ ಸರ್ಕಾರಗಳು ಸೇರಿ ಜೂನ್ ಅಥವಾ ಜುಲೈನಲ್ಲಿ ಪರಸ್ಪರ ಅನುಕೂಲಕರವಾಗುವ ಡೇಟ್ ಫಿಕ್ಸ್ ಮಾಡುವ ನಿಟ್ಟಿನಲ್ಲಿ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ಸುದ್ದಿಯನ್ನು ಮೊದಲು ವರದಿ ಮಾಡಿದ ಪಿಟಿಐ ತಿಳಿಸಿದೆ. ಇನ್ನು, ದೇಶದ ರಾಜತಾಂತ್ರಿಕ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿರುವ ಜಿ-20 ಶೃಂಗಸಭೆಗೆ (G-20 Summit) ಭಾರತ (India) ಆತಿಥ್ಯ ವಹಿಸುವ ಮೊದಲು ಅಮೆರಿಕ ಪ್ರವಾಸ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಮುಖ ಜಿ 20 ಶೃಂಗಸಭೆ ಸೆಪ್ಟೆಂಬರ್ 2023ರಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿದೆ.
ಈ ಹಿಂದೆ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ವೇತಭವನದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಶ್ವೇತ ಭವನಕ್ಕೆ ಆಹ್ವಾನ ನೀಡಿದ್ದರು. ನವೆಂಬರ್ 2009 ರಲ್ಲಿ ನಡೆದ ಈ ಭೇಟಿಯ ನಂತರ ಈವರೆಗೆ ಯಾವುದೇ ಭಾರತದ ಪ್ರಧಾನಿ, ಅಮೆರಿಕದ ಶ್ವೇತ ಭವನಕ್ಕೆ ಅಧಿಕತ ಭೇಟಿಗೆ ತೆರಳಿಲ್ಲ. ಈ ಮಧ್ಯೆ, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಡಿಸೆಂಬರ್ 2022ರಲ್ಲಿ ಅಮೆರಿಕದ ಶ್ವೇತ ಭವನಕ್ಕೆ ಹೋಗಿದ್ದರು. ಇದು ಅಮೆರಿಕ ಅಧ್ಯಕ್ಷ ಬೈಡೆನ್ ವಹಿಸಿದ ಕೊನೆಯ ರಾಜ್ಯ ಪ್ರವಾಸವಾಗಿದೆ ಎಂದೂ ತಿಳಿದುಬಂದಿದೆ. ಅಲ್ಲದೆ, ಈಗಿನ ಅಮೆರಿಕ ಅಧ್ಯಕ್ಷರ ಅವಧಿಯಲ್ಲಿ ಫ್ರೆಂಚ್ ಅಧ್ಯಕ್ಷರು ಮಾತ್ರ ಶ್ವೇತ ಭವನಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಭದ್ರತಾ ಮಂಡಳಿ, ಎನ್‌ಎಸ್‌ಜಿ ಸದಸ್ಯತ್ವಕ್ಕೆ ಅಮೆರಿಕದ ಬೆಂಬಲ!
ವೈಟ್ ಹೌಸ್‌ನಲ್ಲಿ ಆಡಂಬರ, ವೈಭವ ಮತ್ತು ರಾಜ್ಯ ಔತಣಕೂಟದ ಜೊತೆಗೆ, ಈ ಭೇಟಿಯು ಕಾಂಗ್ರೆಸ್‌ನ ಜಂಟಿ ಅಧಿವೇಶನದ ಅಡ್ರೆಸ್ (ಭಾಷಣವನ್ನೂ) ಸಹ ಒಳಗೊಂಡಿರುತ್ತದೆ.
ಇದನ್ನೂ ಓದಿ: ಮೋದಿ-ಕಮಲಾ ಭೇಟಿ: ಇಡೀ ಜಗತ್ತಿನ ಮೇಲೆ ಮಾತುಕತೆ ಪರಿಣಾಮ