Asianet Suvarna News Asianet Suvarna News

Ukraine Crisis ಖಾರ್ಕೀವ್‌ನಿಂದ ಎಲ್ಲಾ ಭಾರತೀಯರ ರಕ್ಷಣೆ, ಸುಮಿ ಕಾರ್ಯಾಚರಣೆ ಅತ್ಯಂತ ಸವಾಲು ಎಂದ MEA!

  • ಉಕ್ರೇನ್‌ನ ಖಾರ್ಕೀವ್ ನಗರದಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯರ ರಕ್ಷಣೆ
  • ಸುಮಿ ನಗರದಲ್ಲಿ ಸಿಲುಕಿದ ಭಾರತೀಯರ ರಕ್ಷಣೆ ಸವಾಲು
  • ಸುಮಿ ನಗರದ ಮೇಲೆ ರಷ್ಯಾ ದಾಳಿ, ಆತಂಕದಲ್ಲಿ ವಿದ್ಯಾರ್ಥಿಗಳು
Russia Ukraine war no Indian left in strife torn Kharkiv focus shift to Sumy says MEA ckm
Author
Bengaluru, First Published Mar 5, 2022, 7:21 PM IST | Last Updated Mar 5, 2022, 7:21 PM IST

ನವದೆಹಲಿ(ಮಾ.05): ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ನಿರಂತರವಾಗಿ ನಡೆಯುತ್ತಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಯಶಸ್ವಿಯಾಗಿ ಕಾರ್ಯಾಚರಣೆ ಮಾಡುತ್ತಿದೆ. ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದ ಖಾರ್ಕೀವ್ ನಗರದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಯಶಸ್ವಿಯಾಗಿದೆ. ಖಾರ್ಕೀವ್ ನಗರದಲ್ಲಿದ್ದ ಎಲ್ಲಾ ಭಾರತೀಯರ ರಕ್ಷಣೆ ಮಾಡಲಾಗಿದೆ ಎಂದು ಭಾರತೀಯ ವಿದಾಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಉಕ್ರೇನ್‌ನ ಎರಡನೇ ಅತೀ ದೊಡ್ಡ ನಗರ ಖಾರ್ಕೀವ್‌ ಮೇಲೆ ರಷ್ಯಾ ಸಂಪೂರ್ಣ ಹಿಡಿತ ಸಾಧಿಸಿದೆ. ಇದರ ನಡುವೆ ಖಾರ್ಕೀವ್ ನಗದಲ್ಲಿ ಸಿಲುಕಿದ್ದ ಸಂಪೂರ್ಣ ಭಾರತೀಯ ವಿದ್ಯಾರ್ಥಿಗಳನ್ನು ನೆರೆ ರಾಷ್ಟ್ರದ ಗಡಿಗೆ ಸ್ಥಳಾಂತರಿಸಿ ಇದೀಗ ಭಾರತಕ್ಕೆ ಕರೆ ತರುವ ಪ್ರಯತ್ನ ನಡೆಯುತ್ತಿದೆ. ಇದೀಗ ಭಾರತದ ಗಮನ ಸುಮಿ ನಗರ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿದಂ ಬಗ್ಚಿ ಹೇಳಿದ್ದಾರೆ.

Ukraine Crisis ರೊಮೆನಿಯಾ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಯ ಹುಟ್ಟು ಹಬ್ಬ ಆಚರಣೆ!

ಸುಮಿ ನಗರದಲ್ಲಿ ಕಾರ್ಯಾಚರಣೆ ಸವಾಲಿನಿಂದ ಕೂಡಿದೆ. ಕಾರಣ ಈಗಾಗಲೇ ರಷ್ಯಾ ಸುಮಿ ನಗರ ಸುತ್ತುವರಿದಿದೆ. ದಾಳಿಯನ್ನು ಆರಂಭಿಸಿದೆ. ಹೀಗಾಗಿ ಸುಮಿ ನಗರದಿಂದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತದೆ ಎಂದು ಅರಿದಂ ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತೀಯರನ್ನು ಹೊತ್ತು 15 ವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗಿದೆ. 15 ವಿಮಾನಗಳಲ್ಲಿ 2,900 ಮಂದಿ ಭಾರತಕ್ಕೆ ಆಗಮಿಸಿದ್ದಾರೆ.ಸರಿಸುಮಾರು 13,300 ಭಾರತೀಯರು ಉಕ್ರೇನ್‌ನಿಂದ ಭಾರತಕ್ಕೆ ಮರಳಿದ್ದಾರೆ. ಮುಂದಿನ 24 ಗಂಟೆಗಳಲ್ಲಿ 13 ವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗಲಿವೆ ಎಂದು ಅರಿದಂ ಬಗ್ಚಿ ಹೇಳಿದ್ದಾರೆ.

