PM Modi Meeting ಉಕ್ರೇನ್ ಪರಿಸ್ಥಿತಿ, ಆಪರೇಶನ್ ಗಂಗಾ ಕಾರ್ಯಾಚರಣೆ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!

  • ಪ್ರಧಾನಿ ಮೋದಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆ
  • ಖಾರ್ಕೀವ್‌ನಿಂದ ರಕ್ಷಣಾ ಕಾರ್ಯ ಪೂರ್ಣಗೊಂಡ ಬೆನ್ನಲ್ಲೇ ಸಭೆ
  • ಮುಂದಿನ ರಕ್ಷಣಾ ಕಾರ್ಯದ ರೂಪುರೇಶೆ ಚರ್ಚೆ, ಮಹತ್ವದ ನಿರ್ದೇಶನ
PM modi holds high level meeting on Ukraine issues and indians evacuation operation ganga mission ckm

ನವದೆಹಲಿ(ಮಾ.05): ಉಕ್ರೇನ್ ಪರಿಸ್ಥಿತಿ ದಿನ ದಿನಕ್ಕೆ ಹದಗೆಡುತ್ತಿದೆ. ಒಂದೆಡೆ ರಷ್ಯಾದ(Russia Ukraine war) ದಾಳಿ ಮತ್ತೊಂದೆಡೆ ಆಹಾರದ ಕೊರತೆ ನಾಗರೀಕರನ್ನು ಮತ್ತಷ್ಟು ಕಂಗೆಡಿಸಿದೆ. ಇದರ ನಡುವೆ ಭಾರತ ದಿಟ್ಟವಾಗಿ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವ(Indians Evacuation) ಕೆಲಸ ಮಾಡುತ್ತಿದೆ. ಇದೀಗ ಖಾರ್ಕೀವ್ ನಗರದಿಂದ ಭಾರತೀಯ ರಕ್ಷಣಾ ಕಾರ್ಯ ಪೂರ್ಣಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(PM narendra Modi) ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್, ಸಚಿವ ಪಿಯೂಷ್ ಗೋಯೆಲ್ ಸೇರಿದಂತೆ ಪ್ರಮುಖ ಅಧಿಕಾರಿಗಲು ಭಾಗಿಯಾಗಿದ್ದಾರೆ.

ಉಕ್ರೇನ್ ಯುದ್ಧಪೀಡಿತ ಖಾರ್ಕೀವ್(Kharkiv) ನಗರದಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣಾ ಕಾರ್ಯ(Operation Ganga) ಪೂರ್ಣಗೊಂಡಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿದಂ ಬಗ್ಚಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ಇದೀಗ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಯತ್ತ ನಮ್ಮ ಚಿತ್ತ. ಸುಮಿ ನಗರದಿಂದ ರಕ್ಷಣಾ ಕಾರ್ಯ ಸವಾಲಿನಿಂದ ಕೂಡಿದೆ ಎಂದು ಅರಿದಂ ಹೇಳಿದ್ದರು. ಖಾರ್ಕೀವ್ ರಕ್ಷಣಾ ಕಾರ್ಯ ಪೂರ್ಣಗೊಂಡ ಬೆನ್ನಲ್ಲೇ ಇದೀಗ ಮೋದಿ ಉನ್ನತ ಮಟ್ಟದ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

 

;

 

Opearation Ganga: ಪ್ರಧಾನಿ ಮೋದಿ ಭಾರತದ ಭರವಸೆಯ ಸೇತು: ಸಚಿವ ಗೋಯಲ್‌ ಪೋಸ್ಟ್‌

ಸುಮಿ ನಗರದಲ್ಲಿ ಸಿಲುಕಿರುವ 700ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ. ರಾಜತಾಂತ್ರಿಕ ನೆರವು, ರಷ್ಯಾ ಹಾಗೂ ಉಕ್ರೇನ್ ಸೈನ್ಯ ಹಾಗೂ ಅಧಿಕಾರಿಗಳ ನೆರವಿನ ಕುರಿತು ಚರ್ಚೆಯಾಗಿದೆ. 

