ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ನರೇಂದ್ರ ಮೋದಿ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದ ಮೋದಿ
ನವದೆಹಲಿ(ಫೆ.08): ಬಿಜೆಪಿ ಎಂದೆಂದಿಗೂ ತಮಿಳುನಾಡನ್ನು(Tamilnadu0 ಗೆಲ್ಲಲಾಗದು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ಇತ್ತೀಚಿನ ಲೋಕಸಭಾ ಭಾಷಣಕ್ಕೆ ಪ್ರಧಾನಿ ನರೇಂದ್ರ(PM Narendra Modi) ಮೋದಿ ಅವರು ತಮಿಳು ವಾಕ್ಯಗಳ ಮೂಲಕವೇ ಲೋಕಸಭೆಯಲ್ಲೇ(Lok sabha Speech) ಮೂಲಕ ಸೋಮವಾರ ತಿರುಗೇಟು ನೀಡಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ತಮಿಳು ಕವಿ ಸುಬ್ರಹ್ಮಣ್ಯ ಭಾರತಿ ಅವರ ಸಾಲುಗಳನ್ನು ತಮಿಳುನಲ್ಲೇ ಹೇಳಿ ಚಾಟಿ ಬೀಸಿದರು. ‘ಕಾಂಗ್ರೆಸ್ ಇತ್ತೀಚೆಗೆ ತಮಿಳು ಭಾವನೆಗಳಿಗೆ ಧಕ್ಕೆ ತರುವ ಯತ್ನ ಮಾಡಿತ್ತು, ಅದು ದೇಶದಲ್ಲಿ ವಿಭಜಿಸು ಮತ್ತು ಆಳುವ ನೀತಿಯನ್ನು ಬಯಸುತ್ತದೆ. ಆದರೆ ನಮ್ಮ ಸಶಸ್ತ್ರ ಪಡೆಗಳ ಮುಖ್ಯಸ್ಥ ರಾವತ್(Bipin Rawat) ಇತ್ತೀಚೆಗೆ ಕಾಪ್ಟರ್ ಅಪಘಾತದಲ್ಲಿ ಮಡಿದಾಗ ಮತ್ತು ಅವರ ಕಳೆಬರವನ್ನು ತಮಿಳುನಾಡಿನಾದ್ಯಂತ ಕೊಂಡೊಯ್ದಾಗ ನನ್ನ ಲಕ್ಷಾಂತರ ತಮಿಳು ಸೋದರ, ಸೋದರಿಯರು ರಸ್ತೆಯ ಉದ್ದಗಲಕ್ಕೂ ನಿಂತು ‘ವೀರ ವಣಕ್ಕಂ’ ಎಂದು ಘೋಷಣೆ ಕೂಗುತ್ತಾ ಅಂತಿಮ ನಮನ ಸಲ್ಲಿಸಿದರು. ತಮಿಳು ಸೋದರರು ಜನರಲ್ ರಾವತ್ ಅವರನ್ನು ಬದುಕಿಸಲು ಗಂಟೆಗಳ ಕಾಲ ಶ್ರಮಿಸಿದರು. ಇದು ನನ್ನ ದೇಶ. ಆದರೆ ಕಾಂಗ್ರೆಸ್(Congress) ಇದನ್ನು ಆರಂಭದಿಂದಲೂ ಕಾಂಗ್ರೆಸ್ ದ್ವೇಷಿಸಿಕೊಂಡೇ ಬಂದಿದೆ. ವಿಜಭಿಸು ಮತ್ತು ಆಳು ಎನ್ನುವ ನೀತಿ ಅವರ ವಂಶವಾಹಿಯಲ್ಲೇ ಇದೆ’ ಎಂದು ತಿರುಗೇಟು ನೀಡಿದರು.
Inflation ಕಾಂಗ್ರೆಸ್‌ಗೆ ಮುಳುವಾಯ್ತು ನೆಹರು, ಚಿದಂಬರಂ ಹಣದುಬ್ಬರ ನೀತಿ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!
ಇದೇ ವೇಳೆ ‘ರಾಷ್ಟ್ರ ಎನ್ನುವುದು ಆಡಳಿತದ ಒಂದು ವ್ಯವಸ್ಥೆಯಾಗಲೀ ಅಥವಾ ಸರ್ಕಾರವಾಗಲೀ ಅಲ್ಲ - ಅದು ನಮ್ಮ ಪಾಲಿಗೆ ಜೀವಂತ ಆತ್ಮ. ಸಾವಿರಾರು ವರ್ಷಗಳಿಂದ, ಜನರು ಇದರೊಂದಿಗೆ ಜೋಡನೆಯಾಗಿದ್ದಾರೆ’ ಎಂದು ವಿಷ್ಣು ಪುರಾಣದಲ್ಲಿ ಬರುವ ಶ್ಲೋಕವನ್ನು ಉಲ್ಲೇಖಿಸಿ ರಾಹುಲ್‌ಗೆ ಮೋದಿ ಟಾಂಗ್ ನೀಡಿದರು.
