ಭಾರತ-ಚೀನಾ ನಡುವಿನ ಶಾಂತಿ, ಎರಡು ದೇಶಗಳಿಗೆ ಮಾತ್ರವಲ್ಲ ಜಗತ್ತಿಗೆ ಮುಖ್ಯ: ಪ್ರಧಾನಿ ಮೋದಿ
ಇಂದಿರಾ ಗಾಂಧಿ ಬಳಿಕ ಅಮೆರಿಕದ ಪ್ರಮುಖ ನ್ಯೂಸ್ ಮ್ಯಾಗಝೀಯ್ ನ್ಯೂಸ್‌ವೀಕ್‌ನ ಕವರ್ ಪೇಜ್‌ನಲ್ಲಿ ಕಾಣಿಸಿಕೊಂಡ ದೇಶದ ಪ್ರಧಾನಿ ಎನಿಸಿಕೊಂಡಿರುವ ನರೇಂದ್ರ ಮೋದಿ, ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ನವದೆಹಲಿ (ಏ.10): ಅಮೆರಿಕದ ಪ್ರಸಿದ್ಧ ನ್ಯೂಸ್ ವೀಕ್ ಮ್ಯಾಗಜೀನ್‌ಗೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಸಂದರ್ಶನ ವೈರಲ್ ಆಗುತ್ತಿದೆ. ಇಂದಿರಾ ಗಾಂಧಿ ಬಳಿಕ ನ್ಯೂಸ್‌ವೀಕ್ ಕವರ್ ಪೇಜ್‌ನಲ್ಲಿ ಕಾಣಿಸಿಕೊಂಡ ಮೊದಲ ಪ್ರಧಾನಿ ಎನ್ನುವ ಗೌರವ ಕೂಡ ಪ್ರಧಾನಿ ಮೋದಿ ಪಾಲಾಗಿದೆ. ಇದರಲ್ಲಿ ದೇಶದ ಹಲವು ವಿಚಾರಗಳು ಹಾಗೂ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ್ದಾರೆ. ಆರಂಭದಲ್ಲಿ ನ್ಯೂಸ್‌ವೀಕ್ ಬರಹದ ಮೂಲಕ ಕಳಿಸಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ ಮೋದಿ ಬಳಿಕ ಸಂಪಾದಕರೊಂದಿಗೆ 90 ನಿಮಿಷಗಳ ಸಂವಾದವನ್ನೂ ನಡೆಸಿದರು. ಈ ವೇಳೆ ಪಪ್ರಧಾನಿ ಮೋದಿ ಚೀನಾದೊಂದಿಗಿನ ಗಡಿ ಸಮಸ್ಯೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ನಮ್ಮ ಗಡಿಯಲ್ಲಿನ ದೀರ್ಘಕಾಲದ ಪರಿಸ್ಥಿತಿಯನ್ನು ನಾವು ತುರ್ತಾಗಿ ಪರಿಹರಿಸಬೇಕಾಗಿದೆ" ಎಂದು ಮೋದಿ ತಿಳಿಸಿದ್ದಾರೆ.
ಭಾರತ-ಚೀನಾ ಗಡಿ ವಿವಾದದ ಕುರಿತು, ನ್ಯೂಸ್‌ವೀಕ್‌ಗೆ ಮಾತನಾಡಿದ ಪ್ರಧಾನಿ ಮೋದಿ, "ಭಾರತಕ್ಕೆ, ಚೀನಾದೊಂದಿಗಿನ ಸಂಬಂಧವು ಮಹತ್ವದ್ದಾಗಿದೆ. ನಮ್ಮ ಗಡಿಗಳಲ್ಲಿನ ದೀರ್ಘಕಾಲದ ಪರಿಸ್ಥಿತಿಯನ್ನು ನಾವು ತುರ್ತಾಗಿ ಪರಿಹರಿಸಬೇಕಾಗಿದೆ ಎನ್ನುವುದು ನನ್ನ ನಂಬಿಕೆಯಾಗಿದೆ, ಇದರಿಂದಾಗಿ ನಮ್ಮ ದ್ವಿಪಕ್ಷೀಯ ಅಸಹಜ ಸಂವಾದಗಳನ್ನು ಕೊನೆ ಮಾಡಬಹುದು. ಭಾರತ ಮತ್ತು ಚೀನಾ ನಡುವಿನ ಸ್ಥಿರ ಮತ್ತು ಶಾಂತಿಯುತ ಸಂಬಂಧಗಳು ನಮ್ಮ ಎರಡು ದೇಶಗಳಿಗೆ ಮಾತ್ರವಲ್ಲದೆ ಇಡೀ ಪ್ರದೇಶ ಮತ್ತು ಜಗತ್ತಿಗೆ ಮುಖ್ಯವಾಗಿದೆ. ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಧನಾತ್ಮಕ ಮತ್ತು ರಚನಾತ್ಮಕ ದ್ವಿಪಕ್ಷೀಯ ಸಂಬಂಧಗಳ ಮೂಲಕ ಇದು ಸಾಧ್ಯ ಎಂದು ನಾವು ಭಾವಿಸುತ್ತೇವೆ. ಮ್ಮ ಗಡಿಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃಸ್ಥಾಪಿಸಲು ಮತ್ತು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ' ಎಂದು ಮೋದಿ ಹೇಳಿದ್ದಾರೆ.
ನ್ಯೂಯಾರ್ಕ್ ಮೂಲದ ನಿಯತಕಾಲಿಕದೊಂದಿಗಿನ ಪ್ರಮುಖ ಸಂದರ್ಶನದಲ್ಲಿ ಮುಂಬರುವ ಲೋಕಸಭೆ ಚುನಾವಣೆ, ಪಾಕಿಸ್ತಾನದೊಂದಿಗಿನ ಸಂಬಂಧ, ಕ್ವಾಡ್, ರಾಮ ಮಂದಿರ ಮತ್ತು ಪ್ರಜಾಪ್ರಭುತ್ವ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ಮಾತನಾಡಿದರು.