 ರಷ್ಯಾ ದಾಳಿಗೆ ಜಗತ್ತಿನ ಅತಿದೊಡ್ಡ ಸರಕು ವಿಮಾನ ಸಂಪೂರ್ಣ ನಾಶ
ರಷ್ಯಾ ಪಡೆಗಳ ದಾಳಿಯಿಂದಾಗಿ ಉಕ್ರೇನಿನ ಗೋಸ್ಟೋಮೆಲ್‌ ವಿಮಾನ ನಿಲ್ದಾಣದಲ್ಲಿದ್ದ ಜಗತ್ತಿನ ಅತಿದೊಡ್ಡ ವಿಮಾನ ಆ್ಯಂಟೋನೋವ್‌ ಎಎನ್‌-225 ಸಂಪೂರ್ಣ ನಾಶವಾಗಿದೆ.ಫೆ.29ರಂದೇ ರಷ್ಯಾ ನಡೆಸಿದ ದಾಳಿಯಲ್ಲಿ ಇದು ಸಂಪೂರ್ಣ ನಾಶವಾಗಿದೆ. ಆದರೆ ಸಂಪೂರ್ಣ ನಾಶವಾಗಿದೆ ಎಂದು ಉಕ್ರೇನ್‌ ಹೇಳಿರಲಿಲ್ಲ. ಬದಲಾಗಿ ಅದನ್ನು ಮರುನಿರ್ಮಾಣ ಮಾಡಲಾಗುವುದು ಎಂದಿತ್ತು. ಆದಾಗ್ಯೂ, ಇದರ ಮರುನಿರ್ಮಾಣ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಹಾನಿಯಾಗಿದೆ ಎಂಬ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ.ಈ ವಿಮಾನವನ್ನು ‘ಮ್ರಿಯಾ’ ಎಂದು ಕರೆಯಲಾಗುತ್ತಿದ್ದು, ಉಕ್ರೇನಿ ಭಾಷೆಯಲ್ಲಿ ಇದರ ಅರ್ಥ ‘ಕನಸು’ ಎಂಬುದಾಗಿದೆ.

Ukraine Crisis ಖಾರ್ಕೀವ್‌ನಿಂದ ಎಲ್ಲಾ ಭಾರತೀಯರ ರಕ್ಷಣೆ, ಸುಮಿ ಕಾರ್ಯಾಚರಣೆ ಅತ್ಯಂತ ಸವಾಲು ಎಂದ MEA!

ಭಾರತ ಸಮರ್ಥವಾಗಿ ಸಂಕಷ್ಟಪರಿಸ್ಥಿತಿ ಎದುರಿಸಲಿದೆ: ಮೋದಿ
ಪ್ರಸ್ತುತ ದಿನಗಳಲ್ಲಿ ಇಡೀ ಜಗತ್ತು ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ಆದರೆ ಪರಿಸ್ಥಿತಿ ಎಂತದ್ದೇ ಕಷ್ಟದ್ದಾಗಿರಲಿ, ಭಾರತ ಗುರುತರವಾಗಿ ಪ್ರತಿಕ್ರಿಯೆ ತೋರಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಉಕ್ರೇನ್‌ನ ಭೀಕರ ಪರಿಸ್ಥಿತಿಯಿಂದ ಸಾವಿರಾರು ವಿದ್ಯಾರ್ಥಿಗಳನ್ನು ಆಪರೇಶನ್‌ ಗಂಗಾ ಯೋಜನೆಯಡಿ ಸುರಕ್ಷಿತವಾಗಿ ಕರೆತರಲಾಗಿದೆ. ಉಳಿದವರನ್ನು ಕರೆತರುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. ‘ಪ್ರಸ್ತುತ ಇಡೀ ಜಗತ್ತು ಸಂಕಷ್ಟದಲ್ಲಿದೆ. ಬಹಳಷ್ಟುದೇಶಗಳು ಕೋವಿಡ್‌ ಸಾಂಕ್ರಾಮಿಕದಿಂದ ತೊಂದರೆ ಅನುಭವಿಸಿವೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಭಾರತ ಸಮರ್ಥವಾಗಿ ಇದನ್ನು ಎದುರಿಸಿದೆ. ಉಕ್ರೇನ್‌ ರಷ್ಯಾ ಬಿಕ್ಕಟ್ಟಿನ ಸಮಯದಲ್ಲೂ ಭಾರತೀಯ ವಿದ್ಯಾರ್ಥಿಗಳನ್ನು ಆಪರೇಶನ್‌ ಗಂಗಾ ಯೋಜನೆಯಡಿ ನಾವು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದೇವೆ. ಅದೇ ರೀತಿ ಕೋವಿಡ್‌ ಸಮಯದಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ವಂದೇ ಭಾರತ್‌ ಯೋಜನೆಯಡಿ ಕರೆತಂದಿದ್ದೇವೆ’ ಎಂದು ಹೇಳಿದರು. 

Latest Videos
Follow Us:
Download App:
  • android
  • ios