Russia-Ukraine War: ನವೀನ್ ಕೊನೆಯ ಕ್ಷಣ ಹೇಗಿತ್ತು..? ವಿಡಿಯೋ ಹಂಚಿಕೊಂಡ ಸ್ನೇಹಿತ

ಆಪರೇಶನ್ ಗಂಗಾ:
ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವ ‘ಆಪರೇಷನ್‌ ಗಂಗಾ’ ಕಾರಾರ‍ಯಚರಣೆ ಮತ್ತಷ್ಟುಚುರುಕುಗೊಂಡಿದ್ದು, ಶುಕ್ರವಾರ 17 ವಿಮಾನಗಳ ಮೂಲಕ 3,772 ಮಂದಿ ಭಾರತಕ್ಕೆ ಬಂದಿಳಿದಿದ್ದಾರೆ. ಇದರೊಂದಿಗೆ ಈವರೆಗೆ 48 ವಿಮಾನಗಳ ಮೂಲಕ 10,887 ಮಂದಿ ಭಾರತಕ್ಕೆ ತಲುಪಿದಂತಾಗಿದೆ ವಿದೇಶಾಂಗ ಸಚಿವಾಲಯ ತಿಳಿಸಿದೆ.ಈ ನಡುವೆ ಯುದ್ಧಭೂಮಿಗಳಾದ ಖಾರ್ಕೀವ್‌ನಲ್ಲಿ 300 ಹಾಗೂ ಸುಮಿಯಲ್ಲಿ 700 ಜನ ಸೇರಿ 1000 ಜನ ಬಾಕಿ ಉಳಿದಿದ್ದಾರೆ ಎಂದು ಅದು ಹೇಳಿದೆ.ಶುಕ್ರವಾರ ಹಂಗೇರಿಯ ಬುಡಾಪೆಸ್ಟ್‌ನಿಂದ 177 ಜನರನ್ನು ಹೊತ್ತ ಗೋ ಫಸ್ಟ್‌ ವಿಮಾನ ಮತ್ತು ರೊಮೇನಿಯಾದ ಬುಕಾರೆಸ್ಟ್‌ನಿಂದ 185 ಜನರನ್ನು ಹೊತ್ತು ಹೊರಟ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಮುಂಬೈಗೆ ಬಂದಿಳಿದವು. ಇನ್ನು 630 ಜನರನ್ನು ಹೊತ್ತ ಭಾರತೀಯ ವಾಯುಸೇನೆಯ 3 ವಿಮಾನಗಳು ದೆಹಲಿಗೆ ಬಂದಿಳಿದವು.

ರಷ್ಯಾ ದಾಳಿ: ಸ್ವತಂತ್ರ ತನಿಖಾ ಆಯೋಗ ರಚನೆ
ಉಕ್ರೇನ್‌ ಮೇಲಿನ ರಷ್ಯಾ ದಾಳಿಯ ಕುರಿತು ತನಿಖೆ ನಡೆಸಲು ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗ ರಚಿಸಲು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ನಿರ್ಧರಿಸಿದೆ. ಶುಕ್ರವಾರ ಈ ಕುರಿತು ನಡೆದ ಮತದಾನದಲ್ಲಿ 47 ಸದಸ್ಯ ದೇಶಗಳ ಪೈಕಿ 32 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ರಷ್ಯಾ, ಎರಿಟ್ರಿಯಾ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದವು. ಭಾರತ, ಚೀನಾ, ಪಾಕಿಸ್ತಾನ, ಸೂಡಾನ್‌, ವೆನಿಜುವೆಲಾ ದೇಶಗಳು ಮತದಾನದಿಂದ ದೂರ ಉಳಿದವು

ರಷ್ಯಾ ವಿರುದ್ಧ ಇತ್ತೀಚೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ನಡೆದ ಮತದಾನ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಮತದಾನದಿಂದಲೂ ಭಾರತ ದೂರ ಉಳಿದಿತ್ತು. ಸಂಧಾನದ ಮಾರ್ಗವನ್ನೇ ಅನುಸರಿಸಲು ಒತ್ತಾಯಿಸುವ ನಿಲುವನ್ನು ಮುಂದಿಟ್ಟುಕೊಂಡು ಭಾರತ ಮತದಾನದಿಂದ ದೂರ ಉಳಿಯುತ್ತಿದೆ.

Latest Videos
Follow Us:
Download App:
  • android
  • ios