ಇತ್ತೀಚೆಗೆ ಲೋಕಸಭೆಯಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ ‘ 1947ರಲ್ಲಿ ನಾವು ರಾಜಪ್ರಭುತ್ವದ ಪರಿಕಲ್ಪನೆಯನ್ನು ಬಿಟ್ಟು, ರಾಜ್ಯಗಳ ಒಕ್ಕೂಟದ ಪರಿಕಲ್ಪನೆಯನ್ನು ಆಯ್ದುಕೊಂಡಿದ್ದೆವು. ಆದರೆ ಬಿಜೆಪಿ ಆಳ್ವಿಕೆಯಲ್ಲಿ ರಾಜನ ಪರಿಕಲ್ಪನೆ ಮರುಕಳಿಸುತ್ತಿದೆ. ಭಾರತವು ಒಂದು ‘ದೇಶ’ ಅಲ್ಲ ‘ರಾಜ್ಯಗಳ ಒಕ್ಕೂಟ’ ಎಂದು ಸಂವಿಧಾನವೇ ಹೇಳುತ್ತದೆ. ಯಾವುದೇ ಒಬ್ಬ ವ್ಯಕ್ತಿ ಇಡೀ ದೇಶದ ಮೇಲೆ ಪ್ರಭುತ್ವ ಸಾಧಿಸಲು ಆಗದು. ದೇಶದಲ್ಲಿ ಬಹುಸಂಸ್ಕೃತಿ ಹಾಗೂ ಬಹುಭಾಷೆ ಇವೆ. ಇವನ್ನು ದಮನಿಸಲು ಆಗದು. ಇದು ಒಂದು ಒಕ್ಕೂಟ ವ್ಯವಸ್ಥೆಯೇ ಹೊರತು ಸಾಮ್ರಾಜ್ಯವಲ್ಲ. ನೀವು ಎಂದೆಂದಿಗೂ, ನಿಮ್ಮ ಜೀವಮಾನದಲ್ಲೇ ಎಂದಿಗೂ ತಮಿಳುನಾಡಿನ ಜನರನ್ನು ಆಳುವುದು ಸಾಧ್ಯವಿಲ್ಲ. ನೀವು ಏನೇ ಮಾಡಿದರೂ ಅದು ಸಾಧ್ಯವಿಲ್ಲ. ತಮಿಳುನಾಡಿನ ಜನರು ತಮ್ಮ ಹೃದಯದಲ್ಲಿ ಭಾರತದ ಪರಿಕಲ್ಪನೆಯನ್ನು ಹೊಂದಿದ್ದಾರೆ. ಕೇರಳದ ಜನರು ತಮ್ಮದೇ ಸಂಸ್ಕೃತಿ ಹೊಂದಿದ್ದಾರೆ. ಅವರು ತಮ್ಮದೇ ಆದ ಘನತೆ ಹೊಂದಿದ್ದಾರೆ. ಅದನ್ನೆಲ್ಲಾ ನೀವು ದಮನ ಮಾಡಲು ಸಾಧ್ಯವಿಲ್ಲ ಎಂದು’ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.
Rajnath Singh: ರಾಹುಲ್ ಗಾಂಧಿಗೆ ಚೀನಾ ಮೇಲೆ ಹೆಚ್ಚು ನಂಬಿಕೆ
ಇದನ್ನು ಒಪ್ಪಲ್ಲ- ಅಮೆರಿಕ:
ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಗಳು ಚೀನಾ ಹಾಗೂ ಪಾಕಿಸ್ತಾನವನ್ನು ಭಾರತ ವಿರುದ್ಧ ಒಗ್ಗೂಡಿಸಿವೆ ಎಂಬ ರಾಹುಲ್ ಹೇಳಿಕೆಯನ್ನು ಅನುಮೋದಿಸುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ. ತಮ್ಮ ಸಂಬಂಧದ ಕುರಿತು ಪಾಕಿಸ್ತಾನ ಹಾಗೂ ಚೀನಾಗಳೇ ಹೇಳಿಕೊಳ್ಳಬೇಕು ಎಂದು ಹೇಳಿದ್ದಾರೆ.
‘ರಾಹುಲ್ ಅವರ ಹೇಳಿಕೆಗಳು ಸಂಪೂರ್ಣವಾಗಿ ನಿಖರವಾಗಿಲ್ಲ. ಇದನ್ನು ಸರ್ಕಾರದ ಕಡೆಯಿಂದ ಯಾರೂ ಏಕೆ ಹೇಳುತ್ತಿಲ್ಲ ಎಂಬುದನ್ನು ನೋಡಿದರೆ ಆಶ್ಚಯವಾಗುತ್ತಿದೆ. ಚೀನಾ ಹಾಗೂ ಪಾಕಿಸ್ತಾನಗಳು 1960ರಿಂದಲೂ ನಿಕಟ ಸಂಬಂಧ ಹೊಂದಿವೆ. ಇದೆಲ್ಲಾ ಆರಂಭವಾಗಿದ್ದು, ರಾಹುಲ್ ಅವರ ಅಜ್ಜನ ಕಾಲದಲ್ಲಿ. ಅವರು ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದಿದ್ದರು’ ಎಂದು ದೇಶದ ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ ತಿಳಿಸಿದ್ದಾರೆ.