ಪಾಕಿಸ್ತಾನದೊಂದಿಗಿನ ಬಾಂಧವ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಪಾಕ್ ಪ್ರಧಾನಿ ಅಧಿಕಾರ ವಹಿಸಿಕೊಂಡಾಗ ನಾನು ಅವರಿಗೆ ಅಭಿನಂದಿಸಿದ್ದೆ. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತವಾದ ವಾತಾವರಣದಲ್ಲಿ ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಮುನ್ನಡೆಸಲು ಭಾರತವು ಯಾವಾಗಲೂ ಪ್ರತಿಪಾದಿಸುತ್ತದೆ ಎಂದು ಹೇಳಿದರು. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲುವಾಸ ಕುರಿತು ಮಾತನಾಡಿದ ಮೋದಿ, ಪಾಕಿಸ್ತಾನದ ಆಂತರಿಕ ವಿಷಯಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಚೀನಾ ಮತ್ತು ಕ್ವಾಡ್ ಗುಂಪಿನ ಬಗ್ಗೆ ಮಾತನಾಡಿದ ಅವರು, ಯುಎಸ್, ಆಸ್ಟ್ರೇಲಿಯಾ, ಜಪಾನ್, ಭಾರತ ಮತ್ತು ಚೀನಾ ಹಲವು ಗುಂಪುಗಳಲ್ಲಿ ಸದಸ್ಯರಾಗಿದ್ದಾರೆ ಎಂದರು.
"ನಾವು ವಿಭಿನ್ನ ಗುಂಪುಗಳಲ್ಲಿ ವಿಭಿನ್ನ ಸಂಯೋಜನೆಗಳಲ್ಲಿ ಇರುತ್ತೇವೆ. ಕ್ವಾಡ್ ಯಾವುದೇ ದೇಶದ ವಿರುದ್ಧ ಗುರಿಯನ್ನು ಹೊಂದಿಲ್ಲ. ಎಸ್‌ಸಿಓ, ಬ್ರಿಕ್ಸ್ ಮತ್ತು ಇತರ ಅನೇಕ ಇತರ ಅಂತರರಾಷ್ಟ್ರೀಯ ಗುಂಪುಗಳಂತೆ, ಕ್ವಾಡ್ ಸಹ ಹಂಚಿಕೊಂಡ ಸಕಾರಾತ್ಮಕ ಕಾರ್ಯಸೂಚಿಯಲ್ಲಿ ಕೆಲಸ ಮಾಡುವ ಸಮಾನ ಮನಸ್ಕ ರಾಷ್ಟ್ರಗಳ ಗುಂಪು ಎಂದು ಹೇಳಿದ್ದಾರೆ. ಪ್ರಸ್ತುತ ಕ್ವಾಡ್‌ನಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್ ದೇಶಗಳಿವೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ರದ್ದತಿಯನ್ನು ಟೀಕೆ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ಮಾತನಾಡಿದ ಅವರು "ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ, ಅಲ್ಲಿ ಆಗುತ್ತಿರುವ ವ್ಯಾಪಕವಾದ ಸಕಾರಾತ್ಮಕ ಬದಲಾವಣೆಗಳನ್ನು ನೀವು ನೋಡಬೇಕು. ನಾನು ಅಥವಾ ಇತರರು ನಿಮಗೆ ಹೇಳುವುದನ್ನು ಅನುಸರಿಸಬೇಡಿ. ಕಳೆದ ತಿಂಗಳಷ್ಟೇ ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಿದ್ದೆ. ಮೊದಲ ಬಾರಿಗೆ ಜನರು ತಮ್ಮ ಜೀವನದಲ್ಲಿ ಹೊಸ ಭರವಸೆಯನ್ನು ಹೊಂದಿದ್ದಾರೆ. ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಜನರ ಸಬಲೀಕರಣದ ಪ್ರಕ್ರಿಯೆಯನ್ನು ನಂಬುವಂತೆ ನೋಡಬೇಕು ಎಂದು ಪ್ರಧಾನಿ ಹೇಳಿದ್ದಾರೆ.
ಬೆಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ.. ಕೇಂದ್ರದ ವಿರುದ್ಧ ತೊಡೆ ತಟ್ಟಿದ ಸಚಿವರಿಗೆ ಶಾಕ್ ಕೊಡಲು ತಂತ್ರ!
ಅಲ್ಲಿನ ಜನರು ಶಾಂತಿಯ ಲಾಭವನ್ನು ಪಡೆಯುತ್ತಿದ್ದಾರೆ. 2023 ರಲ್ಲಿ 21 ಮಿಲಿಯನ್ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಭಯೋತ್ಪಾದಕ ಘಟನೆಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಸಂಘಟಿತ ಬಂದ್/ಹರ್ತಾಲ್‌ಗಳು (ಪ್ರತಿಭಟನೆಗಳು), ಕಲ್ಲು ತೂರಾಟಗಳು, ಒಂದು ಕಾಲದಲ್ಲಿ ಸಾಮಾನ್ಯ ಜೀವನವನ್ನು ಅಡ್ಡಿಪಡಿಸುತ್ತಿದ್ದವು ಎಂದಿದ್ದಾರೆ.
ಕಾಂಗ್ರೆಸ್ ಲೂಟಿ ಲೈಸೆನ್ಸ್ ರದ್ದು ಮಾಡಿದ್ದೇನೆ: ಮೋದಿ